ಐಪಿಎಲ್‌: ರಾಯಲ್ಸ್‌ ಕನಸು ಭಂಗ ಮಾಡಲು ಚಾಲೆಂಜರ್ಸ್‌ ಲೆಕ್ಕಾಚಾರ

ಬೆಂಗಳೂರು, ಏಪ್ರಿಲ್‌ 30: ಈ ಸಲಾ ಕಪ್‌ ನಮ್ದೇ.. ನಮ್ದೇ.. ಎಂದು ಕಡೆಗೆ ಚಿಪ್ಪು ಹಿಡಿದು ಪ್ರಶಸ್ತಿ ರೇಸ್‌ನಿಂದ ಹೊರ ಬಿದ್ದಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ, ಇದೀಗ ಮನೆಯಂಗಣದಲ್ಲಿ ಮಂಗಳವಾರ ನಡೆಯಲಿರುವ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ತಂಡ ಪ್ಲೇ ಆಫ್ಸ್‌ ಕನಸನ್ನು ಭಗ್ನಗೊಳಿಸುವ ಲೆಕ್ಕಾಚಾರದಲ್ಲಿದೆ.

'ವಿಶೇಷ ಅಭಿಮಾನಿ', ಸಹ ಆಟಗಾರರ ಜೊತೆ ಹುಟ್ಟುಹಬ್ಬ ಆಚರಿಸಿದ ರಸೆಲ್

ಕಳೆದ ಪಂದ್ಯದಲ್ಲಿ ಡೆಲ್ಲಿಕ್ಯಾಪಿಟಲ್ಸ್‌ ಎದುರು ಸೋಲುಂಡ ರಾಯಲ್‌ ಚಾಲೆಂಜರ್ಸ್‌ಗೆ ಪ್ಲೇ ಆಫ್ಸ್‌ ಬಾಗಿಲು ಸಂಪೂರ್ಣ ಮುಚ್ಚಿಹೋಯಿತು. ಇನ್ನೇನಿದ್ದರೂ ತನ್ನ ಪಾಲಿನ ಉಳಿದೆರಡು ಪಂದ್ಯಗಳಲ್ಲಿ ಜಯ ದಾಖಲಿಸಿ ಎದುರಾಳಿ ತಂಡಗಳನ್ನು ತನ್ನೊಂದಿಗೆ ಮುಳುಗಿಸುವುದಷ್ಟೇ ಚಾಲೆಂಜರ್ಸ್‌ನ ಗುರಿಯಾಗಿದೆ. ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಆರ್ಸಿಬಿ 12 ಪಂದ್ಯಗಳಿಂದ ಕೇವಲ 8 ಅಂಕಗಳನ್ನು ಮಾತ್ರವೇ ಗಳಿಸಿದೆ.

ಮೊಹಮ್ಮದ್‌ ಶಮಿ ಪತ್ನಿ ಹಸೀನ್‌ ಜಹಾನ್‌ ಬಂಧನ, ಬಿಡುಗಡೆ

ಮತ್ತೊಂದೆಡೆ ಸ್ಟೀವನ್‌ ಸ್ಮಿತ್‌ ನಾಯಕತ್ವದಲ್ಲಿ ಪ್ಲೇ ಆಫ್ಸ್‌ ಕಡೆಗೆ ಮುನ್ನುಗ್ಗುತ್ತಿರುವ ರಾಜಸ್ಥಾನ್‌ ರಾಯಲ್ಸ್‌ ತಂಡಕ್ಕೆ ಉಳಿದ ಎಲ್ಲಾ ಪಂದ್ಯಗಳು ನಾಕ್‌ಔಟ್‌ ಮಹತ್ವ ಪಡೆದುಕೊಂಡಿದೆ. ಒಂದು ಪಂದ್ಯದಲ್ಲಿ ಸೋತರೂ ಸ್ಪರ್ಧೆಯಿಂದ ನಿರ್ಗಮಿಸಲಿದೆ. ಹೀಗಾಗಿ ಶತಾಯ ಗತಾಯ ಆರ್‌ಸಿಬಿ ವಿರುದ್ಧ ಮಂಗಳವಾರ ಜಯ ದಾಖಲಿಸಲು ಸ್ಮಿತ್‌ ಪಡೆ ಹೋರಾಟ ನಡೆಸಲಿದೆ.

ಆರ್‌ಸಿಬಿ ಸಂಭಾವ್ಯ 11

ಪಾರ್ಥಿವ್‌ ಪಟೇಲ್‌, ವಿರಾಟ್‌ ಕೊಹ್ಲಿ, ಎಬಿ ಡಿ'ವಿಲಿಯರ್ಸ್‌, ಹೆನ್ರಚ್‌ ಕ್ಲಾಸನ್‌, ಶಿವಮ್‌ ದುಬೆ, ವಾಷಿಂಗ್ಟನ್‌ ಸುಂದರ್‌, ಮಾರ್ಕಸ್‌ ಸ್ಟೋಯ್ನಿಸ್‌, ಯುಜ್ವೇಂದ್ರ ಚಹಲ್‌, ಉಮೇಶ್‌ ಯಾದವ್‌, ಟಿಮ್‌ ಸೌಥೀ, ನವದೀಪ್‌ ಸೈನಿ.

ಐಪಿಎಲ್ 2019: 'ಮಹಿಳೆಯರ ಟಿ20 ಚಾಲೆಂಜ್' ಸಮಯದಲ್ಲಿ ಬದಲಾವಣೆ

ರಾಯಲ್ಸ್‌ ಸಂಭಾವ್ಯ 11

ಸಂಜು ಸ್ಯಾಮ್ಸನ್‌, ಅಜಿಂಕ್ಯ ರಹಾನೆ, ಲಿಯಾಮ್‌ ಲಿವಿಂಗ್‌ಸ್ಟೋನ್‌, ಸ್ಟೀವನ್‌ ಸ್ಮಿತ್‌, ಆಷ್ಟನ್‌ ಟರ್ನರ್‌, ರಿಯಾನ್‌ ಪರಾಗ್‌, ಸ್ಟುವರ್ಟ್‌ ಬಿನ್ನಿ, ಶ್ರೇಯಸ್‌ ಗೋಪಾಲ್‌, ಜಯದೇವ್‌ ಉನಾದ್ಕಟ್‌, ವರುಣ್‌ ಆರೊನ್‌, ಒಶೇನ್‌ ಥಾಮಸ್‌.

For Quick Alerts
ALLOW NOTIFICATIONS
For Daily Alerts
 

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Tuesday, April 30, 2019, 11:05 [IST]
Other articles published on Apr 30, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X