ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕಾಲು ಕೆರೆಯೋದು ನಿಲ್ಲಿಸದ ಅಫ್ರಿದಿ: ಸಚಿನ್-ಅಖ್ತರ್ ಉಲ್ಲೇಶಿಸಿ ಮತ್ತೆ ವಿವಾದ

Sachin Tendulkar won’t accept he was scared to face Shoaib Akhtar: Shahid Afridi

ಇಸ್ಲಮಾಬಾದ್: ವಿವಾದ ಮತ್ತು ಶಾಹಿದ್ ಅಫ್ರಿದಿಗೆ ಯಾವತ್ತಿಗೂ ದೂರ ದೂರ ಇರಲು ಸಾಧ್ಯವಿಲ್ಲವೋ ಏನೋ. ಭಾರತದ ಆಟಗಾರರು ಪಾಕಿಸ್ತಾನ ವಿರುದ್ಧ ಸೋತ ಬಳಿಕ ಬಹಳಷ್ಟು ಸಾರಿ ನಮ್ಮಲ್ಲಿ ಕ್ಷಮೆ ಕೋರಿದ್ದರು ಎಂದು ಕೆಲ ದಿನಗಳ ಹಿಂದಷ್ಟೇ ವಿವಾದಾತ್ಮಕ ಹೇಳಿಕೆ ನೀಡಿದ್ದ ಪಾಕ್ ಮಾಜಿ ಆಲ್ ರೌಂಡರ್ ಅಫ್ರಿದಿ, ಮತ್ತೀಗ ಭಾರತದ ದಂತಕತೆ ಸಚಿನ್ ತೆಂಡೂಲ್ಕರ್ ಮತ್ತು ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಉಲ್ಲೇಖಿಸಿ ವಿವಾದದ ಹೇಳಿಕೆ ನೀಡಿದ್ದಾರೆ.

ಜುಲೈ 8ರಿಂದ Eng vs WI ಟೆಸ್ಟ್: ತಂಡಗಳು, ನೇರಪ್ರಸಾರ ಸಂಪೂರ್ಣ ಮಾಹಿತಿಜುಲೈ 8ರಿಂದ Eng vs WI ಟೆಸ್ಟ್: ತಂಡಗಳು, ನೇರಪ್ರಸಾರ ಸಂಪೂರ್ಣ ಮಾಹಿತಿ

ಶೋಯೆಬ್ ಅಖ್ತರ್ ಅವರ ಎಸೆತ ಎದುರಿಸಲು ಸಚಿನ್ ತೆಂಡೂಲ್ಕರ್ ಹೆದರುತ್ತಿದ್ದರು ಎಂದು ಸುಮಾರು 9 ವರ್ಷಗಳ ಹಿಂದೆ ಅಫ್ರಿದಿ ಹೇಳಿಕೆ ನೀಡಿದ್ದರು. ಅದೇ ಹೇಳಿಕೆಯನ್ನು ಈಗಲೂ ಪುನರುಚ್ಛರಿಸಿರುವ ಅಫ್ರಿದಿ ತಾನು ತನ್ನ ಹೇಳಿಕೆಗೆ ಬದ್ಧನಾಗಿದ್ದೇನೆ ಎಂದಿದ್ದಾರೆ.

ದಾಖಲೆ ನಿರ್ಮಿಸಲು ಸಜ್ಜಾಗಿದ್ದಾರೆ ಭಾರತದ ಲೆಗ್ ಸ್ಪಿನ್ನರ್ ಪ್ರವೀಣ್ ತಾಂಬೆ!ದಾಖಲೆ ನಿರ್ಮಿಸಲು ಸಜ್ಜಾಗಿದ್ದಾರೆ ಭಾರತದ ಲೆಗ್ ಸ್ಪಿನ್ನರ್ ಪ್ರವೀಣ್ ತಾಂಬೆ!

ಸಚಿನ್ ತೆಂಡೂಲ್ಕರ್, ಶೋಯೆಬ್ ಅಖ್ತರ್ ಬಗ್ಗೆ ಅಫ್ರಿದಿ ಆಡಿರುವ ಮಾತುಗಳು ಕೆಳಗಿವೆ.

ಸಚಿನ್ ಇದನ್ನು ಒಪ್ಪಿಕೊಳ್ಳಲ್ಲ

ಸಚಿನ್ ಇದನ್ನು ಒಪ್ಪಿಕೊಳ್ಳಲ್ಲ

ಸಚಿನ್ ತೆಂಡೂಲ್ಕರ್ ಈ ಮಾತನ್ನು ಸಹಜವಾಗೇ ಒಪ್ಪಿಕೊಳ್ಳಲಾರರು. ಆದರೆ ಶೋಯೆಬ್ ಅಖ್ತರ್ ಎಸೆತಕ್ಕೆ ಸಚಿನ್ ಹೆದರುತ್ತಿದ್ದರು. ಫೀಲ್ಡಿಂಗ್‌ಗಾಗಿ ಕವರ್ಸ್ ಅಥವಾ ಮಿಡ್ ಆಫ್‌ನಲ್ಲಿ ನಿಂತಿರುತ್ತಿದ್ದ ನಾನು ಇದನ್ನು ಬಹಳಷ್ಟು ಸಾರಿ ಗಮನಿಸಿದ್ದೇನೆ. ಅಖ್ತರ್ ಎಸೆತಕ್ಕೆ ಸಚಿನ್ ಪರದಾಡುತ್ತಿದ್ದರು ಎಂದು ಪಾಕ್ ಮಾಜಿ ನಾಯಕ ಅಫ್ರಿದಿ ಮತ್ತೆ ಹೇಳಿಕೆ ನೀಡಿದ್ದಾರೆ.

ಜೈನಾಬ್ ಪ್ರಶ್ನೆಗೆ ಉತ್ತರ

ಜೈನಾಬ್ ಪ್ರಶ್ನೆಗೆ ಉತ್ತರ

ಪಾಕಿಸ್ತಾನದ ದೂರದರ್ಶನ ನಿರೂಪಕಿ ಜೈನಾಬ್ ಅಬ್ಬಾಸ್ ಜೊತೆಗಿನ ಸಂದರ್ಶನ ವೇಳೆ ಅಫ್ರಿದಿ ಈ ಮಾತನ್ನು ಹೇಳಿದ್ದಾರೆ. 2011ರಲ್ಲಿ ಸಚಿನ್ ಮತ್ತು ಅಖ್ತರ್ ಬಗ್ಗೆ ನೀಡಿದ್ದ ಹೇಳಿಕೆಯನ್ನು ಈಗಲೂ ಸಮರ್ಥಿಸಿಕೊಳ್ಳುತ್ತೀರ ಎಂದು ಜೈನಾಬ್ ಪ್ರಶ್ನಿದರು. ಇದಕ್ಕೆ ಉತ್ತರಿಸಿದ ಅಫ್ರಿದಿ, ಹೌದೆಂಬಂತೆ ಪ್ರತಿಕ್ರಿಯಿಸಿದ್ದಾರೆ.

ಬೆಸ್ಟ್ ಬ್ಯಾಟ್ಸ್‌ಮನ್‌ಗಳೂ ನಡುಗುತ್ತಾರೆ

ಬೆಸ್ಟ್ ಬ್ಯಾಟ್ಸ್‌ಮನ್‌ಗಳೂ ನಡುಗುತ್ತಾರೆ

'ನಾನು ಅಖ್ತರ್ ಎಸೆತಕ್ಕೆ ಹೆದರಿದ್ದೆ ಅಂತ ಸಚಿನ್ ಸಹಜವಾಗಿಯೇ ಹೇಳಲಾರರು. ಆದರೆ ಸಚಿನ್ ಒಬ್ಬರೇ ಅಲ್ಲ, ಅಖ್ತರ್ ಅವರ ಕೆಲವು ಎಸೆತಗಳಿಗೆ ವಿಶ್ವದ ಬೆಸ್ಟ್ ಬ್ಯಾಟ್ಸ್‌ಮನ್‌ಗಳೂ ಕೂಡ ನಡುಗುತ್ತಿದ್ದರು,' ಎಂದು ಶಾಹಿದ್ ವಿವರಿಸಿದ್ದಾರೆ.

ತೆಂಡೂಲ್ಕರ್ ಹೆದರಿದ್ದನ್ನು ನೋಡಿದ್ದೆ

ತೆಂಡೂಲ್ಕರ್ ಹೆದರಿದ್ದನ್ನು ನೋಡಿದ್ದೆ

'ನೀವು ಮಿಡ್ ಆಫ್ ಅಥವಾ ಕವರ್ಸ್‌ನಲ್ಲಿ ನಿಂತಿದ್ದಾಗ ನಿಮಗದು ಕಾಣುತ್ತದೆ. ಅಲ್ಲಿ ನಿಂತಿದ್ದಾಗ ನಿಮಗೆ ಬ್ಯಾಟ್ಸ್‌ಮನ್‌ನ ಬಾಡಿ ಲ್ಯಾಂಗ್ವೇಜ್ ಕಾಣುತ್ತದೆ. ಬ್ಯಾಟ್ಸ್‌ಮನ್‌ ಒತ್ತಡದಲ್ಲಿದ್ದಾನೆ ಅನ್ನೋದು ನಿಮಗೆ ಸುಲಭವಾಗಿ ಅರ್ಥವಾಗುತ್ತದೆ. ಸಚಿನ್ ಅವರು ಶೋಯೆಬ್ ಅವರ ಪ್ರತೀ ಎಸೆತಕ್ಕೂ ಹೆದರುತ್ತಾರೆ ಎಂದಲ್ಲ. ಆದರೆ ಕೆಲ ಎಸೆತಗಳಿಗೆ ಹೆದರುತ್ತಿದ್ದರು,' ಎಂದು ಅಖ್ತರ್ ಹೇಳಿದ್ದಾರೆ.

Story first published: Tuesday, July 7, 2020, 20:16 [IST]
Other articles published on Jul 7, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X