ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

RSWS 2022: ಇಂಡಿಯಾ ಲೆಂಜೆಂಡ್ಸ್‌ಗೆ ಇಂದು ಬಾಂಗ್ಲಾದೇಶ ಲೆಜೆಂಡ್ಸ್ ಸವಾಲು

RSWS 2022: India Legends vs Bangladesh Legends, preview and match details

ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್‌ನ 18ನೇ ಮುಖಾಮುಖಿಯಲ್ಲಿ ಇಂದು ಇಂಡಿಯಾ ಲೆಜೆಂಡ್ಸ್ ಹಾಗೂ ಬಾಂಗ್ಲಾದೇಶ ಲೆಜೆಂಡ್ಸ್ ತಂಡಗಳು ಸೆಣೆಸಾಟವನ್ನು ನಡೆಸಲಿದೆ. ಸಚಿನ್ ತೆಂಡೂಲ್ಕರ್ ನೇತೃತ್ವದ ಇಂಡಿಯಾ ಲೆಜೆಂಡ್ಸ್ ತಂಡಕ್ಕೆ ಮೊಹಮ್ಮದ್ ಶರೀಫ್ ನೇತೃತ್ವದ ಬಾಂಗ್ಲಾದೇಶ ಲೆಜೆಂಡ್ಸ್ ತಂಡ ಸವಾಲೊಡ್ಡುತ್ತಿದ್ದು ಡೆಹ್ರಾಡೂನ್‌ನ ರಾಜೀವ್‌ಗಾಂಧಿ ಕ್ರೀಡಾಂಗಣದಲ್ಲಿ ಈ ಪಂದ್ಯ ಆಯೋಜನೆಯಾಗಲಿದೆ.

ಇಂಡಿಯಾ ಲೆಜೆಂಡ್ಸ್ ನಿಗದಿಯಾಗಿದ್ದ ನಾಲ್ಕು ಪಂದ್ಯಗಳ ಪೈಕಿ ಎರಡು ಪಂದ್ಯಗಳನ್ನು ಮಾತ್ರವೇ ಆಡಿದ್ದು ಉಳಿದ ಎರಡು ಪಂದ್ಯಗಳು ಮಳೆಗೆ ಆಹುತಿಯಾಗಿದೆ. ಆದರೆ ಆಡಿರುವ ಎರಡು ಪಂದ್ಯಗಳಲ್ಲಿಯೂ ಅತ್ಯುತ್ತಮ ಪ್ರದರ್ಶನ ನೀಡಿರುವ ಇಂಡಿಯಾ ಲೆಜೆಂಡ್ಸ್ ತಂಡ ಭರ್ಜರಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಲೆಜೆಂಡ್ಸ್ ವಿರುದ್ಧ ಗೆಲುವು ಸಾಧಿಸಿದ್ದರೆ ನಂತರ ಇಂಗ್ಲೆಂಡ್ ಲೆಜೆಂಡ್ಸ್ ವಿರುದ್ಧವೂ ಸೆಣೆಸಾಡಿದ್ದು ಗೆಲುವು ಸಾಧಿಸಿದೆ.

ಲಾರ್ಡ್ಸ್‌ ಮೈದಾನದಲ್ಲಿ ಕ್ರಿಕೆಟ್ ವೃತ್ತಿಜೀವನಕ್ಕೆ ಅಂತ್ಯ ಹಾಡಿದ ಜೂಲನ್ ಗೋಸ್ವಾಮಿಲಾರ್ಡ್ಸ್‌ ಮೈದಾನದಲ್ಲಿ ಕ್ರಿಕೆಟ್ ವೃತ್ತಿಜೀವನಕ್ಕೆ ಅಂತ್ಯ ಹಾಡಿದ ಜೂಲನ್ ಗೋಸ್ವಾಮಿ

ಸತತ ಸೋಲು ಅನುಭವಿಸಿದೆ ಬಾಂಗ್ಲಾದೇಶ ಲೆಜೆಂಡ್ಸ್

ಸತತ ಸೋಲು ಅನುಭವಿಸಿದೆ ಬಾಂಗ್ಲಾದೇಶ ಲೆಜೆಂಡ್ಸ್

ಆದರೆ ಬಾಂಗ್ಲಾದೇಶ ಲೆಜೆಂಡ್ಸ್ ತಂಡ ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್‌ನಲ್ಲಿ ನೀರಸ ಪ್ರದರ್ಶನ ನೀಡಿದ್ದು ಇನ್ನೂ ಗೆಲುವಿನ ರುಚಿ ಕಂಡಿಲ್ಲ. ಬಾಂಗ್ಲಾದೇಶ ಲೆಜೆಂಡ್ಸ್ ತಂಡ ಮೂರು ಪಂದ್ಯಗಳಲ್ಲಿ ಆಡಿದ್ದು ಮೂರರಲ್ಲಿಯೂ ಸೋಲು ಅನುಭವಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿಯೂ ಹೀನಾಯ ಸ್ಥಿತಿಯಲ್ಲಿದೆ. ಆದರೆ ಇಂಡಿಯಾ ಲೆಜೆಂಡ್ಸ್ ತಂಡ ಅಗ್ರಸ್ಥಾನದಲ್ಲಿ ಮುಂದುವರಿದಿದೆ.

ಬಲಿಷ್ಠವಾಗಿದೆ ಇಂಡಿಯಾ ಲೆಜೆಂಡ್ಸ್

ಬಲಿಷ್ಠವಾಗಿದೆ ಇಂಡಿಯಾ ಲೆಜೆಂಡ್ಸ್

ಸಚಿನ್ ತೆಂಡೂಲ್ಕರ್ ನೇತೃತ್ವದ ಇಂಡಿಯಾ ಲೆಜೆಂಡ್ಸ್ ತಂಡ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿಯೂ ಅದ್ಭುತ ಪ್ರದರ್ಶನ ನೀಡುತ್ತಿದೆ. ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್ ಲೆಜೆಂಡ್ಸ್ ತಂಡಗಳ ವಿರುದ್ಧ ಸಾಧಿಸಿದ ಭರ್ಜರಿ ಗೆಲುವು ಇದಕ್ಕೆ ಸಾಕ್ಷಿಯಾಗಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸಚಿನ್ ತೆಂಡೂಲ್ಕರ್, ಸ್ಟುವರ್ಟ್ ಬಿನ್ನಿ ಹಾಘೂ ಯೂಸುಫ್ ಪಠಾಣ್ ಅವರಿಂದ ಪರಿಣಾಮಕಾರಿ ಪ್ರದರ್ಶನ ಬರುತ್ತಿದೆ. ಮತ್ತೊಂದೆಡೆ ಸ್ಪಿನ್ ಜೋಡಿಯಾದ ರಾಹುಲ್ ಶರ್ಮಾ ಹಾಗೂ ಪ್ರಗ್ಯಾನ್ ಓಝಾ ಸ್ಥಿರ ಪ್ರದರ್ಶನ ನೀಡುವ ಮೂಲಕ ತಂಡಕ್ಕೆ ಉತ್ತಮ ಕೊಡುಗೆ ನೀಡುತ್ತಿದ್ದಾರೆ. ಇನ್ನು ಯುವರಾಜ್ ಸಿಂಗ್ ಕಳೆದ ಪಂದ್ಯದಲ್ಲಿ ಫಾರ್ಮ್‌ ಕಂಡುಕೊಂಡಿದ್ದು ಸ್ಪೋಟಕ ಪ್ರದರ್ಶನದ ನಿರೀಕ್ಷೆಯಲ್ಲಿದ್ದಾರೆ ಅಭಿಮಾನಿಗಳು.

ಸ್ಕ್ವಾಡ್ ಹೀಗಿದೆ

ಸ್ಕ್ವಾಡ್ ಹೀಗಿದೆ

ಭಾರತ ಲೆಜೆಂಡ್ಸ್ ತಂಡ: ನಮನ್ ಓಜಾ (ವಿಕೆಟ್ ಕೀಪರ್), ಸಚಿನ್ ತೆಂಡೂಲ್ಕರ್ (ನಾಯಕ), ಸುರೇಶ್ ರೈನಾ, ಯೂಸುಫ್ ಪಠಾಣ್, ಯುವರಾಜ್ ಸಿಂಗ್, ಸ್ಟುವರ್ಟ್ ಬಿನ್ನಿ, ಇರ್ಫಾನ್ ಪಠಾಣ್, ಮನ್‌ಪ್ರೀತ್ ಗೋನಿ, ಪ್ರಗ್ಯಾನ್ ಓಜಾ, ರಾಜೇಶ್ ಪವಾರ್, ರಾಹುಲ್ ಶರ್ಮಾ, ಹರ್ಭಜನ್ ಸಿಂಗ್, ಮುನಾಫ್ ಪಟೇಲ್, ಎಸ್ ಬದ್ರಿನಾಥ್, ವಿನಯ್ ಕುಮಾರ್, ಅಭಿಮನ್ಯು ಮಿಥುನ್, ರವಿ ಗಾಯಕ್ವಾಡ್

ಬಾಂಗ್ಲಾದೇಶ ಲೆಜೆಂಡ್ಸ್ ಸ್ಕ್ವಾಡ್: ಧಿಮನ್ ಘೋಷ್ (ವಿಕೆಟ್ ಕೀಪರ್), ಮೊಹಮ್ಮದ್ ಷರೀಫ್ (ನಾಯಕ), ಮೆಹ್ರಾಬ್ ಹೊಸೈನ್, ನಜಿಮುದ್ದೀನ್, ಅಫ್ತಾಬ್ ಅಹ್ಮದ್, ಅಲೋಕ್ ಕಪಾಲಿ, ನಜ್ಮುಸ್ ಸಾದತ್, ಎಲಿಯಾಸ್ ಸನ್ನಿ, ಅಬುಲ್ ಹಸನ್, ಡೋಲರ್ ಮಹಮೂದ್, ಅಬ್ದುರ್ ರಜಾಕ್, ಖಲೀದ್ ಮಷುದ್, ಶಹದತ್ ಹೊಸೈನ್, ತುಷಾರ್ ಇಮ್ರಾನ್, ಅಲಂಗೀರ್ ಕಬೀರ್, ಮಾಮುನ್ ರಶೆದ್

Story first published: Sunday, September 25, 2022, 16:17 [IST]
Other articles published on Sep 25, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X