ವಿಡಿಯೋ: ರಾಯಲ್ ಲಂಡನ್ ಕಪ್‌; ಒಂದೇ ಓವರ್‌ನಲ್ಲಿ 22 ರನ್ ಚಚ್ಚಿ ಶತಕ ಬಾರಿಸಿದ ಪೂಜಾರ

ಭಾರತದ ಬಲಗೈ ಬ್ಯಾಟರ್ ಚೇತೇಶ್ವರ ಪೂಜಾರ ಅವರು ಕೌಂಟಿ ಚಾಂಪಿಯನ್‌ಶಿಪ್ ಡಿವಿಷನ್ 2ನಲ್ಲಿ ಸಸೆಕ್ಸ್ ತಂಡಕ್ಕಾಗಿ ಮೊದಲ ಬಾರಿಗೆ ಐದು ಶತಕಗಳನ್ನು ಗಳಿಸಿ ಈ ಋತುವಿನಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ.

ಆಗಸ್ಟ್ 12ರ ಶುಕ್ರವಾರ ನಡೆದ ರಾಯಲ್ ಲಂಡನ್ ಏಕದಿನ ಕಪ್‌ನಲ್ಲಿ ಭಾರತದ ಪ್ರಮುಖ ಟೆಸ್ಟ್ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ ವಿಭಿನ್ನ ಮನಸ್ಥಿತಿಯಲ್ಲಿದ್ದರು.

CSA T20 League: ಪಾರ್ಲ್ ರಾಯಲ್ಸ್ ತಂಡಕ್ಕೆ ಜೋಸ್ ಬಟ್ಲರ್, ಡೇವಿಡ್ ಮಿಲ್ಲರ್ ಸೇರ್ಪಡೆCSA T20 League: ಪಾರ್ಲ್ ರಾಯಲ್ಸ್ ತಂಡಕ್ಕೆ ಜೋಸ್ ಬಟ್ಲರ್, ಡೇವಿಡ್ ಮಿಲ್ಲರ್ ಸೇರ್ಪಡೆ

ಸಾಮಾನ್ಯ ನಾಯಕ ಟಾಮ್ ಹೈನ್ಸ್ ಗಾಯದ ಕಾರಣದಿಂದ ಹೊರಗುಳಿದಿದ್ದು, ಚೇತೇಶ್ವರ ಪೂಜಾರ ಅವರು ಸಸೆಕ್ಸ್ ತಂಡವನ್ನು ಮುನ್ನಡೆಸಲು ಪ್ರಮುಖ ಕಾರಣವಾಗಿತ್ತು. ಇನ್ನು ಬ್ಯಾಟರ್ ಆಗಿ ಅದ್ಭುತ ತನ್ನ ಫಾರ್ಮ್‌ ಮುಂದುವರೆಸಿದ್ದಾರೆ ಮತ್ತು ಇತ್ತೀಚಿನ ದಿನಗಳಲ್ಲಿ ರಾಯಲ್ ಲಂಡನ್ ಏಕದಿನ ಕಪ್‌ನಲ್ಲಿ ಶುಕ್ರವಾರ ಎ ಗುಂಪಿನ ಪಂದ್ಯದಲ್ಲಿ ವಾರ್ವಿಕ್‌ಷೈರ್ ವಿರುದ್ಧ ತಂಡ ಶತಕ ದಾಖಲಿಸಿದರು.

ಕ್ಷಿಪ್ರ ಶತಕ ದಾಖಲಿಸಿದ ಚೇತೇಶ್ವರ ಪೂಜಾರ

ಕ್ಷಿಪ್ರ ಶತಕ ದಾಖಲಿಸಿದ ಚೇತೇಶ್ವರ ಪೂಜಾರ

50 ಓವರ್‌ಗಳಲ್ಲಿ 311 ರನ್‌ಗಳನ್ನು ಬೆನ್ನಟ್ಟಿದ ಚೇತೇಶ್ವರ ಪೂಜಾರ ಹೊಸ ಅವತಾರದಲ್ಲಿ ಕ್ಷಿಪ್ರ ಶತಕವನ್ನು ದಾಖಲಿಸಿದರು. ಬಲಗೈ ಬ್ಯಾಟ್ಸ್‌ಮನ್ ಪೂಜಾರ ಸಸೆಕ್ಸ್ ತಂಡದ ಪರ ಕೇವಲ 79 ಎಸೆತಗಳಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ 107 ರನ್ ಗಳಿಸಿದರು, ಇದರಲ್ಲಿ ಆಟದ 45ನೇ ಓವರ್‌ನಲ್ಲಿ 22 ರನ್ ಚಚ್ಚಿರುವುದು ವಿಶೇಷ.

ಚೇತೇಶ್ವರ ಪೂಜಾರ ನಂತರ ಇನ್ನಿಂಗ್ಸ್‌ನ 48ನೇ ಓವರ್‌ನಲ್ಲಿ ತಮ್ಮ ಶತಕವನ್ನು ಗಳಿಸಿದರು ಮತ್ತು ಅಂತಿಮವಾಗಿ 49ನೇ ಓವರ್‌ನಲ್ಲಿ ಹ್ಯಾನನ್-ಡಾಲ್ಬಿ ಅವರ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆದ ಕಾರಣ ಅವರ ಅತ್ಯುತ್ತಮ ಆಟ ಕೊನೆಗೊಂಡಿತು.

ಒಂದೇ ಓವರ್‌ನಲ್ಲಿ 4, 2, 4, 2, 6 ಮತ್ತು 4 ರನ್‌

ಅಂತಿಮ ಆರು ಓವರ್‌ಗಳಲ್ಲಿ ಸಸೆಕ್ಸ್ ತಂಡಕ್ಕೆ 70 ರನ್‌ಗಳ ಅಗತ್ಯವಿದ್ದಾಗ, ತನ್ನ ಅಂತಿಮ ಓವರ್‌ನಲ್ಲಿ ಬೌಲಿಂಗ್ ಮಾಡುತ್ತಿದ್ದ ಇಂಗ್ಲೆಂಡ್‌ನ ಲಿಯಾಮ್ ನಾರ್ವೆಲ್‌ಗೆ ಚೇತೇಶ್ವರ ಪೂಜಾರ ತನ್ನ ಸ್ಫೋಟಕ ಬ್ಯಾಟಿಂಗ್ ರೂಪ ತೋರಿಸಿದರು. ನಾರ್ವೆಲ್ ತನ್ನ ಅಂತಿಮ ಓವರ್‌ನಲ್ಲಿ 4, 2, 4, 2, 6 ಮತ್ತು 4 ರನ್‌ಗಳನ್ನು ಬಿಟ್ಟುಕೊಟ್ಟರು.

ಚೇತೇಶ್ವರ ಪೂಜಾರ ಮೈದಾನದ ಎಲ್ಲಾ ಭಾಗಗಳಿಗೆ ಚೆಂಡನ್ನು ಕಳಿಸಿದರು ಮತ್ತು ಆಗಾಗ ವಿನೂತನ ಶಾಟ್‌ಗಳಿಂದ ಪ್ರೇಕ್ಷಕರನ್ನು ರಂಜಿಸಿದರು. ಇಂತಹ ಉನ್ನತ ಫ್ಲೈಟ್ ಕ್ರಿಕೆಟ್‌ ಅನ್ನು ಚೇತೇಶ್ವರ ಪೂಜಾರ ಅವರಿಂದ ಇದುವರೆಗೆ ನೋಡಿರಲಿಲ್ಲ. ಈ ಮೊದಲು ತಂಡದಿಂದ ಕೈಬಿಟ್ಟ ನಂತರ ಚೇತೇಶ್ವರ ಪೂಜಾರ ಮತ್ತೆ ಭಾರತ ಟೆಸ್ಟ್ ತಂಡಕ್ಕೆ ಮರಳಿದ್ದಾರೆ. ಈಗ ಕೌಂಟಿ ಕ್ರಿಕೆಟ್ ಸೆಟ್-ಅಪ್‌ನಲ್ಲಿ ಬಹು ಶತಕಗಳನ್ನು ಗಳಿಸಿದ್ದು, ಅವರ ಕ್ರಿಕೆಟ್ ಬದುಕಿಗೆ ಮತ್ತೊಂದು ರೂಪ ನೀಡಲಿದೆ.

ವಾರ್ವಿಕ್‌ಷೈರ್ ವಿರುದ್ಧ ಸೋತ ಸಸೆಕ್ಸ್ ತಂಡ

ವಾರ್ವಿಕ್‌ಷೈರ್ ವಿರುದ್ಧ ಸೋತ ಸಸೆಕ್ಸ್ ತಂಡ

ಇನ್ನು ಕೌಂಟಿ ಚಾಂಪಿಯನ್‌ಶಿಪ್ ಪಂದ್ಯಕ್ಕೆ ಬಂದರೆ, ಚೇತೇಶ್ವರ ಪೂಜಾರ ಅವರ ಅಮೋಘ ಶತಕ ಮತ್ತು ಅತ್ಯುತ್ತಮ ಪ್ರಯತ್ನದ ಹೊರತಾಗಿಯೂ, ಸಸೆಕ್ಸ್ ತಂಡ ವಾರ್ವಿಕ್‌ಷೈರ್ ವಿರುದ್ಧ ನಾಲ್ಕು ರನ್‌ಗಳಿಂದ ಸೋಲನುಭವಿಸಿತು. ಮೂರು ಪಂದ್ಯಗಳಿಂದ ನಾಲ್ಕು ಅಂಕಗಳೊಂದಿಗೆ ಸಸೆಕ್ಸ್ ಪ್ರಸ್ತುತ ಟೂರ್ನಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಈ ಸಮಯದಲ್ಲಿ ನಾಟಿಂಗ್‌ಹ್ಯಾಮ್‌ಶೈರ್ ಅಂಕಪಟ್ಟಿಯನ್ನು ಮುನ್ನಡೆಸುತ್ತಿದೆ.

For Quick Alerts
ALLOW NOTIFICATIONS
For Daily Alerts
Story first published: Saturday, August 13, 2022, 12:20 [IST]
Other articles published on Aug 13, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X