ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮೆಲ್ಬೋರ್ನ್ ಉಪನಗರದ ರಸ್ತೆಗಳಿಗೆ ವಿರಾಟ್, ಸಚಿನ್, ಕಪಿಲ್‌ದೇವ್ ಹೆಸರು!

Sachin Tendulkar, Virat Kohli, Kapil Dev Get Streets Named After Them In Melbourne
Virat , sachin and kapil are now also the names of streets in Melbourne | Oneindia Kannada

ಮೆಲ್ಬೋರ್‌ನ ರಾಕ್‌ಬ್ಯಾಂಕ್ ಉಪನಗರದಲ್ಲಿ ನಿರ್ಮಾಣಗೊಳ್ಳುತ್ತಿರುವ ವಸತಿ ಬಡಾವಣೆಯ ರಸ್ತೆಗಳಿಗೆ ಸಚಿನ್ ತೆಂಡೂಲ್ಕರ್, ಕಪಿಲ್ ದೇವ್ ಮತ್ತಿ ವಿರಾಟ್ ಕೊಹ್ಲಿ ಹೆಸರನ್ನು ಇಡಲಾಗಿದೆ. ಅಕೋಲೇಡ್ ಎಸ್ಟೇಟ್ ಅಭಿವೃದ್ಧಿಪಡಿಸಿರುವ ವಸತಿ ಬಡಾವಣೆಗೆ ಸಂಬಂಧಿಸಿದ ರಸ್ತೆಗೆ 'ತೆಂಡೂಲ್ಕರ್ ಡ್ರೈವ್', 'ಕೊಹ್ಲಿ ಕ್ರೆಸೆಂಟ್' ಮತ್ತು 'ದೇವ್ ಟೆರೇಸ್' ಎಂದು ಹೆಸರನ್ನು ಇಡಲಾಗಿದೆ.

ಭಾರತೀಯ ಕ್ರಿಕೆಟಿಗರ ಮಾತ್ರವಲ್ಲದೆ ಇತರ ಕ್ರಿಕೆಟಿಗರನ್ನ ಹೆಸರನ್ನೂ ಇಲ್ಲಿನ ರಸ್ತೆಗಳಿಗೆ ಇರಿಸಲಾಗಿದೆ. ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ವಾ, ಪಾಕಿಸ್ತಾನದ ಮಾಜಿ ನಾಯಕ ಜಾವೇದ್ ವಿಯಾಂದಾದ್, ವಿಂಡೀಸ್‌ನ ದಿಗ್ಗಜ ವೇಗಿ ಕಾರ್ಟ್ಲೀ ಆಬ್ರೋಸ್, ಗ್ಯಾರಿ ಸೋಬರ್ಸ್, ದಕ್ಷಿಣ ಆಫ್ರಿಕಾದ ಜಾಕ್‌ ಕ್ಯಾಲೀಸ್, ಪಾಕಿಸ್ತಾನದ ವಾಸಿಮ್ ಅಕ್ರಮ್ ಹೆಸರುಗಳ ರಸ್ತೆಯನ್ನೂ ಇಲ್ಲಿ ಕಾಣಬಹುದಾಗಿದೆ.

ಕೆಎಲ್ ರಾಹುಲ್, ರಿಷಭ್ ಪಂತ್‌ ವಿಕೆಟ್ ಕೀಪಿಂಗ್ ಬಗ್ಗೆ ಬಾಯ್ತೆರೆದ ಕಿರ್ಮಾನಿಕೆಎಲ್ ರಾಹುಲ್, ರಿಷಭ್ ಪಂತ್‌ ವಿಕೆಟ್ ಕೀಪಿಂಗ್ ಬಗ್ಗೆ ಬಾಯ್ತೆರೆದ ಕಿರ್ಮಾನಿ

ದುಬಾರಿ ರಸ್ತೆಗೆ ವಿರಾಟ್ ಹೆಸರು

ದುಬಾರಿ ರಸ್ತೆಗೆ ವಿರಾಟ್ ಹೆಸರು

ಪ್ರಸಕ್ತ ಆಟಗಾರರಲ್ಲಿ ತಾನು ವಿರಾಟ್ ಕೊಹ್ಲಿಯ ದೊಡ್ಡ ಅಭಿಮಾನಿ ಎಂದು ಹೇಳಿಕೊಂಡಿರುವ ಸಂಸ್ಥೆಯ ನಿರ್ದೇಶಕ ಖರಮ್ ಸಯೀಸ್ ದುಬಾರಿ ರಸ್ತೆಗೆ ಕೊಹ್ಲಿ ಹೆಸರನ್ನು ಇಡಲಾಗಿದೆ ಎಂದಿದ್ದಾರೆ. ಕುಮಾರ ಸಂಗಕ್ಕರ, ರಾಹುಲ್ ದ್ರಾವಿಡ್, ಎಂಎಸ್ ಧೋನಿ ಹೆಸರಿಗಳನ್ನು ಇಡಲು ನಿರ್ಧರಿಸಲಾಗಿತ್ತು. ಆದರೆ ಬೇರೆ ಬೇರೆ ಕಾರಣಗಳಿಂದ ಅದಕ್ಕೆ ಅನುಮತಿ ಸಿಗಲಿಲ್ಲ ಎಂದು ಅವರು ಹೇಳಿದ್ದಾರೆ.

ಭಾರತೀಯರಿಂದ ಉತ್ತಮ ಪ್ರತಿಕ್ರಿಯೆ

ಭಾರತೀಯರಿಂದ ಉತ್ತಮ ಪ್ರತಿಕ್ರಿಯೆ

ಮೆಲ್ಬೋರ್ನ್ ಕೌನ್ಸಿಲ್ ವ್ಯಾಪ್ತಿಯಲ್ಲಿ ಬರುವ ರಾಕ್‌ಬ್ಯಾಂಕ್ ಭಾರತೀಯ ಸಮುದಾಯದವರು ಹೆಚ್ಚಾಗಿ ನೆಲೆಸಿರುವ ಉಪನಗರವಾಗಿದೆ. ಎಸ್ಟೇಟ್‌ನ ನಿರ್ಮಾಣಗಾರರ ಪ್ರಕಾರ ಇಲ್ಲಿ ಭಾರತೀಯ ಸಮುದಾಯದ ಪ್ರತಿಕ್ರಿಯೆ ನಿರೀಕ್ಷಿಸಿರುವುದಕ್ಕಿಂತ ಉತ್ತಮವಾಗಿದೆ ಎಂದು ಹೇಳಿಕೊಂಡಿದ್ದಾರೆ.

ಆಸಿಸ್ ದಿಗ್ಗಜನಿಗೆ ಸಿಗಲಿಲ್ಲ ಅನುಮತಿ

ಆಸಿಸ್ ದಿಗ್ಗಜನಿಗೆ ಸಿಗಲಿಲ್ಲ ಅನುಮತಿ

ಇದೇ ಸಂದರ್ಭದಲ್ಲಿ ಇಲ್ಲಿನ ರಸ್ತೆಯೊಂದಕ್ಕೆ ಆಸ್ಟ್ರೇಲಿಯಾದ ದಿಗ್ಗಜ ಬ್ಯಾಟ್ಸ್‌ಮನ್ ಡಾನ್ ಬ್ರಾಡ್ಮನ್ ಹೆಸರಿಡಲು ತೀರ್ಮಾನಿಸಿ ಸ್ಥಳೀಯಾಡಳಿತಕ್ಕೆ ಅನುಮತಿಯನ್ನು ಕೋರಿದ್ದರಂತೆ. ಆದರೆ ಮೆಲ್ಬೋರ್ನ್‌ನಲ್ಲಿ ಈಗಾಗಲೇ ಬ್ರಾಡ್ಮನ್ ಹೆಸರಿನ ರಸ್ತೆ ಇರುವ ಕಾರಣ ಅ ಹೆಸರು ಸಿಗಲಿಲ್ಲ ಎಂದು ರೆಸೀ ವೆಂಚರ್ಸ್ ನಿರ್ದೇಶಕ ಖರಮ್ ಸಯೀದ್ ತಿಳಿಸಿದ್ದಾರೆ.

Story first published: Wednesday, June 17, 2020, 15:49 [IST]
Other articles published on Jun 17, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X