ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

WTC Final: ಯಾವ ಎದುರಾಳಿಯೂ ಆತನ ಮುಖ ನೋಡಲು ಬಯಸುವುದಿಲ್ಲ: ಸಚಿನ್ ತೆಂಡೂಲ್ಕರ್

Sachin Tendulkar praises Rishabh pant said No opposition would like to see his face
WTC ಟೈಮ್ನಲ್ಲಿ Sachin Tendulkar ಹೇಳಿದ್ದು ಸರೀನಾ!! | Oneinida Kannada

ವಿಶ್ವ ಕ್ರಿಕೆಟ್‌ನ ದಿಗ್ಗಜ ಆಟಗಾರ, ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಭಾರತದ ಯುವ ಆಟಗಾರನ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ವಿಶೇಷ ಸಾಮರ್ಥ್ಯವನ್ನು ಹೊಂದಿರುವ ಆಟಗಾರ, ಯಾವ ಎದುರಾಳಿಯೂ ಅಂಗಳದಲ್ಲಿ ಆತನ ಮುಖ ನೋಡಲು ಬಯಸುವುದಿಲ್ಲ ಎಂದು ಹೇಳಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ ಪಂದ್ಯದ ಹಿನ್ನೆಲೆಯಲ್ಲಿ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.

ಕ್ರಿಕೆಟ್‌ನ ದೇವರು ಎಂದು ಕರೆಸಿಕೊಳ್ಳುವ ಸಚಿನ್ ತೆಂಡೂಲ್ಕರ್‌ರಿಂದ ಈ ಪ್ರಮಾಣದ ಮೆಚ್ಚುಗೆಯನ್ನು ಗಳಿಸಿದ ಆಟಗಾರ ಬೇರೆ ಯಾರೂ ಅಲ್ಲ, ಅದು ರಿಷಭ್ ಪಂತ್. ಟೆಸ್ಟ್ ಕ್ರಿಕೆಟ್‌ನಲ್ಲಿ ರಿಷಭ್ ಪಂತ್ ಭಾರತದ ಪಾಲಿಗೆ ಎಕ್ಸ್‌ಫ್ಯಾಕ್ಟರ್ ಎನಿಸಿಕೊಂಡಿದ್ದಾರೆ. ಅವರ ಮುಖವನ್ನು ಅಂಗಳದಲ್ಲಿ ಹೆಚ್ಚಿನ ತಂಡಗಳು ನೋಡಲು ಬಯಸುವುದಿಲ್ಲ ಎಂದು ಸಚಿನ್ ತೆಂಡೂಲ್ಕರ್ ಹೇಳಿಕೆ ನೀಡಿದ್ದಾರೆ. ರಿಷಭ್ ಪಂತ್ ಅವರ ಶೈಲಿ ಆರಂಭದಲ್ಲಿ ಬೇಜವಾಬ್ಧಾರಿಯುತ ಆಟದಂತೆ ವ್ಯಕ್ತವಾಗುತ್ತಿತ್ತು. ಆದರೆ ಪ್ರತಿ ಆಟಗಾರನಿಗೂ ಆತನದ್ದೇ ಆದ ಶೈಲಿಯಿದೆ ಎಂದು ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.

WTC Finalನಿಂದ ನ್ಯೂಜಿಲೆಂಡ್ ಆಲ್ ರೌಂಡರ್ ಮಿಚೆಲ್ ಸ್ಯಾಂಟ್ನರ್ ಹೊರಕ್ಕೆWTC Finalನಿಂದ ನ್ಯೂಜಿಲೆಂಡ್ ಆಲ್ ರೌಂಡರ್ ಮಿಚೆಲ್ ಸ್ಯಾಂಟ್ನರ್ ಹೊರಕ್ಕೆ

ಕೆಲವೇ ಗಂಟೆಗಳಲ್ಲಿ ಪಂದ್ಯದ ಗತಿ ಬದಲಾಯಿಸಬಲ್ಲ

ಕೆಲವೇ ಗಂಟೆಗಳಲ್ಲಿ ಪಂದ್ಯದ ಗತಿ ಬದಲಾಯಿಸಬಲ್ಲ

ಟೆಸ್ಟ್ ಕ್ರಿಕೆಟ್‌ನಲ್ಲಿ ಮುನ್ನುಗ್ಗುತ್ತಿರುವ ರೀತಿಯನ್ನು ನೋಡಿದರೆ ರಿಷಭ್ ಪಂತ್ ಆಟದಲ್ಲಿ ಗಿಲ್‌ಕ್ರಿಸ್ಟ್ ಅವರ ಬಿಂಬ ಕಾಣಿಸುತ್ತಿದೆ. ಈ ಯುವ ಆಟಗಾರ ಪಂದ್ಯವನ್ನು ಕೆಲವೇ ಗಂಟೆಗಳಲ್ಲಿ ಭಾರತದತ್ತ ತಿರುಗಿಸುವ ವಿಶೇಷ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಸಚಿನ್ ತೆಂಡೂಲ್ಕರ್ ಪಂತ್ ವಿಚಾರವಾಗಿ ಮುಕ್ತವಾಗಿ ಮಾತನಾಡಿದ್ದಾರೆ.

ಆಸ್ಟ್ರೇಲಿಯಾ ಪ್ರವಾಸದಲ್ಲಿ ಪಂತ್ ಅಬ್ಬರ

ಆಸ್ಟ್ರೇಲಿಯಾ ಪ್ರವಾಸದಲ್ಲಿ ಪಂತ್ ಅಬ್ಬರ

ರಿಷಭ್ ಪಂತ್ ಕಳೆದ ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಿಂದ ಹೊರಗುಳಿದಿದ್ದರು. ನಂತರ ಅವಕಾಶವನ್ನು ಪಡೆದ ಪಂತ್ ತಮ್ಮ ಲಯವನ್ನು ಕಂಡುಕೊಂಡರು. ಅದರಲ್ಲೂ ಅಂತಿಮ ಎರಡು ಪಂದ್ಯಗಳಲ್ಲಿ ರಿಷಭ್ ಪಂತ್ ನೀಡಿದ ಕೆಚ್ಚೆದೆಯ ಪ್ರದರ್ಶನ ಆಸಿಸ್ ನೆಲದಲ್ಲಿ ಭಾರತ ಇತಿಹಾಸ ಬರೆಯಲು ಕಾರಣವಾಗಿತ್ತು. ಇದೇ ಪ್ರದರ್ಶನವನ್ನು ಪಂತ್ ಭಾರತದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿಯೂ ಮುಂದುವರಿಸುವಲ್ಲಿ ಯಶಸ್ವಿಯಾಗಿದ್ದರು.

ಔಟಾದ ರೀತಿಗೆ ಟೀಕಿಸುವುದು ಸರಿಯಲ್ಲ

ಔಟಾದ ರೀತಿಗೆ ಟೀಕಿಸುವುದು ಸರಿಯಲ್ಲ

ಇನ್ನು ಇದೇ ಸಂದರ್ಭದಲ್ಲಿ ರಿಷಬ್ ಪಂತ್ ಹೇಗೆ ಔಟಾದರು ಎಂಬುದನ್ನು ಬೊಟ್ಟು ಮಾಡುವುದು ನ್ಯಾಯವಲ್ಲ. ಕ್ರಿಕೆಟ್‌ನ ಅತ್ಯುನ್ನತ ಮಟ್ಟದಲ್ಲಿ ತಮ್ಮದೇ ಆದ ಶೈಲಿಯಲ್ಲಿ ರನ್‌ಗಳಿಸುವುದು ಬಹಳ ಪ್ರಮುಖವಾಗಿರುತ್ತದೆ ಎಂದು ಸಚಿನ್ ತೆಂಡೂಲ್ಕರ್ ಹೇಳಿಕೆ ನೀಡಿದ್ದಾರೆ.

ಪೂಜಾರ ಹಾಗೂ ಪಂತ್ ಇಬ್ಬರ ಶೈಲಿ ವಿಭಿನ್ನ

ಪೂಜಾರ ಹಾಗೂ ಪಂತ್ ಇಬ್ಬರ ಶೈಲಿ ವಿಭಿನ್ನ

"ತುಂಬಾ ಜನರು ಬೇಜವಾಬ್ಧಾರಿಯುತ ಹೊಡೆತಗಳಿಗಾಗಿ ರಿಷಭ್ ಪಂತ್ ಅವರನ್ನು ಟೀಕಿಸಿದ್ದು ನನಗೆ ನೆನಪಿದೆ. ಇದೇ ಸಂದರ್ಭದಲ್ಲಿ ಪೂಜಾರ ಅವರನ್ನು ಪಂತ್ ಜೊತೆಗೆ ಹೋಲಿಕೆ ಮಾಡುವುದನ್ನು ಕೂಡ ಬಯಸುವುದಿಲ್ಲ. ಪಂತ್‌ರನ್ನು ಪೂಜಾರ ಅವರೊಂದಿಗೆ ಹೋಲಿಕೆ ಮಾಡಬಾರದು. ಯಾಕೆಂದರೆ ಅವರಿಬ್ಬರೂ ವಿಭಿನ್ನ ರೀತಿಯಲ್ಲಿ ರನ್ ಗಳಿಸುವ ಆಟಗಾರರು. ರಿಷಭ್ ಪಂತ್ ದೊಡ್ಡ ಹೊಡೆತಗಳನ್ನು ಬಾರಿಸಲು ಮುಂದಾಗಿ ಔಟಾಗಬಹುದು. ಹಾಗೆಯೇ ಪೂಜಾರ ರಕ್ಷಣಾತ್ಮಕ ಆಟದಿಂದ ವಿಕೆಟ್ ಕಳೆದುಕೊಳ್ಳಬಹುದು. ಈ ಇಬ್ಬರು ಆಟಗಾರರು ಕೂಡ ತಮ್ಮದೇ ರೀತಿಯ ಮೂಲಕ ರನ್ ಗಳಿಸುತ್ತಾರೆ. ಹಾಗಾಗಿ ಅದು ಸಂಗತಿಯಾಗುವುದಿಲ್ಲ" ಎಂದು ಸಚಿನ್ ತೆಂಡೂಲ್ಕರ್ ಹೇಳಿಕೆ ನೀಡಿದ್ದಾರೆ.

Story first published: Wednesday, June 16, 2021, 14:36 [IST]
Other articles published on Jun 16, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X