ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೆಲಸ ಕಳೆದುಕೊಂಡಿದ್ದ ಜೂನಿಯರ್ ಸಚಿನ್‌ ತೆಂಡೂಲ್ಕರ್‌ಗೆ ಕೊರೊನಾ ಪಾಸಿಟಿವ್

Sachin Tendulkar lookalike Balvir Chand tests positive for COVID-19

ಮುಂಬೈ: ಕಷ್ಟ ಬಂದವರಿಗೇನೇ ಸಾಲು ಸಾಲಾಗಿ ಕಷ್ಟಗಳು ಬರುತ್ತವೆ ಅಂತಾರಲ್ಲ? ಜೂನಿಯರ್ ಸಚಿನ್‌ ತೆಂಡೂಲ್ಕರ್‌ ಕತೆ ಕೂಡ ಹೀಗೇ ಆಗಿದೆ. ಕಳೆದ ಹಲವಾರು ವರ್ಷಗಳಿಂದ ಕ್ರಿಕೆಟ್ ಅಭಿಮಾನಿಗಳಲ್ಲಿ 'ಜೂನಿಯರ್ ಸಚಿನ್ ತೆಂಡೂಲ್ಕರ್' ಎಂದೇ ಕರೆಸಿಕೊಳ್ಳುತ್ತಿದ್ದ, ನೋಡೋಕೆ ಥೇಟ್ ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಹಾಗೇನೆ ಕಾಣಿಸುತ್ತಿದ್ದ ಬಲ್ವೀರ್ ಚಂದ್‌ಗೆ ಮಹಾಮಾರಿ ಕೊರೊನಾವೈರಸ್ ಸೋಕಿದೆ.

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹಿಂದಿಕ್ಕಿದ ಕನ್ನಡಿಗ ರಾಹುಲ್ ದ್ರಾವಿಡ್!ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹಿಂದಿಕ್ಕಿದ ಕನ್ನಡಿಗ ರಾಹುಲ್ ದ್ರಾವಿಡ್!

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರನ್ನೇ ಹೋಲುತ್ತಿದ್ದರಿಂದ ಕಳೆದ ಎರಡು ದಶಕಗಳಲ್ಲಿ ಬಲ್ವೀರ್ ಚಂದ್ ಹೇಗೋ ವಾಣಿಜ್ಯ ಕ್ಷೇತ್ರಕ್ಕೆ ಪ್ರವೇಶ ಗಿಟ್ಟಿಸಿಕೊಂಡಿದ್ದರು.

ಕೆರಿಬಿಯನ್ ಪ್ರೀಮಿಯರ್ ಲೀಗ್ ಆಟಗಾರರ ಪಟ್ಟಿಯಲ್ಲಿ ಇಬ್ಬರು ಭಾರತೀಯರು!ಕೆರಿಬಿಯನ್ ಪ್ರೀಮಿಯರ್ ಲೀಗ್ ಆಟಗಾರರ ಪಟ್ಟಿಯಲ್ಲಿ ಇಬ್ಬರು ಭಾರತೀಯರು!

ಆದರೆ ಕೋವಿಡ್ 19 ಪಿಡುಗು ಬಲ್ವೀರ್ ಅವರ ಉದ್ಯೋಗ ಕಸಿದುಕೊಂಡಿದೆ. ಜೊತೆಗೆ ಬಲ್ವೀರ್‌ಗೆ ಈಗ ಮಾರಕ ಸೋಂಕು ಕೂಡ ತಗುಲಿದೆ.

ಪ್ರಚಾರ ರಾಯಭಾರಿಯಾಗಿದ್ದರು

ಪ್ರಚಾರ ರಾಯಭಾರಿಯಾಗಿದ್ದರು

50 ವರ್ಷ ಹರೆಯದವರಾಗಿರುವ ಬಲ್ವೀರ್ ಚಂದ್, ಮುಂಬೈಯಲ್ಲಿನ ಒಂದು ಫುಡ್ ಚೈನ್ ಕಂಪನಿಯ ಪ್ರಚಾರ ರಾಯಭಾರಿಯಾಗಿದ್ದರು. ಕೊರೊನಾವೈರಸ್‌ನಿಂದಾಗಿ ಆರ್ಥಿಕ ಸಮಸ್ಯೆಯಿಂದ ಬಲ್ವೀರ್ ಅವರನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಉದ್ಯೋಗ ಕಳೆದುಕೊಂಡ ಬಲ್ವೀರ್ ಈ ತಿಂಗಳ ಆರಂಭದಲ್ಲಿ ಪಂಜಾಬ್‌ನ ತನ್ನೂರಿಗೆ ತಲುಪಿದ್ದರು. ಅಷ್ಟರಲ್ಲಾಗಲೆ ಚಂದ್‌ ಅವರನ್ನು ಕೊರೊನಾ ಆವರಿಸಿಕೊಂಡಿತ್ತು.

ಕೆಲಸ ಬಿಡುವಂತೆ ಕೇಳಿಕೊಂಡರು

ಕೆಲಸ ಬಿಡುವಂತೆ ಕೇಳಿಕೊಂಡರು

'ಕೊರೊನಾವೈರಸ್ ಲಾಕ್‌ಡೌನ್‌ನಿಂದಾಗಿ ನಾನಿದ್ದ ಕಂಪನಿ (ಗೋಲಿ ವಡಾಪಾವ್ ನಂ.1) ವ್ಯವಹಾರ ಕಳೆದುಕೊಂಡಿತು. ಹೀಗಾಗಿ ಕಂಪನಿ ಬಹಳಷ್ಟು ಸಿಬ್ಬಂದಿಯನ್ನು ಮನೆಗೆ ಕಳುಹಿಸಿತು. ಕೆಲಸ ಬಿಡುವಂತೆ ನನ್ನನ್ನೂ ಕೇಳಿಕೊಳ್ಳಲಾಯಿತು. ಪರಿಸ್ಥಿತಿ ಸುಧಾರಣೆಯಾದಾಗ ಮತ್ತೆ ಕೆಲಸಕ್ಕೆ ಕರೆಸಿಕೊಳ್ಳುವುದಾಗಿ ಕಂಪನಿ ಹೇಳಿದೆ,' ಎಂದು ಹಿಂದುಸ್ತಾನ್ ಟೈಮ್ಸ್ ಜೊತೆ ಮಾತನಾಡಿದ ಚಂದ್ ಹೇಳಿದ್ದಾರೆ.

ಗ್ರಾಮ ತಲುಪುತ್ತಲೇ ಕೊರೊನಾ ಆಘಾತ

ಗ್ರಾಮ ತಲುಪುತ್ತಲೇ ಕೊರೊನಾ ಆಘಾತ

ಸದ್ಯ ತನ್ನ ಕುಟುಂಬದೊಂದಿಗೆ ಇರುವ ಬಲ್ವೀರ್ ಚಂದ್‌, ಮುಂಬೈ ತೊರೆದು ಅವರ ಗ್ರಾಮವಾದ ಸಲ್ಹೋನ್‌ಗೆ ತಲುಪುವಾಗಲೇ ಅವರಿಗೆ ಕೊರೊನಾವೈರಸ್ ಪಾಸಿಟಿವ್ ಬಂದಿತ್ತು. ಈ ವಾರ ಬಲ್ವೀರ್‌ ಅವರಲ್ಲಿ ಅವರಿದ್ದ ಐಸೊಲೇಶನ್ ವಾರ್ಡ್‌ನಿಂದ ಹೊರ ಹೋಗುವಂತೆ ಹೇಳಲಾಗಿತ್ತು.

ಫೇಮಸ್ ಆಗಿದ್ದು ಹೇಗೆ?

ಫೇಮಸ್ ಆಗಿದ್ದು ಹೇಗೆ?

1999ರ ವೇಳೆ ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಕಣ್ಣಿಗೆ ಬಿದ್ದಿದ್ದ ಬಲ್ವೀರ್ ಚಂದ್ ಅವರನ್ನು ಗವಾಸ್ಕರ್ ಟೆಸ್ಟ್ ಪಂದ್ಯವೊಂದರ ವೇಳೆ ಕಾಮೆಂಟರಿ ಬಾಕ್ಸ್‌ಗೆ ಆಹ್ವಾನಿಸಿದ್ದರು. ಆ ಬಳಿಕ ಗವಾಸ್ಕರ್ ಚಂದ್ ಅವರನ್ನು ಕರೆದೊಯ್ದು ಸಚಿನ್ ಗೆ ಪರಿಚರಿಸಿದರು. ಆವತ್ತು ಚಂದ್, ಸಚಿನ್ ಅವರಲ್ಲಿ ತನ್ನ ಆರು ಫೋಟೋಗಳ ಮೇಲೆ ಆಟೋಗ್ರಾಫ್ ಹಾಕುವಂತೆ ಕೇಳಿಕೊಂಡಿದ್ದರಂತೆ. ಸಿಗ್ನೇಚರ್ ಹಾಕುತ್ತ ಸಚಿನ್, 'ಇದು ನಿಮ್ಮ ಫೋಟೋ ಅಲ್ಲ, ನನ್ನದು,' ಅಂತ ನಕ್ಕಿದ್ದರಂತೆ.

Story first published: Friday, June 26, 2020, 9:46 [IST]
Other articles published on Jun 26, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X