ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಮತ್ತೆ ಕಣಕ್ಕಿಳಿಯಲು ವೇಗಿ ಎಸ್‌ ಶ್ರೀಶಾಂತ್‌ ಸಜ್ಜು

S Sreesanth registering himself in the auctions of IPL 2021

ತಿರುವನಂತಪುರಂ: ಭಾರತದ ಮಾಜಿ ವೇಗಿ ಎಸ್‌ ಶ್ರೀಶಾಂತ್‌ 2021ರ ಇಂಡಿಯನ್ ಪ್ರೀಮಿಯರ್ ಲೀಗ್‌ ಆಟಗಾರರ ಹರಾಜಿಗೆ ತನ್ನನ್ನು ತಾನು ನೋಂದಾಯಿಸಿಕೊಂಡಿದ್ದಾರೆ. ಐಪಿಎಲ್‌ನಲ್ಲೇ ಈ ಹಿಂದೆ ಶ್ರೀಶಾಂತ್ ನಿಷೇಧಕ್ಕೀಡಾಗಿದ್ದರು. ಸ್ಪಾಟ್ ಫಿಕ್ಸಿಂಗ್‌ ಆರೋಪಡದಿಯಲ್ಲಿ ಶ್ರೀಶಾಂತ್‌ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾದಿಂದ ನಿಷೇಧಿಸಲ್ಪಟ್ಟಿದ್ದರು.

ಭಾರತ vs ಆಸೀಸ್: ಕಾಕತಾಳೀಯ, ಕುತೂಹಲಕಾರಿ ಅಂಕಿ-ಅಂಶಗಳು!ಭಾರತ vs ಆಸೀಸ್: ಕಾಕತಾಳೀಯ, ಕುತೂಹಲಕಾರಿ ಅಂಕಿ-ಅಂಶಗಳು!

2013ರ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್‌ನಲ್ಲಿ ಆಡಿದ್ದ ಎಸ್‌ ಶ್ರೀಶಾಂತ್‌ ಅವರ ವಿರುದ್ಧ ಸ್ಪಾಟ್ ಫಿಕ್ಸಿಂಗ್ ಆರೋಪ ಕೇಳಿಬಂದಿತ್ತು. ಹೀಗಾಗಿ ಬಿಸಿಸಿಐ ಶ್ರೀಶಾಂತ್‌ ಅವರನ್ನು ಕ್ರಿಕೆಟ್‌ನಿಂದ ಆಜೀವ ನಿಷೇಧ ಹೇರಿತ್ತು. ಮತ್ತೆ ಮರು ವಿಚಾರಣೆ ವೇಳೆ ಬಿಸಿಸಿಐ ಓಂಬುಡ್ಸ್‌ಮನ್ ಡಿಕೆ ಜೈನ್ ಅವರು ಶ್ರೀ ಮೇಲಿನ ಶಿಕ್ಷೆಯನ್ನು 7 ವರ್ಷಕ್ಕೆ ಕಡಿತಗೊಳಿಸಿದ್ದರು.

ಶ್ರೀಶಾಂತ್‌ ಅವರ ಏಳು ವರ್ಷಗಳ ನಿಷೇಧ ಶಿಕ್ಷೆ 2020ರ ಸೆಪ್ಟೆಂಬರ್ 13ಕ್ಕೆ ಕೊನೆಗೊಂಡಿದೆ. ಹೀಗಾಗಿ ಶ್ರೀಶಾಂತ್ ಸದ್ಯ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20ಯಲ್ಲಿ ಕೇರಳ ಕ್ರಿಕೆಟ್ ತಂಡದ ಪರ ಆಡುತ್ತಿದ್ದಾರೆ. ಉತ್ತಮ ಪ್ರದರ್ಶನವೂ ನೀಡುತ್ತಿದ್ದಾರೆ. ಐಪಿಎಲ್ ಆಟಗಾರರ ಹರಾಜು ಫೆಬ್ರವರಿ 18ರಂದು ನಡೆಯಲಿದೆ.

ಯುವರಾಜ್ ಸಿಂಗ್ ಕೋಚಿಂಗ್ ಬಹಳ ಉಪಯೋಗಕ್ಕೆ ಬಂತು: ಗಿಲ್‌ಯುವರಾಜ್ ಸಿಂಗ್ ಕೋಚಿಂಗ್ ಬಹಳ ಉಪಯೋಗಕ್ಕೆ ಬಂತು: ಗಿಲ್‌

ಸುದೀರ್ಘ ಕಾಲ ನಿಷೇಧ ಶಿಕ್ಷೆ ಅನುಭವಿಸಿರುವ ಶ್ರೀಶಾಂತ್‌ಗೆ ಮತ್ತೆ ಟೀಮ್ ಇಂಡಿಯಾವ ಪ್ರತಿನಿಧಿಸುವ ಆಸೆ ಇದೆ. ಭಾರತ ಪರ ಮತ್ತೊಂದು ವಿಶ್ವಕಪ್‌ನಲ್ಲಿ ಆಡೋದು ನನ್ನ ಬದುಕಿನ ಗುರಿ ಎಂದು ಶ್ರೀ ಹೇಳಿಕೊಂಡಿದ್ದಾರೆ. ಭಾರತ ಪರ 27 ಟೆಸ್ಟ್ ಪಂದ್ಯಗಳಲ್ಲಿ 87 ವಿಕೆಟ್, 53 ಏಕದಿನ ಪಂದ್ಯಗಳಲ್ಲಿ 75 ವಿಕೆಟ್, 10 ಟಿ20ಐ ಪಂದ್ಯಗಳಲ್ಲಿ 7 ವಿಕೆಟ್ ಶ್ರೀಶಾಂತ್‌ ಹೆಸರಿನಲ್ಲಿದೆ.

Story first published: Saturday, January 23, 2021, 12:18 [IST]
Other articles published on Jan 23, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X