ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆರ್‌ಸಿಬಿ ತಂಡದ ಪಂದ್ಯಗಳು ಎಲ್ಲೆಲ್ಲಿ ಯಾವಾಗ? ಸಂಪೂರ್ಣ ಮಾಹಿತಿ ಇಲ್ಲಿದೆ

Royal Challengers Bangalore Reveal Home And Away Fixtures For Ipl 2020

ಐಪಿಎಲ್‌ನ ಪಂದ್ಯಗಳ ವೇಳಾಪಟ್ಟಿ ಬಹಿರಂಗವಾಗಿದೆ. ಯಾವ ತಂಡಗಳ ವಿರುದ್ಧ ಯಾವಾಗ ತಮ್ಮ ಫೇವರೀಟ್ ತಂಡಗಳು ಆಡಲಿವೆ ಎಂಬ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಅದರಲ್ಲೂ ಬೆಂಗಳೂರು ತಂಡದ ಅಭಿಮಾನಿಗಳಿಗೆ ತಮ್ಮ ತಂಡ ಯಾವ ತಂಡದ ವಿರುದ್ಧ ಯಾವಾಗ ಆಡಲಿದೆ ಎಂಬ ಕುತೂಹಲವೂ ಹೆಚ್ಚಾಗಿದೆ.

ಪ್ರತಿ ತಂಡವೂ ತಮ್ಮ ತಮ್ಮ ತವರು ಕ್ರೀಡಾಂಗಣದಲ್ಲಿ ತಲಾ ಏಳು ಪಂದ್ಯಗಳಲ್ಲಿ ಭಾಗವಹಿಸಲಿದೆ. ಎದುರಾಳಿಯ ತವರು ಅಂಗಳದಲ್ಲಿ 7 ಪಂದ್ಯಗಳಲ್ಲಿ ಮುಖಾಮುಖಿಯಾಗಲಿದೆ. ಹೀಗೆ ಒಟ್ಟು 14 ಲೀಗ್ ಪಂದ್ಯಗಳನ್ನು ಪ್ರತೀ ತಂಡಗಳೂ ಆಡಲಿವೆ.

ಐಪಿಎಲ್: ಚುಟುಕು ಕದನದ ವೇಳಾಪಟ್ಟಿ ಬಿಡುಗಡೆಐಪಿಎಲ್: ಚುಟುಕು ಕದನದ ವೇಳಾಪಟ್ಟಿ ಬಿಡುಗಡೆ

ಆರ್‌ಸಿಬಿ ಆಡುವ ಪಂದ್ಯಗಳ ಮಾಹಿತಿಗಳನ್ನು ಮುಂದಿನ ಸ್ಲೈಡ್‌ಗಳಲ್ಲಿ ಗಮನಿಸಿ:

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 7 ಪಂದ್ಯಗಳು

ಆರ್‌ಸಿಬಿ ತಂಡಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣ ತವರು ಮೈದಾನ. ಇಲ್ಲಿ 7 ಪಂದ್ಯಗಳು ನಡೆಯಲಿದೆ. ಮೊದಲ ಪಂದ್ಯ ಮಾರ್ಚ್ 31ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಕೆಕೆಆರ್ ಆರ್‌ಸಿಬಿ ತಂಡಕ್ಕೆ ಎದುರಾಗುವ ಮೊದಲ ತಂಡವಾಗಿದೆ.

ಮೊದಲ 'ಅ ವೇ' ಪಂದ್ಯಕ್ಕೆ ಮುಂಬೈ ಎದುರಾಳಿ

ಆರ್‌ಸಿಬಿ ಮೊದಲ 'ಅ ವೇ' ಪಂದ್ಯವನ್ನು ಮುಂಬೈ ವಿರುದ್ಧ ಆಡಲಿದೆ. ಮುಂಬೈ ತಂಡದ ತವರು ಅಂಗಳವಾದ ವಾಂಖೆಡೆ ಕ್ರೀಡಾಂಗಣದಲ್ಲಿ ಆರ್‌ಸಿಬಿ ಅದೃಷ್ಟ ಪರೀಕ್ಷೆಗೆ ಇಳಿಯಲಿದೆ. ಈ ಪಂದ್ಯ ಏಪ್ರಿಲ್ 5ರಂದು ನಡೆಯಲಿದೆ. ಮುಂಬೈ ಹಾಲಿ ಚಾಂಪಿಯಬ್ ತಂಡವಾಗಿದ್ದು ರೋಹಿತ್ ಶರ್ಮಾ ಮುನ್ನಡೆಸುತ್ತಿದ್ದಾರೆ.

ಎರಡು ಪಂದ್ಯ 4 ಗಂಟೆಗೆ ಆರಂಭ:

ಎರಡು ಪಂದ್ಯ 4 ಗಂಟೆಗೆ ಆರಂಭ:

ಆರ್‌ಸಿಬಿಯ ಎರಡು ಪಂದ್ಯಗಳು ಹೊರತು ಪಡಿಸಿ ಉಳಿದ ಎಲ್ಲಾ ಪಂದ್ಯಗಳು ಸಂಜೆ 7 ಗಂಟೆಗೆ ನಡೆಯಲಿದೆ. ಎರಡು ಪಂದ್ಯಗಳು ಮಧ್ಯಾಹ್ನ 4 ಗಂಟೆಗೆ ಆರಂಭವಾಗಲಿದೆ. ಮುಂಬೈ ವಿರುದ್ಧದ ಮೊದಲ 'ಅ ವೇ' ಪಂದ್ಯ ಮತ್ತು ಪಂಜಾಬ್ ವಿರುದ್ಧ ಮೇ 3 ರಂದು ನಡೆಯುವ ಪಂದ್ಯ ಮಾತ್ರ ನಾಲ್ಕು ಗಂಟೆಗೆ ನಡೆಯಲಿದೆ.

ಸಾಮಾನ್ಯ ಪಂದ್ಯಗಳ ಸಮಯ

ಸಾಮಾನ್ಯ ಪಂದ್ಯಗಳ ಸಮಯ

ಈ ಬಾರಿಯ ಪಂದ್ಯಗಳು ಸಂಜೆ 7 ಗಟೆಗೆ ಆರಂಭವಾಗಲಿದೆ.ಆದರೆ ಭಾನುವಾರ ಮಾತ್ರ ಎರಡು ಪಂದ್ಯಗಳನ್ನು ಆಯೋಜನೆ ಮಾಡಲಾಗಿದೆ. ಒಟ್ಟು ಆರು ದಿನಗಳಲ್ಲಿ ಮಾತ್ರವೇ ಎರಡು ಪಂದ್ಯಗಳು ನಡೆಯಲಿದೆ. ಭಾನುವಾರ ಮೊದಲ ಪಂದ್ಯ ನಾಲ್ಕು ಗಂಟೆಗೆ ಆರಂಭವಾಗಲಿ.

Story first published: Monday, February 17, 2020, 16:21 [IST]
Other articles published on Feb 17, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X