ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಾಯಲ್ ಲಂಡನ್ ಕಪ್: ಮತ್ತೆ ಸಿಡಿದ ಪೂಜಾರ: 75 ಎಸೆತಗಳಲ್ಲಿ ಶತಕ ಸಿಡಿಸಿದ ಭಾರತೀಯ

Royal London Cup: Cheteshwar Pujara hit 3rd century as 75-ball Hundred

ಟೆಸ್ಟ್ ಸ್ಪೆಶಲಿಸ್ಟ್ ಚೇತೇಶ್ವರ್ ಪೂಜಾರ ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ರಾಯಲ್ ಲಂಡನ್ ಕಪ್ ಏಕದಿನ ಮಾದರಿಯ ಕ್ರಿಕೆಟ್‌ನಲ್ಲಿ ತಮ್ಮ ಭರ್ಜರಿ ಫಾರ್ಮ್ ಮುಂದುವರಿಸಿದ್ದಾರೆ. ಮಂಗಳವಾರ ನಡೆದ ಪಂದ್ಯದಲ್ಲಿ ಚೇತೇಶ್ವರ್ ಪೂಜಾರ ಭರ್ಜರಿ ಶತಕ ಸಿಡಿಸಿದ್ದು ಈ ಟೂರ್ನಿಯಲ್ಲಿ ಅವರ ಮೂರನೇ ಶತಕ ಇದಾಗಿದೆ. ಈ ಪಂದ್ಯದಲ್ಲಿ ಅವರು ಒಟ್ಟು 90 ಎಸೆತಗಳನ್ನು ಎದುರಿಸಿದ್ದು 132 ರನ್‌ಗಳನ್ನು ಗಳಿಸಿದ್ದಾರೆ.

ರಾಯಲ್ ಲಂಡನ್ ಕಪ್‌ನಲ್ಲಿ ಸಸ್ಸೆಕ್ಸ್ ತಂಡದ ಪರವಾಗಿ ಆಡುತ್ತಿರುವ ಚೇತೇಶ್ವರ್ ಪೂಜಾರ ಇದಕ್ಕೂ ಮುನ್ನ ವಾರ್ವಿಕ್‌ಶೈರ್ ಹಾಗೂ ಸರ್ರೆ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಶತಕವನ್ನು ಸಿಡಿಸಿದ್ದರು. ಈ ಫಾರ್ಮ್ ಮುಂದುವರಿಸಿರುವ ಅವರು ಮಿಡ್ಲ್‌ಸೆಕ್ಸ್ ವಿರುದ್ಧದ ಪಂದ್ಯದಲ್ಲಿಯೂ ಶತಕಗಳಿಸಿದ್ದಾರೆ. ಪೂಜಾರ ಶತಕದ ನೆರವಿನಿಂದಾಗಿ ಸಸ್ಸೆಕ್ಸ್ ತಂಡ ಈ ಪಂದ್ಯದಲ್ಲಿ ಭರ್ಜರಿ 400 ರನ್‌ಗಳನ್ನು ಗಳಿಸಿದೆ. ಆರಂಭಿಕ ಆಟಗಾರ ಟಾಮ್ ಅಲ್ಸಪ್ ಕೂಡ ಅದ್ಭುತ ಪ್ರದರ್ಶನ ನೀಡಿದ್ದು 189 ರನ್‌ಗಳನ್ನು ಗಳಿಸಿದ್ದಾರೆ.

IND vs ZIM: ಮಂಕಡಿಂಗ್ ಮಾಡಿದರೂ ಔಟ್‌ಗೆ ಮನವಿ ಮಾಡದ ದೀಪಕ್ ಚಹಾರ್; ವಿಡಿಯೋ ವೈರಲ್IND vs ZIM: ಮಂಕಡಿಂಗ್ ಮಾಡಿದರೂ ಔಟ್‌ಗೆ ಮನವಿ ಮಾಡದ ದೀಪಕ್ ಚಹಾರ್; ವಿಡಿಯೋ ವೈರಲ್

75 ಎಸೆತಗಳಲ್ಲಿ ಶತಕ

ಚೇತೇಶ್ವರ್ ಪುಜಾರ ಈ ಪಂದ್ಯದಲ್ಲಿ ಕೇವಲ 7 ಎಸೆತಗಳಲ್ಲಿ ತಮ್ಮ ಶತಕವನ್ನು ಪೂರ್ಣಗೊಳಿಸಿದ್ದಾರೆ. ನಾಲ್ಕನೇ ಕ್ರಮಾಂಕದಲ್ಲಿ ಆಡಲಿಳಿದ ಅವರು ಒಟ್ಟು 20 ಬೌಂಡರಿ ಬಾರಿಸಿದ್ದು 2 ಸಿಕ್ಸರ್ ಸಿಡಿಸಿದ್ದಾರೆ. ಟಾಮ್ ಅಲ್ಸಪ್ ಅವರೊಂದಿಗೆ ಪೂಜಾರ ಬರೊಬ್ಬರಿ 240 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾಗಿದ್ದಾರೆ.

ಟೂರ್ನಿಯಲ್ಲಿ 2ನೇ ಹೈಯೆಸ್ಟ್ ಸ್ಕೋರರ್

ಚೇತೇಶ್ವರ್ ಪೂಜಾರ ರಾಯಲ್ ಲಂಡನ್ ಕಪ್ ಟೂರ್ನಿಯಲ್ಲಿ ಪ್ರತಿ ಪಂದ್ಯದಲ್ಲಿಯೂ ಅದ್ಭುತ ಪ್ರದರ್ಶನ ನೀಡಿಕೊಂಡು ಮಿಂಚುತ್ತಿದ್ದಾರೆ. ಈ ಮೂಲಕ ಈ ಆವೃತ್ತಿಯ ಟೂರ್ನಿಯಲ್ಲಿ ಭಾರತದ ಹಿರಿಯ ಆಟಗಾರ ಎರಡನೇ ಅತಿ ಹೆಚ್ಚು ರನ್‌ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. 8 ಪಂದ್ಯಗಳನ್ನು ಆಡಿರುವ ಪೂಜಾರ 614 ರನ್‌ಗಳನ್ನು ಗಳಿಸಿದ್ದಾರೆ. 102.33ರಷ್ಟು ಅಮೋಘ ಸರಾಸರಿ ಹೊಂದಿದ್ದರೆ 116.28ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ನಡೆಸಿದ್ದಾರೆ.

ಇಂಗ್ಲೆಂಡ್‌ನ ದೇಶೀಯ ಕ್ರಿಕೆಟ್ ರಾಯಲ್ ಲಂಡನ್ ಕಪ್‌ನಲ್ಲಿ ಪೂಜಾರ ಸಸ್ಸೆಕ್ಸ್ ತಂಡದ ಪರವಾಗಿ ಆಡುತ್ತಿದ್ದಾರೆ. ಈ ಟೂರ್ನಿಯಲ್ಲಿ ಮೂರನೇ ಶತಕ ಸಿಡಿಸಿರುವ ಪೂಜಾರ ಇದಕ್ಕೂ ಮುನ್ನ ಆಗಸ್ಟ್ 12 ಹಾಗೂ ಆಗಸ್ಟ್ 14ರಂದು ನಡೆದಿದ್ದ ಈ ಪಂದ್ಯದಲ್ಲಿಯೂ ಪೂಜಾರ ಅಮೋಘ ಶತಕವನ್ನು ಸಿಡಿಸಿದ್ದರು. ಈ ಮೂಲಕ ಟೂರ್ನಿಯಲ್ಲಿ3ನೇ ಶತಕದ ಸಾಧನೆ ಮಾಡಿದ್ದಾರೆ ಪೂಜಾರ.

ಕೌಂಟಿಯಲ್ಲಿಯೂ ಮಿಂಚಿ ಭಾರತಕ್ಕೆ ಕಮ್‌ಬ್ಯಾಕ್ ಮಾಡಿದ್ದ ಪೂಜಾರ

ಕೌಂಟಿಯಲ್ಲಿಯೂ ಮಿಂಚಿ ಭಾರತಕ್ಕೆ ಕಮ್‌ಬ್ಯಾಕ್ ಮಾಡಿದ್ದ ಪೂಜಾರ

ಇನ್ನು ಇದಕ್ಕೂ ಮುನ್ನ ಚೇತೇಶ್ವರ್ ಪೂಜಾರ ಇಂಗ್ಲೆಂಡ್‌ನಲ್ಲಿ ಕೌಂಟಿ ಕ್ರಿಕೆಟ್‌ನಲ್ಲಿಯೂ ಆಡಿದ್ದರು. ಅಲ್ಲಿಯೂ ಶತಕದ ಮೇಲೆ ಶತಕವನ್ನು ಬಾರಿಸಿದ್ದ ಪೂಜಾರ ಟೆಸ್ಟ್ ತಂಡದಿಂದ ಹೊರಗಿಟ್ಟ ಆಯ್ಕೆ ಸಮಿತಿಗೆ ಇಂಗ್ಲೆಂಡ್‌ನಿಂದಲೇ ಸ್ಪಷ್ಟ ಸಂದೇಶವನ್ನು ನೀಡಿದ್ದರು. ಹೀಗಾಗಿ ಇತ್ತೀಚಿನ ಕೆಲ ಸಮಯಗಳಿಂದ ಟೆಸ್ಟ್ ಕ್ರಿಕೆಟ್‌ನಲ್ಲಿ ಕಳಪೆ ಪ್ರದರ್ಶನ ನೀಡಿ ಟೆಸ್ಟ್ ತಂಡದಿಂದ ಹೊರಬಿದ್ದಿದ್ದ ಪೂಜಾರ ಇಂಗ್ಲೆಂಡ್ ಪ್ರವಾಸದ ಪೂಲಕ ತಂಡಕ್ಕೆ ಕಮ್‌ಬ್ಯಾಕ್ ಮಾಡಲು ಯಶಸ್ವಿಯಾಗಿದ್ದರು.

Story first published: Tuesday, August 23, 2022, 21:41 [IST]
Other articles published on Aug 23, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X