ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ತೆಂಡೂಲ್ಕರ್ ವಿಶ್ವದ ಸರ್ವಶ್ರೇಷ್ಟ ಕ್ರೀಡಾ ಪುರಸ್ಕಾರ : ಸಚಿನ್ ಮುಡಿಗೆ ಮತ್ತೊಂದು ಕಿರೀಟ

Sachin Tendulkar wins Laureus Sporting Moment Award

ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡೂಲ್ಕರ್ ವಿಶ್ವಶ್ರೇಷ್ಟ ಕ್ರೀಡಾ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಲೌರೆಸ್ ಸ್ಪೋರ್ಟಿಂಗ್ ಮೂಮೆಂಟ್ ಅವಾರ್ಡ್ ಸಚಿನ್ ತೆಂಡೂಲ್ಕರ್ ಪಾಲಾಗಿದೆ. ಈ ಪ್ರತಿಷ್ಟಿತ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಕ್ರೀಡಾಪಟು ಎಂಬ ಸಾಧೆಯನ್ನು ಸಚಿನ್ ತೆಂಡೂಲ್ಕರ್ ಮಾಡಿದ್ದಾರೆ.

2011ರ ವಿಶ್ವಕಪ್‌ಗೆದ್ದ ಬಳಿಕ ಟೀಮ್ ಇಂಡಿಯಾದ ಸದಸ್ಯರು ಸಚಿನ್ ತೆಂಡೂಲ್ಕರ್ ಅವರನ್ನು ಹೆಗಲ ಮೇಲೆ ಹೊತ್ತು ಮೈದಾನಕ್ಕೆ ಸುತ್ತುವರಿಸಿದ್ದರು. ಈ ಅದ್ಭುತ ಸನ್ನಿವೇಶಕ್ಕಾಗಿ ಸಚಿನ್ ತೆಂಡೂಲ್ಕರ್ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಎಬಿ ಡಿವಿಲಿಯರ್ಸ್ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಸಿಹಿಸುದ್ದಿಎಬಿ ಡಿವಿಲಿಯರ್ಸ್ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಸಿಹಿಸುದ್ದಿ

ಈ ಪ್ರಶಸ್ತಿಗಾಗಿ ಅಭಿಮಾನಿಗಳು ವೋಟಿಂಗ್‌ಗೆ ಮಾಡಬೇಕಾಗಿತ್ತು. ಈ ವೋಟ್‌ನಲ್ಲಿ ಸಚಿನ್ ತೆಂಡೂಲ್ಕರ್ ಹೆಚ್ಚಿನ ವೊಟ್ ಪಡೆದಿದ್ದಾರೆ. ಈ ಮೂಲಕ ಸಚಿನ್ ತೆಂಡೂಲ್ಕರ್ ಅವರನ್ನು ಆಯ್ಕೆ ಮಾಡಲಾಗಿದೆ. ಬರ್ಲಿನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿನ್ ತೆಂಡೂಲ್ಕರ್ ಈ ಪ್ರಶಸ್ತಿಯನ್ನು ಸ್ವೀಕಾರ ಮಾಡಿದ್ದಾರೆ.

ಈ ಪ್ರಶಸ್ತಿಯನ್ನು ಸ್ವೀಕಾರ ಮಾಡಿದ ಸಚಿನ್ ತೆಂಡೂಲ್ಕರ್ ವಿಶ್ವಕಪ್ ಗೆದ್ದ ಆ ಕ್ಷಣ ನನ್ನ ಜೀವನದ ಅತ್ಯಂತ ಹೆಮ್ಮೆಯ ಕ್ಷಣವಾಗಿದೆ ಎಂದು ನೆನಪಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾ ಕ್ರಿಕೆಟ್‌ನ ಮಾಜಿ ನಾಯಕ ಸ್ಟೀವ್ ವಾ ಈ ಪ್ರಶಸ್ತಿಯನ್ನು ಸಚಿಮ್ ತೆಂಡೂಲ್ಕರ್‌ಗೆ ವಿತರಿಸಿದರು.

ಮಹಿಳಾ ಟಿ20 ವಿಶ್ವಕಪ್‌ : ದೊಡ್ಡ ಕನಸು ಬೆನ್ನತ್ತಿದ ಟೀಮ್ ಇಂಡಿಯಾ ವನಿತೆಯರುಮಹಿಳಾ ಟಿ20 ವಿಶ್ವಕಪ್‌ : ದೊಡ್ಡ ಕನಸು ಬೆನ್ನತ್ತಿದ ಟೀಮ್ ಇಂಡಿಯಾ ವನಿತೆಯರು

ಲೌರೆಸ್ ವಿಶ್ವದ ಕ್ರೀಡಾಪಟು ಪ್ರಶಸ್ತಿಯನ್ನು ಇಬ್ಬರು ಕ್ರೀಡಾಪಟುಗಳು ಹಂಚಿಕೊಂಡಿದ್ದಾರೆ. ಫಾರ್ಮುಲಾ 1 ರೇಸರ್ ಲೀವಿಸ್ ಹ್ಯಾಮಿಲ್ಟನ್ ಮತ್ತು ಫುಟ್ಬಾಲ್ ದಂತಕತೆ ಲಿಯೋನೆಲ್ ಮೆಸ್ಸಿ ಜಂಟಿಯಾಗಿ ಈ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

Story first published: Tuesday, February 18, 2020, 12:07 [IST]
Other articles published on Feb 18, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X