ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಿವೃತ್ತಿ ಘೋಷಿಸಿದ ಆರ್ ಪಿ ಸಿಂಗ್ ಗೆ ಶುಭ ಹಾರೈಸಿದ ಟ್ವೀಟ್ ಲೋಕ

By Mahesh
sports world : ಆರ್ ಪಿ ಸಿಂಗ್ ನಿವೃತ್ತಿ ಘೋಷಣೆ | Oneindia Kannada
RP Singh announces retirement from all forms of cricket; cricketers wish him luck

ಬೆಂಗಳೂರು, ಸೆಪ್ಟೆಂಬರ್ 05: ಟೀಂ ಇಂಡಿಯಾ ಹಿರಿಯ ಎಡಗೈ ಮಧ್ಯಮ ವೇಗಿ ರುದ್ರ ಪ್ರತಾಪ್ ಸಿಂಗ್ (ಆರ್ ಪಿ ಸಿಂಗ್) ಅವರು ಎಲ್ಲಾ ಬಗೆಯ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದ್ದಾರೆ. 32 ವರ್ಷ ವಯಸ್ಸಿನ ಆರ್ ಪಿ ಸಿಂಗ್ ಅವರು ತಮ್ಮ 13 ವರ್ಷಗಳ ವೃತ್ತಿ ಬದುಕಿನ ಬಗ್ಗೆ ಸುದೀರ್ಘವಾಗಿ ಟ್ವೀಟ್ ಮಾಡಿದ್ದಾರೆ.

'13 ವರ್ಷಗಳ ಹಿಂದೆ ಸೆಪ್ಟೆಂಬರ್ 04, 2005 ರಂದು ಮೊದಲ ಬಾರಿಗೆ ಇಂಡಿಯನ್ ಜರ್ಸಿ ತೊಟ್ಟಿದ್ದೆ. ನನ್ನ ಬದುಕಿನ ಮರೆಯಲಾಗದ ಕ್ಷಣವಾಗಿತ್ತು. ಇವತ್ತು ನಾನು ನಿವೃತ್ತಿ ಘೋಷಿಸುತ್ತಿದ್ದೇನೆ. ನನ್ನ ಈ ಪಯಣಕ್ಕೆ ಕಾರಣರಾದ ಎಲ್ಲರಿಗೂ ನನ್ನ ಧನ್ಯವಾದಗಳು' ಎಂದಿದ್ದಾರೆ.

ಭಾರತ-ಇಂಗ್ಲೆಂಡ್ 5ನೇ ಟೆಸ್ಟ್: ಇಂಗ್ಲೆಂಡ್ ತಂಡ ಪ್ರಕಟ, ಕುಕ್ ಕೊನೇ ಆಟ! ಭಾರತ-ಇಂಗ್ಲೆಂಡ್ 5ನೇ ಟೆಸ್ಟ್: ಇಂಗ್ಲೆಂಡ್ ತಂಡ ಪ್ರಕಟ, ಕುಕ್ ಕೊನೇ ಆಟ!

ಪಾಕಿಸ್ತಾನದ ಫೈಸಲಾಬಾದ್ ನಲ್ಲಿ ಮೊದಲ ಪಂದ್ಯವಾಡಿದ್ದನ್ನು ಸ್ಮರಿಸಿರುವ ಆರ್ ಪಿ ಸಿಂಗ್, ತಮ್ಮ ಮೊದಲ ಜರ್ಸಿ ಹಾಗೂ ಅದರ ಮೇಲೆ ಹಸ್ತಾಕ್ಷರವಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಆರ್ ಪಿ ಸಿಂಗ್ ಅವರು ಭಾರತದ ಪರ 14 ಟೆಸ್ಟ್ ಪಂದ್ಯ, 58 ಏಕದಿನ ಅಂತಾರಾಷ್ಟ್ರೀಯ ಪಂದ್ಯ, 10 ಟ್ವೆಂಟಿ20ಐ ಪಂದ್ಯಗಳನ್ನಾಡಿದ್ದಾರೆ. ಜಿಂಬಾಬ್ವೆ ವಿರುದ್ಧ ಹರಾರೆಯಲ್ಲಿ ಚೊಚ್ಚಲ ಏಕದಿನ ಪಂದ್ಯವನ್ನಾಡಿದ್ದರು.

ಕೆಪಿಎಲ್ 2018: ಮೈಸೂರು ವಿರುದ್ಧ ಗೆದ್ದ ಉತ್ತಪ್ಪ ಪಡೆ ಫೈನಲ್ ಗೆಕೆಪಿಎಲ್ 2018: ಮೈಸೂರು ವಿರುದ್ಧ ಗೆದ್ದ ಉತ್ತಪ್ಪ ಪಡೆ ಫೈನಲ್ ಗೆ

ಕೊನೆಯಬಾರಿಗೆ 2011ರಲ್ಲಿ ಇಂಗ್ಲೆಂಡ್ ವಿರುದ್ಧ ಕಾರ್ಡಿಫ್ ನಲ್ಲಿ ಪಂದ್ಯವಾಡಿದ್ದ ಆರ್ ಪಿ ಸಿಂಗ್ 124 ಒಡಿಐ ವಿಕೆಟ್ ಗಳನ್ನು ಗಳಿಸಿದ್ದಾರೆ. 2007ರಲ್ಲಿ ಇಂಗ್ಲೆಂಡ್ ವಿರುದ್ಧ 1-0 ಟೆಸ್ಟ್ ಸರಣಿ ಗೆದ್ದ ಭಾರತ ತಂಡದ ಸದಸ್ಯರಾಗಿದ್ದು, 5/59 ಗಳಿಸಿ ತಂಡದ ಗೆಲುವಿಗೆ ಕಾರಣರಾಗಿದ್ದರು. ರಾಹುಲ್ ದ್ರಾವಿಡ್ ಪಡೆಲಾರ್ಡ್ಸ್ ಅಂಗಳದಲ್ಲಿ ಮಿಂಚಿ, 21 ವರ್ಷಗಳ ಬಳಿಕ ಇಂಗ್ಲೆಂಡ್ ವಿರುದ್ಧ ಸರಣಿ ಗೆದ್ದ ಸಾಧನೆ ಮಾಡಿತ್ತು.

2007ರಲ್ಲಿ ಐಸಿಸಿ ವಿಶ್ವ ಟಿ20 ಉದ್ಘಾಟನಾ ಟೂರ್ನಮೆಂಟ್ ನಲ್ಲಿ ಆಡಿದ್ದ ಆರ್ ಪಿ ಸಿಂಗ್ 7 ಪಂದ್ಯಗಳಿಂದ 12 ವಿಕೆಟ್ ಗಳಿಸಿ ಉತ್ತಮ ಪ್ರದರ್ಶನ ನೀಡಿದ್ದರು.

ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಡೆಕ್ಕನ್ ಚಾರ್ಜರ್ಸ್ ಪರ ಆಡಿ 23 ವಿಕೆಟ್ ಗಳಿಸಿ, ತಂಡವು ಕಪ್ ಗೆಲ್ಲುವಂತೆ ಮಾಡಿದ್ದರು.

2017ರಲ್ಲಿ ಮುಂಬೈ ವಿರುದ್ಧ ಗುಜರಾತ್ ಪರ ಆಡಿದ್ದು ಕೊನೆ ಪ್ರಥಮ ದರ್ಜೆ ಪಂದ್ಯವಾಗಿದೆ. 94 ಪಂದ್ಯಗಳಿಂದ 301 ವಿಕೆಟ್, 12 ಬಾರಿ 5 ವಿಕೆಟ್ ಗಳಿಸಿದ ಸಾಧನೆ ಮಾಡಿದ್ದಾರೆ. ನಿವೃತ್ತಿ ಬಳಿಕ ಕ್ರಿಕೆಟ್ ಕಾಮೆಂಟ್ರಿ ಮಾಡುವ ಸಾಧ್ಯತೆಯಿದೆ.

ಸುರೇಶ್ ರೈನಾ

ಆರ್ ಸಿಬಿಯಿಂದ ಶುಭಹಾರೈಕೆ

ಪ್ರಗ್ನಾನ್ ಓಜಾ

ಆಕಾಶ್ ಛೋಪ್ರಾ

Story first published: Wednesday, September 5, 2018, 13:59 [IST]
Other articles published on Sep 5, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X