ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮೊದಲ ಟೆಸ್ಟ್‌ನ ಭಯಾನಕ ಅನುಭವ ಬಿಚ್ಚಿಟ್ಟ ತೆಂಡೂಲ್ಕರ್: ಕಣ್ಣೀರಿಟ್ಟ ಸಚಿನ್‌ಗೆ ರವಿ ಶಾಸ್ತ್ರಿ ಅಭಯ

Sachin Tendulkar Reveals Ravi Shastri’s Advice That Changed His Career

ವಿಶ್ವ ಕ್ರಿಕೆಟ್‌ನ ಮೇರು ಪರ್ವತ ಸಚಿನ್ ತೆಂಡೂಲ್ಕರ್. ಅಸಾಧಾರಣ ದಾಖಲೆಗಳನ್ನು ಸಚಿನ್ ತಮ್ಮ ಹೆಸರಿಗೆ ಬರೆದು ಕ್ರಿಕೆಟ್ ಇತಿಹಾಸದಲ್ಲಿ ದೊಡ್ಡ ಛಾಪು ಮೂಡಿಸಿದ ಆಟಗಾರ. ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್‌ನ ಪ್ರಮುಖ ಎಲ್ಲಾ ದಾಖಲೆಗಳು ಸಚಿನ್ ಹೆಸರಿನಲ್ಲೇ ಇವೆ. ಅದೇ ಕಾರಣಕ್ಕೆ ಸಚಿನ್ ತೆಂಡೂಲ್ಕರ್ ಕ್ರಿಕೆಟ್‌ನ ದೇವರು ಎಂದು ಅಭಿಮಾನಿಗಳಿಂದ ಕರೆಸಿಕೊಂಡಿದ್ದಾರೆ.

ಇಂತಾ ಸಚಿನ್‌ಗೂ ತಮ್ಮ ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ಬಳಿಕ ತನ್ನಿಂದ ಹೆಚ್ಚಿನದು ಸಾಧಿಸಲು ಸಾಧ್ಯವಿಲ್ಲ ಎನಿಸಿಬಿಟ್ಟಿತ್ತಂತೆ. ತನ್ನ ಕ್ರಿಕೆಟ್ ಭವಿಷ್ಯ ಇಲ್ಲಿಗೇ ಮುಗಿಯಲಿದೆ ಎಂದುಕೊಂಡು ಸಚಿನ್ ಕಣ್ಣೀರಿಟ್ಟಿದ್ದರಂತೆ. ಆ ಕ್ಷಣದಲ್ಲಿ ಸಚಿನ್‌ಗೆ ಅಭಯ ನೀಡಿದ್ದು ಅಂದಿನ ಹಿರಿಯ ಆಟಗಾರ ಹಾಲಿ ಕೋಚ್ ರವಿ ಶಾಸ್ತ್ರಿ.

ಈ ಎಲ್ಲಾ ವಿಚಾರಗಳನ್ನು ಸ್ವತಃ ಸಚಿನ್ ಹೇಳಿಕೊಂಡಿದ್ದಾರೆ. ಮೊದಲ ಟೆಸ್ಟ್‌ನಲ್ಲಿಅಂತದ್ದೇನಾಯಿತು ಎಂದು ಸಚಿನ್ ವಿವರವಾಗಿ ಬಿಚ್ಚಿಟ್ಟಿದ್ದಾರೆ.

ಮೊದಲ ಟೆಸ್ಟ್ ಕ್ರಿಕೆಟ್‌ನ ಅನುಭವ ಹೇಳಿಕೊಂಡ ಸಚಿನ್

ಮೊದಲ ಟೆಸ್ಟ್ ಕ್ರಿಕೆಟ್‌ನ ಅನುಭವ ಹೇಳಿಕೊಂಡ ಸಚಿನ್

1989ರ ಪಾಕಿಸ್ತಾನದ ವಿರುದ್ಧದ ಟೆಸ್ಟ್‌ನಲ್ಲಿ ಸಚಿನ್ ಪದಾರ್ಪಣೆಯನ್ನು ಮಾಡಿದ್ದರು. ಹದಿನಾರು ವರ್ಷದ ಸಚಿನ್ ಕ್ರಿಕೆಟ್ ಇತಿಹಾಸದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಂತ ಕಿರಿಯ ಕ್ರಿಕೆಟಿಗನಾಗಿ ಕಣಕ್ಕಿಳಿದಿದ್ದರು. ಮೊದಲ ಪಂದ್ಯದ ಅನುಭವವನ್ನು ಸಚಿನ್ ಸ್ಕೈ ಸ್ಪೋರ್ಟ್ಸ್‌ನ 'ನಾಸಿರ್ ಮೀಟ್ಸ್ ಸಚಿನ್' ವಿಶೇಷ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.

ಶಾಲಾ ಪಂದ್ಯದಂತೆ ಮೊದಲ ಪಂದ್ಯ ಆಡಿದ್ದೆ

ಶಾಲಾ ಪಂದ್ಯದಂತೆ ಮೊದಲ ಪಂದ್ಯ ಆಡಿದ್ದೆ

ಪಾಕಿಸ್ತಾನದ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನು ನಾನು ಶಾಲಾ ಪಂದ್ಯದ ರೀತಿಯಲ್ಲೇ ಭಾವಿಸಿ ಆಡಿದ್ದೆ. ಪಾಕಿಸ್ತಾನದ ವೇಗಿಗಳಾದ ವಾಸಿಮ್ ಅಕ್ರಂ ಮತ್ತು ವಾಕರ್ ಯೂನಿಸ್ ಶರವೇಗದಲ್ಲಿ ಬಾಲ್ ಎಸೆಯುತ್ತಿದ್ದರು. ಶಾರ್ಟ್ ಎಸೆತಗಳನ್ನು ಎಸೆದು ನನ್ನನ್ನು ಬೆದರಿಸುವ ಎಲ್ಲಾ ಪ್ರಯತ್ನಗಳನ್ನೂ ಮಾಡುತ್ತಿದ್ದರು. ಆ ರೀತಿ ವೇಗದ ಬೌಲಿಂಗ್ ದಾಳಿಯನ್ನು ನಾನು ಹಿಂದೆಂದೂ ನೋಡಿರಲಿಲ್ಲ. ಹೀಗಾಗಿ ನನ್ನ ಮೊದಲ ಪಂದ್ಯ ನನಗೆ ಸ್ಮರಣೀಯವಲ್ಲ ಎಂದು ಸಚಿನ್ ಹೇಳಿಕೊಂಡರು.

ಬಾತ್‌ರೂಮ್‌ನಲ್ಲಿ ಕಣ್ಣೀರಿಟ್ಟೆ

ಬಾತ್‌ರೂಮ್‌ನಲ್ಲಿ ಕಣ್ಣೀರಿಟ್ಟೆ

"ಪಾಕಿಸ್ತಾನದ ವೇಗಿಗಳ ವೇಗ ಮತ್ತು ಬೌನ್ಸರ್‌ಗಳ ಹೊಡೆತವನ್ನೂ ನಾನು ತಿನ್ನಬೇಕಾಯಿತು. ಬಳಿಕ 15 ರನ್ ಗಳಿಸಿ ನಾನು ಔಟ್‌ಆಗಿ ಫೆವಿಲಿಯನ್‌ಗೆ ತೆರಳಿದಾಗ ನನಗೆ ತುಂಬಾ ಮುಜುಗರವಾಗಿತ್ತು, ನಾನೇನು ಮಾಡಿದೆ, ನಾನು ಯಾಕೆ ಈ ರೀತಿ ಆಡಿದೆ ಎಂದು ನನಗೇ ಕೇಳಿಕೊಂಡು ನೇರವಾಗಿ ಬಾತ್‌ರೂಮ್‌ಗೆ ಹೋಗಿ ಕಣ್ಣೀರಿಟ್ಟೆ" ಎಂದು ಸಚಿನ್ ಹೇಳಿದರು. "ಬಳಿಕ ಯೋಚಿಸಿ, ಇದೇ ರೀತಿ ಆದರೆ ಇದೇ ನನ್ನ ಮೊದಲ ಮತ್ತು ಕೊನೆಯ ಟೆಸ್ಟ್ ಪಂದ್ಯವಾಗಲಿದೆ, ನನ್ನ ಸಾಮರ್ಥ್ಯ ಈ ಮಟ್ಟದ ಆಟಕ್ಕೆ ಸಾಕಾಗದು ಎಂದು ಅನಿಸಿತ್ತು ಎಂದು ಕುಗ್ಗಿ ಹೋದೆ" ಎಂದರು.

ಭರವಸೆ ನೀಡಿದ ರವಿ ಶಾಸ್ತ್ರಿ ಮಾತು

ಭರವಸೆ ನೀಡಿದ ರವಿ ಶಾಸ್ತ್ರಿ ಮಾತು

"ಈ ಘಟನೆಯ ಬಳಿಕ ನಾನು ಹರಿಯ ಆಟಗಾರ ರವಿ ಶಾಸ್ತ್ರಿ ಅವರೊಂದಿಗೆ ಮಾತನಾಡಿದೆ, ಅವರೊಂದಿಗಿನ ನ್ನ ಮಾತು ಇನ್ನೂ ಚೆನ್ನಾಗಿ ನೆನಪಿದೆ. ರವಿ ಶಾಸ್ತ್ರಿ ನನಗೆ 'ನೀನು ವಿಶ್ರದ ಶ್ರೇಷ್ಠ ಬೌಲರ್‌ಗಳ ಮುಂದೆ ಆಡುತ್ತಿದ್ದೀಯ, ಸ್ಕೂಲ್ ಬೌಲರ್‌ಗಳ ಮುಂದೆ ಅಲ್ಲ. ಅವರ ಸಾಮರ್ಥ್ಯ ಮತ್ತು ಕೌಶಲ್ಯಕ್ಕೆ ನೀನು ಗೌರವ ಕೊಡು' ಎಂದರು. ಆಗ ನಾನು 'ಅವರ ಎಸೆತಗಳಿಂದ ನಾನು ಹೊಡೆತವನ್ನು ತಿಂದಿದ್ದೇನೆ ಎಂದೆ ಎಂದು ಹೇಳಿದೆ, ಅದಕ್ಕೆ ರವಿ ಶಾಸ್ತ್ರಿ ಅದೆಲ್ಲವೂ ಆಗುತ್ತದೆ, ಭಯಪಡಬೇಡ, ಮೊದಲ ಅರ್ಧಗಂಟೆ ಕ್ರೀಸ್‌ಗೆ ಕಚ್ಚಿ ನಿಲ್ಲು ಬಳಿಕ ಅವರ ಬೌಲಿಂಗ್ ವೇಗಕ್ಕೆ ನೀನು ಹೊಂದಿಕೊಳ್ಳುತ್ತೀಯ, ಬಳಿಕ ಎಲ್ಲವೂ ನಿನಗೆ ಬೇಕಾದ ರೀತಿಯಲ್ಲೇ ನಡೆಯುತ್ತದೆ ಎಂದು ರವಿ ಶಾಸ್ತ್ರಿ ಹೇಳಿದ್ದರು" ಎಂದು ಸಚಿನ್ ತೆಂಡೂಲ್ಕರ್ ನೆನಪಿಸಿಕೊಂಡಿದ್ದಾರೆ.

ಶಾಸ್ತ್ರಿ ಸಲಹೆ ಪಾಲಿಸಿದ ಸಚಿನ್

ಶಾಸ್ತ್ರಿ ಸಲಹೆ ಪಾಲಿಸಿದ ಸಚಿನ್

"ಎರಡನೇ ಟೆಸ್ಟ್‌ಗೂ ನಾನು ಆಯ್ಕೆಯಾಗಿದ್ದೆ, ಅದು ಫೈಸಲಾಬಾದ್‌ನಲ್ಲಿ ನಡೆದ ಪಂದ್ಯವಾಗಿತ್ತು, ಈ ಸಂದರ್ಭದಲ್ಲಿ ನನ್ನ ತಲೆಯಲ್ಲಿದ್ದಿದ್ದು ಒಂದೇ ನಾನು ಸ್ಕೋರ್ ಬೋರ್ಡ್ ನೋಡಬಾರದು, ರನ್ ಗಳಿಸುವತ್ತ ತೆಲೆಕೆಡಿಸಿಕೊಳ್ಳಲಿಲ್ಲ, ಅರ್ಧ ಗಂಟೆಕಾಲ ಬ್ಯಾಟ್ ಬೀಸಿದಾಗ ನಿಜಕ್ಕೂ ನನಗೆ ಎಲ್ಲವೂ ಸುಲಲಿತ ಎನಿಸಿತು. ಆ ಇನ್ನಿಂಗ್ಸ್‌ನಲ್ಲಿ ನಾನು 59 ರನ್ ಗಳಿಸಿದೆ. ಬಳಿಕ ಎಲ್ಲವೂ ಸಂಪೂರ್ಣ ಬದಲಾಗುತ್ತಾ ಹೋಯಿತು" ಎಂದು ಸಚಿನ್ ತೆಂಡೂಲ್ಕರ್ ತಮ್ಮ ಅನುಭವವನ್ನು ಹೇಳಿಕೊಂಡರು.

Story first published: Monday, April 27, 2020, 16:08 [IST]
Other articles published on Apr 27, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X