RSWS 2022: ವಿಂಡೀಸ್ ದಿಗ್ಗಜರನ್ನು ಮಣಿಸಿ ಫೈನಲ್‌ಗೇರಿದ ಶ್ರೀಲಂಕಾ ಲೆಜೆಂಡ್ಸ್

ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್‌ನ ಎರಡನೇ ಸೆಮಿಫೈನಲ್‌ನಲ್ಲಿ ಶ್ರೀಲಂಕಾ ಲೆಜೆಂಡ್ಸ್ ಹಾಗೂ ವೆಸ್ಟ್ ಇಂಡೀಸ್ ಲೆಜೆಂಡ್ಸ್ ತಂಡಗಳು ಮುಖಾಮುಖಿಯಾಗಿದ್ದು ಈ ಪಂದ್ಯದಲ್ಲಿ ಶ್ರೀಲಂಕಾ ಲೆಜೆಂಡ್ಸ್ ರೋಚಕ ಗೆಲುವು ಸಾಧಿಸಿದೆ. ಈ ಮೂಲಕ ಶ್ರೀಲಂಕಾ ಲೆಜೆಂಡ್ಸ್ ತಂಡ ಫೈನಲ್ ಹಂತಕ್ಕೆ ಪ್ರವೇಶ ಪಡೆದುಕೊಂಡಿದ್ದು ಫೈನಲ್‌ನಲ್ಲಿ ಇಂಡಿಯಾ ಲೆಜೆಂಡ್ಸ್ ವಿರುದ್ಧ ಪ್ರಶಸ್ತಿಗಾಗಿ ಸೆಣೆಸಾಟ ನಡೆಸಲಿದೆ.

ಈ ಪಂದ್ಯದಲ್ಲಿ ತಿಲಕರತ್ನೆ ದಿಲ್ಶನ್ ನೇತೃತ್ವದ ಶ್ರೀಲಂಕಾ ಲೆಜೆಂಡ್ಸ್ ತಂಡ ಮೊದಲಿಗೆ ಬ್ಯಾಟಿಂಗ್ ನಡೆಸಿತು. ಹೇಳಿಕೊಳ್ಳುವಂತಾ ಜೊತೆಯಾಟ ಶ್ರೀಲಂಕಾ ಪರವಾಗಿ ಬಾರದಿದ್ದರೂ ಸನತ್ ಜಯಸೂರ್ಯ ಅವರ 26 ರನ್‌ಗಳ ಕೊಡುಗೆ, ಇಶಾನ್ ಜಯರತ್ನೆ ಬ್ಯಾಟ್‌ನಿಂದ ಸಿಡಿದ 31 ರನ್‌ಗಳ ಕೊಡುಗೆ, ಜಯಂತ್ ಮೆಂಡಿಸ್ ಅವರ 25 ರನ್‌ಗಳ ಪ್ರದರ್ಶನದಿಂದಾಗಿ ಶ್ರೀಲಂಕಾ ತಂಡ ನಿಗದಿತ 20 ಓವರ್‌ಗಳಲ್ಲಿ 172 ರನ್‌ಗಳನ್ನು ಗಳಿಸಿತು.

ಟಿ20 ಕ್ರಿಕೆಟ್‌ನ ಅತ್ಯುತ್ತಮ ಬೌಲರ್ ಬೂಮ್ರಾ: ಟಿ20 ವಿಶ್ವಕಪ್‌ಗೆ ಅಲಭ್ಯತೆ ಬಗ್ಗೆ ಪ್ರತಿಕ್ರಿಯಿಸಿದ ಆಸಿಸ್ ಸ್ಟಾರ್ಟಿ20 ಕ್ರಿಕೆಟ್‌ನ ಅತ್ಯುತ್ತಮ ಬೌಲರ್ ಬೂಮ್ರಾ: ಟಿ20 ವಿಶ್ವಕಪ್‌ಗೆ ಅಲಭ್ಯತೆ ಬಗ್ಗೆ ಪ್ರತಿಕ್ರಿಯಿಸಿದ ಆಸಿಸ್ ಸ್ಟಾರ್

ಈ ಮೊತ್ತವನ್ನು ಬೆನ್ನಟ್ಟಿದ ವೆಸ್ಟ್ ಇಂಡೀಸ್ ಲೆಜೆಂಡ್ಸ್ ತಂಡದ ಪರವಾಗಿ ನರ್ಸಿಂಗ್ ಡಿಯೋನರೈನ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಆಸರೆಯಾದರು. ಆದರೆ ಮತ್ತೊಂದು ಭಾಗದಿಂದ ಹೇಳಿಕೊಳ್ಳುವಂತಾ ಬೆಂಣಬಲ ದೊರೆಯದ ಕಾರಣದಿಂದಾಗಿ ಡಿಯೋನರೈನ್ ಹೋರಾಟ ವ್ಯರ್ಥವಾಯಿತು. 39 ಎಸೆತ ಎದುರಿಸಿದ ಅವರು 63 ರನ್‌ಗಳನ್ನು ಸಿಡಿಸಿ 6ನೇ ವಿಕೆಟ್ ರೂಪದಲ್ಲಿ ಔಟಾದರು. ಅಂತಿಮವಾಗಿ ವೆಸ್ಟ್ ಇಂಡೀಸ್ ಲೆಜೆಂಡ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 158 ರನ್‌ಗಳನ್ನು ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಶ್ರೀಲಂಕಾ ಲೆಜೆಂಡ್ಸ್ ತಂಡ 14 ರನ್‌ಗಳ ಅಂತರದಿಂದ ಗೆಲುವು ಸಾಧಿಸಿದೆ.

ಇಂಡಿಯಾ ಲೆಜೆಂಡ್ಸ್ vs ಶ್ರೀಲಂಕಾ ಲೆಜೆಂಡ್ಸ್ ಫೈನಲ್ ಹೋರಾಟ: ಇನ್ನು ಮೊದಲ ಸೆಮಿಫೈನಲ್ ಸೆಣೆಸಾಟದಲ್ಲಿ ಆಸ್ಟ್ರೇಲಿಯಾ ಲೆಜೆಂಡ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಇಂಡಿಯಾ ಲೆಜೆಂಡ್ಸ ತಂಡ ಈಗಾಘಲೇಢ ಫೈನಲ್‌ಗೆ ಪ್ರವೇಶ ಪಡೆದುಕೊಂಡಿತ್ತು. ಇದೀಗ ಶ್ರೀಲಂಕಾ ಕೂಡ ಫೈನಲ್‌ಗೆ ಪ್ರವೇಶಿಸಿದೆ. ಶನಿವಾರವೇ ಈ ಟೂರ್ನಿಯ ಫೈನಲ್ ಪಂದ್ಯ ನಡೆಯಲಿದ್ದು ಸಚಿನ್ ತೆಂಡೂಲ್ಕರ್ ನೇತೃತ್ವದ ಇಂಡಿಯಾ ಲೆಜೆಂಡ್ಸ್ ಹಾಗೂ ತಿಲಕರತ್ನೆ ದಿಲ್ಶನ್ ನೇತೃತ್ವದ ಶ್ರೀಲಂಕಾ ಲೆಜೆಂಡ್ಸ್ ಪ್ರಶಸ್ತಿಗಾಗಿ ಹೋರಾಟ ನಡೆಸಲಿದೆ. ಮೊದಲ ಆವೃತ್ತಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿರುವ ಇಂಡಿಯಾ ಲೆಜೆಂಡ್ಸ್ ಎರಡನೇ ಬಾರಿಗೆ ಟ್ರೋಫಿಗೆ ಮುತ್ತಿಕ್ಕುವ ಉತ್ಸಾಹದಲ್ಲಿದ್ದರೆ ಶ್ರೀಲಂಕಾ ಲೆಜೆಂಡ್ಸ್ ಮೊದಲ ಬಾರಿಗೆ ಚಾಂಪಿಯನ್ ಆಗುವ ಕನಸು ಕಾಣುತ್ತಿದೆ.

Ind vs SA: ಗಾಯಾಳು ಜಸ್ಪ್ರೀತ್ ಬುಮ್ರಾ ಸ್ಥಾನಕ್ಕೆ ಮೊಹಮ್ಮದ್ ಸಿರಾಜ್ ಆಯ್ಕೆInd vs SA: ಗಾಯಾಳು ಜಸ್ಪ್ರೀತ್ ಬುಮ್ರಾ ಸ್ಥಾನಕ್ಕೆ ಮೊಹಮ್ಮದ್ ಸಿರಾಜ್ ಆಯ್ಕೆ

ಶ್ರೀಲಂಕಾ ಲೆಜೆಂಡ್ಸ್: ಮಹೇಲ ಉಡವಟ್ಟೆ, ಸನತ್ ಜಯಸೂರ್ಯ, ತಿಲಕರತ್ನೆ ದಿಲ್ಶನ್ (ನಾಯಕ), ಚಾಮರ ಸಿಲ್ವ, ಉಪುಲ್ ತರಂಗ (ವಿಕೆಟ್ ಕೀಪರ್), ಜೀವನ್ ಮೆಂಡಿಸ್, ಚತುರಂಗ ಡಿ ಸಿಲ್ವ, ಇಸುರು ಉದಾನ, ಅಸೆಲ ಗುಣರತ್ನ, ಇಶಾನ್ ಜಯರತ್ನ, ನುವಾನ್ ಕುಲಶೇಖರ
ಬೆಂಚ್: : ದಿಲ್ರುವಾನ್ ಪೆರೇರಾ, ಕೌಶಲ್ಯ ವೀರರತ್ನೆ, ಧಮ್ಮಿಕಾ ಪ್ರಸಾದ್, ಚಮಿಂದಾ ವಾಸ್, ಚಾಮರ ಕಪುಗೆದರ, ತಿಸರ ಪೆರೇರ, ಚಿಂತಕ ಜಯಸಿಂಹ, ದಿಲ್ಶಾನ್ ಮುನವೀರ

ವೆಸ್ಟ್ ಇಂಡೀಸ್ ಲೆಜೆಂಡ್ಸ್: ಡ್ವೇನ್ ಸ್ಮಿತ್, ಬ್ರಿಯಾನ್ ಲಾರಾ (ನಾಯಕ), ವಿಲಿಯಂ ಪರ್ಕಿನ್ಸ್ (ವಿಕೆಟ್ ಕೀಪರ್), ನರಸಿಂಗ್ ಡಿಯೋನರೈನ್, ಕಿರ್ಕ್ ಎಡ್ವರ್ಡ್ಸ್, ಡ್ಯಾನ್ಜಾ ಹಯಾಟ್, ಜೆರೋಮ್ ಟೇಲರ್, ಕ್ರಿಶ್ಮಾರ್ ಸ್ಯಾಂಟೋಕಿ, ಡೇರೆನ್ ಪೊವೆಲ್, ಸುಲೀಮಾನ್ ಬೆನ್, ದೇವೇಂದ್ರ ಬಿಶೂ
ಬೆಂಚ್: ಡೇವ್ ಮೊಹಮ್ಮದ್, ನವೀನ್ ಸ್ಟೀವರ್ಟ್, ಮರ್ಲಾನ್ ಬ್ಲಾಕ್

For Quick Alerts
ALLOW NOTIFICATIONS
For Daily Alerts
Story first published: [IST]
Other articles published on
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X