ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಪಂದ್ಯ 4, ಸಿಎಸ್‌ಕೆ vs ಆರ್‌ಆರ್: ಹವಾಮಾನ, ಪಿಚ್ ರಿಪೋರ್ಟ್, ಸಂಭಾವ್ಯ ತಂಡ

RR vs CSK Match 4, Pitch Report And Sharjah Weather Forecast

ಐಪಿಎಲ್ ಅಂಗಳದಲ್ಲಿ ಇಂದು ನಾಲ್ಕನೇ ಪಂದ್ಯ ನಡೆಯಲಿದೆ. ಮೊದಲ ಮೂರು ಪಂದ್ಯಗಳಲ್ಲಿ ಅಭಿಮಾನಿಗಳು ಭರಪೂರ ಮನರಂಜನೆಯನ್ನು ಪಡೆದುಕೊಂಡಿದ್ದು ನಾಲ್ಕನೇ ಪಂದ್ಯದಲ್ಲೂ ಇದನ್ನೇ ನಿರೀಕ್ಷಿಸಲಾಗುತ್ತಿದೆ. ಶಾರ್ಜಾದಲ್ಲಿ ನಡೆಯಲಿರುವ ಇಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಮುಖಾಮುಖಿಯಾಗುತ್ತಿದೆ. ಐಪಿಎಲ್ ಇತಿಹಾಸದಲ್ಲಿ ಈವರೆಗೆ 22 ಬಾರಿ ಈ ಎರಡು ತಂಡಗಳು ಮುಖಾಮುಖಿಯಾಗಿದ್ದು 14 ಪಂದ್ಯಗಳಲ್ಲಿ ಸಿಎಸ್‌ಗೆ ಗೆಲುವು ಸಾಧಿಸಿದ್ದರೆ 8ರಲ್ಲಿ ರಾಜಸ್ಥಾನ ರಾಯಲ್ಸ್ ಗೆದ್ದಿದೆ.

ಚೆನ್ನೈ ಸೂಪರ್ ಕಿಂಗ್ಸ್‌ಗೆ ಈ ಟೂರ್ನಿಯಲ್ಲಿ ಎರಡನೇ ಪಂದ್ಯವನ್ನಾಡಿತ್ತಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ನರನ್ನು ಸೋಲಿಸಿರುವ ಧೋನಿ ಪಡೆ ಗೆಲುವಿನ ಲಯವನ್ನು ಮುಂದುವರಿಸಿಕೊಂಡು ಹೋಗುವ ಉತ್ಸಾಹವಿದೆ. ಮತ್ತೊಂದೆಡೆ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸ್ಟೀವ್ ಸ್ಮಿತ್ ಫಿಟ್‌ನೆಸ್ ತಂಡದ ಚಿಂತೆಗೆ ಕಾರಣವಾಗಿದೆ. ವಿದೇಶಿ ಆಟಗಾರರನ್ನೇ ನೆಚ್ಚಿಕೊಂಡಿರುವ ಆರ್‌ಆರ್ ಈ ಬಾರಿಯ ಟೂರ್ನಿಯ ಆರಂಭವನ್ನು ಯಾವ ರೀತಿ ಮಾಡಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಪಡಿಕ್ಕಲ್ ಪದಾರ್ಪಣೆಗೆ ಅರ್ಧ ಶತಕದ ಮೆರುಗು: ಐಪಿಎಲ್‌ನಲ್ಲೂ ಸಂಪ್ರದಾಯ ಮುಂದುವರಿಸಿದ ಕನ್ನಡಿಗ!ಪಡಿಕ್ಕಲ್ ಪದಾರ್ಪಣೆಗೆ ಅರ್ಧ ಶತಕದ ಮೆರುಗು: ಐಪಿಎಲ್‌ನಲ್ಲೂ ಸಂಪ್ರದಾಯ ಮುಂದುವರಿಸಿದ ಕನ್ನಡಿಗ!

ಹವಾಮಾನ ವರದಿ

ಹವಾಮಾನ ವರದಿ

ರಾಜಸ್ಥಾನ ರಾಯಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಇಂದಿನ ಪಂದ್ಯದ ಆತಿಥ್ಯವನ್ನು ಶಾರ್ಜಾ ಕ್ರೀಡಾಂಗಣ ವಹಿಸಿಕೊಂಡಿದೆ. ಹಗಲಿನ ವೇಳೆಯಲ್ಲಿ ಮೋಡಕವಿದ ವಾತಾವರಣವಿದ್ದರೂ ಅತಿ ಹೆಚ್ಚು 40 ಡಿಗ್ರಿ ಸೆಲ್ಸಿಲಿಯಸ್ ವರೆಗೆ ತಾಪಮಾನವಿರಲಿದೆ. ರಾತ್ರಿ ಇದು 27 ಡಿಗ್ರಿಗೆ ಇಳಿಕೆಯಾಗುವ ಸಂಭವವಿದೆ.

ಆರ್‌ಆರ್‌vs ಸಿಎಸ್‌ಕೆ, ಪಿಚ್ ರಿಪೋರ್ಟ್

ಆರ್‌ಆರ್‌vs ಸಿಎಸ್‌ಕೆ, ಪಿಚ್ ರಿಪೋರ್ಟ್

ಅಬುದಾಭಿ ಹಾಗೂ ದುಬೈ ಕ್ರೀಡಾಂಗಣದಲ್ಲಿ ನಡೆದ ಮೂರು ಪಂದ್ಯಗಳಲ್ಲಿ ಈವರೆಗೆ ಬೌಲರ್‌ಗಳು ಪಿಚ್‌ನ ಲಾಭವನ್ನು ಪಡೆದುಕೊಂಡಿದ್ದಾರೆ. ಆದರೆ ವರದಿಯ ಪ್ರಕಾರ ಶಾರ್ಜಾ ಅಂಗಳದ ಪಿಚ್ ಬ್ಯಾಟಿಂಗ್‌ಗೆ ಸಹಕಾರಿಯಾಗಲಿದೆ ಎನ್ನಲಾಗುತ್ತಿದೆ. ಹೀಗಾಗಿ ಬೃಹತ್ ಸ್ಕೋರ್‌ಅನ್ನು ಇಂದಿನ ಪಂದ್ಯದಲ್ಲಿ ನಿರೀಕ್ಷಿಸಬಹುದು.

ಸಿಎಸ್‌ಕೆ vs ಆರ್‌ಆರ್‌, ಟಾಸ್

ಸಿಎಸ್‌ಕೆ vs ಆರ್‌ಆರ್‌, ಟಾಸ್

ಈಗಾಗಲೇ ನಡೆದಿರುವ ಮೂರು ಪಂದ್ಯಗಳಲ್ಲಿ ಟಾಸ್ ಗೆದ್ದಿರುವ ತಂಡಗಳು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಆದರೆ ಚೆನ್ನೈ ಸೂಪರ್ ಕಿಂಗ್ಸ್ ಮಾತ್ರವೇ ಯಶಸ್ವಿಯಾಗಿ ರನ್ ಬೆನ್ನತ್ತಿ ಗೆಲುವು ಸಾಧಿಸಿದೆ. ಬ್ಯಾಟಿಂಗ್‌ಗೆ ಸಹಕಾರಿಯಾಗುವ ಪಿಚ್‌ನಲ್ಲಿ ಚೇಸಿಂಗ್ ಆಯ್ಕೆ ಮಾಡಿಕೊಳ್ಳುವುದು ಕೆಟ್ಟ ಆಯ್ಕೆಯಾಗಲಾರದು.

ಸಂಭಾವ್ಯ ತಂಡ ರಾಜಸ್ಥಾನ್ ರಾಯಲ್ಸ್

ಸಂಭಾವ್ಯ ತಂಡ ರಾಜಸ್ಥಾನ್ ರಾಯಲ್ಸ್

ಯಶಸ್ವಿ ಜೈಸ್ವಾಲ್, ರಾಬಿನ್ ಉತ್ತಪ್ಪ, ಸ್ಟೀವ್ ಸ್ಮಿತ್ (ನಾಯಕ), ಡೇವಿಡ್ ಮಿಲ್ಲರ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಟಾಮ್ ಕರ್ರನ್, ರಿಯಾನ್ ಪರಾಗ್, ಶ್ರೇಯಾಸ್ ಗೋಪಾಲ್, ಜೋಫ್ರಾ ಆರ್ಚರ್, ಜಯದೇವ್ ಉನಾದ್ಕಟ್, ಕಾರ್ತಿಕ್ ತ್ಯಾಗಿ

ಸಂಭಾವ್ಯ ತಂಡ ಚೆನ್ನೈ ಸೂಪರ್ ಕಿಂಗ್ಸ್

ಸಂಭಾವ್ಯ ತಂಡ ಚೆನ್ನೈ ಸೂಪರ್ ಕಿಂಗ್ಸ್

ಮುರಳಿ ವಿಜಯ್, ಶೇನ್ ವ್ಯಾಟ್ಸನ್, ಫಾಫ್ ಡು ಪ್ಲೆಸಿಸ್, ಅಂಬಾಟಿ ರಾಯುಡು, ಕೇದಾರ್ ಜಾಧವ್, ಎಂ.ಎಸ್.ಧೋನಿ (ನಾಯಕ ಮತ್ತು ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಸ್ಯಾಮ್ ಕರ್ರನ್, ದೀಪಕ್ ಚಹರ್, ಪಿಯೂಷ್ ಚಾವ್ಲಾ, ಲುಂಗಿ ಎನ್‌ಗಿಡಿ

Story first published: Tuesday, September 22, 2020, 15:29 [IST]
Other articles published on Sep 22, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X