ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಚಿನ್ ವಿದಾಯ ಭಾಷಣ ವೆಸ್ಟ್ ಇಂಡೀಸ್ ದಿಗ್ಗಜನ ಕಣ್ಣಲ್ಲೂ ನೀರು ತರಿಸಿತ್ತು!

Sachin Tendulkar’s Retirement Speech Left West Indies’ Players Teary-eyed

ವಿಶ್ವ ಕ್ರಿಕೆಟ್‌ನಲ್ಲಿ ಎರಡೂವರೆ ದಶಕ ದೇವರಾಗಿ ಮೆರೆದ ಸಚಿನ್ 2013ರಲ್ಲಿ ನಿವೃತ್ತಿಯನ್ನು ಪಡೆದರು. ಸಚಿನ್ ವಿದಾಯ ವಿಶ್ವದ ಎಲ್ಲಾ ಕ್ರಿಕೆಟ್ ಪ್ರೇಮಿಗಳಿಗೂ ಅತ್ಯಂತ ನೋವಿನ ಕ್ಷಣ. ಸಚಿನ್ ಕ್ರೀಸ್‌ಗೆ ಸಮಸ್ಕರಿಸಿ ಅಂತಿಮವಾಗಿ ಮೈದಾನದಿಂದ ಹೊರನಡೆಯುತ್ತಿದ್ದರೆ ಅಭಿಮಾನಿಗಳ ಕಣ್ಣಂಚು ನೀರುತುಂಬಿಕೊಂಡಿತ್ತು.

ಅಂದು ಕೇವಲ ಭಾರತೀಯ ಕ್ರಿಕೆಟ್ ಆಟಗಾರರು ಮತ್ತು ಅಭಿಮಾನಿಗಳು ಮಾತ್ರವಲ್ಲ, ಎದುರಾಳಿ ಆಟಗಾರರ ಕಣ್ಣಲ್ಲೂ ನೀರು ತರಿಸಿತ್ತು. ಸಚಿನ್ ತಮ್ಮ ವಿದಾಯ ಭಾಷಣವನ್ನು ಮಾಡುತ್ತಿದ್ದರೆ ಅತ್ತ ಎದುರಾಳಿ ತಂಡವಾಗಿದ್ದ ವೆಸ್ಟ್ ಇಂಡೀಸ್‌ನ ಆಟಗಾರ ಕ್ರೀಸ್ ಗೇಲ್ ಕಣ್ಣು ಒದ್ದೆಯಾಗಿತ್ತು.

ಅಂತಾರಾಷ್ಟ್ರೀಯ ಕ್ರಿಕೆಟ್‌ ನಾಯಕರ ವಾರ್ಷಿಕ ಸಂಬಳ ಎಷ್ಟಿರುತ್ತದೆ ಗೊತ್ತಾ?!ಅಂತಾರಾಷ್ಟ್ರೀಯ ಕ್ರಿಕೆಟ್‌ ನಾಯಕರ ವಾರ್ಷಿಕ ಸಂಬಳ ಎಷ್ಟಿರುತ್ತದೆ ಗೊತ್ತಾ?!

ಈ ಮಾತನ್ನು ಸ್ವತಃ ವೆಸ್ಟ್ ಇಂಡೀಸ್‌ನ ಆಲ್‌ರೌಂಡರ್ ಕಿರ್ಕ್ ಎಡ್ವರ್ಡ್ಸ್ ಬಹಿರಂಗಪಡಿಸಿದ್ದಾರೆ. 'ಸಚಿನ್ ಅವರ 200ನೇ ಟೆಸ್ಟ್ ಪಂದ್ಯದ ವೇಳೆ ನಾನು ಅಲ್ಲಿದ್ದೆ. ಅದು ನನಗೂ ಅತ್ಯಂತ ಭಾವುಕ ಕ್ಷಣವಾಗಿತ್ತು. ಸಚಿನ್ ವಿದಾಯ ಭಾಷಣದ ವೇಳೆ ನಾನು ಕ್ರಿಸ್ ಗೇಲ್ ಅವರ ಪಕ್ಕದಲ್ಲೇ ನಿಂತಿದ್ದೆ. ನಾನು ಕಣ್ಣಿಗೆ ಕನ್ನಡಕವನ್ನು ಧರಿಸಿಕೊಂಡಿದ್ದೆ ಎಂದು ಆ ಸಂದರ್ಭವನ್ನು ಅವರು ವಿವರಿಸಿದ್ದಾರೆ.

ನಾವಿಬ್ಬರೂ ಸಾಕಷ್ಟು ನಿಯಂತ್ರಿಸಿಕೊಂಡರೂ, ಆ ಕ್ಷಣದಲ್ಲಿ ಕಣ್ಣಿನಿಂದ ನೀರು ಹರಿದಿತ್ತು. ಸಚಿನ್ ತೆಂಡುಲ್ಕರ್ ಕ್ರಿಕೆಟ್ ಆಡುವುದನ್ನು ನಾವು ಇನ್ನೆಂದೂ ನೋಡಲಾರವೆ ಎಂಬುದನ್ನು ತಿಳಿದ ಆ ಕ್ಷಣ ಅತ್ಯಂತ ಭಾವನಾತ್ಮಕವಾಗಿತ್ತು' ಎಂದು ಕಿರ್ಕ್ ಎಡ್ವರ್ಡ್ಸ್ ವಿವರಿಸಿದ್ದಾರೆ.

ಕೊಹ್ಲಿಗಿರುವ ಈ ಸಾಮರ್ಥ್ಯ ರೋಹಿತ್, ಗೇಲ್, ಎಬಿಡಿಗೂ ಇಲ್ಲ!: ಗಂಭೀರ್ಕೊಹ್ಲಿಗಿರುವ ಈ ಸಾಮರ್ಥ್ಯ ರೋಹಿತ್, ಗೇಲ್, ಎಬಿಡಿಗೂ ಇಲ್ಲ!: ಗಂಭೀರ್

ಪ್ರವಾಸಿ ವಿಂಡೀಸ್ ವಿರುದ್ಧದ 2 ಪಂದ್ಯಗಳ ಸರಣಿಯ ಕೊನೆಯ ಪಂದ್ಯ ಸಚಿನ್ ತವರು ಮುಂಬೈನಲ್ಲಿ ನಡೆದಿತ್ತು. ಆ ಪಂದ್ಯದಲ್ಲಿ ಸಚಿನ್ ಶತಕ ಸಿಡಿಸುವ ನಿರೀಕ್ಷೆ ಎಲ್ಲ ಕ್ರಿಕೆಟ್ ಪ್ರೇಮಿಗಳಲ್ಲಿತ್ತು. ಆದರೆ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಸಚಿನ್ 74 ರನ್ ಗಳಿಸಿ ಔಟಾಗಿದ್ದರು. ವಿಂಡೀಸ್ ತಂಡ ಮೂರೇ ದಿನಗಳಲ್ಲಿ ಇನಿಂಗ್ಸ್ ಸೋಲು ಕಂಡ ಕಾರಣ ಅದುವೇ ಸಚಿನ್ ಅವರ ಕೊನೆಯ ಇನಿಂಗ್ಸ್ ಆಗಿತ್ತು.

Story first published: Monday, June 22, 2020, 9:52 [IST]
Other articles published on Jun 22, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X