ಭಾರತ 2011ರ ವಿಶ್ವಕಪ್‌ ಗೆದ್ದಾಗ ಕೊಹ್ಲಿ, ಪಠಾಣ್‌ರಲ್ಲಿ ಸಚಿನ್ ಹೇಳಿದ್ದೇನು ಗೊತ್ತಾ?!

ನವದೆಹಲಿ: ಸುವಾನ್ ಕುಲಸೇಕರ ಎಸೆತಕ್ಕೆ ನಾಯಕ ಎಂಎಸ್ ಧೋನಿ ಸಿಕ್ಸ್ ಚಚ್ಚುತ್ತಲೇ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಯಾಕೆಂದರೆ ಅದು ಕ್ರಿಕೆಟ್‌ ಇತಿಹಾಸದಲ್ಲಿ ಭಾರತ ತಂಡ ಎರಡನೇ ವಿಶ್ವಕಪ್‌ ಗೆದ್ದ ಕ್ಷಣವಾಗಿತ್ತು. ಏಪ್ರಿಲ್ 2ರಂದು ಮುಂಬೈಯ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದಿದ್ದ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಟೀಮ್ ಇಂಡಿಯಾ 6 ವಿಕೆಟ್‌ಗಳ ಭರ್ಜರಿ ಜಯ ಗಳಿಸಿತ್ತು.

ಮೊಹಮ್ಮದ್ ಆಮೀರ್ ಐಪಿಎಲ್ ಹೆಸರಿನಲ್ಲಿ ಬ್ಲ್ಯಾಕ್‌ಮೇಲ್ ಮಾಡ್ತಾ ಇದ್ದಾನೆ ಎಂದ ಪಾಕ್ ಮಾಜಿ ಕ್ರಿಕೆಟಿಗ

ಟೀಮ್ ಇಂಡಿಯಾ ಎರಡನೇ ವಿಶ್ವಕಪ್‌ ಗೆಲ್ಲುತ್ತಲೇ 'ಕ್ರಿಕೆಟ್ ದೇವರು' ಸಚಿನ್ ತೆಂಡೂಲ್ಕರ್ ಅವರನ್ನು ವಿರಾಟ್ ಕೊಹ್ಲಿ ಮತ್ತು ಯೂಸುಫ್ ಪಠಾಣ್‌ ಎತ್ತಿದ್ದರು. ಕೊಹ್ಲಿ-ಪಠಾಣ್ ಜೊತೆಗೆ ಸುರೇಶ್ ರೈನಾ, ಹರ್ಭಜನ್ ಸಿಂಗ್ ಮೊದಲಾದವರು ಕೂಡ ಸಚಿನ್ ಎತ್ತಲು ಹೆಗಲು ನೀಡಿದ್ದರು.

ಬದುಕಿನ ಅಪೂರ್ವ ಕ್ಷಣವದು

ಬದುಕಿನ ಅಪೂರ್ವ ಕ್ಷಣವದು

'1983ರಲ್ಲಿ ಭಾರತದ ನಾಯಕ ಕಪಿಲ್ ದೇವ್ ಅವರು ವಿಶ್ವಕಪ್‌ ಮೇಲೊತ್ತೋದನ್ನು ನೋಡಿದ್ದೆ. ನಾನೂ ಅದನ್ನು ಸಂಭ್ರಮಿಸಿದ್ದೆ. ಆ ಕನಸು ನನಸಾಗಿಸಬೇಕೆಂದು ಕಾದಿದ್ದೆ. ಏನಾದರೂ ಬರಲಿ, ನಾನು ವಿಶ್ವಕಪ್‌ ಮೇಲೆತ್ತಬೇಕು ಅಂತ ನಿರ್ಧರಿಸಿದೆ. ಮುಂಬೈಯ ವಾಂಖೆಡೆ ಸ್ಟೇಡಿಯಂನಲ್ಲಿ ನನ್ನ ಕನಸು ನನಸಾಯಿತು. ಅದನ್ನು ನಂಬಲು ಸಾಧ್ಯವಿಲ್ಲ. ಇದು ನನ್ನ ಕ್ರಿಕೆಟ್ ಬದುಕಿನಲ್ಲಿ ಅತ್ಯಪೂರ್ವ ಸಮಯ,' ಎಂದು ಸಂವಾದವೊಂದರಲ್ಲಿ ಮಾತನಾಡಿದ ಸಚಿನ್ ಹೇಳಿದ್ದಾರೆ.

ಸಚಿನ್ ಆಗ ಹೇಳಿದ್ದೇನು?

ಸಚಿನ್ ಆಗ ಹೇಳಿದ್ದೇನು?

ಭಾರತ ವಿಶ್ವಕಪ್‌ ಎತ್ತುತ್ತಲೇ ಸಚಿನ್ ತೆಂಡೂಲ್ಕರ್ ಅವರನ್ನು ವಿರಾಟ್ ಕೊಹ್ಲಿ ಮತ್ತು ಯೂಸುಫ್ ಪಠಾಣ್ ಮೇಲಕ್ಕೆತ್ತಿದ್ದಾಗ ಪಠಾಣ್ ಮತ್ತು ಕೊಹ್ಲಿಯಲ್ಲಿ ಸಚಿನ್ ಒಂದು ಮಾತು ಹೇಳಿದ್ದರಂತೆ. ವಿಶ್ವಕಪ್‌ ಗೆದ್ದು ಒಂದು ದಶಕದ ಬಳಿಕ ಸಚಿನ್ ಈ ಬಗ್ಗೆ ತುಟಿ ಬಿಚ್ಚಿದ್ದಾರೆ. 'ವಿಜಯ ಸಂಭ್ರಮಾಚರಿಸುವಾಗ ಒಂದು ಘಟನೆ ನಡೆಯಿತು. ವಿರಾಟ್ ಮತ್ತು ಯೂಸುಫ್ ನನ್ನನ್ನು ಮೇಲಕ್ಕೆತ್ತಿದರು. ನಾವಾಗ ಬರೀ ಭಾರತ ತಂಡಕ್ಕಾಗಿ ಪ್ರಶಸ್ತಿ ಗೆದ್ದಿರಲಿಲ್ಲ. ಇಡೀ ದೇಶಕ್ಕಾಗಿ ಟ್ರೋಫಿ ಗೆದ್ದಿದ್ದೆವು. ಹೀಗಾಗಿ ನನ್ನನ್ನು ಬೀಳಿಸಬೇಡಿ ಎಂದು ನಾನು ವಿರಾಟ್ ಮತ್ತು ಯೂಸುಫ್‌ರಲ್ಲಿ ಕೇಳಿಕೊಂಡಿದ್ದೆ,' ಎಂದು ಸಚಿನ್ ಹೇಳಿದ್ದಾರೆ.

ಗಂಭೀರ್, ಧೋನಿ ಬ್ಯಾಟಿಂಗ್

ಗಂಭೀರ್, ಧೋನಿ ಬ್ಯಾಟಿಂಗ್

2011ರ ವಿಶ್ವಕಪ್‌ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಶ್ರೀಲಂಕಾ, ತಿಲಕರತ್ನೆ ದಿಲ್ಶನ್ 33, ಕುಮಾರ ಸಂಗಕ್ಕಾರ 48, ಮಹೇಲ ಜಯವರ್ದನೆ 103 (88), ತಿಲನ್ ಸಮರವೀರ 21, ನುವಾನ್ ಕುಲಸೇಕರ 32, ತಿಸಾರ ಪೆರೆರಾ 22 ರನ್‌ನೊಂದಿಗೆ 50 ಓವರ್‌ಗೆ 6 ವಿಕೆಟ್ ನಷ್ಟದಲ್ಲಿ 274 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಭಾರತ, ಸಚಿನ್ ತೆಂಡೂಲ್ಕರ್ 18, ಗೌತಮ್ ಗಂಭೀರ್ 97, ವಿರಾಟ್ ಕೊಹ್ಲಿ 35, ಎಂಎಸ್ ಧೋನಿ ಅಜೇಯ 91 (79), ಯುವರಾಜ್ ಸಿಂಗ್ 21 ರನ್‌ನೊಂದಿಗೆ 48.2 ಓವರ್‌ಗೆ 4 ವಿಕೆಟ್ ಕಳೆದು 277 ರನ್ ಗಳಿಸಿತ್ತು.

For Quick Alerts
ALLOW NOTIFICATIONS
For Daily Alerts
Story first published: Monday, May 17, 2021, 16:26 [IST]
Other articles published on May 17, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X