ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ತೆಂಡೂಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಅಂಗಣಕ್ಕಿಳಿದು ಇಂದಿಗೆ 30 ವರ್ಷ!

Sachin Tendulkar , a 16 year old boy made his debut today | Oneindia Kannada
Sachin Tendulkar ignited hope in a world where there was little

ನವದೆಹಲಿ, ನವೆಂಬರ್ 15: ಕ್ರಿಕೆಟ್‌ ಜಗತ್ತಿಗೆ ಸಚಿನ್ ತೆಂಡೂಲ್ಕರ್ ಪರಿಚಯವಾಗಿ ಇಂದಿಗೆ ಸುಮಾರು 30 ವಸಂತಗಳು ಕಳೆದಿದೆ. 1989ರ ನವೆಂಬರ್ 15ರಂದು ತೆಂಡೂಲ್ಕರ್, ಪಾಕಿಸ್ತಾನದ ಕರಾಚಿಯಲ್ಲಿ ಆತಿಥೇಯ ಪಾಕಿಸ್ತಾನ ವಿರುದ್ಧದ ಮೊದಲನೇ ಟೆಸ್ಟ್ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು (ಚಿತ್ರಕೃಪೆ: ಇಎಸ್‌ಪಿಎನ್ ಕ್ರಿಕ್ ಇನ್ಫೋ).

ಐಪಿಎಲ್ 2020: ತಂಡ ಬಿಟ್ಟು ಮತ್ತೊಂದು ತಂಡ ಸೇರಿದ ಎಲ್ಲಾ ಆಟಗಾರ ಪಟ್ಟಿ!ಐಪಿಎಲ್ 2020: ತಂಡ ಬಿಟ್ಟು ಮತ್ತೊಂದು ತಂಡ ಸೇರಿದ ಎಲ್ಲಾ ಆಟಗಾರ ಪಟ್ಟಿ!

ಕರಾಚಿಯ ನ್ಯಾಚನಲ್ ಸ್ಟೇಡಿಯಂನಲ್ಲಿ ಸಚಿನ್ ಆಟಕ್ಕಿಳಿಯುವಾಗ ಅವರಿಗಿನ್ನೂ 16ರ ಹರೆಯ. ಆರಂಭಿಕ ಪಂದ್ಯದಲ್ಲಿ ಸಚಿನ್ 15ರನ್‌ ಬಾರಿಸಿದ್ದರು. ಅದಾಗಿ ತೆಂಡೂಲ್ಕರ್ ಕ್ರಿಕೆಟ್ ಜಗತ್ತಿನಲ್ಲಿ ಬೆಳೆದುನಿಂತ ಪರಿಯೇ ಬೆರಗು ಮೂಡಿಸುವಂತಿತ್ತು. ಕ್ರಿಕೆಟ್ ಆಟದ ಮೂಲಕ ಸಚಿನ್ ವಿಶ್ವದಗಲ ಭಾರತದ ಹೆಸರನ್ನು ಮಿನುಗಿಸಿದ್ದರು.

ವಾಕರ್ ಯೂನಿಸ್ ಪಾದಾರ್ಪಣೆ

ವಾಕರ್ ಯೂನಿಸ್ ಪಾದಾರ್ಪಣೆ

1989 ನವೆಂಬರ್ 15ರ ಇದೇ ದಿನ, ಇದೇ ಪಂದ್ಯದಲ್ಲಿ ಪಾಕಿಸ್ತಾನದ ಶಾಹಿದ್ ಸಾಯೆದ್, ವಾಕರ್ ಯೂನಿಸ್ ಪಾದಾರ್ಪಣೆ ಮಾಡಿದ್ದರು. ಅಲ್ಲದೆ ಭಾರತದಿಂದ ಸಲಿಲ್ ಅಂಕೋಲಾ ಮತ್ತು ತೆಂಡೂಲ್ಕರ್ ಚೊಚ್ಚಲ ಟೆಸ್ಟ್ ಪಂದ್ಯಕ್ಕಾಗಿ ಮೈದಾನಕ್ಕಿಳಿದಿದ್ದರು. ಹೀಗಾಗಿ ಈ ನಾಲ್ವರ ಪಾಲಿಗೂ ಪ್ರತೀ ನವೆಂಬರ್ 15 ವಿಶೇಷ ದಿನವೆ.

ಇಮ್ರಾನ್ ಖಾನ್ ಶತಕ

ಇಮ್ರಾನ್ ಖಾನ್ ಶತಕ

ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಪಾಕಿಸ್ತಾನ ಮೊದಲ ಇನ್ನಿಂಗ್ಸ್‌ನಲ್ಲಿ ನಾಯಕ ಇಮ್ರಾನ್ ಖಾನ್ ಶತಕದೊಂದಿಗೆ (109) 409 ರನ್, ದ್ವಿತೀಯ ಇನ್ನಿಂಗ್ಸ್‌ನಲ್ಲಿ ಸಲೀಮ್ ಮಲಿಕ್ 102, ಶೋಯೆಬ್ ಮೊಹಮ್ಮದ್ 95 ರನ್‌ನೊಂದಿಗೆ 305 ರನ್ ಮಾಡಿತ್ತು.

ಪಂದ್ಯ ಡ್ರಾದೊಂದಿಗೆ ಅಂತ್ಯ

ಪಂದ್ಯ ಡ್ರಾದೊಂದಿಗೆ ಅಂತ್ಯ

ಗುರಿ ಬೆನ್ನತ್ತಿದ್ದ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ಕಪಿಲ್ ದೇವ್ 55, ಕಿರಣ್ ಮೋರೆ 58 ರನ್‌ನೊಂದಿಗೆ 262 ರನ್, ದ್ವಿತೀಯ ಇನ್ನಿಂಗ್ಸ್‌ನಲ್ಲಿ ಸಂಜಯ್ ಮಂಜ್ರೇಕರ್ ಅಜೇಯ 113 ರನ್ ನೊಂದಿಗೆ 96 ಓವರ್‌ಗೆ 3 ವಿಕೆಟ್ ನಷ್ಟದಲ್ಲಿ 303 ರನ್ ಬಾರಿಸಿದ್ದರಿಂದ ಪಂದ್ಯ ಡ್ರಾ ಎನಿಸಿತ್ತು.

ಅಂತಾರಾಷ್ಟ್ರೀಯ 100 ಶತಕಗಳು

ಅಂತಾರಾಷ್ಟ್ರೀಯ 100 ಶತಕಗಳು

ಲಿಟ್ಲ್ ಮಾಸ್ಟರ್ ತೆಂಡೂಲ್ಕರ್ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ್ದು 2013ರಲ್ಲಿ ಮುಂಬೈನಲ್ಲಿ ವೆಸ್ಟ್ ಇಂಡೀಸ್‌ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದ ಮೂಲಕ. ಆ ಕೊನೇ ಇನ್ನಿಂಗ್ಸ್‌ನಲ್ಲಿ ಸಚಿನ್ 74 ರನ್ ಬಾರಿಸಿದ್ದರು. ಅಂದ್ಹಾಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಶತಕಗಳನ್ನು ಬಾರಿಸಿರುವ ಅಪರೂಪದ ಬ್ಯಾಟ್ಸ್‌ಮನ್ ತೆಂಡೂಲ್ಕರ್.

Story first published: Friday, November 15, 2019, 11:39 [IST]
Other articles published on Nov 15, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X