ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಡಿಆರ್‌ಎಸ್ ವ್ಯವಸ್ಥೆ ಪರಿಶೀಲಿಸುವಂತೆ ಐಸಿಸಿ ಕೋರಿದ ಸಚಿನ್ ತೆಂಡೂಲ್ಕರ್

Sachin Tendulkar Asks ICC To Review The Current DRS System

ಸಿಡ್ನಿ: ಮನುಷ್ಯನಿಂದ ಕರಾರುವಕ್ಕಾಗಿ ನಿರ್ಧರಿಸಲು ಸಾಧ್ಯವಾಗದಾಗ ಸಹಾಯಕ್ಕಿರಲಿ ಎಂದು ಮನುಷ್ಯ ಯಂತ್ರದ ಮೊರೆ ಹೋಗಿದ್ದಾನೆ. ಹಾಗಂತ ಯಂತ್ರಗಳೂ ಪರಿಪೂರ್ಣ ಅಂತೇನೂ ಇಲ್ಲ. ಕೆಲವೊಮ್ಮೆ ಯಂತ್ರಗಳೂ ತಪ್ಪುವ ಸಾಧ್ಯತೆಗಳಿರುತ್ತವೆ. ಇದೇ ಕಾರಣಕ್ಕೆ ಕ್ರಿಕೆಟ್‌ನಲ್ಲಿನ ಡಿಸಿಶನ್ ರಿವ್ಯೂ ಸಿಸ್ಟಮ್ ಅನ್ನು ಪುನರ್ ಪರಿಶೀಲಿಸುವಂತೆ ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಅನ್ನು ಕೋರಿಕೊಂಡಿದ್ದಾರೆ.

ಐಸಿಸಿ ಟಿ20 ದಶಕದ ತಂಡದಲ್ಲಿ 4 ಭಾರತೀಯರು, 4 ಎಂಐ ಆಟಗಾರರು!ಐಸಿಸಿ ಟಿ20 ದಶಕದ ತಂಡದಲ್ಲಿ 4 ಭಾರತೀಯರು, 4 ಎಂಐ ಆಟಗಾರರು!

ಆನ್ ಫೀಲ್ಡ್ ಅಂಪೈರ್ ನಿರ್ಧಾರ ಸಮಾಧಾನ ತಾರದಿದ್ದಾಗ ಆಟಗಾರರು ಡಿಆರ್‌ಎಸ್ ಮೊರೆ ಹೋಗುತ್ತಾರೆ. ಕೆಲವೊಮ್ಮೆ ಡಿಆರ್‌ಎಸ್‌ನಲ್ಲೂ ಕೂಡ ಸರಿಯಾದ ತೀರ್ಪು ಸಿಕ್ಕಿಲ್ಲ ಎಂದು ವಿವಾದಗಳಾಗಿದ್ದಿದೆ. ಉದಾಹರಣೆಗೆ ಸದ್ಯ ನಡೆಯುತ್ತಿರುವ ಭಾರತ-ಆಸ್ಟ್ರೇಲಿಯಾ ಟೆಸ್ಟ್‌ ಸರಣಿಯಲ್ಲಿ ಆಸೀಸ್ ನಾಯಕ ಟಿಮ್ ಪೈನ್ ಅವರನ್ನು ರಿಷಭ್ ಪಂತ್ ಸ್ಟಂಪ್‌ ಮಾಡಲು ಯತ್ನಿಸಿದ್ದಾಗ ನಾಟೌಟ್ ತೀರ್ಪು ನೀಡಲಾಗಿತ್ತು.

ಐಸಿಸಿ ದಶಕದ ಟೆಸ್ಟ್ ತಂಡದಲ್ಲಿ ಇಬ್ಬರು ಟೀಮ್ ಇಂಡಿಯಾ ಆಟಗಾರರುಐಸಿಸಿ ದಶಕದ ಟೆಸ್ಟ್ ತಂಡದಲ್ಲಿ ಇಬ್ಬರು ಟೀಮ್ ಇಂಡಿಯಾ ಆಟಗಾರರು

ಮುಖ್ಯವಾಗಿ ಎಲ್‌ಬಿಡಬ್ಲ್ಯೂಗೆ ಸಂಬಂಧಿಸಿ ಡಿಆರ್‌ಎಸ್ ಕೇಳಲಾದಾಗ ಕೆಲವೊಮ್ಮೆ ಚೆಂಡು ಸ್ಟಂಪ್ ಬಡಿದಿದ್ದರೂ ಕೂಡ ಅಂಪೈರ್ ಕಾಲ್ ಎಂದು ಹೇಳಲಾಗುತ್ತದೆ. ಇಂಥ ಕಠಿಣ ಸಂದರ್ಭಗಳಿಗಾಗಿಯೇ ಡಿಆರ್‌ಎಸ್ ಪರಿಶೀಲನೆಯಾಗಬೇಕು ಎಂದು ಸಚಿನ್ ತೆಂಡೂಲ್ಕರ್ ಟ್ವೀಟ್ ಮೂಲಕ ಐಸಿಸಿಯನ್ನು ಕೇಳಿಕೊಂಡಿದ್ದಾರೆ.

'ಆನ್ ಫೀಲ್ಡ್ ಅಂಪೈರ್ ತೀರ್ಪು ಸಮಾಧಾನ ನೀಡದಿದ್ದಾಗ ಆಟಗಾರರು ಡಿಆರ್‌ಎಸ್ ಕೇಳುತ್ತಾರೆ. ಹೀಗಾಗಿ ಡಿಆರ್ಎಸ್ ವ್ಯವಸ್ಥೆಯನ್ನು ಐಸಿಸಿ ಕೂಲಂಕಷವಾಗಿ ಪರಿಶೀಲಿಸಬೇಕಾಗಿದೆ. ಮುಖ್ಯವಾಗಿ ಅಂಪೈರ್ಸ್ ಕಾಲ್ ಇದ್ದಾಗ,' ಎಂದು ಸಚಿನ್ ತೆಂಡೂಲ್ಕರ್ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

Story first published: Monday, December 28, 2020, 10:15 [IST]
Other articles published on Dec 28, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X