ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

RSWS-2: ಸ್ಟುವರ್ಟ್ ಬಿನ್ನಿ ಅಬ್ಬರಕ್ಕೆ ಒಲಿದ ಜಯ: ಇಂಡಿಯಾ ಲೆಜೆಂಡ್ಸ್‌ಗೆ ಸಾಟಿಯಾಗದ ದ. ಆಫ್ರಿಕಾ ದಿಗ್ಗಜರು!

RSWS-2: match 1, India Legends won by 61 runs against South Africa in opening match

ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್‌ನ ಎರಡನೇ ಆವೃತ್ತಿಯಲ್ಲಿ ಇಂಡೊಯಾ ಲೆಜೆಂಡ್ಸ್ ಅದ್ಭುತ ಆರಂಭವನ್ನು ಪಡೆದಿದೆ. ದಕ್ಷಿಣ ಆಫ್ರಿಕಾ ಲೆಜೆಂಡ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನಿಡಿದ ಸಚಿನ್ ತೆಂಡೂಲ್ಕರ್ ನೇತೃತ್ವದ ಭಾರತ ಲೆಜೆಂಡ್ಸ್ ತಂಡ 61 ರನ್‌ಗಳ ದೊಡ್ಡ ಅಂತರದಿಂದ ಗೆಲುವು ಸಾಧಿಸಿದೆ. ಈ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡುವಲ್ಲಿ ಯಶಸ್ವಿಯಾಗಿದೆ.

ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿಯೂ ಸಚಿನ್ ತೆಂಡೂಲ್ಕರ್ ನೇತೃತ್ವದ ಇಂಡಿಯಾ ಲೆಜೆಂಡ್ಸ್ ತಂಡ ಅಮೋಘ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಯಿತು. ಮೊದಲಿಗೆ ಬ್ಯಾಟಿಂಗ್‌ಬಲ್ಲಿ ಅಬ್ಬರದ ಪ್ರದರ್ಶನ ನೀಡಿದ ಇಂಡಿಯಾ ಲೆಜೆಂಡ್ಸ್ ತಂಡ ನಂತರ ಬೌಲಿಂಗ್‌ನಲ್ಲಿಯೂ ಮಿಂಚುಹರಿಸಿತು. ಇದರ ಪರಿಣಾಮವಾಗಿ 61 ರನ್‌ಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದೆ.

T20 ವಿಶ್ವಕಪ್‌ 2022: ಭಾರತದ ಸಂಭಾವ್ಯ ಸ್ಕ್ವಾಡ್‌ ಘೋಷಿಸಿದ ಆಶಿಶ್ ನೆಹ್ರಾT20 ವಿಶ್ವಕಪ್‌ 2022: ಭಾರತದ ಸಂಭಾವ್ಯ ಸ್ಕ್ವಾಡ್‌ ಘೋಷಿಸಿದ ಆಶಿಶ್ ನೆಹ್ರಾ

ಹೋರಾಟ ಪರದರ್ಶಿಸದ ದ. ಆಫ್ರಿಕಾ ಲೆಜೆಂಡ್ಸ್: ಇಂಡಿಯಾ ಲೆಜೆಂಡ್ಸ್ ತಂಡ ನೀಡಿದ 218 ರನ್‌ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಲೆಜೆಂಡ್ಸ್ ತಂಡಕ್ಕೆ ಉತ್ತಮ ಆರಂಭ ದೊರೆಯಿತಾದರೂ ನಂತರ ಅದನ್ನು ಮುಂದುವರಿಸಿಕೊಂಡು ಹೋಗುವಲ್ಲಿ ವಿಫಲವಾಯಿತು. ದಕ್ಷಿಣ ಆಫ್ರಿಕಾ ಲೆಜೆಂಡ್ಸ್ ಪರವಾಗಿ ನಾಯಕ ಜಾಂಡಿ ರೋಡ್ಸ್ 38 ರನ್‌ಗಳಿಸಿ ತಂಡದ ಪರವಾಗಿ ಅಧಿಕ ರನ್‌ಗಳಿಸಿದ ಆಟಗಾರ ಎನಿಸಿದರು. ಉಳಿದಂತೆ ಯಾವ ಆಟಗಾರರಿಂದಲೂ ಹೆಚ್ಚಿನ ಪ್ರತಿರೋಧ ಬಾರಲಿಲ್ಲ. ಹೀಗಾಗಿ ನಿಗದಿತ 20 ಓವರ್‌ಗಳಲ್ಲಿ 156 ರನ್‌ಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು. ಈ ಮೂಲಕ 61 ರನ್‌ಗಳ ಅಂತರದಿಂದ ಸೋಲು ಅನುಭವಿಸಿದೆ.

ಸ್ಟುವರ್ಟ್ ಬಿನ್ನಿ ಭರ್ಜರಿ ಬ್ಯಾಟಿಂಗ್: ಇನ್ನು ಭಾರತದ ಇನ್ನಿಂಗ್ಸ್‌ನ ಪ್ರಮುಖ ಹೈಲೈಟ್ಸ್ ಎಂದರೆ ಸ್ಟುವರ್ಟ್ ಬಿನ್ನಿ ಅವರ ಭರ್ಜರಿ ಬ್ಯಾಟಿಂಗ್. ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸ್ಟುವರ್ಟ್ ಬಿನ್ನಿ ನಾಯಕ ಸಚಿನ್ ತೆಂಡೂಲ್ಕರ್ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಬ್ಯಾಟ್ ಬೀಸಿದರು. ಕೇವಲ 42 ಎಸೆತಗಳಲ್ಲಿ 82 ರನ್‌ಗಳನ್ನು ಬಾರಿಸಿದ ಅವರು ತಂಡದ ಮೊತ್ತ 200ರ ಗಡಿ ದಾಟಲು ಪ್ರಮುಖ ಕಾರಣ ಎನಿಸಿದರು. ಭರ್ಜರಿ ಆರು ಸಿಕ್ಸರ್ ಸಿಡಿಸಿದ ಬಿನ್ನಿ ಐದು ಬೌಂಡರಿ ಕೂಡ ಬಾರಿಸಿದ್ದಾರೆ.

ಸಿಡಿದ ಯೂಸುಫ್ ಪಠಾಣ್: ಇನ್ನು ಮತ್ತೋರ್ವ ಆಲ್‌ರೌಂಡರ್ ಯೂಸುಫ್ ಪಠಾಣ್ ಕೂಡ ಅಂತಿಮ ಹಂತದಲ್ಲಿ ಬ್ಯಾಟಿಂಗ್‌ಗೆ ಇಳಿದು ರನ್‌ ವೇಗವನ್ನು ಹೆಚ್ಚಿಸಿದರು. 15 ಎಸೆತಗಳನ್ನು ಎದುರಿಸಿದ ಯೂಸುಫ್ ಪಠಾಣ್ ನಾಲ್ಕು ಭರ್ಜರಿ ಸಿಕ್ಸರ್ ಸಿಡಿಸಿದ್ದು ಒಂದು ಬೌಂಡರಿ ಬಾರಿಸಿದರು. ಈ ಮೂಲಕ 35 ರನ್‌ಗಳನ್ನು ಗಳಿಸಿದ್ದಾರೆ. ಸ್ಟುವರ್ಟ್ ಬಿನ್ನಿ ಹಾಗೂ ಯೂಸುಫ್ ಪಠಾಣ್ ಜೋಡಿ ಅಂತಿಮ ಐದು ಓವರ್‌ಗಳಲ್ಲಿ ಬರೊಬ್ಬರಿ 74 ರನ್‌ಗಳನ್ನು ಪೇರಿಸಿದ್ದರು.

ದುಲೀಪ್‌ ಟ್ರೋಫಿಯಲ್ಲಿ ದ್ವಿಶತಕ ಸಿಡಿಸಿದ ರಹಾನೆ, ಯಶಸ್ವಿ ಜೈಸ್ವಾಲ್!ದುಲೀಪ್‌ ಟ್ರೋಫಿಯಲ್ಲಿ ದ್ವಿಶತಕ ಸಿಡಿಸಿದ ರಹಾನೆ, ಯಶಸ್ವಿ ಜೈಸ್ವಾಲ್!

ಇಂಡಿಯಾ ಲೆಜೆಂಡ್ಸ್ ಆಡುವ ಬಳಗ: ಸಚಿನ್ ತೆಂಡೂಲ್ಕರ್ (ನಾಯಕ), ನಮನ್ ಓಜಾ (ವಿಕೆಟ್ ಕೀಪರ್), ಸುರೇಶ್ ರೈನಾ, ಯುವರಾಜ್ ಸಿಂಗ್, ಯೂಸುಫ್ ಪಠಾಣ್, ಇರ್ಫಾನ್ ಪಠಾಣ್, ಸ್ಟುವರ್ಟ್ ಬಿನ್ನಿ, ಮನ್‌ಪ್ರೀತ್ ಗೋನಿ, ಮುನಾಫ್ ಪಟೇಲ್, ರಾಹುಲ್ ಶರ್ಮಾ, ಪ್ರಗ್ಯಾನ್ ಓಜಾ
ಬೆಂಚ್: ಹರ್ಭಜನ್ ಸಿಂಗ್, ವಿನಯ್ ಕುಮಾರ್, ಅಭಿಮನ್ಯು ಮಿಥುನ್, ರಾಜೇಶ್ ಪವಾರ್, ಎಸ್ ಬದ್ರಿನಾಥ್

ಸೌತ್ ಆಫ್ರಿಕಾ ಲೆಜೆಂಡ್ಸ್ ಆಡುವ ಬಳಗ: ಹೆನ್ರಿ ಡೇವಿಡ್ಸ್, ಮೊರ್ನೆ ವ್ಯಾನ್ ವೈಕ್ (ವಿಕೆಟ್ ಕೀಪರ್), ಅಲ್ವಿರೊ ಪೀಟರ್ಸನ್, ಜಾಕ್ವೆಸ್ ರುಡಾಲ್ಫ್, ಜಾಂಟಿ ರೋಡ್ಸ್ (ನಾಯಕ), ಜೋಹಾನ್ ಬೋಥಾ, ಎಡ್ಡಿ ಲೀ, ಜೋಹಾನ್ ವಾನ್ ಡೆರ್ ವಾತ್, ಗಾರ್ನೆಟ್ ಕ್ರುಗರ್, ಮಖಾಯಾ ಎನ್ಟಿನಿ, ಆಂಡ್ರ್ಯೂ ಪುಟ್ಟಿಕ್
ಬೆಂಚ್: ವೆರ್ನಾನ್ ಫಿಲಾಂಡರ್, ಲ್ಯಾನ್ಸ್ ಕ್ಲುಸೆನರ್, ಝಾಂಡರ್ ಡಿ ಬ್ರುಯ್ನ್, ಥಂಡಿ ತ್ಶಬಲಾಲಾ, ಲಾಯ್ಡ್ ನಾರ್ರಿಸ್ ಜೋನ್ಸ್

Story first published: Saturday, September 10, 2022, 23:35 [IST]
Other articles published on Sep 10, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X