ಸ್ಟಂಪ್‌ಗೆ ಚೆಂಡು ಬಡಿದಿದ್ದು ಡಿಆರ್‌ಎಸ್‌ನಲ್ಲಿ ಕಂಡರೆ ಔಟ್ ಕೊಡಬೇಕು: ಸಚಿನ್

ನವದೆಹಲಿ, ಜುಲೈ 13: ಡಿಸಿಶನ್ ರಿವ್ಯೂ ಸಿಸ್ಟಮ್‌ನಲ್ಲಿ ಬದಲಾವಣೆ ತರುವ ಬಗ್ಗೆ ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಇಂಟರ್ ನ್ಯಷನಲ್ ಕ್ರಿಕೆಟ್ ಕೌನ್ಸಿಲ್ ಅನ್ನು ಕೇಳಿಕೊಂಡಿದ್ದಾರೆ. ಎಲ್‌ಬಿಡಬ್ಲ್ಯೂಗಾಗಿ ಡಿಆರ್‌ಎಸ್ ಮೊರೆ ಹೋದಾಗ ಡಿಆರ್‌ಎಸ್‌ನಲ್ಲಿ ಚೆಂಡು ಸ್ಟಂಪ್‌ಗೆ ಬಡಿದಿದ್ದು ಕಂಡು ಬಂದರೆ ಬ್ಯಾಟ್ಸ್‌ಮನ್‌ನನ್ನು ಔಟ್ ಎಂದು ಪರಿಗಣಿಸಬೇಕು ಎಂದು ಸಚಿನ್ ಹೇಳಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್ ದಾಖಲೆಯ 5 ಬ್ಯಾಟ್ಸ್‌ಮನ್‌ಗಳು

ಡಿಆರ್‌ಎಸ್ ವಿಧಾನವನ್ನು ಪ್ರಶ್ನಿಸಿ ತೆಂಡೂಲ್ಕರ್ ಟ್ವೀಟ್ ಮಾಡಿದ್ದಾರೆ. ಟ್ವೀಟ್‌ನಲ್ಲಿ, 'ಯಾವ ಶೇಕಡಾ ಆಧಾರದಲ್ಲಿ ಚೆಂಡು ಸ್ಟಂಪ್‌ಗೆ ಬಡಿಯಿತು ಅನ್ನೋದು ಮುಖ್ಯವಲ್ಲ. ಡಿಆರ್‌ಎಸ್‌ನಲ್ಲಿ ಚೆಂಡು ಸ್ಪಂಪ್‌ಗೆ ಬಡಿದಿದ್ದು ಕಂಡುಬಂದರೆ, ಆಲ್ ಫೀಲ್ಡ್ ಅಂಪೈರ್ ಕಾಲ್‌ಗೆ ಹೋಗುವ ಬದಲು ಬ್ಯಾಟ್ಸ್‌ಮನ್‌ ಔಟ್ ತೀರ್ಪು ನೀಡಬೇಕು' ಎಂದು ಸಚಿನ್ ಬರೆದುಕೊಂಡಿದ್ದಾರೆ.

ವಾರ್ನರ್ or ರೋಹಿತ್: ತನ್ನ ನೆಚ್ಚಿನ ಓಪನಿಂಗ್ ಪಾರ್ಟ್ನರ್ ಹೆಸರಿಸಿದ ರಾಯ್

ಟ್ವೀಟ್‌ನ ಮುಂದುವರೆದ ಭಾಗದಲ್ಲಿ, 'ಡಿಆರ್‌ಎಸ್‌ನಲ್ಲಿ ಈ ಬದಲಾವಣೆ ತಂದರೆ ತಂತ್ರಜ್ಞಾನವನ್ನು ನಾವು ಸ್ಫೂರ್ತಿದಾಯಕವಾಗಿ ಬಳಸಿದಂತಾಗುತ್ತದೆ. ನಮಗೆಲ್ಲರಿಗೂ ತಿಳಿದಿರುವಂತೆ ಮನುಷ್ಯರಂತೆ ತಂತ್ರಜ್ಞಾನಗಳೂ 100 ಶೇ. ಸರಿಯಲ್ಲ' ಎಂದು ಬರೆಯಲಾಗಿದೆ.

ಸಚಿನ್ ತೆಂಡೂಲ್ಕರ್ ಅವರ ಅಧಿಕೃತ ಟ್ವಿಟರ್ ಖಾತೆಯಲ್ಲಿ ಒಂದು ವೀಡಿಯೊ ಶೇರ್ ಮಾಡಲಾಗಿದೆ. ವೆಸ್ಟ್ ಇಂಡೀಸ್ ದಿಗ್ಗಜ ಬ್ರಿಯಾನ್ ಲಾರಾ ಮತ್ತು ಸಚಿನ್ ತೆಂಡೂಲ್ಕರ್, ಡಿಆರ್‌ಎಸ್ ಬಗ್ಗೆ ಚರ್ಚೆ ನಡೆಸಿದ್ದರ ವೀಡಿಯೋ ಅದು. ಈ ವೀಡಿಯೋ ಜೊತೆಗೆ ಸಚಿನ್ ಡಿಆರ್‌ಎಸ್ ಕುರಿತ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Monday, July 13, 2020, 10:01 [IST]
Other articles published on Jul 13, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X