ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

"ಈ ಕಾರಣದಿಂದಾಗಿ ದಿನೇಶ್ ಕಾರ್ತಿಕ್ ವೃತ್ತಿಜೀವನದ ಆರಂಭದಲ್ಲಿ ವೈಫಲ್ಯ ಅನುಭವಿಸಿದ್ದರು"

Saba Karim said earlier Dinesh Karthik had no clarity his role in team thats why he failed

ಐಪಿಎಲ್ ಆವೃತ್ತಿಯ ಆರಂಭದವರೆಗೂ ಚಾಲ್ತಿಯಲ್ಲಿರದ ಅನುಭವಿ ಆಟಗಾರ ದಿನೇಶ್ ಕಾರ್ತಿಕ್ ಈಗ ಭಾರತ ಚುಟುಕು ಕ್ರಿಕೆಟ್ ತಂಡದ ಪ್ರಮುಖ ಭಾಗವಾಗಿದ್ದಾರೆ. ಅಲ್ಲದೆ ಮುಂದಿನ ವಿಶ್ವಕಪ್‌ನಲ್ಲಿಯೂ ದಿನೇಶ್ ಕಾರ್ತಿಕ್‌ಗೆ ಸ್ಥಾನ ದೊರೆಯುವುದರಲ್ಲಿ ಯಾವುದೇ ಅನುಮಾನಗಳು ಉಳಿದಿಲ್ಲ. ಅದಕ್ಕೆ ಕಾರಣ ಕೆಳ ಕ್ರಮಾಂಕದಲ್ಲಿ ದಿನೇಶ್ ಕಾರ್ತಿಕ್ ಅವರು ನೀಡುತ್ತಿರುವ ಅತ್ಯಂತ ಪರಿಣಾಮಕಾರಿ ಪ್ರದರ್ಶನ. 37ರ ಹರೆಯದಲ್ಲಿ ಭಾರತೀಯ ತಂಡಕ್ಕೆ ಕಮ್‌ಬ್ಯಾಕ್ ಮಾಡಿರುವ ಡಿಕೆ ಅಮೋಘ ಪ್ರದರ್ಶನ ನೀಡುತ್ತಿದ್ದಾರೆ.

ಭಾರತೀಯ ಕ್ರಿಕೆಟ್ ತಂಡಕ್ಕೆ ಮಾಜಿ ನಾಯಕ ಎಂಎಸ್ ಧೋನಿಗಿಂತಲೂ ಮುನ್ನವೇ ದಿನೇಶ್ ಕಾರ್ತಿಕ್ ಪದಾರ್ಪಣೆ ಮಾಡಿದ್ದರೂ ಸುದೀರ್ಘ ಕಾಲ ತಂಡದಲ್ಲಿ ಸ್ಥಾನವನ್ನು ಭದ್ರಪಡಿಸಲು ಡಿಕೆಗೆ ಸಾಧ್ಯವಾಗಿರಲಿಲ್ಲ. ಪ್ರತಿಭಾವಂತನಾಗಿದ್ದರೂ ದಿನೇಶ್ ಕಾರ್ತಕ್ ಆರಂಭದಲ್ಲಿಯೇ ದೊಡ್ಡ ಮಟ್ಟದ ಯಶಸ್ಸು ಸಾಧಿಸಲು ಸಾಧ್ಯವಾಗಿರಲಿಲ್ಲ. ಈ ಬಗ್ಗೆ ಮಾಜಿ ಕ್ರಿಕೆಟಿಗ ಸಬಾ ಕರೀಮ್ ಪ್ರತಿಕ್ರಿಯಿಸಿದ್ದು ದಿನೇಶ್ ಕಾರ್ತಿಕ್ ವೃತ್ತಿ ಜೀವನದ ಆರಂಭದಲ್ಲಿ ವೈಫಲ್ಯವನ್ನು ಅನುಭವಿಸಿದ ಕಾರಣವನ್ನು ಹೇಳಿದ್ದಾರೆ.

IND vs WI 2ನೇ ಟಿ20: ಈ ಮೈಲಿಗಲ್ಲುಗಳತ್ತ ರೋಹಿತ್, ಶ್ರೇಯಸ್ ಐಯ್ಯರ್ ಮತ್ತು ಪಾಂಡ್ಯಾ ಕಣ್ಣುIND vs WI 2ನೇ ಟಿ20: ಈ ಮೈಲಿಗಲ್ಲುಗಳತ್ತ ರೋಹಿತ್, ಶ್ರೇಯಸ್ ಐಯ್ಯರ್ ಮತ್ತು ಪಾಂಡ್ಯಾ ಕಣ್ಣು

ಆರಂಭದಲ್ಲಿನ ವೈಫಲ್ಯಕ್ಕೆ ಕಾರಣ

ಆರಂಭದಲ್ಲಿನ ವೈಫಲ್ಯಕ್ಕೆ ಕಾರಣ

ಮಾಜಿ ಕ್ರಿಕೆಟಿಗ ಸಬಾ ಕರೀಮ್ ದಿನೇಶ್ ಕಾರ್ತಿಕ್ ಅವರ ವೃತ್ತಿ ಜೀವನದ ಆರಂಭಿಕ ಹಂತದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗದ ಬಗ್ಗೆ ಮಾತನಾಡಿದ್ದಾರೆ. ಆ ಸಂದರ್ಭದಲ್ಲಿ ದಿನೇಶ್ ಕಾರ್ತಿಕ್‌ಗೆ ತಂಡದಲ್ಲಿ ತಮ್ಮ ಪಾತ್ರದ ಬಗ್ಗೆ ಸ್ಪಷ್ಡತೆಯಿರಲಿಲ್ಲ. ಇದು ಅವರ ಪ್ರದರ್ಶನದ ಮೇಲೆ ಪರಿಣಾಮ ಬೀರಿತ್ತು. ಹೀಗಾಗಿ ಅವರಿಂದ ಯಶಸ್ಸು ಸಾಧ್ಯವಾಗಲಿಲ್ಲ. ಆದರೆ ಈಗ ಅವರಿಗೆ ಸೂಕ್ತವಾಗುವ ಪಾತ್ರವನ್ನು ನಿಡಲಾಗಿದೆ. ಅವರ ಪಾತ್ರದ ಬಗ್ಗೆ ಅವರಿಗೆ ಬಹಳ ಸ್ಪಷ್ಟತೆಯಿದೆ. ಅದನ್ನು ಅವರು ಆನಂದಿಸುತ್ತಿದ್ದಾರೆ. ಪ್ರದರ್ಶನದಲ್ಲಿಯೂ. ಅದು ಸ್ಒಷ್ಟವಾಗಿ ವ್ಯಕ್ತವಾಗುತ್ತಿದೆ" ಎಂದಿದ್ದಾರೆ ಮಾಜಿ ಕ್ರಿಕೆಟಿಗ ಸಬಾ ಕರೀಮ್.

ಫಿನಿಷರ್ ಪಾತ್ರ ನಿರ್ವಹಿಸುತ್ತಿದ್ದಾರೆ ಡಿಕೆ

ಫಿನಿಷರ್ ಪಾತ್ರ ನಿರ್ವಹಿಸುತ್ತಿದ್ದಾರೆ ಡಿಕೆ

ದಿನೇಶ್ ಕಾರ್ತಿಕ್ ಭಾರತೀಯ ಟಿ20 ತಂಡದಲ್ಲಿ ಫಿನಿಷರ್ ಪಾತ್ರವನ್ನು ನಿರ್ವಹಿಸುತ್ತಿದ್ದು ಈ ಜವಾಬ್ಧಾರಿಯಲ್ಲಿ ಅದ್ಭುತ ಯಶಸ್ಸು ಸಾಧಿಸುತ್ತಿದ್ದಾರೆ. ಸ್ಲಾಗ್ ಓವರ್‌ಗಳಲ್ಲಿ ಬ್ಯಾಟಿಂಗ್‌ಗೆ ಇಳಿದು ,ವೇಗವಾಗಿ ರನ್‌ಗಳಿಸುವಲ್ಲಿ ದಿನೇಶ್ ಕಾರ್ತಿಕ್ ಯಶಸ್ವಿಯಾಗುತ್ತಿದ್ದಾರೆ. ತಂಡದ ಆರಂಭಿಕ ವಿಕೆಟ್‌ಗಳು ಶೀಘ್ರವಾಗಿ ಉರುಳಿದರೂ ಡೆತ್ ಓವರ್‌ನಲ್ಲಿಯೇ ದಿನೇಶ್ ಕಾರ್ತಕ್‌ಗೆ ಬ್ಯಾಟಿಂಗ್‌ಗೆ ಇಳಿಸುವ ಮೂಲಕ ಆ ಹಂತದಲ್ಲಿ ಎದುರಾಳಿಗಳ ಮೇಲೆ ಒತ್ತಡ ಹೆಚ್ಚಾಗುವಂತೆ ಮಾಡಲಾಗುತ್ತಿದೆ. ಈ ಜವಾಬ್ಧಾರಿಯಲ್ಲಿ ಡಿಕೆ ಯಶಸ್ವುಯಾಗುತ್ತಿದ್ದು ಸತತವಾಗಿ ಮಿಂಚುತ್ತಿದ್ದಾರೆ. ದಕ್ಷಿಣ ಆಫ್ರಿಕಾ, ಐರ್ಲೆಂಡ್ ಇಂಗ್ಲೆಂಡ್ ಬಳಿಕ ಇದೀಗ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿಯೂ ದಿನೇಶ್ ಕಾರ್ತಿಕ್ ಅಮೋಘ ಪ್ರದರ್ಶನ ನೀಡುತ್ತಿದ್ದಾರೆ.

ನಿರ್ದಿಷ್ಟ ಪಾತ್ರವನ್ನು ನೀಡಲಾಗಿದೆ

ನಿರ್ದಿಷ್ಟ ಪಾತ್ರವನ್ನು ನೀಡಲಾಗಿದೆ

ದಿನೇಶ್ ಕಾರ್ತಿಕ್‌ಗೆ ನೀಡಲಾಗಿರುವ ಪಾತ್ರದ ಬಗ್ಗೆ ಸಬಾ ಕರೀಮ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಮ್ಯಾನೇಜ್‌ಮೆಂಟ್ ದಿನೇಶ್ ಕಾರ್ತಕ್‌ಗೆ ಒಂದು ನಿರ್ದಿಷ್ಟವಾದ ಪಾತ್ರವನ್ನು ನೀಡಿದೆ. ಅವರನ್ನು ಸ್ಥಿರವಾಗಿ ಒಂದೇ ಸ್ಥಿತಿಯಲ್ಲಿ ಕಣಕ್ಕಿಳಿಸಲಾಗುತ್ತಿದೆ. ಅವರು ಯಾವ ಕ್ರಮಾಂಕದಲ್ಲಿ ಆಡುತ್ತಿದ್ದಾರೆ ಎಂಬುದು ಮುಖ್ತವಲ್ಲ. ಅವರ ಪಾತ್ರ ಮೂರರಿಂದ ನಾಲ್ಕು ಓವರ್‌ಗಳ ಕಾಲ ಬ್ಯಾಟಿಂಗ್ ನಡೆಸುವುದಾಗಿದೆ. ತಂಡದ ಯೋಜನೆಗೆ ಪೂರಕವಾಗಿ ಅವರು ಸಿದ್ಧತೆಯನ್ನು ಮಾಡಿಕೊಂಡಿದ್ದಾರೆ. ಅದೇ ಕಾರಣಕ್ಕೆ ಅವರು ಅದ್ಭುತವಾದ ಯಶಸ್ಸು ಸಾಧಿಸುತ್ತಿದ್ದಾರೆ" ಎಂದು ಸಬಾ ಕರೀಮ್ ದಿನೇಶ್ ಕಾರ್ತಿಕ್ ಯಶಸ್ಸಿನ ಬಗ್ಗೆ ಮಾತನಾಡಿದ್ದಾರೆ.

ಕೈಕೊಟ್ಟ Dinesh Karthik, ಎಡವಟ್ಟು ಮಾಡಿದ ಆವೇಶ್ ಖಾನ್!ವೆಸ್ಟ್ ಇಂಡೀಸ್ ಗೆ ಸುಲಭ ಜಯ | *Cricket | OneIndia
ವಿಂಡೀಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಡಿಕೆ ಪಂದ್ಯಶ್ರೇಷ್ಠ

ವಿಂಡೀಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಡಿಕೆ ಪಂದ್ಯಶ್ರೇಷ್ಠ

ದಿನೇಶ್ ಕಾರ್ತಿಕ್ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಅದ್ಭುತವಾದ ಪ್ರದರ್ಶನ ನೀಡುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಕೇವಲ 19 ಎಸೆತಗಳಲ್ಲಿ ಎರಡು ಸಿಕ್ಸರ್ ನಾಲ್ಕು ಬೌಂಡರಿಗಳ ಸಹಿತ ಭರ್ಜರಿ 41 ರನ್‌ ಬಾರಿಸಿದ್ದರು ದಿನೇಶ್ ಕಾರ್ತಿಕ್. ಅದರ ಪರಿಣಾಮವಾಗಿ ಭಾರತ 190 ರನ್‌ಗಳನ್ನು ಗಳಿಸಲು ಯಶಸ್ವಿಯಾಗಿತ್ತು. ಹೀಗಾಗಿ ಈ ಪಂದ್ಯದಲ್ಲಿ ಭಾರತ 8 ರನ್‌ಗಳ ಬೃಹತ್ ಅಂತರದಿಂದ ಗೆಲುವು ಸಾಧಿಸಲು ಸಾಧ್ಯವಾಗಿತ್ತು. ಈ ಮೂಲಕ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ 1-0 ಅಂತರದಿಂದ ಮೇಲುಗೈ ಸಾಧಿಸಲು ಯಶಸ್ವಿಯಾಗಿತ್ತು.

ಸ್ಕ್ವಾಡ್‌ಗಳು ಹೀಗಿದೆ
ವೆಸ್ಟ್ ಇಂಡೀಸ್ ತಂಡ: ಕೈಲ್ ಮೇಯರ್ಸ್, ಶಮರ್ಹ್ ಬ್ರೂಕ್ಸ್, ಜೇಸನ್ ಹೋಲ್ಡರ್, ನಿಕೋಲಸ್ ಪೂರನ್, ರೋವ್ಮನ್ ಪೊವೆಲ್, ಶಿಮ್ರಾನ್ ಹೆಟ್ಮೆಯರ್, ಅಕೆಲ್ ಹೊಸೈನ್, ಓಡಿಯನ್ ಸ್ಮಿತ್, ಕೀಮೋ ಪಾಲ್, ಅಲ್ಜಾರಿ ಜೋಸೆಫ್, ಓಬೆಡ್ ಮೆಕಾಯ್, ಹೇಡನ್ ವಾಲ್ಷ್, ಡೆವೊನ್ ಥಾಮಸ್, ಬ್ರಾಂಡನ್ ಶೆಫರ್ಡ್ ಕಿಂಗ್ ಡ್ರೇಕ್ಸ್

ಭಾರತ ತಂಡ: ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ದಿನೇಶ್ ಕಾರ್ತಿಕ್, ರವಿಚಂದ್ರನ್ ಅಶ್ವಿನ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಹರ್ಷಲ್ ಪಟೇಲ್, ಅಕ್ಸರ್ ಪಟೇಲ್, ದೀಪಕ್ ಹೂಡಾ, ಆವೇಶ್ ಖಾನ್, ಇಶಾನ್ ಕಿಶನ್, ಕುಲದೀಪ್ ಯಾದವ್, ಸಂಜು ಸ್ಯಾಮ್ಸನ್

Story first published: Tuesday, August 2, 2022, 10:06 [IST]
Other articles published on Aug 2, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X