ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಚಿನ್ ಪ್ರಥಮ ಶತಕಕ್ಕೆ 32 ವರ್ಷ: ಯಾರ ವಿರುದ್ಧ, ಗಳಿಸಿದ್ದೆಷ್ಟು ರನ್, ಸಚಿನ್ ಆಡಿದ್ದ ಕ್ರಮಾಂಕ ಯಾವುದು?

Sachin Tendulkars First century: against which team, how many runs and in which batting order?

ಸಚಿನ್ ತೆಂಡೂಲ್ಕರ್ ತನ್ನ ಅತ್ಯಮೋಘ ಬ್ಯಾಟಿಂಗ್ ಹಾಗೂ ದಾಖಲೆಗಳ ಮೂಲಕ 'ಗಾಡ್ ಆಫ್ ಕ್ರಿಕೆಟ್' ಎಂದೇ ಖ್ಯಾತಿಯನ್ನು ಪಡೆದಿರುವಂತ ದಿಗ್ಗಜ ಕ್ರಿಕೆಟಿಗ. ಕ್ರಿಕೆಟ್ ಲೋಕಕ್ಕೆ ಪದಾರ್ಪಣೆ ಮಾಡುವ ಅದೆಷ್ಟೋ ಯುವ ಕ್ರಿಕೆಟಿಗರಿಗೆ ಅಂದು, ಇಂದು ಹಾಗೂ ಎಂದೆಂದೂ ಸ್ಫೂರ್ತಿಯಾಗಿರುವ ಸಚಿನ್ ತೆಂಡೂಲ್ಕರ್ ನಿರ್ಮಿಸಿರುವ ಯಾರೂ ಮುರಿಯಲಾಗದಂತಹ ದಾಖಲೆಗಳ ಸಂಖ್ಯೆ ಅಪಾರ.

ಕೋಟಿ ಕೊಟ್ರೂ ಡಕ್ಔಟ್ ಆಗಿದ್ದೀಯಾ ಎಂದು ಐಪಿಎಲ್ ತಂಡದ ಮಾಲೀಕ ಕೆನ್ನೆಗೆ ಹೊಡೆದಿದ್ರು: ರಾಸ್ ಟೇಲರ್!ಕೋಟಿ ಕೊಟ್ರೂ ಡಕ್ಔಟ್ ಆಗಿದ್ದೀಯಾ ಎಂದು ಐಪಿಎಲ್ ತಂಡದ ಮಾಲೀಕ ಕೆನ್ನೆಗೆ ಹೊಡೆದಿದ್ರು: ರಾಸ್ ಟೇಲರ್!

ಸಚಿನ್ ತೆಂಡೂಲ್ಕರ್ ಅವರ ಈ ಮುರಿಯಲು ಅಸಾಧ್ಯವಾದಂತಹ ದಾಖಲೆಗಳ ಪೈಕಿ ಅತಿ ಹೆಚ್ಚು ಅಂತರರಾಷ್ಟ್ರೀಯ ರನ್ ಹಾಗೂ ಅತಿ ಹೆಚ್ಚು ಅಂತರರಾಷ್ಟ್ರೀಯ ಶತಕಗಳ ದಾಖಲೆಗಳು ಕೂಡ ಸೇರಿವೆ. ಹೌದು, ಅಂತರರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ರನ್ ಬಾರಿಸಿರುವ ಆಟಗಾರ ಹಾಗೂ 100 ಅಂತಾರಾಷ್ಟ್ರೀಯ ಶತಕಗಳನ್ನು ಬಾರಿಸಿರುವ ವಿಶ್ವದ ಏಕೈಕ ಕ್ರಿಕೆಟಿಗ ಎಂಬ ದಾಖಲೆಯನ್ನು ಸಚಿನ್ ತೆಂಡೂಲ್ಕರ್ ತಮ್ಮ ಹೆಸರಿನಲ್ಲಿ ಹೊಂದಿದ್ದಾರೆ.

ಮಹಾರಾಜ ಟ್ರೋಫಿ: ಟೇಬಲ್ ಟಾಪರ್ಸ್ ವಿರುದ್ಧ ಗೆದ್ದು 2 ಸ್ಥಾನ ಜಿಗಿದ ಮೈಸೂರು ವಾರಿಯರ್ಸ್!ಮಹಾರಾಜ ಟ್ರೋಫಿ: ಟೇಬಲ್ ಟಾಪರ್ಸ್ ವಿರುದ್ಧ ಗೆದ್ದು 2 ಸ್ಥಾನ ಜಿಗಿದ ಮೈಸೂರು ವಾರಿಯರ್ಸ್!

ಟೆಸ್ಟ್ ಕ್ರಿಕೆಟ್ ಮಾದರಿಯಲ್ಲಿ ಒಟ್ಟು 51 ಶತಕಗಳು ಹಾಗೂ ಏಕದಿನ ಕ್ರಿಕೆಟ್ ಮಾದರಿಯಲ್ಲಿ ಒಟ್ಟು 49 ಶತಕಗಳನ್ನು ಬಾರಿಸಿರುವ ಸಚಿನ್ ತೆಂಡೂಲ್ಕರ್ 100 ಶತಕಗಳನ್ನು ಪೂರೈಸಿದ್ದಾರೆ. ಇನ್ನು ತೆಂಡೂಲ್ಕರ್ ಚೊಚ್ಚಲ ಶತಕವನ್ನು ಸಿಡಿಸಿದ್ದು ತಮ್ಮ ಹದಿನೇಳನೇ ವಯಸ್ಸಿನಲ್ಲಿ. ಹಾಗಿದ್ರೆ ಸಚಿನ್ ತೆಂಡೂಲ್ಕರ್ ಸಿಡಿಸಿದ ಪ್ರಥಮ ಶತಕ ಯಾವ ತಂಡದ ವಿರುದ್ಧ, ಯಾವ ಕ್ರೀಡಾಂಗಣದಲ್ಲಿ, ಎಷ್ಟನೇ ಕ್ರಮಾಂಕದಲ್ಲಿ ಹಾಗೂ ಅಂದಿನ ಪಂದ್ಯದಲ್ಲಿ ಎಷ್ಟು ರನ್ ಕಲೆಹಾಕಿದರು ಎಂಬುದರ ಕುರಿತಾದ ಮಾಹಿತಿ ಕೆಳಕಂಡಂತಿದೆ.

ಸಚಿನ್ ತೆಂಡೂಲ್ಕರ್ ಪ್ರಥಮ ಶತಕದ ವಿವರ

ಸಚಿನ್ ತೆಂಡೂಲ್ಕರ್ ಪ್ರಥಮ ಶತಕದ ವಿವರ

1990ರಲ್ಲಿ ಭಾರತ ಇಂಗ್ಲೆಂಡ್ ಪ್ರವಾಸವನ್ನು ಕೈಗೊಂಡಿತ್ತು. ಈ ಪ್ರವಾಸದಲ್ಲಿ ಇತ್ತಂಡಗಳ ನಡುವಿನ ದ್ವಿತೀಯ ಟೆಸ್ಟ್ ಪಂದ್ಯ ಆಗಸ್ಟ್ 9ರಿಂದ 14ರವರೆಗೆ ಮ್ಯಾಂಚೆಸ್ಟರ್ ಕ್ರೀಡಾಂಗಣದಲ್ಲಿ ನಡೆದಿತ್ತು. ಮೊಹಮ್ಮದ್ ಅಜರುದ್ದೀನ್ ನಾಯಕನಾಗಿ ಮುನ್ನಡೆಸುತ್ತಿದ್ದ ಈ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಸಚಿನ್ ತೆಂಡೂಲ್ಕರ್ ಪಂದ್ಯದ ದ್ವಿತೀಯ ಇನ್ನಿಂಗ್ಸ್‌ನಲ್ಲಿ 189 ಎಸೆತಗಳಲ್ಲಿ ಅಜೇಯ 119 ರನ್ ಕಲೆಹಾಕಿದ್ದರು. ಇದು ಸಚಿನ್ ತೆಂಡೊಲ್ಕರ್ ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲಿ ಸಿಡಿಸಿದ ಪ್ರಪ್ರಥಮ ಅಂತಾರಾಷ್ಟ್ರೀಯ ಶತಕವಾಗಿತ್ತು. ಹಾಗೂ ಇದೇ ಪಂದ್ಯದ ಮೊದಲನೇ ಇನ್ನಿಂಗ್ಸ್‌ನಲ್ಲಿ ಸಚಿನ್ ತೆಂಡೂಲ್ಕರ್ 136 ಎಸೆತಗಳನ್ನು ಎದುರಿಸಿ 68 ರನ್ ಕಲೆಹಾಕಿದ್ದರು.

ಆರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದ ಸಚಿನ್ ತೆಂಡೂಲ್ಕರ್

ಆರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದ ಸಚಿನ್ ತೆಂಡೂಲ್ಕರ್

ಸಚಿನ್ ತೆಂಡೂಲ್ಕರ್ ಸಾಮಾನ್ಯವಾಗಿ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯುವ ಬ್ಯಾಟ್ಸ್‌ಮನ್‌. ಆದರೆ ಇದು ಸಚಿನ್ ತೆಂಡೂಲ್ಕರ್ ಅವರ ಕ್ರಿಕೆಟ್ ವೃತ್ತಿ ಜೀವನದ ಆರಂಭದ ದಿನಗಳಾದ್ದರಿಂದ ಆ ದಿನಗಳಲ್ಲಿ ತೆಂಡೂಲ್ಕರ್ ಮಧ್ಯಮ ಕ್ರಮಾಂಕದ ಆಟಗಾರನಾಗಿ ಕಣಕ್ಕಿಳಿಯುತ್ತಿದ್ದರು. ಈ ಪಂದ್ಯದಲ್ಲಿ ಆರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದ ಸಚಿನ್ ತೆಂಡೂಲ್ಕರ್ ಪ್ರಥಮ ಇನ್ನಿಂಗ್ಸ್‌ನಲ್ಲಿ ಅರ್ಧಶತಕ ಹಾಗೂ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಶತಕ ಸಿಡಿಸಿದ್ದರು.

ಉತ್ತಮ ಆಟವನ್ನಾಡಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದ ತೆಂಡೂಲ್ಕರ್

ಉತ್ತಮ ಆಟವನ್ನಾಡಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದ ತೆಂಡೂಲ್ಕರ್

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ಪ್ರಥಮ ಇನ್ನಿಂಗ್ಸ್‌ನಲ್ಲಿ 519 ರನ್ ಕಲೆಹಾಕಿದರೆ, ಭಾರತ 432 ರನ್ ಬಾರಿಸಿತ್ತು ಹಾಗೂ ಎರಡನೇ ಇನ್ನಿಂಗ್ಸ್‌ನಲ್ಲಿ 4 ವಿಕೆಟ್ ನಷ್ಟಕ್ಕೆ 320 ರನ್ ಕಲೆಹಾಕಿ ಡಿಕ್ಲೇರ್ ಘೋಷಿಸಿದ್ದ ಇಂಗ್ಲೆಂಡ್ ಭಾರತ ತಂಡಕ್ಕೆ ಗೆಲ್ಲಲು 408 ರನ್‌ಗಳ ಗುರಿಯನ್ನು ನೀಡಿತ್ತು. ಇತ್ತ ಈ ಗುರಿಯನ್ನು ಬೆನ್ನಟ್ಟಲು ಯತ್ನಿಸಿದ ಭಾರತದ ಪರ ರವಿಶಾಸ್ತ್ರಿ, ನವಜೋತ್ ಸಿಧು, ದಿಲೀಪ್ ವೆಂಗ್ ಸರ್ಕರ್, ಮೊಹಮ್ಮದ್ ಅಜರುದ್ದೀನ್ ಹಾಗೂ ಕಪಿಲ್ ದೇವ್ ರೀತಿಯ ಆಟಗಾರರೇ ಉತ್ತಮ ಆಟ ಆಡುವಲ್ಲಿ ವಿಫಲರಾದರೆ, ಸಚಿನ್ ತೆಂಡೂಲ್ಕರ್ ಶತಕದ ಆಟವನ್ನಾಡಿ ತಂಡವನ್ನು ಸೋಲಿನಿಂದ ಪಾರು ಮಾಡಿದರು, ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತ್ತು. ತಂಡದ ಸಂಜಯ್ ಮಂಜ್ರೇಕರ್ ಅವರ ಅರ್ಧಶತಕ ಹಾಗೂ ಮನೋಜ್ ಪ್ರಭಾಕರ್ ಅವರ ಅಜೇಯ ಅರ್ಧಶತಕ ಕೂಡ ಈ ಡ್ರಾನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದವು.

Story first published: Sunday, August 14, 2022, 12:11 [IST]
Other articles published on Aug 14, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X