ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್: ಇಂಡಿಯಾ ಲೆಜೆಂಡ್ಸ್‌ಗೆ ಇಂದು ಇಂಗ್ಲೆಂಡ್ ದಿಗ್ಗಜರ ಸವಾಲು

RSWS-2, Match 14, India Legends vs England Legends: Probable playing XIs, Weather Forecast and Other details

ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್‌ನಲ್ಲಿ ಇಂದು 14ನೇ ಪಂದ್ಯ ಆಯೋಜನೆಯಾಗಲಿದ್ದು ಇಂಡಿಯಾ ಲೆಜೆಂಡ್ಸ್ ಹಾಗೂ ಇಂಗ್ಲೆಂಡ್ ಲೆಜೆಂಡ್ಸ್ ತಂಡಗಳು ಸೆಣೆಸಾಡಲಿದೆ. ಈ ರೋಮಾಂಚನಕಾರಿ ಮುಖಾಮುಖಿಗೆ ಡೆಹ್ರಾಡೂನ್‌ನ ರಾಜೀವ್‌ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಸಜ್ಜಾಗಿದ್ದು ಪೈಪೋಟಿಯ ಪಂದ್ಯ ನಡೆಯುವ ನಿರೀಕ್ಷೆಯಿದೆ.

ಇಂಡಿಯಾ ಲೆಜೆಂಡ್ಸ್ ದಕ್ಷಿಣ ಆಫ್ರಿಕಾ ಲೆಜೆಂಡ್ಸ್ ವಿರುದ್ಧ ಅಮೋಘ ಗೆಲುವು ಸಾಧಿಸಿ ಟೀ ಟೂರ್ನಿಯಲ್ಲಿ ಅದ್ಭುತ ಆರಂಭವನ್ನು ಪಡೆದುಕೊಂಡಿತ್ತು. ಆದರೆ ಈ ಗೆಲುವಿನ ಲಯವನ್ನು ಮುಂದುವರಿಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಅದಕ್ಕೆ ಕಾರಣ ಮಳೆ. ವೆಸ್ಟ್ ಇಂಡಿಸ್ ಲೆಜೆಂಡ್ಸ್ ವಿರುದ್ಧ ಎರಡನೇ ಪಂದ್ಯ ಸಂಪೂರ್ಣವಾಗಿ ಮಳೆಗೆ ಆಹುತಿಯಾದರೆ ನಂತರದ ನ್ಯೂಜಿಲೆಂಡ್ ಲೆಜೆಂಡ್ಸ್ ವಿರುದ್ಧದ ಪಂದ್ಯವನ್ನು ಕೂಡ ಮಳೆ ಆಹುತಿ ಪಡೆಯಿತು.

ರೋಹಿತ್ ಶರ್ಮಾ ನಾಯಕತ್ವದ ಕುರಿತಾಗಿ ತೀವ್ರ ಟೀಕೆ: ಕೊಹ್ಲಿಯನ್ನ ಬೆಂಬಲಿಸಿದ ಅಭಿಮಾನಿಗಳುರೋಹಿತ್ ಶರ್ಮಾ ನಾಯಕತ್ವದ ಕುರಿತಾಗಿ ತೀವ್ರ ಟೀಕೆ: ಕೊಹ್ಲಿಯನ್ನ ಬೆಂಬಲಿಸಿದ ಅಭಿಮಾನಿಗಳು

ಮೊದಲ ಪಂದ್ಯವನ್ನು ಭರ್ಜರಿಯಾಗಿ ಗೆದ್ದುಕೊಂಡಿದ್ದರೂ ನಂತರದ ಎರಡು ಪಂದ್ಯಗಳಲ್ಲಿ ಆಡಲು ಸಾಧ್ಯವಾಗದಿರುವ ಕಾರಣ ಇಂಡಿಯಾ ಲೆಜೆಂಡ್ಸ್ ತಂಡ ನಿರಾಸೆ ಅನುಭವಿಸಿದೆ. ಇದೀಗ ಮತ್ತೊಂದು ಪದ್ಯಕ್ಕೆ ಸಜ್ಜಾಗಿರುವ ಸಚಿನ್ ತೆಂಡೂಲ್ಕರ್ ನೇತೃತ್ವದ ಇಂಡಿಯಾ ಲೆಜೆಂಡ್ಸ್ ಪ್ರದರ್ಶನದ ಮೇಲೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಕೂಡ ಭಾರೀ ನಿರೀಕ್ಷೆಯಿಟ್ಟುಕೊಂಡಿದ್ದಾರೆ.

ಪಂದ್ಯದ ಮಾಹಿತಿ

ಪಂದ್ಯದ ಮಾಹಿತಿ

ಪಂದ್ಯ: ಇಂಡಿಯಾ ಲೆಜೆಂಡ್ಸ್ vs ಇಂಗ್ಲೆಂಡ್ ಲೆಜೆಂಡ್ಸ್, ಪಂದ್ಯ 14, ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ T20
ದಿನಾಂಕ ಮತ್ತು ಸಮಯ: ಸೆಪ್ಟೆಂಬರ್ 22 2022, ಗುರುವಾರ, ಭಾರತೀಯ ಕಾಲಮಾನ ಸಂಜೆ 07:30 ಕ್ಕೆ ಆರಂಭ
ಸ್ಥಳ: ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ಡೆಹ್ರಾಡೂನ್

ರೋಹಿತ್ ಶರ್ಮಾ ನಾಯಕತ್ವದ ಕುರಿತಾಗಿ ತೀವ್ರ ಟೀಕೆ: ಕೊಹ್ಲಿಯನ್ನ ಬೆಂಬಲಿಸಿದ ಅಭಿಮಾನಿಗಳು

ಪಿಚ್ ರಿಪೋರ್ಟ್ ಹಾಗೂ ಹವಾಮಾನ ವರದಿ

ಪಿಚ್ ರಿಪೋರ್ಟ್ ಹಾಗೂ ಹವಾಮಾನ ವರದಿ

ರಾಜೀವ್ ಗಾಂಧಿ ಇಂಟರ್‌ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂ ಬ್ಯಾಟಿಂಗ್‌ಗೆ ಹೆಚ್ಚು ಅನುಕೂಲಕರವಾಗಿರುವ ಪಿಚ್ ಆಗಿದೆ. ಚೆಂಡು ಸರಾಗವಾಗಿ ಬ್ಯಾಟ್‌ಗೆ ಬರುವ ಕಾರಣ ಬ್ಯಾಟರ್‌ಗಳು ಇಲ್ಲಿ ಹೆಚ್ಚು ಆನಂದಿಸುತ್ತಾರೆ. ಇಂಥಾ ಪಿಚ್‌ನಲ್ಲಿ ಬೌಲರ್‌ಗಳು ಯಶಸ್ಸು ಸಾಧಿಸಬೇಕಾದರೆ ಲೈನ್ ಹಾಗೂ ಲೆಂತ್‌ನಲ್ಲಿ ಉತ್ತಮ ನಿಯಂತ್ರಣ ಹೊಂದಿರುವುದು ಅನಿವಾರ್ಯವಾಗಿದೆ.

ಹವಾಮಾನ ವರದಿ: ಇಂಡಿಯಾ ಲೆಜೆಂಡ್ಸ್ ಈ ಬಾರಿಯ ಟೂರ್ನಿಯಲ್ಲಿ ಮೂರು ಪಂದ್ಯಗಳ ಪೈಕಿ ಆಡಲು ಸಾಧ್ಯವಾಗಿದ್ದು ಒಂದರಲ್ಲಿ ಮಾತ್ರ. ಉಳಿದ ಎರಡು ಪಂದ್ಯಗಳು ಮಳೆಗೆ ಆಹುತಿಯಾಗಿದೆ. ಇದೀಗ ಇಂಗ್ಲೆಂಡ್ ವಿರುದ್ಧದ ಪಂದ್ತಕ್ಕೂ ಮಳೆ ಅಡ್ಡಿಯುಂಟು ಮಾಡುವ ಭೀತಿಯಿದೆ. ಪಂದ್ಯದ ಸಂದರ್ಭದಲ್ಲಿ ಮಳೆ ಸುರಿಯುವ ಮುನ್ಸೂಚನೆಯಿದ್ದು ಅಭಿಮಾನಿಗಳು ಮತ್ತೆ ನಿರಾಸೆ ಅನುಭವಿಸುವ ಸಾಧ್ಯತೆಯಿದೆ.

ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್: ಇಂಡಿಯಾ ಲೆಜೆಂಡ್ಸ್‌ಗೆ ಇಂದು ಇಂಗ್ಲೆಂಡ್ ದಿಗ್ಗಜರ ಸವಾಲು

ಇತ್ತಂಡಗಳ ಸಂಭಾವ್ಯ ಬಳಗ

ಇತ್ತಂಡಗಳ ಸಂಭಾವ್ಯ ಬಳಗ

ಇಂಡಿಯಾ ಲೆಜೆಂಡ್ಸ್ ಸಂಭಾವ್ಯ XI: ನಮನ್ ಓಜಾ (ವಿಕೆಟ್ ಕೀಪರ್), ಸಚಿನ್ ತೆಂಡೂಲ್ಕರ್ (ನಾಯಕ), ಸುರೇಶ್ ರೈನಾ, ಸ್ಟುವರ್ಟ್ ಬಿನ್ನಿ, ಯುವರಾಜ್ ಸಿಂಗ್, ಯೂಸುಫ್ ಪಠಾಣ್, ಇರ್ಫಾನ್ ಪಠಾಣ್, ಮನ್‌ಪ್ರೀತ್ ಗೋನಿ, ರಾಹುಲ್ ಶರ್ಮಾ, ಪ್ರಗ್ಯಾನ್ ಓಜಾ, ಅಭಿಮನ್ಯು ಮಿಥುನ್

ಇಂಗ್ಲೆಂಡ್ ಲೆಜೆಂಡ್ಸ್ ಸಂಭಾವ್ಯ XI: ಫಿಲ್ ಮಸ್ಟರ್ಡ್ (ವಿಕೆಟ್ ಕೀಪರ್), ಇಯಾನ್ ಬೆಲ್ (ನಾಯಕ), ಮಾಲ್ ಲೋಯೆ, ಡ್ಯಾರೆನ್ ಮ್ಯಾಡಿ, ಡಿಮಿಟ್ರಿ ಮಸ್ಕರೇನ್ಹಸ್, ರಿಕ್ಕಿ ಕ್ಲಾರ್ಕ್, ಕ್ರಿಸ್ ಸ್ಕೋಫೀಲ್ಡ್, ಕ್ರಿಸ್ ಟ್ರೆಮ್ಲೆಟ್, ಸ್ಟೀಫನ್ ಪ್ಯಾರಿ, ಜೇಮ್ಸ್ ಟಿಂಡಾಲ್, ಜೇಡ್ ಡೆರ್ನ್‌ಬಾಚ್

Story first published: Thursday, September 22, 2022, 17:18 [IST]
Other articles published on Sep 22, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X