ಕ್ರಿಕೆಟ್‌ನ ಪ್ರಮುಖ ನಿಯಮವೊಂದರ ಬದಲಾವಣೆಗೆ ಸಚಿನ್ ಸಲಹೆ: "ಬೌಲರ್‌ಗಳ ಪರ ಈ ನಿಯಮ"

ವಿಶ್ವದ ಅತ್ಯಂತ ಜನಪ್ರಿಯ ಕ್ರೀಡೆಗಳ ಪೈಕಿ ಕ್ರಿಕೆಟ್ ಕೂಡ ಒಂದು. ಈ ಕ್ರಿಕೆಟ್‌ನಲ್ಲಿ ಕಾಲ ಕಳೆದಂತೆ ಸಾಕಷ್ಟು ನಿಯಮಗಳನ್ನು ಬದಲಾವಣೆಗಳು ಆಗುತ್ತಾ ಬಂದಿದೆ. ಕ್ರಿಕೆಟ್‌ನ ಸ್ವರೂಪ, ಮಾದರಿಯಲ್ಲಿಯೂ ಅನೇಕ ಬೆಳವಣಿಗೆಗಳು ಆಗಿದೆ. ಆದರೆ ಈ ಬದಲಾವಣೆಗಳು ಬಹುತೇಕ ಸಂದರ್ಭಗಳಲ್ಲಿ ಬ್ಯಾಟರ್‌ಗಳಿಗೆ ಪೂರಕವಾಗಿರುತ್ತದೆ ಎಂಬುದು ಚರ್ಚೆಯ ಅಂಶ. ಹೀಗಾಗಿ ಕ್ರಿಕೆಟ್ ಬ್ಯಾಟರ್‌ಗಳ ಆಟ ಎಂಬ ಆಪಾದನೆಗಳು ಕೂಡ ಇದೆ. ಆದರೆ ಕ್ರಿಕೆಟ್‌ನ ದಿಗ್ಗಜ ಸಚಿನ್ ತೆಂಡೂಲ್ಕರ್ ಗುರುವಾರ ಪ್ರಮುಖ ಬದಲಾವಣೆಯೊಂದಕ್ಕೆ ಸಲಹೆ ನೀಡಿದ್ದಾರೆ. ಆದರೆಈ ಬದಲಾವಣೆ ಬೌಲರ್‌ಗಳ ಪರವಾಗಿದೆ ಎಂದು ಕೂಡ ಸಚಿನ್ ಹೇಳಿದ್ದಾರೆ.

ಅಂದ ಹಾಗೆ ಸಚಿನ್ ತೆಂಡೂಲ್ಕರ್ ಕ್ರಿಕೆಟ್‌ನ ನಿಯಮದಲ್ಲಿ ಬದಲಾವಣೆ ಮಾಡಲು ಸಲಹೆ ನೀಡಿದ ಹಿಂದೆ ಕಾರಣವೂ ಇದೆ. ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವಿನ ಆಶಸ್ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯದ ಮೂರನೇ ದಿನದಾಟದಲ್ಲಿ ಅಪರೂಪದ ಘಟನೆಯಿಂದು ನಡೆಯಿತು. ಆಸಿಸ್ ಬೌಲರ್ ಕ್ಯಾಮರೂನ್ ಗ್ರೀನ್ ಎಸೆದ ಚೆಂಡು ವಿಕೆಟ್‌ಗೆ ಬಡಿದಿದ್ದರೂ ಬೇಲ್ಸ್ ನೆಲಕ್ಕುರುಳದೆ ಬ್ಯಾಟಿಂಗ್ ನಡೆಸುತ್ತಿದ್ದ ಬೆನ್ ಸ್ಟೋಕ್ಸ್ ಜೀವದಾನ ಪಡೆದುಕೊಂಡಿದ್ದರು. ಈ ಘಟನೆಯ ನಂತರ ಟ್ವಿಟ್ಟರ್‌ನಲ್ಲಿ ಸಚಿನ್ ತೆಂಡೂಲ್ಕರ್ ಪ್ರತಿಕ್ರಿಯಿಸಿದ್ದಾರೆ.

ಚೇತೇಶ್ವರ ಪೂಜಾರಗೆ ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ಬೆಂಬಲ!ಚೇತೇಶ್ವರ ಪೂಜಾರಗೆ ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ಬೆಂಬಲ!

"ಬೌಲರ್ ಎಸೆದ ಚೆಂಡು ವಿಕೆಟ್‌ಗೆ ಬಡಿದರೂ ಬೇಲ್ಸ್ ಉರುಳದಿದ್ದರೆ ಅದನ್ನು ಔಟ್ ಎಂದು ನಿರ್ಧರಿಸುವ ನಿಯಮ ಬಂದರೆ ಹೇಗೆ? ಈ ಬಗ್ಗೆ ನೀವೇನು ಹೇಳುತ್ತೀರಿ? ಬೌಲರ್‌ಗಳ ಪರವಾಗಿರಲಿ" ಎಂದು ಸಚಿನ್ ತೆಂಡೂಲ್ಕರ್ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಸಚಿನ್ ತೆಂಡೂಲ್ಕರ್ ಅವರ ಈ ಅಭಿಪ್ರಾಯದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ.

ಇನ್ನು ಈ ಅಭಿಪ್ರಾಯಕ್ಕೆ ಆಸ್ಟ್ರೇಲಿಯಾ ಕ್ರಿಕೆಟ್‌ನ ದಿಗ್ಗಜ ಬೌಲರ್ ಮಾಜಿ ಸ್ಪಿನ್ನರ್ ಶೇನ್ ವಾರ್ನ್ ಪ್ರತಿಕ್ರಿಯೆ ನೀಡಿದ್ದಾರೆ. "ಕುತೂಹಲಕಾರಿ ಅಂಶ ಮತ್ತು ಈ ಬಗ್ಗೆ ಚರ್ಚೆಯಾಗಲಿ ನನ್ನ ಗೆಳೆಯ. ಈ ಬಗ್ಗೆ ಚರ್ಚೆಗೆ ಈ ವಿಚಾರವನ್ನು ನಾನು ವಿಶ್ವ ಕ್ರಿಕೆಟ್ ಕಮಿಟಿಗೆ ತೆಗೆದುಕೊಂಡು ಹೋಗುತ್ತೇನೆ. ಇಂದು ನಡೆದಂತೆ ಯಾವತ್ತೂ ಹಿಂದೆ ಆಗಿರಲಿಲ್ಲ. ಗ್ರೀನ್ ಎಸೆದ ಚೆಂಡು ಗಂಟೆಗೆ 142 ಕಿ. ಮೀ ವೇಗದಲ್ಲಿತ್ತು. ಅಲ್ಲದೆ ಬಲವಾಗಿ ವಿಕೆಟ್‌ಗೆ ಅದು ಬಡಿದಿತ್ತು" ಎಂದು ಶೇನ್ ವಾರ್ನ್ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ.

ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವಿನ ಆಶಸ್ ಟೆಸ್ಟ್ ಸರಣಿ ನಡೆಯುತ್ತಿದ್ದು ನಾಲ್ಕನೇ ಪಂದ್ಯದಲ್ಲಿಯೂ ಆತಿಥೇಯ ಆಸ್ಟ್ರೇಲಿಯಾ ತಂಡ ಮೇಲುಗೈ ಸಾಧಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ಅದ್ಭುತ ಬ್ಯಾಟಿಂಗ್ ನಡೆಸಿದ್ದು ನಂತರ ಬೌಲಿಂಗ್‌ನಲ್ಲಿಯೂ ಆಸಿಸ್ ಬೌಲರ್‌ಗಳ ದಾಳಿಗೆ ಇಂಗ್ಲೆಂಡ್ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಪಟಪಟನೆ ವಿಕೆಟ್ ಕಳೆದುಕೊಂಡು ಫೆವಿಲಿಯನ್ ಸೇರಿಕೊಂಡಿದ್ದರು. ಈ ಸಂದರ್ಭದಲ್ಲಿ ಜಾನಿ ಬೈರ್‌ಸ್ಟೋವ್ ಹಾಗೂ ಬೆನ್ ಸ್ಟೋಕ್ಸ್ ಇಂಗ್ಲೆಂಡ್ ತಂಡಕ್ಕೆ ಆಸರೆಯಾಗಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಸೋಲು: ಪ್ರಮುಖ ಕಾರಣ ಏನೆಂದು ತಿಳಿಸಿದ ದಿನೇಶ್ ಕಾರ್ತಿಕ್ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಸೋಲು: ಪ್ರಮುಖ ಕಾರಣ ಏನೆಂದು ತಿಳಿಸಿದ ದಿನೇಶ್ ಕಾರ್ತಿಕ್

ಬೆನ್ ಸ್ಟೋಕ್ಸ್ 66 ರನ್‌ಗಳಿಸಿ ಔಟಾಗುವ ಮೂಲಕ ಶತಕದ ಜೊತೆಯಾಟ ನೀಡಿ ಈ ಜೋಡಿ ಬೇರ್ಪಟ್ಟಿತು. ಜಾನಿ ಬೈರ್‌ಸ್ಟೋವ್ 103 ರನ್‌ಗಳಿಸಿ ಕ್ರೀಸ್‌ನಲ್ಲಿ ಅಜೇಯವಾಗುಳಿದು ನಾಲ್ಕನೇ ದಿನಕ್ಕರ ಕ್ರೀಸ್ ಕಾಯ್ದುಕೊಂಡಿದ್ದಾರೆ. ಅವರಿಗೆ ಜಾಕ್ ಲೀಚ್ ಸಾತ್ ನೀಡಿದ್ದಾರೆ. ಮೂರನೇ ದಿನದಾಟ ಮುಕ್ತಾಯವಾದಾಗ ಇಂಗ್ಲೆಂಡ್ ತಂಡ 7 ವಿಕೆಟ್ ಕಳೆದುಕೊಂಡು 258 ರನ್‌ಗಳಿಸಿದೆ. ಇಂಗ್ಲೆಂಡ್ ತಂಡ ಇನ್ನು ಕೂಡ 158 ರನ್‌ಗಳಷ್ಟು ಹಿಂದುಳಿದಿದೆ.

ಇನ್ನು ಇದಕ್ಕೂ ಮುನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದೆ. ಸುದೀರ್ಘ ಕಾಲದ ಬಳಿಕ ಆಸಿಸ್ ಟೆಸ್ಟ್ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ ಉಸ್ಮಾನ್ ಖವಾಜ ಸಿಡಿಸಿದ ಭರ್ಜರಿ ಶತಕದ ನೆರವಿನಿಂದ ಆಸ್ಟ್ರೇಲಿಯಾ ತಂಡ ಭರ್ಜರಿ 416 ರನ್‌ಗಳನ್ನು ಗಳಿಸಿ ಡಿಕ್ಲೇರ್ ಮಾಡಿದೆ. ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ತಂಡ ಮತ್ತೊಮ್ಮೆ ಭಾರೀ ಕುಸಿತವನ್ನು ಕಂಡಿತು. ತಂಡ 36 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ನಂತರ ಜಾನಿ ಬೈರ್‌ಸ್ಟೋವ್ ಹಾಗೂ ಬೆನ್ ಸ್ಟೋಕ್ಸ್ ಶತಕದ ಜೊತೆಯಾಟ ನೀಡುವ ಮೂಲಕ ಇಂಗ್ಲೆಂಡ್ ಹೋರಾಟದ ಪ್ರದರ್ಶನ ನೀಡಿದೆ.

ಕೊಹ್ಲಿ 3ನೇ ಟೆಸ್ಟ್ ಪಂದ್ಯದಲ್ಲಿ ಆಡುತ್ತಾರೋ Or ಇಲ್ಲವೋ?: ಮಹತ್ವದ ಸುಳಿವು ನೀಡಿದ ರಾಹುಲ್ ದ್ರಾವಿಡ್ಕೊಹ್ಲಿ 3ನೇ ಟೆಸ್ಟ್ ಪಂದ್ಯದಲ್ಲಿ ಆಡುತ್ತಾರೋ Or ಇಲ್ಲವೋ?: ಮಹತ್ವದ ಸುಳಿವು ನೀಡಿದ ರಾಹುಲ್ ದ್ರಾವಿಡ್

ಆಸ್ಟ್ರೇಲಿಯಾ ಪ್ಲೇಯಿಂಗ್ XI: ಮಾರ್ಕಸ್ ಹ್ಯಾರಿಸ್, ಡೇವಿಡ್ ವಾರ್ನರ್, ಮಾರ್ನಸ್ ಲ್ಯಾಬುಶೈನ್, ಸ್ಟೀವನ್ ಸ್ಮಿತ್, ಉಸ್ಮಾನ್ ಖವಾಜಾ, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್ (ನಾಯಕ), ನಾಥನ್ ಲಿಯಾನ್, ಮಿಚೆಲ್ ಸ್ಟಾರ್ಕ್, ಸ್ಕಾಟ್ ಬೋಲ್ಯಾಂಡ್
ಬೆಂಚ್: ಮಿಚೆಲ್ ಸ್ವೆಪ್ಸನ್, ಝೈ ರಿಚರ್ಡ್ಸನ್, ಮೈಕೆಲ್ ನೆಸರ್

T20 ಯಲ್ಲಿ ICC ಜಾರಿಗೆ ತಂದಿರುವ ಹೊಸ ರೂಲ್ಸ್ ನಿಂದ ಯಾರಿಗೆ ಕಷ್ಟ? | Oneindia Kannada

ಇಂಗ್ಲೆಂಡ್ ತಂಡ ಪ್ಲೇಯಿಂಗ್ XI: ಹಸೀಬ್ ಹಮೀದ್, ಝಾಕ್ ಕ್ರಾಲಿ, ಡೇವಿಡ್ ಮಲನ್, ಜೋ ರೂಟ್ (ನಾಯಕ), ಬೆನ್ ಸ್ಟೋಕ್ಸ್, ಜಾನಿ ಬೈರ್‌ಸ್ಟೋ, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಮಾರ್ಕ್ ವುಡ್, ಸ್ಟುವರ್ಟ್ ಬ್ರಾಡ್, ಜ್ಯಾಕ್ ಲೀಚ್, ಜೇಮ್ಸ್ ಆಂಡರ್ಸನ್
ಬೆಂಚ್: ರೋರಿ ಬರ್ನ್ಸ್, ಕ್ರಿಸ್ ವೋಕ್ಸ್, ಡೇನಿಯಲ್ ಲಾರೆನ್ಸ್

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Friday, January 7, 2022, 20:36 [IST]
Other articles published on Jan 7, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X