ಸಚಿನ್ ತೆಂಡೂಲ್ಕರ್‌ಗಿದ್ದ ದೊಡ್ಡ ವೀಕ್‌ನೆಸ್ ಹೇಳಿದ ಮಾಜಿ ನಾಯಕ ಕಪಿಲ್‌ದೇವ್

ಪ್ರಥಮ ವಿಶ್ವಕಪ್ ಗೆದ್ದ ಬಾರತ ತಂಡದ ನಾಯಕ ಕಪಿಲ್‌ದೇವ್ ಸಚಿನ್ ತೆಂಡೂಲ್ಕರ್‌ಗಿದ್ದ ಪ್ರಮುಖ ಋಣಾತ್ಮಕ ಅಂಶವನ್ನು ಹೇಳಿದ್ದಾರೆ. ಕ್ರಿಕೆಟ್‌ನಲ್ಲಿ ದಾಖಲೆಯ ಮೇಲೆ ದಾಖಲೆ, ಶತಕದ ಮೇಲೆ ಶತಕವನ್ನು ಬಾರಿಸಿ ಸೈ ಎನಿಸಿಕೊಂಡ ಸಚಿನ್ ತೆಂಡೂಲ್ಕರ್ ಬ್ಯಾಟಿಂಗ್‌ನಲ್ಲಿ ಒಂದು ವಿಚಾರದಲ್ಲಿ ಹಿನ್ನಡೆಯನ್ನು ಅನುಭವಿಸಿದ್ದಾರೆ.

ಬ್ಯಾಟಿಂಗ್‌ಗೆ ಸಂಬಂಧಪಟ್ಟ ಬಹುತೇಕ ಎಲ್ಲಾ ದಾಖಲೆಗಳ ಪಟ್ಟಿಯಲ್ಲಿ ಆರಂಭದಲ್ಲೇ ಕಾಣಿಸುವ ಸಚಿನ್ ತೆಂಡೂಲ್ಕರ್ ಈ ಒಂದು ಪಟ್ಟಿಯಲ್ಲಿ ಟಾಪ್ 10ರಲ್ಲೂ ಸ್ಥಾನವನ್ನು ಪಡೆದಿಲ್ಲ. 100 ಶತಕ ಬಾರಿಸಿ ನಿಬ್ಬೆರಗಾಗುವಂತೆ ಮಾಡಿದ ಸಚಿನ್‌ ತೆಂಡೂಲ್ಕರ್ ಕ್ರಿಕೆಟ್ ಇತಿಹಾಸದ ಶ್ರೇಷ್ಠ ಬ್ಯಾಟ್ಸ್‌ಮನ್ ಎನಿಸಿದ್ದಾರೆ ಹಾಗಿದ್ದೂ ಸಚಿನ್ ಬಳಿ ವೀಕ್‌ನೆಸ್ ಇತ್ತು ಎಂಬುದು ಅಚ್ಚರಿಯ ವಿಚಾರ.

ಮನಮುಟ್ಟುವ ಹಾಗೆ ಸ್ಟುವರ್ಟ್ ಬ್ರಾಡ್‌ಗೆ ಸಂದೇಶ ಬರೆದ ಯುವರಾಜ್ ಸಿಂಗ್!

ಹಾಗಾದರೆ ಕ್ರಿಕೆಟ್ ದೇವರೆಂದೇ ಖ್ಯಾತರಾದ ಸಚಿನ್‌ಗಿದ್ದ ಆ ವೀಕ್‌ನೆಸ್ ಯಾವುದು? ಈ ವಿಚಾರವಾಗಿ ಕಪಿಲ್ ದೇವ್ ವಿವರವಾಗಿ ಮಾತನಾಡಿದ್ದಾರೆ.

ದ್ವಿಶತಕ ಗಳಿಕೆಯಲ್ಲಿ ಸಚಿನ್ ಹಿಂದೆ

ದ್ವಿಶತಕ ಗಳಿಕೆಯಲ್ಲಿ ಸಚಿನ್ ಹಿಂದೆ

ಕಪಿಲ್ ದೇವ್ ಹೇಳಿದ ಆ ವೀಕ್‌ನೆಸ್ ಮತ್ಯಾವುದೂ ಅಲ್ಲ, ದ್ವಿಶತಕ. ಹೌದು, ಸಚಿನ್ ತಮ್ಮ ಶತಕವನ್ನು ದ್ವಿಶತಕ ಅಥವಾ ತ್ರಿಶತಕವನ್ನಾಗಿ ಪರಿವರ್ತಿಸಲು ಸಾಧ್ಯವಾಗುತ್ತಿರಲ್ಲ. ಇದಕ್ಕೆ ಮಾಜಿ ನಾಯಕ ಕಪಿಲ್ ದೇವ್ ಸಚಿನ್‌ಗೆ ಶತಕ ಬಾರಿಸಲು ತಿಳಿದಿತ್ತು. ಅದರೆ ಆ ಶತಕವನ್ನು ದ್ವಿಶತಕ ಅಥವಾ ತ್ರಿಶತಕವನ್ನಾಗಿ ಪರಿವರ್ತಿಸುವ ಕಲೆಯಲ್ಲಿ ಅವರು ನೈಪುಣ್ಯತೆ ಗಳಿಸಿಕೊಳ್ಳಲಿಲ್ಲ ಎಂದಿದ್ದಾರೆ.

ಸಚಿನ್ ನಿರ್ದಯಿ ಬ್ಯಾಟ್ಸ್‌ಮನ್ ಅಲ್ಲ

ಸಚಿನ್ ನಿರ್ದಯಿ ಬ್ಯಾಟ್ಸ್‌ಮನ್ ಅಲ್ಲ

ಸಚಿನ್ ಅಸಾಧಾರಣ ಪ್ರತಿಭಾನ್ವಿತರಾಗಿದ್ದರು. ಅವರ ಬಳಿಯಿದ್ದಷ್ಟು ಪ್ರತಿಭೆ ಉಳಿದ ಯಾವ ಕ್ರಿಕೆಟಿಗನಲ್ಲೂ ನಾನು ಕಾಣಲಿಲ್ಲ. ಅವರಿಗೆ ಶತಕಗಳಿಸುವುದು ಹೇಗೆ ಎಂದು ಚೆನ್ನಾಗಿ ತಿಳಿದಿತ್ತು. ಆದರೆ ಅವರೋರ್ವ ನಿರ್ದಯ ಬ್ಯಾಟ್ಸ್‌ಮನ್ ಆಗಿರಲಿಲ್ಲ ಎಂದು ಕಪಿಲ್ ದೇವ್ ಹಾಲಿ ಮಹಿಳಾ ಕ್ರಿಕೆಟ್ ತಂಡದ ಕೋಚ್ ಡಬ್ಯುವಿ ರಾಮನ್ ಜೊತೆಗಿನ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಇನ್ನೂ 10 ದ್ವಿಶತಕ 5 ತ್ರಿಶತಕ ಬೇಕಿತ್ತು

ಇನ್ನೂ 10 ದ್ವಿಶತಕ 5 ತ್ರಿಶತಕ ಬೇಕಿತ್ತು

ಸಚಿನ್ ರೀತಿಯ ಪ್ರತಿಭೆಯಲ್ಲಿ ಕನಿಷ್ಟ ಇನ್ನು 10 ದ್ವಿಶತಕ ಬೇಕಿತ್ತು. ಐದು ತ್ರಿಶತಕ ಇರಬೇಕಿತ್ತು ಯಾಕೆಂದರೆ ಸಚಿನ್ ವೇಗಿಗಳಿಗೆ ಅಥವಾ ಸ್ಪಿನ್ನರ್‌ಗಳಿಗೆ ಪ್ರತಿ ಓವರ್‌ನಲ್ಲೂ ಕನಿಷ್ಟ ಒಂದು ಬೌಂಡರಿ ಬಾರಿಸಬಲ್ಲವರಾಗಿದ್ದರು ಎಂದು ಎಂದು ಕಪಿಲ್‌ದೇವ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಾರಣ ಹೇಳಿದ ಕಪಿಲ್‌ದೇವ್

ಕಾರಣ ಹೇಳಿದ ಕಪಿಲ್‌ದೇವ್

ಮುಂಬೈ ಮೂಲದ ಆಟಗಾರನಾಗಿದ್ದರಿಂದ ಶತಕಗಳಿಸಿದ ನಂತರ ಒಂದು ರೇಖೆಯನ್ನು ಹಾಕಿಕೊಂಡು ಮತ್ತೆ ಶೂನ್ಯದಿಂದ ಪ್ರಾರಂಭಿಸುವ ಮನಸ್ಥಿತಿ ಅವರಲ್ಲಿತ್ತು. ಆದಕ್ಕಾಗಿ ನಾನು ಅವರಲ್ಲಿ ಹೇಳಿದ್ದೆ, ನೀನೋರ್ವ ನೀರ್ದಯ ಆಟಗಾರ, ಬೌಲರ್‌ಗಳು ನಿನ್ನನ್ನು ಕಂಡು ಭಯಬೀಳಬೇಕು. ಆದರೆ ಸಚಿನ್ ಶತಕಗಳಿಸಿದ ನಂತರ ಒಂಟಿ ರನ್ ತೆಗೆಯುತ್ತಾ ನಿರ್ದಯಿಯಾಗುತ್ತಿರಲಿಲ್ಲ ಎಂದು ಕಪಿಲ್‌ದೇವ್ ಹೇಳಿದ್ದಾರೆ.

ಸಚಿನ್ ಹೆಸರಲ್ಲಿದ 6 ದ್ವಿಶತಕ

ಸಚಿನ್ ಹೆಸರಲ್ಲಿದ 6 ದ್ವಿಶತಕ

ಟೆಸ್ಟ್‌ ಕ್ರಿಕೆಟ್‌ನಲ್ಲಿ ಸಚಿನ್ ತೆಂಡುಲ್ಕರ್ ಮರ್ವಾನ್ ಅತ್ತಪಟ್ಟು, ವೀರೇಂದ್ರ ಸೆಹ್ವಾಗ್, ಜಾವೇದ್ ಮಿಯಾಂದಾದ್, ಯೂನಿಸ್ ಖಾನ್ ಹಾಗೂ ರಿಕಿ ಪಾಂಟಿಂಗ್ ಅವರಂತೆಯೇ 6 ದ್ವಿಶತಕಗಳನ್ನು ದಾಖಲಿಸಿದ್ದಾರೆ. ಆದರೆ ಆಡಿದ ಪಂದ್ಯಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಪಟ್ಟಿಯಲ್ಲಿ 12ನೇ ಸ್ಥಾನವನ್ನು ಅಲಂಕರಿಸುತ್ತಾರೆ. ಹಾಗಿದ್ದೂ ಏಕದಿನ ಕ್ರಿಕೆಟ್‌ನಲ್ಲಿ ಮೊದಲ ದ್ವಿಶತಕ ದಾಖಲಿಸಿದ ಕೀರ್ತಿ ಸಚಿನ್ ತೆಂಡುಲ್ಕರ್ ಹೆಸರಿನಲ್ಲೇ ಇದೆ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Wednesday, July 29, 2020, 18:31 [IST]
Other articles published on Jul 29, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X