ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಮ್ ಇಂಡಿಯಾಗೆ ಮೊದಲ ಬಾರಿಗೆ ಆಯ್ಕೆಯಾದ ಆಟಗಾರರನ್ನು ಅಭಿನಂದಿಸಿದ ಸಚಿನ್ ತೆಂಡೂಲ್ಕರ್

Sachin Tendulkar congratulates Suryakumar, Ishan Kishan, Rahul Tewatia on Team India selection

ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಟೀಮ್ ಇಂಡಿಯಾ ತಂಡವನ್ನು ಪ್ರಕಟಿಸಲಾಗಿದ್ದು ಮೂವರು ಆಟಗಾರರು ಚೊಚ್ಚಲ ಕರೆಯನ್ನು ಸ್ವೀಕರಿಸಿದ್ದಾರೆ. ಕಳೆದ ಐಪಿಎಲ್‌ನಲ್ಲಿ ಶ್ರೇಷ್ಠ ಪ್ರದರ್ಶನವನ್ನು ನೀಡಿ ಮಿಂಚಿದ್ದ ಈ ಆಟಗಾರರು ಈಗ ರಾಷ್ಟ್ರೀಯ ತಂಡದಲ್ಲಿ ಅವಕಾಶವನ್ನು ಪಡೆದುಕೊಂಡಿದ್ದಾರೆ. ಇದಕ್ಕೆ ಮಾಜಿ ಕ್ರಿಕೆಟಿಗ ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ ಅಭಿನಂದನೆಯನ್ನು ಸಲ್ಲಿಸಿದ್ದಾರೆ.

ಐಪಿಎಲ್‌ನಲ್ಲಿ ಕಳೆದ ಹಲವು ಆವೃತ್ತಿಗಳಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿರುವ ಸೂರ್ಯಕುಮಾರ್ ಯಾದವ್ ಇಶಾನ್ ಕಿಶನ್ ಹಾಗೂ ರಾಜಸ್ಥಾನ್ ರಾಯಲ್ಸ್ ಪರವಾಗಿ ಆಲ್‌ರೌಂಡರ್ ಆಗಿ ಮಿಂಚಿದ್ದ ರಾಹುಲ್ ತವಾಟಿಯಾ ಇಂಗ್ಲೆಂಡ್ ವಿರುದ್ಧದ ಚುಟುಕು ಕ್ರಿಕೆಟ್ ಸರಣಿಗೆ ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ.

ವಿಜಯ್ ಹಜಾರೆ: ಒಡಿಶಾ ವಿರುದ್ಧ ರಾಬಿನ್ ಉತ್ತಪ್ಪ ಸ್ಫೋಟಕ ಶತಕವಿಜಯ್ ಹಜಾರೆ: ಒಡಿಶಾ ವಿರುದ್ಧ ರಾಬಿನ್ ಉತ್ತಪ್ಪ ಸ್ಫೋಟಕ ಶತಕ

"ಚೊಚ್ಚಲ ಬಾರೊಗೆ ಟೀಮ್ ಇಂಡಿಯಾದಿಂದ ಕರೆ ಸ್ವೀಕರಿಸಿರುವ ಇಶಾನ್ ಕಿಶನ್, ರಾಹುಲ್ ತೆವಾಟಿಯಾ ಹಾಗೂ ಸೂರ್ಯ ಕುಮಾರ್ ಯಾದವ್‌ಗೆ ಹೃದಯಸ್ಪರ್ಶಿ ಅಭಿನಂದನೆಗಳು. ಕಳೆದ ಆಸ್ಟ್ರೇಲಿಯಾ ವಿರುದ್ಧದ ಸರಣಿಯನ್ನು ತಪ್ಪಿಸಿಕೊಂಡಿದ್ದ ವರುಣ್ ಚಕ್ರವರ್ತಿ ಗೂ ಅಭಿನಂದನಂದನೆಗಳು. ಭಾರತವನ್ನು ಪ್ರತಿನಿಧಿಸುವುದು ಯಾವುದೇ ಕ್ರಿಕೆಟಿಗನಿಗೆ ದೊರೆಯುವ ಅತ್ಯುನ್ನತ ಗೌರವವಾಗಿದೆ. ನಿಮ್ಮೆಲ್ಲರಿಗೂ ಸಾಕಷ್ಟು ಯಶಸ್ಸು ದೊರೆಯಲಿ ಎಂದು ಆಶಿಸುತ್ತೇನೆ" ಎಂದು ಸಚಿನ್ ತೆಂಡೂಲ್ಕರ್ ಟ್ವೀಟ್ ಮೂಲಕ ಶುಭ ಹಾರೈಸಿದ್ದಾರೆ.

ಟೀಮ್ ಇಂಡಿಯಾ ಟಿ20 ತಂಡ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಕೆಎಲ್ ರಾಹುಲ್, ಶಿಖರ್ ಧವನ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಯುಜುವೇಂದ್ರ ಚಾಹಲ್, ವರುಣ್ ಚಕ್ರವರ್ತಿ, ಆಕ್ಷರ್ ಪಟೇಲ್, ವಾಶಿಂಗ್ಟನ್ ಸುಂದರ್, ರಾಹುಲ್ ತೆವಾಟಿಯಾ, ಟಿ ನಟರಾಜನ್, ಭುವನೇಶ್ವರ್ ಕುಮಾರ್, ದೀಪಕ್ ಚಹರ್, ನವದೀಪ್, ಶಾರ್ದುಲ್ ಠಾಕೂರ್.

Story first published: Sunday, February 21, 2021, 11:56 [IST]
Other articles published on Feb 21, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X