ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಚಿನ್‌ ತೆಂಡೂಲ್ಕರ್‌ರ ಬ್ಯಾಟ್ ಡಾಕ್ಟರ್ ಯಾರು? ಹಿಸ್ಟರಿ ಟಿವಿ18ನಲ್ಲಿ ನೋಡಿ

By ಪ್ರತಿನಿಧಿ
Sachin Tendulkar’s “Bat Doctor” from Bengaluru on HistoryTV18’s ‘OMG! Yeh Mera India

ನೀವೇನಾದರೂ ಮಹೇಂದ್ರ ಸಿಂಗ್‌ ಧೋನಿ, ವಿರಾಟ್ ಕೊಹ್ಲಿ, ಕ್ರಿಸ್ ಗೇಯ್ಲ್, ರಿಕಿ ಪಾಂಟಿಂಗ್, ರಾಹುಲ್ ದ್ರಾವಿಡ್‌ ಅಥವಾ ಸಚಿನ್ ತೆಂಡೂಲ್ಕರ್‌ರ ಬಳಿ ರಾಮ್ ಭಂಡಾರಿ ಹೆಸರು ಕೇಳಿದ್ದೀರಾ ಎಂದು ಕೇಳಿದರೆ ನಿಮಗೆ ಅಚ್ಚರಿಯಾಗಬಹುದು. ನಮ್ಮ ಬೆಂಗಳೂರಿನ 55 ವರ್ಷದ ಈ ವ್ಯಕ್ತಿ ಬಗ್ಗೆ ಎಷ್ಟು ಗೌರವವಿದೆ ಮತ್ತು ಅವರು ಎಷ್ಟು ಪರಿಚಿತರು ಎಂದು ನೀವು ಆಶ್ಚರ್ಯಪಡುತ್ತೀರಿ! ವಿಶ್ವದ ಅತ್ಯಂತ ಜನಪ್ರಿಯ ಕ್ರಿಕೆಟಿಗರು ಬಳಸುವ ಬ್ಯಾಟ್‌ಗಳನ್ನು ಸಿದ್ಧಪಡಿಸುವ ಬ್ಯಾಟ್ ಡಾಕ್ಟರ್‌ ಬಗ್ಗೆ ಭಾರತದ ಅತಿ ದೀರ್ಘ ವಾಸ್ತವಾಂಶ ಆಧಾರಿತ ಮನರಂಜನೆ ಸರಣಿ 'OMG! Yeh Mera India' ದ ಏಳನೇ ಸರಣಿಯ ಮೊದಲ ಎಪಿಸೋಡ್‌ನಲ್ಲಿ ವಿವರಿಸಲಾಗುತ್ತಿದೆ.

ಭಾರತದಲ್ಲಿ ಕ್ರಿಕೆಟ್ ಎಂಬುದು ಒಂದು ಧರ್ಮವಿದ್ದಂತೆ. ಈ ಕ್ರಿಕೆಟ್ ಜಗತ್ತಿನಲ್ಲಿ, ಬೆಂಗಳೂರಿನ ರಾಮ ಭಂಡಾರಿ ಅತ್ಯಂತ ಮಹತ್ವದ ವ್ಯಕ್ತಿ. 15ನೇ ವರ್ಷದಲ್ಲಿ, ಕಾರ್ಪೆಂಟರಿ ವೃತ್ತಿಯನ್ನು ಇವರು ತನ್ನ ಅಜ್ಜನಿಂದ ಕಲಿತರು. ಶಾಲಾ ಮಕ್ಕಳಿಗೆ ಕ್ರಿಕೆಟ್ ಬ್ಯಾಟ್‌ಗಳನ್ನು ರಿಪೇರಿ ಮಾಡುವ ಒಂದು ಸಣ್ಣ ಅಂಗಡಿಯಲ್ಲಿ ಕೆಲಸ ಆರಂಭಿಸಿದರು. ಅಲ್ಲಿ, ಅಚ್ಚರಿಯ ರೀತಿಯಲ್ಲಿ ರಾಹುಲ್ ದ್ರಾವಿಡ್‌ರ ಗಮನಕ್ಕೆ ಬಂದರು. ಪ್ರತಿ ಕ್ರಿಕೆಟಿಗರ ಫೂಟ್‌ವರ್ಕ್‌ ಮತ್ತು ಬಾಡಿ ಲ್ಯಾಂಗ್ವೇಜ್ ಅನ್ನು ಅವರು ಗಮನಿಸುತ್ತಿದ್ದು, ವಿಶೇಷ ಸಾಧನೆ ಮಾಡಲು ಕಾರಣವಾಯಿತು.

ಅವರು ಪ್ರತಿ ವ್ಯಕ್ತಿ ಆಟವಾಡುವ ಶೈಲಿಯನ್ನು ಗಮನಿಸುತ್ತಾರೆ. ಈ ಮೂಲಕ ಅವರಿಗೆ ಯಾವ ರೀತಿಯ ಬ್ಯಾಟ್ ಬೇಕು ಎಂದು ನಿರ್ಧರಿಸುತ್ತಾರೆ. ಫ್ಲಾಟ್ ಆಗಿರಬೇಕೆ, ರೌಂಡ್ ಆಗಿರಬೇಕು, ಮುಂದೆ, ಮಧ್ಯೆ ಅಥವಾ ಹಿಂಭಾಗವು ಎಷ್ಟು ತೂಕ ಹೊಂದಿರಬೇಕು ಮತ್ತು ಹಿಡಿಕೆ ಎಷ್ಟು ದಪ್ಪವಾಗಿದ್ದು, ಸೂಕ್ತ ತೂಕದ ಹಂಚಿಕೆ ಆಗಬೇಕು ಎಂಬುದನ್ನು ಅವರು ನಿರ್ಧರಿಸುತ್ತಾರೆ. ಅವರ ನಿಖರತೆ ಮತ್ತು ಕೌಶಲದಿಂದಾಗಿ 2004 ರಲ್ಲಿ ಗಾಯದ ನಂತರದಲ್ಲಿ ಸಚಿನ್‌ ತೆಂಡೂಲ್ಕರ್ ಪುನಃ ಫಾರ್ಮ್‌ಗೆ ಬರಲು ಸಹಾಯವಾಯಿತು. ಇದೇ ಕಾರಣಕ್ಕೆ, ಸಚಿನ್ ಜೀವನಚರಿತ್ರೆ 'ಸಚಿನ್: ಎ ಬಿಲಿಯನ್ ಡ್ರೀಮ್ಸ್' ನಲ್ಲಿ ರಾಮ್ ಭಂಡಾರಿ ಕೂಡಾ ಕಾಣಿಸಿಕೊಳ್ಳುತ್ತಾರೆ. ಭಾರತದ ಕೆಲವು ಜನಪ್ರಿಯ ಕ್ರೀಡಾಪಟುಗಳಿಗೆ ಬ್ಯಾಟ್‌ಗಳನ್ನು ಹೇಗೆ ಈ "ಬ್ಯಾಟ್ ಡಾಕ್ಟರ್" ಸಿದ್ಧಪಡಿಸುತ್ತಾರೆ ಎಂದು ನೋಡಲು ಮಾರ್ಚ್ 29 ರಂದು ರಾತ್ರಿ 8 ಗಂಟೆಗೆ ಎಪಿಸೋಡ್ ನೋಡಿ.

'OMG! Yeh Mera India' ಭಾರತೀಯ ಟಿವಿ ಪರದೆಗೆ ವಾಪಸಾಗಿದ್ದು, ಪ್ರತಿ ಸೋಮವಾರ ರಾತ್ರಿ 8 ಗಂಟೆಗೆ HistoryTV18 ನಲ್ಲಿ ಪ್ರಸಾರವಾಗಲಿದೆ. ಇದು ಭಾರತದ ದೊಡ್ಡ ಮತ್ತು ಸಣ್ಣ ನಗರಗಳ ಅದ್ಭುತ ಮತ್ತು ಸ್ಫೂರ್ತಿದಾಯಕ ಕಥೆಗಳ ಬಗ್ಗೆ ಜನರಿಗೆ ತಿಳಿಸಲಿದೆ. ಸೀಸನ್‌ 7 ರ ಮೊದಲ ಎಪಿಸೋಡ್‌ನಲ್ಲಿ ಕರ್ನಾಟಕ ರಾಜ್ಯದ ಇಬ್ಬರು ಅದ್ಭುತ ವ್ಯಕ್ತಿಗಳನ್ನು ಪರಿಚಯಿಸಲಾಗುತ್ತಿದೆ. ಇನ್ನೋರ್ವ ವ್ಯಕ್ತಿ ಮಂಗಳೂರಿನ ಕೃಷಿ ಸಂಶೋಧಕ ಸಂಶೋಧಕ ವಿಜ್ಞಾನ ಪಧವೀಧರ ಗಣಪತಿ ಭಟ್. ಈ ಇಬ್ಬರು ಕನ್ನಡಿಗರ ಸಾಧನೆಯನ್ನೂ ನೀವು ವೀಕ್ಷಿಸಬಹುದು.

Story first published: Sunday, March 28, 2021, 11:30 [IST]
Other articles published on Mar 28, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X