ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಗಣಪತಿ ಹಬ್ಬಕ್ಕೆ ವಿಷ್ ಮಾಡಿದ ಸಚಿನ್, ಸೆಹ್ವಾಗ್, ಇನ್ನಿತರರು

Sachin Tendulkar, Virender Sehwag lead cricketers in greeting fans on Ganesh Chaturthi

ಬೆಂಗಳೂರು, ಸೆಪ್ಟೆಂಬರ್ 13: ಗುರುವಾರ(ಸೆಪ್ಟೆಂಬರ್ 13) ದಿಂದ ಹತ್ತು ದಿನಗಳ ಗಣಪತಿ ಹಬ್ಬದ ಸಂಭ್ರಮ ಆರಂಭಗೊಂಡಿದೆ. ಹಾಲಿ, ಮಾಜಿ ಕ್ರಿಕೆಟರ್ ಗಳು ತಮ್ಮ ಫ್ಯಾನ್ಸ್ ಗಳಿಗೆ ಟ್ವಿಟ್ಟರ್ ಮೂಲಕ ಹಬ್ಬದ ಶುಭ ಹಾರೈಸಿದ್ದಾರೆ.

ಮಹಾರಾಷ್ಟ್ರದಲ್ಲಿ ಅದರಲ್ಲೂ ಮುಂಬೈನಲ್ಲಿ ಗಣಪತಿ ಹಬ್ಬವೆಂದರೆ ಸಂಭ್ರಮವೋ ಸಂಭ್ರಮ. ಸಾಂಪ್ರದಾಯಿಕ ಉಡುಗೆ ತೊಡುಗೆ ತೊಟ್ಟು ಸಿಹಿ ಹಂಚುತ್ತಾ, ಮನೆಯಲ್ಲಿ ಪೂಜೆ ಸಲ್ಲಿಸಿದ ಬಳಿಕ ಪೆಂಡಾಲ್ ನಲ್ಲಿ ಗಣಪತಿಯನ್ನು ಕೊಂಡಾಡುವುದು ಮಾಮೂಲಿ.

ಮತ್ತೆ ಮತ್ತೆ ತಪ್ಪನ್ನು ರಿಪೀಟ್ ಮಾಡಿದ್ದೆ ಸೋಲಿಗೆ ಕಾರಣ : ಲಕ್ಷ್ಮಣ್ಮತ್ತೆ ಮತ್ತೆ ತಪ್ಪನ್ನು ರಿಪೀಟ್ ಮಾಡಿದ್ದೆ ಸೋಲಿಗೆ ಕಾರಣ : ಲಕ್ಷ್ಮಣ್

ಮುಂಬೈ, ಪುಣೆ, ನಾಸೀಕ್, ನಾಗ್ಪುರ್ ಗಳಲ್ಲಿ ಎತ್ತರೆತ್ತರದ ವಿಭಿನ್ನ ಶೈಲಿಯ ಗಣಪತಿ ಮೂರ್ತಿಗಳನ್ನು ಇಟ್ಟು ಪೂಜಿಸಲಾಗುತ್ತದೆ. ಬಾಲಿವುಡ್ ಸ್ಟಾರ್ ಗಳಂತೆ ಕ್ರಿಕೆಟರ್ ಗಳು ಕೂಡಾ ಗಣಪತಿ ಹಬ್ಬದಲ್ಲಿ ಪ್ರಮುಖ ಆಕರ್ಷಣೆಯಾಗುತ್ತಾರೆ.

ಸಚಿನ್ ಸೇರಿದಂತೆ ಹಲವು ಕ್ರಿಕೆಟರ್ ಗಳ ನೆಚ್ಚಿನ ಆರಾಧ್ಯ ದೈವ ಗಣೇಶನನ್ನು ಭಕ್ತಿಯಿಂದ ಪೂಜಿಸಿ, ಮೋದಕ ನೈವೇದ್ಯ ಅರ್ಪಿಸಿ ನಂತರ ಎಲ್ಲರಿಗೂ ಹಂಚಲಾಗುತ್ತದೆ. ಕ್ರಿಕೆಟರ್ ಗಳು ಟ್ವಿಟ್ಟರ್ ಮೂಲಕ ವಿಶ್ ಮಾಡಿದ್ದು ಹೇಗೆ ಮುಂದೆ ಓದಿ...

ಗಣಪತಿ ಬಪ್ಪಾ ಮೋರೆಯಾ ಎಂದ ಸಚಿನ್

ಗಣಪತಿ ಬಪ್ಪಾ ಮೋರೆಯಾ, ಮಂಗಳ ಮೂರ್ತಿ ಮೋರೆಯಾ ಎಂದ ಸಚಿನ್ ತೆಂಡೂಲ್ಕರ್ ಅವರು ಗಣಪತಿ ಜತೆ ಚಿತ್ರ ತೆಗೆಸಿಕೊಂಡು ಎಲ್ಲರಿಗೂ ಶುಭಹಾರೈಸಿದ್ದಾರೆ.

ಕ್ರಿಕೆಟ್ ಗಣಪತಿ ಚಿತ್ರ ಹಾಕಿದ ಸೆಹ್ವಾಗ್

ವಿಘ್ನ ವಿನಾಯಕ ಎಲ್ಲಾ ಕಷ್ಟಗಳನ್ನು ನಿವಾರಿಸಲಿ, ಪ್ರೀತಿ ಹಾಗೂ ಸಂತಸ ತರಲಿ ಎಂದು ಶುಭ ಹಾರೈಸಿ, ಕ್ರಿಕೆಟ್ ಆಡುವ ಗಣಪತಿಯ ಚಿತ್ರ ಹಾಕಿದ್ದಾರೆ.

ಹಳೆ ದಿನಗಳನ್ನು ಸ್ಮರಿಸಿದ ರೋಹಿತ್ ಶರ್ಮಾ

ವಿರಾಟ್ ಕೊಹ್ಲಿ ಅವರ ಅನುಪಸ್ಥಿತಿಯಲ್ಲಿ ಏಷ್ಯಾಕಪ್ ಗಾಗಿ ಭಾರತ ತಂಡವನ್ನು ಮುನ್ನಡೆಸುತ್ತಿರುವ ರೋಹಿತ್ ಶರ್ಮಾ ಅವರು ಗಣೇಶ ಹಬ್ಬದ ಸಂದರ್ಭದಲ್ಲಿ ಚಿಕ್ಕಂದಿನಲ್ಲಿ ಸಕತ್ ಮಜಾ ಮಾಡುತ್ತಿದ್ದೆ ಎಂದು ನೆನಪಿಸಿಕೊಂಡಿದ್ದಾರೆ.

ಸಿಂಪಲ್ ಆಗಿ ವಿಶ್ ಮಾಡಿದ ರೈನಾ

ಸಿಂಪಲ್ ಆಗಿ ವಿಷ್ ಮಾಡಿದ ಸುರೇಶ್ ರೈನಾ, ಗಣೇಶ ದೇವರು ಎಲ್ಲರಿಗೂ ಜ್ಞಾನ, ಆರೋಗ್ಯ, ಸಂತಸ ನೀಡಲಿ ಎಂದಿದ್ದಾರೆ.

ಗೋವಾದ ವಿಶಿಷ್ಟ ಗಣೇಶನ ಪರಿಚಯ

ಗೋವಾದ ವಿಶಿಷ್ಟ ಗಣೇಶ ಮೂರ್ತಿಯನ್ನು ಪರಿಚಯಿಸಿದ ಮಾಜಿ ಕ್ರಿಕೆಟರ್ ವಿವಿಎಸ್ ಲಕ್ಷ್ಮಣ್. ಗೋವಾದಲ್ಲಿ ಬಾಳೆಕಾಯಿಯಿಂದ ಮಾಡಿರುವ ಈ ಸುಂದರ ಮೂರ್ತಿ ನೋಡಿ, ಬಾಳೆಹಣ್ಣು ನಂತರ ಗ್ರಾಮದವರಿಗೆ ಪ್ರಸಾದವಾಗಿ ಹಂಚಲಾಗುತ್ತದೆ.

Story first published: Friday, September 14, 2018, 13:59 [IST]
Other articles published on Sep 14, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X