ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಶ್ರೀಲಂಕಾ ಪ್ರವಾಸದಲ್ಲಿ ರಾಹುಲ್ ದ್ರಾವಿಡ್ ಪಾತ್ರದ ಬಗ್ಗೆ ಸಚಿನ್ ತೆಂಡೂಲ್ಕರ್ ಹೇಳಿದ್ದಿಷ್ಟು!

Sachin Tendulkar statement on Rahul Dravids role as Indias coach for the upcoming tour of Sri Lanka
ಲಂಕಾ ಸರಣಿಯಲ್ಲಿ Dravid ಇದನ್ನ ಮಾಡಿ ತೋರಿಸ್ತಾರೆ ಎಂದ Sachin | Oneindia Kannada

ಮುಂಬೈ ಜೂನ್ 23: ಜುಲೈನಲ್ಲಿ ಭಾರತ ಕ್ರಿಕೆಟ್ ತಂಡ ಶ್ರೀಲಂಕಾಗೆ ಪ್ರವಾಸ ಕೈಗೊಳ್ಳಲಿದ್ದು ಸೀಮಿತ ಓವರ್‌ಗಳ ಸರಣಿಯಲ್ಲಿ ಭಾಗಿಯಾಗಲಿದೆ. ಭಾರತೀಯ ಕ್ರಿಕೆಟ್‌ನ ಒಂದು ತಂಡ ಇಂಗ್ಲೆಂಡ್‌ನಲ್ಲಿರುವಾಗಲೇ ಶ್ರೀಲಂಕಾಗೆ ಪ್ರವಾಸ ಕೈಗೊಳ್ಳುವ ತಂಡದ ಕೋಚ್ ಜವಾಬ್ಧಾರಿಯನ್ನು ರಾಹುಲ್ ದ್ರಾವಿಡ್ ವಹಿಸಿಕೊಂಡಿದ್ದಾರೆ. ಹೀಗಾಗಿ ಈ ಪ್ರವಾಸಕ್ಕೂ ಮುನ್ನ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ರಾಹುಲ್ ದ್ರಾವಿಡ್ ಬಗ್ಗೆ ಮಾತುಗಳನ್ನಾಡಿದ್ದಾರೆ.

"ಈ ತಂಡದಲ್ಲಿರುವ ಆಟಗಾರರು ರಾಹುಲ್ ದ್ರಾವಿಡ್ ಅವರೊಂದಿಗೆ ಉತ್ತಮ ಸಮಯವನ್ನು ಈಗಾಗಲೇ ಕಳೆದಿದ್ದು ಅವರೆಲ್ಲರಿಗೂ ದ್ರಾವಿಡ್ ಬಗ್ಗೆ ತಿಳಿದಿದೆ. ಕೋಚ್ ಆದವರು ತಂಡದಲ್ಲಿ ಹಾಗೂ ಡ್ರೆಸ್ಸಿಂಗ್ ರೂಮ್‌ನಲ್ಲಿ ಉತ್ತಮ ವಾತಾವರಣವನ್ನುಂಟು ಮಾಡಬೇಕು. ರಾಹುಲ್ ಅದನ್ನು ಮಾಡುತ್ತಾರೆ. ಇಂತಾ ಹಂತದಲ್ಲಿ ಆಟಗಾರರಲ್ಲಿ ಲೋಪಗಳಿಲ್ಲದ ಹೊರತು ನೀವು ಕೋಚ್ ಮಾಡುವ ಅಗತ್ಯಗಳು ಇರುವುದಿಲ್ಲ. ಅವರಿಗೆ ಕವರ್ ಡ್ರೈವ್ ಬಾರಿಸುವುದು ಹಾಗೂ ಸ್ವಿಂಗ್ ಎಸೆತಗಳನ್ನು ಎಸೆಯುವುದು ಹೇಗೆ ಎಂಬುದು ತಿಳಿದಿರುತ್ತದೆ" ಎಂದಿದ್ದಾರೆ ಸಚಿನ್ ತೆಂಡೂಲ್ಕರ್.

WTC Final: ನ್ಯೂಜಿಲೆಂಡ್ ಆಟಗಾರರನ್ನು ನಿಂದಿಸಿದ ಇಬ್ಬರು ಪ್ರೇಕ್ಷಕರಿಗೆ ಕ್ರೀಡಾಂಗಣದಿಂದ ಗೇಟ್‌ಪಾಸ್WTC Final: ನ್ಯೂಜಿಲೆಂಡ್ ಆಟಗಾರರನ್ನು ನಿಂದಿಸಿದ ಇಬ್ಬರು ಪ್ರೇಕ್ಷಕರಿಗೆ ಕ್ರೀಡಾಂಗಣದಿಂದ ಗೇಟ್‌ಪಾಸ್

ಆಟಗಾರರಿಗೆ ಜವಾಬ್ಧಾರಿ ತಿಳಿದಿರುತ್ತದೆ

ಆಟಗಾರರಿಗೆ ಜವಾಬ್ಧಾರಿ ತಿಳಿದಿರುತ್ತದೆ

"ಯಾವಾಗ ಆಟಗಾರನೋರ್ವ ಪ್ರಯಾಸಪಡುತ್ತಿರುತ್ತಾನೋ ಆಗ ಅನುಭವಿಗಳ ಅಗತ್ಯವಿರುತ್ತದೆ. ಆಗ ಕೋಚ್ ಸಹಾಯಕ್ಕೆ ಬರುತ್ತಾರೆ. ಅದನ್ನು ಹೊರತುಪಡಿಸಿ ತಂಡದ ಆಟಗಾರರಿಗೆ ತಮ್ಮ ಜವಾಬ್ಧಾರಿ ಏನಿದೆ, ತಾವು ಏನು ಮಾಡಬೇಕಿದೆ ಎಂಬುದು ತಿಳಿದಿರುತ್ತದೆ" ಎಂದು ಸಚಿನ್ ತೆಂಡೂಲ್ಕರ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಅನುಭವಿ ಹಾಗು ಯುವ ಆಟಗಾರರ ಉತ್ತಮ ಸಮ್ಮಿಶ್ರಣ

ಅನುಭವಿ ಹಾಗು ಯುವ ಆಟಗಾರರ ಉತ್ತಮ ಸಮ್ಮಿಶ್ರಣ

ಶ್ರೀಲಂಕಾಗೆ ತೆರಳುವ ಭಾರತೀಯ ಕ್ರಿಕೆಟ್ ತಂಡದ ಬಗ್ಗೆ ಸಚಿನ್ ತೆಂಡೂಲ್ಕರ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅನುಭವಿಗಳು ಹಾಗೂ ಯುವ ಆಟಗಾರರನ್ನು ಒಳಗೊಂಡಿರುವ ಅತ್ಯಂತ ಉತ್ತಮ ತಂಡ ಎಂದು ಸಚಿನ್ ಅಭಿಪ್ರಾಯಪಟ್ಟಿದ್ದಾರೆ. ದ್ರಾವಿಡ್ ಅವರ ಉಪಸ್ಥಿತಿ ತಂಡಕ್ಕೆ ಹೆಚ್ಚಿನ ಲಾಭವನ್ನುಂಟು ಮಾಡಲಿದೆ ಎಂದು ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.

ದ್ರಾವಿಡ್ ಉಪಸ್ಥಿತಿ ಸಹಾಯಕ

ದ್ರಾವಿಡ್ ಉಪಸ್ಥಿತಿ ಸಹಾಯಕ

ಇನ್ನು ತಂಡದ ನಾಯಕ ಶಿಖರ್ ಧವನ್ ಬಗ್ಗೆಯೂ ಸಚಿನ್ ಮಾತನಾಡಿದ್ದಾರೆ. "ಶಿಖರ್ ಧವನ್ ಟೀಮ್ ಇಂಡಿಯಾದಲ್ಲಿ 10 ವರ್ಷಗಳಿಂದ ಆಡುತ್ತಿದ್ದಾರೆ. ಈ ಸುದೀರ್ಘ ಅನುಭವ ತಂಡಕ್ಕೆ ಲಾಭವಾಗಲಿದೆ. ತಂಡದಲ್ಲಿ ಅನುಭವಿಗಳು ಹಾಗೂ ಯುವ ಆಟಗಾರರ ಉತ್ತಮ ಮಿಶ್ರಣವಿದೆ. ಇವರೆಲ್ಲರಿಗೂ ರಾಹುಲ್ ದ್ರಾವಿಡ್ ಉಪಸ್ಥಿತಿ ಉತ್ತಮ ರೀತಿಯಲ್ಲಿ ಸಹಕಾರಿಯಾಗಲಿದೆ" ಎಂದು ಸಚಿನ್ ತೆಂಡೂಲ್ಕರ್ ಹೇಳಿಕೆ ನೀಡಿದ್ದಾರೆ.

ಸಚಿನ್ ಹಾಗೂ ದ್ರಾವಿಡ್ ಜೋಡಿ

ಸಚಿನ್ ಹಾಗೂ ದ್ರಾವಿಡ್ ಜೋಡಿ

ಸಚಿನ್ ತೆಂಡೂಲ್ಕರ್ ಹಾಗೂ ರಾಹುಲ್ ದ್ರಾವಿಡ್ ಭಾರತೀಯ ಕ್ರಿಕೆಟ್ ತಂಡದ ಇಬ್ಬರು ಅತ್ಯುತ್ತಮ ಆಟಗಾರರು. ಸುಮಾರು ಒಂದೂವರೆ ದಶಕಗಳ ಕಾಲ ಈ ಇಬ್ಬರು ಆಟಗಾರರು ಜೊತೆಯಾಗಿ ಆಡಿದ್ದಾರೆ. ಈ ಜೋಡಿ 11,000 ರನ್‌ಗಳ ಜೊತೆಯಾಟವನ್ನು 48ರ ಸರಾಸರಿಯಲ್ಲಿ ಭಾರತೀಯ ಕ್ರಿಕೆಟ್‌ಗೆ ನೀಡಿದೆ. ಸಚಿನ್ ಹಾಗೂ ದ್ರಾವಿಡ್ ಜೋಡಿ 31 ಶತಕದ ಜೊತೆಯಾಟದಲ್ಲಿ ಭಾಗಿಯಾಗಿದ್ದಾರೆ.

Story first published: Wednesday, June 23, 2021, 15:35 [IST]
Other articles published on Jun 23, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X