ವೀರೇಂದ್ರ ಸೆಹ್ವಾಗ್ ಆರಂಭಿಕರಾಗಿ ಬಡ್ತಿ ಪಡೆದ ಕುತೂಹಲಕಾರಿ ಕತೆ!

ಮುಂಬೈ: ವೀರೇಂದ್ರ ಸೆಹ್ವಾಗ್ ಅವರು ಭಾರತ ತಂಡದಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಬಡ್ತಿ ಪಡೆದಿದ್ದರ ಕ್ರೆಡಿಟ್ ಭಾರತದ ಮಾಜಿ ನಾಯಕರಾದ ಸೌರವ್ ಗಂಗೂಲಿ ಮತ್ತು ದಂತಕತೆ ಸಚಿನ್ ತೆಂಡೂಲ್ಕರ್ ಅವರಿಗೆ ಸಲ್ಲಬೇಕು. ಮುಖ್ಯವಾಗಿ ಸಚಿನ್ ಅವರಿಂದಾಗಿ ಸೆಹ್ವಾಗ್ ಟಾಪ್ ಆರ್ಡರ್‌ನಲ್ಲಿ ಬಂದರು. ಇಲ್ಲದಿದ್ದರೆ ಸೆಹ್ವಾಗ್‌ಗೆ ಆರಂಭಿಕರಾಗಿ ಆಡುವ ಅವಕಾಶವೇ ಸಿಗುತ್ತಿರಲಿಲ್ಲ ಎಂದು ಭಾರತದ ಮಾಜಿ ಬ್ಯಾಟ್ಸ್‌ಮನ್ ಕಮ್ ವಿಕೆಟ್ ಕೀಪರ್ ಅಜಯ್ ರಾತ್ರ ಹೇಳಿದ್ದಾರೆ (ಚಿತ್ರಕೃಪೆ: VK ADDICTS).

ಫೀಫಾ ಪ್ಲೇಯರ್ ರೇಟಿಂಗ್‌ನಲ್ಲಿರುವ ಭಾರತದ ಟಾಪ್ 5 ಕ್ರಿಕೆಟಿಗರು ಇವರು

'ಆರಂಭಿಕರಾಗಿ ಸಚಿನ್ ಚೆನ್ನಾಗಿ ಆಡುತ್ತಿದ್ದರು. ಆದರೆ ಸೆಹ್ವಾಗ್ ಆರಂಭಿಕರಾಗಿ ಆಡಬೇಕಿತ್ತು. ಹೀಗಾಗಿ ಸಚಿನ್‌ಗೆ 4ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಆಡುವ ಆಫರ್ ನೀಡಲಾಯಿತು. ಆಮೇಲೆ ಸೆಹ್ವಾಗ್ ಅವರು ದಾದಾ (ಸೌರವ್ ಗಂಗೂಲಿ) ಜೊತೆಗೆ ಲೆಫ್ಟ್‌-ರೈಟ್ ಕಾಂಬಿನೇಶನ್‌ನಲ್ಲಿ ಬ್ಯಾಟಿಂಗ್ ಮಾಡತೊಡಗಿದರು,' ಎಂದು ಅಜಯ್ ಹೇಳಿದ್ದಾರೆ.

ವಿರಾಟ್, ಧೋನಿ or ರೋಹಿತ್?: ತನ್ನ ಬ್ಯಾಟಿಂಗ್ ಪಾರ್ಟ್ನರ್ ಹೆಸರಿಸಿದ ಪಂತ್

ವೀರೇಂದ್ರ ಸೆಹ್ವಾಗ್ ಓಪನರ್ ಆದ ಬಗ್ಗೆ ಅಜಯ್ ಕುತೂಹಲಕಾರಿ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಸೆಹ್ವಾಗ್ ಆರಂಭಿಕರಾಗಿ ಆಡಿದ್ದ ಮೊದಲ ಪಂದ್ಯ ಏನಾಯಿತು ಗೊತ್ತಾ?! ಮುಂದೆ ಓದಿ..

ಲೋವರ್ ಆರ್ಡರ್‌ನಲ್ಲಿ ಆಡಬೇಕಿತ್ತು

ಲೋವರ್ ಆರ್ಡರ್‌ನಲ್ಲಿ ಆಡಬೇಕಿತ್ತು

ಹಿಂದುಸ್ತಾನ್ ಟೈಮ್ಸ್ ಜೊತೆ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅಜೆಯ್, 'ಒಂದುವೇಳೆ ಸಚಿನ್ 4ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಆಡಲು ಒಪ್ಪದಿದ್ದರೆ ವೀರೂ ಲೋವರ್ ಆರ್ಡರ್‌ನಲ್ಲಿ ಆಡಬೇಕಿತ್ತು. ಏಕದಿನದಲ್ಲಿ ಸೆಹ್ವಾಗ್ ಆರಂಭಿಕರಾಗಿ ಆಡುವ ಅವಕಾಶ ಸಿಗುತ್ತಿರಲಿಲ್ಲ. ಆ ಕತೆ ತುಂಬಾ ವಿಭಿನ್ನವಾಗಿರುತ್ತಿತ್ತು,' ಎಂದಿದ್ದಾರೆ. ಅಂದರೆ ಸಚಿನ್ ಆ ದಿನ ತಾನು 4ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಆಡಲು ಸ್ವಪ್ರೇರಿತರಾಗಿ ಒಪ್ಪದಿದ್ದರೆ ಸೆಹ್ವಾಗ್‌ಗೆ ಹೆಚ್ಚು ಸಾಧನೆ ಮಾಡಲು ಆಗುತ್ತಿರಲಿಲ್ಲ ಎಂಬರ್ಥದಲ್ಲಿ ರಾತ್ರ ಮಾತನಾಡಿದ್ದಾರೆ.

ಏಕದಿನದಲ್ಲಿ ಆರಂಭಿಕರಾಗಿ ಬಡ್ತಿ

ಏಕದಿನದಲ್ಲಿ ಆರಂಭಿಕರಾಗಿ ಬಡ್ತಿ

2001ರಲ್ಲಿ ಗಂಗೂಲಿ ಅವರು ಸೆಹ್ವಾಗ್ ಜೊತೆ ಆರಂಭಿಕರಾಗಿ ಆಡುವ ಆಲೋಚನೆ ತಾಳಿದ್ದರು. ಜುಲೈ 26, 2001ರಲ್ಲಿ ಭಾರತ-ಶ್ರೀಲಂಕಾ-ನ್ಯೂಜಿಲೆಂಡ್ ನಡುವಿನ ತ್ರಿಕೋನ ಸರಣಿಯಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಗಂಗೂಲಿ ತನ್ನ ಆಲೋಚನೆಯನ್ನು ಕಾರ್ಯರೂಪಕ್ಕೆ ತಂದರು. ಆ ದಿನ ಸಚಿನ್ ಕೂಡ ಗಾಯದಿಂದಾಗಿ ತಂಡದಿಂದ ಹೊರಗಿದ್ದರು. ಆವತ್ತು ಸೆಹ್ವಾಗ್ ಏಕದಿನದಲ್ಲಿ ಆರಂಭಿಕರಾಗಿ ಬಡ್ತಿ ಪಡೆದರು.

ಭಾರತಕ್ಕೆ ಹೀನಾಯ ಸೋಲು

ಭಾರತಕ್ಕೆ ಹೀನಾಯ ಸೋಲು

2001 ಜುಲೈ 26ರಂದು ನಡೆದಿದ್ದ ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಭಾರತ ತಂಡ 67 ರನ್ ಸೋಲನುಭವಿಸಿತು. ನ್ಯೂಜಿಲೆಂಡ್ ನೀಡಿದ್ದ 201 ರನ್ ಗುರಿ ತಲುಪಲು ಭಾರತಕ್ಕೆ ಸಾಧ್ಯವಾಗಿರಲಿಲ್ಲ. 39.4 ಓವರ್‌ಗೆ ಎಲ್ಲಾ ವಿಕೆಟ್ ಕಳೆದು ಭಾರತ 133 ರನ್ ಬಾರಿಸಿತ್ತು. ಅಂದು ಆರಂಭಿಕರಾಗಿ ಮೊದಲ ಪಂದ್ಯ ಆಡಿದ್ದ ಸೆಹ್ವಾಗ್ 54 ಎಸೆತಗಳಲ್ಲಿ 33 ರನ್ ಬಾರಿಸಿ ರನ್ ಔಟ್ ಆಗಿದ್ದರು.

ಸೆಹ್ವಾಗ್ ಸ್ಫೋಟಕ ಶತಕ

ಸೆಹ್ವಾಗ್ ಸ್ಫೋಟಕ ಶತಕ

ಆರಂಭಿಕರಾಗಿ ಬ್ಯಾಟಿಂಗ್ ಮಾಡಿದ್ದ ಸೆಹ್ವಾಗ್ ಮೊದಲ ಎರಡು ಪಂದ್ಯಗಳಲ್ಲಿ ನೀರಸ ಬ್ಯಾಟಿಂಗ್ ಪ್ರದರ್ಶಿಸಿ ವೈಫಲ್ಯ ಅನುಭವಿಸಿದ್ದರು. ಆದರೆ ಇದೇ ಸಣಿಯಲ್ಲಿ ಆರಂಭಿಕರಾಗಿ ಆಡಿದ ಮೂರನೇ ಪಂದ್ಯದಲ್ಲಿ ಕಿವೀಸ್ ವಿರುದ್ಧ ವೀರೂ ಸ್ಫೋಟಕ ಶತಕ ಬಾರಿಸಿದ್ದರು. ಅಂದು 70 ಎಸೆತಗಳಲ್ಲಿ ಸೆಹ್ವಾಗ್ ಭರ್ತಿ 100 ರನ್ ಗಳಿಸಿದ್ದರು. ಪಂದ್ಯದಲ್ಲಿ ಭಾರತ 7 ವಿಕೆಟ್ ಗೆಲುವನ್ನಾಚರಿಸಿತ್ತು. ಈ ಸ್ಫೋಟಕ ಶತಕ ಸೆಹ್ವಾಗ್‌ಗೆ ಆರಂಭಿಕರಾಗಿ ಜನ್ಮ ನೀಡಿದ್ದಷ್ಟೇ ಅಲ್ಲ, ವೀರೂ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನಕ್ಕೆ ಮರುಜನ್ಮವೂ ನೀಡಿತ್ತು.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Thursday, July 16, 2020, 11:48 [IST]
Other articles published on Jul 16, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X