ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ ಬ್ಯಾಕ್ ಇನ್ ಆಕ್ಷನ್: ಮೈದಾನದಲ್ಲಿ ಮತ್ತದೇ ರಾಗ, ಅದೇ ಹಾಡು

ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಐಪಿಎಲ್ 2020, ಹದಿನಾಲ್ಕನೇ ಅವೃತ್ತಿಯ ಪಂದ್ಯಾವಳಿಯ ಶುಭಾರಂಭ ಮಾಡಿದೆ. ಮೊದಲ ಪಂದ್ಯದಲ್ಲಿ ಸರ್ ರೈಸರ್ಸ್ ಹೈದರಾಬಾದ್ ವಿರುದ್ದ ಹತ್ತು ರನ್ ಗಳ ಜಯ ಸಾಧಿಸಿದೆ.

ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ದೇವದತ್ ಪಡಿಕ್ಕಲ್, ಎಬಿ ಡಿ'ವಿಲಿಯರ್ಸ್ ಅವರ ಭರ್ಜರಿ ಆಟ ಮತ್ತು ಯಜುವೇಂದ್ರ ಚಹಲ್, ಶಿವಂ ದುಬೆ, ನವದೀಪ್ ಶೈನಿಯ ಉತ್ತಮ ಬೌಲಿಂಗ್ ನಿಂದ ಬೆಂಗಳೂರು ತಂಡ ಸುಲಭವಾಗಿ ಗೆಲುವು ಸಾಧಿಸಿದೆ.

ಐಪಿಎಲ್ ಮೊದಲ ಪಂದ್ಯದಲ್ಲಿ 50+: ಮೆಕಲಮ್‌ನಿಂದ ದೇವದತ್ ತನಕಐಪಿಎಲ್ ಮೊದಲ ಪಂದ್ಯದಲ್ಲಿ 50+: ಮೆಕಲಮ್‌ನಿಂದ ದೇವದತ್ ತನಕ

ಲಾಕ್ ಡೌನ್ ನಿಂದಾಗಿ ಹಲವು ತಿಂಗಳ ಗ್ಯಾಪ್ ನಂತರ ವಿರಾಟ್ ಕೊಹ್ಲಿ ಮೈದಾನಕ್ಕೆ ಇಳಿದಿರುವುದರಿಂದ, ಉತ್ತಮ ಬ್ಯಾಟಿಂಗ್ ಪ್ರದರ್ಶನ ಮೊದಲ ಪಂದ್ಯದಲ್ಲಿ ಅವರಿಂದ ಬಂದಿಲ್ಲ. ಆದರೆ, ನಾಯಕನಾಗಿ ಸಮರ್ಥವಾಗಿ ತಂಡವನ್ನು ಮುನ್ನಡೆಸಿದರು.

ಐಪಿಎಲ್ 2020: ಸನ್ ರೈಸರ್ಸ್ ವಿರುದ್ಧ ಮೊದಲ ಪಂದ್ಯ ಗೆದ್ದು ಬೀಗಿದ ಆರ್‌ಸಿಬಿ: ಹೈಲೈಟ್ಸ್ಐಪಿಎಲ್ 2020: ಸನ್ ರೈಸರ್ಸ್ ವಿರುದ್ಧ ಮೊದಲ ಪಂದ್ಯ ಗೆದ್ದು ಬೀಗಿದ ಆರ್‌ಸಿಬಿ: ಹೈಲೈಟ್ಸ್

ನಾಯಕ ವಿರಾಟ್ ಕೊಹ್ಲಿ ಆಟಗಾರರನ್ನು ಹುರಿದುಂಬಿಸುತ್ತಾ, ಔಟ್ ಆದಾಗ ವಿರೋಧಿ ತಂಡದ ಆಟಗಾರರನ್ನು ಕೆಣಕುತ್ತಾ, ಮೈದಾನದಲ್ಲಿ ತಮ್ಮ ಎಂದಿನ ಆಕ್ರಮಣಕಾರಿ ಶೈಲಿಗೆ ಉರುಳಿದರು. ಪ್ರಮುಖ ವಿಕೆಟ್ ಬಿದ್ದಾಗ ಅವರ ಆಕ್ರಮಣಶೀಲತೆ ಎಂದಿನಂತಿತ್ತು, ಕೆಲವೊಮ್ಮೆ ಜಾಸ್ತಿ ಅನಿಸುತ್ತಿತ್ತು.

ಮನೀಶ್ ಪಾಂಡೆ ಔಟ್ ಆದಾಗಲಂತೂ ಅವರ ಆಕ್ರಮಣಶೀಲತೆ ತುಸು ಜಾಸ್ತಿಯೇ

ಮನೀಶ್ ಪಾಂಡೆ ಔಟ್ ಆದಾಗಲಂತೂ ಅವರ ಆಕ್ರಮಣಶೀಲತೆ ತುಸು ಜಾಸ್ತಿಯೇ

ಡೇವಿಡ್ ವಾರ್ನರ್ ಮೂಲಕ ಹೈದರಾಬಾದ್ ತಂಡದ ಮೊದಲ ವಿಕೆಟ್ ಬಿದ್ದಾಗ, ಇದಾದ ನಂತರ, ಮನೀಶ್ ಪಾಂಡೆ ಮತ್ತು ಬೈರ್ ಸ್ಟೋವ್ ಔಟಾದಾಗಲಂತೂ, ವಿರಾಟ್ ಕೊಹ್ಲಿ, ಸನ್ ರೈಸರ್ಸ್ ಆಟಗಾರರನ್ನು ಕೆಣಕಿದರು. ಅದರಲ್ಲೂ ಮನೀಶ್ ಪಾಂಡೆ ಔಟ್ ಆದಾಗಲಂತೂ ಅವರ ಆಕ್ರಮಣಶೀಲತೆ ತುಸು ಜಾಸ್ತಿಯೇ ಇತ್ತು.

ಉಮೇಶ್ ಯಾದವ್ ದುಬಾರಿಯಾದಾಗ

ಉಮೇಶ್ ಯಾದವ್ ದುಬಾರಿಯಾದಾಗ

ಇನ್ನು, ಉಮೇಶ್ ಯಾದವ್ ದುಬಾರಿಯಾದಾಗ ತಾಳ್ಮೆ ಕಳೆದುಕೊಳ್ಳದಂತೇ ಕಣ್ಸನ್ನೆಯಲ್ಲೇ ಸೂಚಿಸುತ್ತಿದ್ದರು. ಮಿಸ್ ಫೀಲ್ಡ್ ಆದಾಗ ಆಕ್ರೋಶ ವ್ಯಕ್ತ ಪಡಿಸುತ್ತಾ, ಫೀಲ್ಡಿಂಗ್ ಬದಲಾವಣೆಯನ್ನು ಮಾಡುತ್ತಿದ್ದರು. ಆರು ಜನರಿಗೆ ಬೌಲಿಂಗ್ ನೀಡಿದ್ದ ಕೊಹ್ಲಿ, ಹೈದರಾಬಾದ್ ಆಟಗಾರರನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು.

ನಾನಾಗಿಯೇ ಎಂದೂ ಎದುರಾಳಿ ತಂಡವನ್ನು ಕೆಣಕುವುದಿಲ್ಲ

ನಾನಾಗಿಯೇ ಎಂದೂ ಎದುರಾಳಿ ತಂಡವನ್ನು ಕೆಣಕುವುದಿಲ್ಲ

"ಮೈದಾನದಲ್ಲಿ ಯಾವ ಪರಿಸ್ಥಿತಿ ಇರುತ್ತದೋ ಅದರ ಮೇಲೆ ಆಕ್ರಮಣಶೀಲತೆ ಇರುತ್ತದೆ. ಎದುರಾಳಿಗಳು ಆಕ್ರಮಣಕಾರಿಯಾಗಿದ್ದರೆ, ನಾವೂ ಹಾಗೇ ಇರಬೇಕಾಗುತ್ತದೆ. ಯಾವುದೇ ಪಂದ್ಯದಲ್ಲಿ ನಾನಾಗಿಯೇ ಎಂದೂ ಎದುರಾಳಿ ತಂಡವನ್ನು ಕೆಣಕಲು ಹೋಗುವುದಿಲ್ಲ"ಎಂದು ಕೊಹ್ಲಿ ಹಿಂದೊಮ್ಮೆ ಹೇಳಿದ್ದರು.

ಬೌಲರ್ ಗಳ ಪರಿಶ್ರಮ ತುಂಬಾ ಇರುತ್ತದೆ

ಬೌಲರ್ ಗಳ ಪರಿಶ್ರಮ ತುಂಬಾ ಇರುತ್ತದೆ

"ನನಗಿರುವ ವೈಯಕ್ತಿಕ ಗೌರವಕ್ಕೆ ವಿರುದ್ದವಾಗಿ ಎಂದೂ ನಾನು ನಡೆದುಕೊಳ್ಳುವುದಿಲ್ಲ. ಪ್ರತಿಯೊಂದು ವಿಕೆಟ್ ಬಿದ್ದಾಗಲೂ ನಾನು ಆಕ್ರಮಣಕಾರಿಯಾಗಿ ಇರಬೇಕಾಗುತ್ತದೆ. ಯಾಕೆಂದರೆ, ಇದರ ಹಿಂದೆ ಬೌಲರ್ ಗಳ ಪರಿಶ್ರಮ ತುಂಬಾ ಇರುತ್ತದೆ. ನಾನು ಆಕ್ರಮಣಕಾರಿಯಾಗಿರುವುದು ಆಡುವ ಎಲ್ಲಾ ಪಂದ್ಯವನ್ನು ಗೆಲ್ಲಬೇಕೆನ್ನುವ ಫ್ಯಾಷನ್ ಗಾಗಿ" ಎಂದು ವಿರಾಟ್ ಕೊಹ್ಲಿ ಹೇಳಿದ್ದರು.

Story first published: Tuesday, September 22, 2020, 17:39 [IST]
Other articles published on Sep 22, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X