ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಗಂಗೂಲಿ ಜೊತೆಗಿನ ವಾಗ್ವಾದ ನೆನಪಿಸಿಕೊಂಡ ಶ್ರೀಲಂಕಾ ರಸೆಲ್ ಅರ್ನಾಲ್ಡ್

Russel Arnold Recalls Heated Argument With Sourav Ganguly

ಶ್ರೀಲಂಕಾದ ಕ್ರಿಕೆಟಿಗ ಹಾಲಿ ಕಾಮೆಂಟೇಟರ್ ರಸೆಲ್ ಅರ್ನಾಲ್ಡ್ ಸೌರವ್ ಗಂಗೂಲಿ ಜೊತೆಗಿನ ವಾಗ್ವಾದದ ಸಂದರ್ಭವನ್ನು ನೆನಪಿಸಿಕೊಂಡಿದ್ದಾರೆ. ಟೀಮ್ ಇಂಡಿಯಾದ ಸ್ಪಿನ್ನರ್ ಆರ್ ಅಶ್ವಿನ್ ಜೊತೆಗೆ ಇನ್ಸ್ಟಾಗ್ರಾಮ್ ಸಂವಾದದಲ್ಲಿ ಭಾಗಿಯಾಗಿದ್ದ ಅರ್ನಾಲ್ಡ್ ಹದಿನೆಂಟು ವರ್ಷಗಳ ಹಿಂದಿನ ಘಟನೆಯೊಂದನ್ನು ಮೆಲುಕು ಹಾಕಿದ್ದಾರೆ.

ಅದು 2002ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳು ಮುಖಾಮುಖಿಯಾಗಿದ್ದ ಸಂದರ್ಭ. ಕೊಲಂಬೋದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ಶ್ರೀಲಂಕಾ ತಂಡಗಳು ಮುಖಾಮುಖಿಯಾಗಿತ್ತು. ಶ್ರೀಲಂಕಾ ಬ್ಯಾಟ್ಸ್‌ಮನ್ ಅರ್ನಾಲ್ಡ್ ಮಾಡಿದ ಒಂದು ಯಡವಟ್ಟು ಟೀಮ್ ಇಂಡಿಯಾ ನಾಯಕನಾಗಿದ್ದ ಸೌರವ್ ಗಂಗೂಲಿಗೆ ಕೋಪ ತರಿಸಿತ್ತು.

ರೋಹಿತ್ ಶರ್ಮಾ ಸ್ಪೆಶಾಲಿಟಿ ಹೇಳಿದ ಯುವ ಬ್ಯಾಟ್ಸ್‌ಮನ್ ಪ್ರಿಯಂ ಗರ್ಗ್ರೋಹಿತ್ ಶರ್ಮಾ ಸ್ಪೆಶಾಲಿಟಿ ಹೇಳಿದ ಯುವ ಬ್ಯಾಟ್ಸ್‌ಮನ್ ಪ್ರಿಯಂ ಗರ್ಗ್

"ನನಗೆ ನೆನಪಿದೆ, ನಾನು ಲೇಟ್ ಕಟ್‌ವೊಂದನ್ನು ಆಡಿ ವಿಕೆಟ್‌ನಿಂದ ಎರಡು-ಮೂರು ಹೆಜ್ಜೆ ಮುಂದಕ್ಕೆ ಓಡಿದ್ದೆ, ಅದು ನಡೆದು ಹದಿನೆಂಟು ವರ್ಷಗಳಾಗಿದೆ, ಹೀಗಾಗಿ ನಾನು ಪ್ರಾಮಾಣಿಕವಾಗಿಯೇ ಹೇಳುತ್ತಿದ್ದೇನೆ ಎರಡ್ಮೂರು ಹೆಜ್ಜೆ ಪಿಚ್ಚಚನಲ್ಲೇ ಇಟ್ಟಿದ್ದೆ. ಎಲ್ಲರೂ ಅದನ್ನು ಮಾಡುತ್ತಾರೆ. ಈ ಸಂದರ್ಭದಲ್ಲಿ ಸೌರವ್ ಗಂಗೂಲಿ ನನ್ನ ಬಳಿ ಬಂದು ವಾಗ್ದಾಳಿಗೆ ಮುಂದಾದರು" ಎಂದು ಅಶ್ವಿನ್ ಜೊತೆಗೆ ಮಾತನಾಡುತ್ತಾ ಅರ್ನಾಲ್ಡ್ ನೆನಪಿಸಿಕೊಂಡಿದ್ದಾರೆ.

ಹೆಚ್ಚಿನದ್ದೇನು ಆಗಿರಲಿಲ್ಲ, ಬಳಿಕ ದ್ರಾವಿಡ್ ಬಂದು ನನ್ನ ಬಳಿ, ಪಿಚ್‌ನ ಮೇಲೆ ಓಡಬೇಡ ಎಂದು ಹೇಳಿದ್ದರು. ಇನ್ನು ಸೌರವ್ ಗಂಗೂಲಿಯ ಬಗ್ಗೆ ಈ ಸಂದರ್ಭದಲ್ಲಿ ರಸೆಲ್ ಅರ್ನಾಲ್ಡ್, ಆತನ ಕೋಪವನ್ನು ತಣಿಸುವುದು ಕೂಡ ಸುಲಭ, ತಾನು ಏನನ್ನು ಸ್ವೀಕರಿತ್ತಾನೋ ಅದನ್ನೇ ಸೌರವ್ ಗಂಗೂಲಿ ವಾಪಾಸ್ ನೀಡುತ್ತಾರೆ ಎಂದು ರಸೆಲ್ ಅರ್ನಾಲ್ಡ್ ಹೇಳಿದರು.

ಆರ್ಥಿಕ ಸಂಕಷ್ಟದ ಭೀತಿಯಲ್ಲಿದೆ ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆ ಬಿಸಿಸಿಐ!ಆರ್ಥಿಕ ಸಂಕಷ್ಟದ ಭೀತಿಯಲ್ಲಿದೆ ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆ ಬಿಸಿಸಿಐ!

ಆಟದಲ್ಲಿ ಇದೆಲ್ಲವೂ ನಡೆಯುತ್ತದೆ. ಅದೆಲ್ಲವೂ ಉತ್ತಮ ಕಾರಣಗಳಿಗಾಗಿಯೇ ಆಗಿತ್ತು. ನಾನು ಕೇವಲ ಮೂರೇ ಹೆಜ್ಜೆ ಮುಂದಿಟ್ಟಿದ್ದೆ, ಹೀಗಾಗಿ ಅಲ್ಲಿ ಅತಿಯಾಗಿ ಆಯಿತೇನೋ ಎಂದು ಕೆಲವು ಬಾರಿ ಯೋಚಿಸಿದ್ದಿದೆ ಎಂದು ಅಶ್ವಿನ್ ಜೊತೆಗೆ ಅರ್ನಾಲ್ಡ್ ಮಾತನಾಡುತ್ತಾ ಹೇಳಿದ್ದಾರೆ. ಮಳೆಯ ಕಾರಣದಿಂದಾಗಿ ಈ ಪಂದ್ಯ ಬಳಿಕ ರದ್ದಾಗಿತ್ತು. ಹೀಗಾಗಿ ಭಾರತ ಮತ್ತು ಶ್ರೀಲಂಕಾ ತಂಡಗಳು ಅಂದಿನ ಚಾಂಪಿಯನ್ಸ್ ಟ್ರೋಫಿಯನ್ನು ಹಂಚಿಕೊಂಡಿದ್ದವು.

Story first published: Thursday, May 14, 2020, 10:26 [IST]
Other articles published on May 14, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X