ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನ್ಯೂಜಿಲೆಂಡ್‌ನಲ್ಲಿ ರೋಹಿತ್‌ಗೆ ದೊಡ್ಡ ಸವಾಲಿನ ಸಂಗತಿಯೊಂದಿದೆ: ಸಚಿನ್

ರೋಹಿತ್ ಗೆ ಸಚಿನ್ ಹೇಳಿದ ಸವಾಲು ಯಾವುದು ಗೊತ್ತಾ..? | Oneindia Kannada
Sachin Tendulkar identifies big challenge for Rohit Sharma in New Zealand

ನವದೆಹಲಿ, ಜನವರಿ 21: ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯ ಮತ್ತು ಟೆಸ್ಟ್ ಸರಣಿಗಾಗಿ ಈ ವಾರದೊಳಗೆ ಭಾರತ ತಂಡ ಪ್ರಕಟಗೊಳ್ಳುವ ಸಾಧ್ಯತೆಯಿದೆ. ಶಿಖರ್ ಧವನ್ ಗಾಯಗೊಂಡು ಟಿ20ಐ ಸರಣಿಯಿಂದ ಈಗಾಗಲೇ ಹೊರ ಬಿದ್ದಿರುವುದರಿಂದ ಆರಂಭಿರಾಗಿ ಏಕದಿನ ಮತ್ತು ಟೆಸ್ಟ್‌ನಲ್ಲಿ ಧವನ್ ಆಡುತ್ತಾರೋ ಇಲ್ಲವೋ ಅನ್ನೋದು ಈಗಲೇ ಹೇಳುವಂತಿಲ್ಲ.

ಭಾರತ ವಿರುದ್ಧದ ಟಿ20ಐ ಸರಣಿಗೆ ಬಲಿಷ್ಠ ನ್ಯೂಜಿಲೆಂಡ್‌ ತಂಡ ಪ್ರಕಟಭಾರತ ವಿರುದ್ಧದ ಟಿ20ಐ ಸರಣಿಗೆ ಬಲಿಷ್ಠ ನ್ಯೂಜಿಲೆಂಡ್‌ ತಂಡ ಪ್ರಕಟ

ಒಂದು ವೇಳೆ ನ್ಯೂಜಿಲೆಂಡ್‌ ವಿರುದ್ಧದ ಏಕದಿನ ಮತ್ತು ಟೆಸ್ಟ್ ಸರಣಿ ವೇಳೆಯೂ 'ಗಬ್ಬರ್ ಸಿಂಗ್' ಧವನ್ ಚೇತರಿಸಿಕೊಳ್ಳದಿದ್ದರೆ, ಶಿಖರ್ ಅನುಪಸ್ಥಿತಿ ಕನ್ನಡಿಗ ಕೆಎಲ್ ರಾಹುಲ್ ಅಥವಾ ಪೃಥ್ವಿ ಶಾಗೆ ಅವಕಾಶ ಒದಗಿಸುವ ಸಾಧ್ಯತೆಯಿದೆ.

ಕೀವಿಸ್ ಸರಣಿಗೂ ಮುನ್ನ ಟೀಮ್ ಇಂಡಿಯಾದ ದೌರ್ಬಲ್ಯ ಬಹಿರಂಗ ಪಡಿಸಿದ ವಿರಾಟ್ ಕೊಹ್ಲಿ!ಕೀವಿಸ್ ಸರಣಿಗೂ ಮುನ್ನ ಟೀಮ್ ಇಂಡಿಯಾದ ದೌರ್ಬಲ್ಯ ಬಹಿರಂಗ ಪಡಿಸಿದ ವಿರಾಟ್ ಕೊಹ್ಲಿ!

ನ್ಯೂಜಿಲೆಂಡ್‌ ಸರಣಿ ಆರಂಭಕ್ಕೂ ಮುನ್ನ ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್, ನ್ಯೂಜಿಲೆಂಡ್‌ನಲ್ಲಿ ರೋಹಿತ್ ಶರ್ಮಾಗೆ ದೊಡ್ಡ ಸವಾಲೆನಿಸಬಲ್ಲ ಸಂಗತಿಯೊಂದರ ಬಗ್ಗೆ ಮಾತನಾಡಿದ್ದಾರೆ.

ಹಿಟ್‌ಮ್ಯಾನ್‌ಗೆ ಸವಾಲೆನಿಸಲಿದೆ

ಹಿಟ್‌ಮ್ಯಾನ್‌ಗೆ ಸವಾಲೆನಿಸಲಿದೆ

ಸಚಿನ್ ಪ್ರಕಾರ ರೋಹಿತ್ ಶರ್ಮಾಗೆ ನ್ಯೂಜಿಲೆಂಡ್‌ನಲ್ಲಿ ಆರಂಭಿಕರಾಗಿ ಬ್ಯಾಟಿಂಗ್‌ ಮಾಡೋದು ಕೊಂಚ ಸವಾಲೆನಿಸಲಿದೆಯಂತೆ. ಮುಖ್ಯವಾಗಿ ಟೆಸ್ಟ್‌ನಲ್ಲಿ ರೋಹಿತ್‌ಗೆ ಓಪನರ್ ಆಗಿ ಆಡೋದು ಚಾಲೆಂಜಿಂಗ್ ಎನಿಸಲಿದೆ. ಆದರೆ ರೋಹಿತ್‌ಗಿರುವ ಆಟದ ಅನುಭವ ಇದನ್ನು ಸರಿದೂಗಿಸಿಕೊಳ್ಳಬಲ್ಲದು ಎಂದು ತೆಂಡೂಲ್ಕರ್ ಅಭಿಪ್ರಾಯಿಸಿದ್ದಾರೆ.

ಜನವರಿ 24ರಿಂದ ಸರಣಿ ಆರಂಭ

ಜನವರಿ 24ರಿಂದ ಸರಣಿ ಆರಂಭ

ನ್ಯೂಜಿಲೆಂಡ್‌ಗೆ ಪ್ರವಾಸ ಕೈಗೊಳ್ಳುತ್ತಿರುವ ವಿರಾಟ್ ಕೊಹ್ಲಿ ಪಡೆ ಅಲ್ಲಿ ಸುಮಾರು ಒಂದು ತಿಂಗಳಿಗೂ ಹೆಚ್ಚು ಕಾಲ 5 ಟಿ20ಐ, 3 ಏಕದಿನ ಮತ್ತು 2 ಟೆಸ್ಟ್ ಪಂದ್ಯಗಳಲ್ಲಿ ಪಾಲ್ಗೊಳ್ಳಲಿದೆ. ಜನವರಿ 24ರಿಂದ ಟಿ20 ಸರಣಿಯೊಂದಿಗೆ ನ್ಯೂಜಿಲೆಂಡ್ ಪ್ರವಾಸ ಪಂದ್ಯಗಳು ಆರಂಭಗೊಳ್ಳಲಿವೆ. ಟಿ20 ಬಳಿಕ ಏಕದಿನ ಮತ್ತು ಟೆಸ್ಟ್ ಸರಣಿಗಳು ನಡೆಯಲಿವೆ.

ಅಲ್ಲಿನ ಪರಿಸ್ಥಿತಿಗಳು ಚೆನ್ನಾಗಿ ಗೊತ್ತಿದೆ

ಅಲ್ಲಿನ ಪರಿಸ್ಥಿತಿಗಳು ಚೆನ್ನಾಗಿ ಗೊತ್ತಿದೆ

'ವಿಭಿನ್ನ ಪರಿಸ್ಥಿತಿಗಳಲ್ಲಿ ಆರಂಭಿಕಾಗಿ ಆಡೋದೇ ಕೊಂಚ ಸವಾಲಿನ ಸಂಗತಿ. ನ್ಯೂಜಿಲೆಂಡ್‌ನಲ್ಲಿ ರೋಹಿತ್ ಕೆಲ ಏಕದಿನ ಪಂದ್ಯಗಳಲ್ಲಿ ಆರಂಭಿಕರಾಗಿ ಆಡಿದ ಅನುಭವ ಹೊಂದಿದ್ದಾರೆ. ಹೀಗಾಗಿ ಅವರಿಗೆ ಅಲ್ಲಿನ ಪರಿಸ್ಥಿತಿಗಳು ಚೆನ್ನಾಗಿ ಗೊತ್ತಿದೆ,' ಎಂದು ಸಚಿನ್ ಪಿಟಿಐ ಜೊತೆ ಮಾತನಾಡುತ್ತ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಗ್ರೀನ್‌ ಟಾಪ್‌ ಪಿಚ್ ಇದ್ದರೆ ಕಷ್ಟ

ಗ್ರೀನ್‌ ಟಾಪ್‌ ಪಿಚ್ ಇದ್ದರೆ ಕಷ್ಟ

ನ್ಯೂಜಿಲೆಂಡ್‌ನ ಪಿಚ್‌ ಮುಖ್ಯವಾಗಿ ರೋಹಿತ್‌ಗೆ ಟೆಸ್ಟ್‌ನಲ್ಲಿ ಹೆಚ್ಚು ಸವಾಲೊಡ್ಡಲಿದೆ. ಆದರೆ ಇದು ಅಲ್ಲಿನ ಪಿಚ್‌ನ ಮೇಲ್ಪದರವನ್ನವಲಂಭಿಸಿರಲಿದೆ. ಒಂದುವೇಳೆ ಅಲ್ಲಿ ಅವರು ಗ್ರೀನ್‌ ಮೇಲ್ಪದರದ ಪಿಚ್‌ಗಳನ್ನು ಒದಗಿಸಿದರೆ, ಅದು ಖಂಡಿತಾ ರೋಹಿತ್‌ಗೆ ಚಾಲೆಂಜ್‌ ಎನಿಸಲಿದೆ,' ಎಂದು ಸಚಿನ್ ವಿವರಿಸಿದರು.

Story first published: Tuesday, January 21, 2020, 18:36 [IST]
Other articles published on Jan 21, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X