ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟ್ವಿಟರ್‌ನಲ್ಲಿ ಮನಮುಟ್ಟುವ ವೀಡಿಯೋ ಹಂಚಿಕೊಂಡ ಸಚಿನ್ ತೆಂಡೂಲ್ಕರ್

ಹೊಸ ವರ್ಷಕ್ಕೆ ಸಚಿನ್ ಹಾಕಿದ ವಿಡಿಯೋ ನೋಡಿ ಫಿದಾ ಆದ ಅಭಿಮಾನಿಗಳು | Oneindia Kannada
Sachin Tendulkar Shares Inspirational Video on twitter

ಮುಂಬೈ, ಜನವರಿ 1: ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಟ್ವಿಟರ್‌ನಲ್ಲಿ ಮನ ಮುಟ್ಟುವ, ಸ್ಫೂರ್ತಿಯ ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ. 2020ರ ಹೊಸ ವರ್ಷವನ್ನು ಈ ಸ್ಫೂರ್ತಿಯ ವೀಡಿಯೋದೊಂದಿಗೆ ಆರಂಭಿಸಿ ಎಂದು ಜೊತೆಗೊಂದು ಸಾಲನ್ನೂ ಸೇರಿಕೊಂಡಿದ್ದಾರೆ. ಸಚಿನ್ ಶೇರ್ ಮಾಡಿರುವ ವೀಡಿಯೋ ನಿಜಕ್ಕೂ ಬದುಕಿನ ಗೆಲುವಿನ ಗುಟ್ಟನ್ನು ಪಿಸುಗುಡುವಂತಿದೆ.

2019ರಲ್ಲಿ 'ಹಿಟ್‌ಮ್ಯಾನ್' ರೋಹಿತ್‌ ಶರ್ಮಾ ಮಾಡಿದ ವಿಶೇಷ ದಾಖಲೆಗಳು!2019ರಲ್ಲಿ 'ಹಿಟ್‌ಮ್ಯಾನ್' ರೋಹಿತ್‌ ಶರ್ಮಾ ಮಾಡಿದ ವಿಶೇಷ ದಾಖಲೆಗಳು!

ಜನವರಿ 1ರಂದು ಟ್ವಿಟರ್ ವೀಡಿಯೋವೊಂದನ್ನು ಶೇರ್ ಮಾಡಿಕೊಂಡಿರುವ ಸಚಿನ್, 'ಬಾಲಕ ಮದ್ದ ರಾಮ್ ತನ್ನ ಸ್ನೇಹಿತರೊಂದಿಗೆ ಕ್ರಿಕೆಟ್ ಆಡುತ್ತಿರುವ ಈ ಸ್ಫೂರ್ತಿದಾಯಕ ವೀಡಿಯೋದೊಂದಿಗೆ 2020 ವರ್ಷವನ್ನು ಆರಂಭಿಸಿ. ಈ ವೀಡಿಯೋ ನನ್ನ ಹೃದಯಕೆ ತಾಗಿತು, ನಿಮ್ಮ ಹೃದಯಕ್ಕೂ ತಾಗೇ ತಾಗುತ್ತದೆ,' ಎಂದು ಸಾಲೊಂದನ್ನೂ ಬರೆದುಕೊಂಡಿದ್ದಾರೆ.

ಈ ವರ್ಷ ನಿವೃತ್ತಿಯಾಗಲಿರುವ ಕ್ರಿಕೆಟ್‌ ದಂತಕತೆಗಳು ಇವರು!ಈ ವರ್ಷ ನಿವೃತ್ತಿಯಾಗಲಿರುವ ಕ್ರಿಕೆಟ್‌ ದಂತಕತೆಗಳು ಇವರು!

ಸಚಿನ್ ಹಾಕಿಕೊಂಡಿರುವ ವೀಡಿಯೋದಲ್ಲಿ ಮದ್ದ ರಾಮ್ ಎನ್ನುವ ವಿಕಲ ಚೇತನ ಬಾಲಕ ಕ್ರಿಕೆಟ್ ಆಡುವ ದೃಶ್ಯವಿದೆ. ತನ್ನೆರಡೂ ಕಾಲುಗಳು ಇಲ್ಲದಿದ್ದರೂ ಹುಡಗನಲ್ಲಿನ ಅದಮ್ಯ ಉತ್ಸಾಹ, ಕ್ರಿಕೆಟ್‌ ಆಟದ ಬಗೆಗಿನ ಪ್ರೀತಿ, ಮುಖ್ಯವಾಗಿ ಆತ ಬದುಕಿನ ಸವಾಲನ್ನು ಒಪ್ಪಿಕೊಂಡಿರುವ ಪರಿ ನೋಡುಗರಲ್ಲಿ ಸ್ಫೂರ್ತಿ ತುಂಬುವಂತಿದೆ.

ಎರಡೂ ಕಾಲುಗಳಿಲ್ಲದಿದ್ದರೂ ಬರೀ ಮಂಡಿಯ ಸಹಾಯದಿಂದಲೇ ಪಿಚ್‌ ಮಧ್ಯೆ ತೆವಳಿ ಬಾಲಕ ರನ್ ಪೂರೈಸುವ ದೃಶ್ಯವಂತೂ ನಮ್ಮೊಳಗೂ ಬದುಕುವ ಛಲದ ಕಿಡಿ ಹಚ್ಚುವಂತಿದೆ. ರನ್ ಪೂರೈಸಿದ ಬಳಿಕ ಅದೇ ಬಾಲಕ ಆಚೆ ಸ್ಟ್ರೈಕ್‌ನಲ್ಲಿರುವ ಮತ್ತೊಬ್ಬ ಬ್ಯಾಟ್ಸ್‌ಮನ್‌ಗೆ ತೆವಳುತ್ತಲೇ ಸಾಗಿ ತನ್ನ ಕೈಲಿದ್ದ ಬ್ಯಾಟನ್ನು ಆತನ ಕೈಗೀಯುವ ದೃಶ್ಯವೂ ಮನ ತಟ್ಟುತ್ತದೆ.

'ಮಂಕಡ್' ಮಾಡಿದ ಆರ್‌ ಅಶ್ವಿನ್‌ನ ಕಾಲೆಳೆದ ರಾಜಸ್ಥಾನ್ ರಾಯಲ್ಸ್'ಮಂಕಡ್' ಮಾಡಿದ ಆರ್‌ ಅಶ್ವಿನ್‌ನ ಕಾಲೆಳೆದ ರಾಜಸ್ಥಾನ್ ರಾಯಲ್ಸ್

ಅಂದ್ಹಾಗೆ, 46ರ ಹರೆಯದ ಸಚಿನ್ ತೆಂಡೂಲ್ಕರ್ 16ರ ಹರೆಯದವರಾಗಿದ್ದಾಗ 1989ರಲ್ಲಿ ಭಾರತ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಸಚಿನ್ ಒಟ್ಟಿಗೆ 34,357 ರನ್ ಕಲೆ ಹಾಕಿದ್ದಾರೆ. ಇದು ವಿಶ್ವಕ್ರಿಕೆಟ್‌ನಲ್ಲಿ ಅತ್ಯಧಿಕ ರನ್ ದಾಖಲೆ ಸಾಲಿನಲ್ಲಿ ದ್ವಿತೀಯ ಸ್ಥಾನದಲ್ಲಿರುವ ಶ್ರೀಲಂಕಾದ ಕುಮಾರ ಸಂಗಕ್ಕಾರ ಅವರಿಗಿಂತ 6,000ಕ್ಕೂ ಹೆಚ್ಚಿನ ರನ್.

Story first published: Wednesday, January 1, 2020, 19:34 [IST]
Other articles published on Jan 1, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X