ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಹ್ಯಾಪಿ ಬರ್ತ್ ಡೇ ಸಚಿನ್: ಭಾರತೀಯ ಕ್ರಿಕೆಟ್‌ಗೆ ಹೊಸ ಭಾಷ್ಯ ಬರೆದ ಮಾಸ್ಟರ್ ಬ್ಲಾಸ್ಟರ್

Sachin Tendulkars Innings That Changed Indian Cricket

ಕ್ರಿಕೆಟ್ ಪ್ರೇಮಿಗಳಿಗೆ ಇವತ್ತು ವಿಶೇಷ ದಿನ. ಅದಕ್ಕೆ ಕಾರಣ ಕ್ರಿಕೆಟ್ ದೇವರ ಹುಟ್ಟಿನ ದಿನ ಇವತ್ತು. ಸರಿಸುಮಾರು ಎರಡುವರೆ ದಶಕಗಳ ಕಾಲ ಕ್ರಿಕೆಟ್ ಲೋಕವನ್ನು ಆಳಿದ ಸಚಿನ್ ತೆಂಡೂಲ್ಕರ್ ಇಂದು 47ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಇಂತಾ ಸಚಿನ್ ಕ್ರಿಕೆಟ್‌ ಲೋಕದ ಪರಿಪೂರ್ಣ ಆಟಗಾರ ಎಂಬ ಖ್ಯಾತಿಯನ್ನು ಗಳಿಸಿದ್ದಾರೆ.

2013ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಇತಿಹಾಸದಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆದ ದಿಗ್ಗಜ ಆಟಗಾರ. ಅತಿ ಹೆಚ್ಚು ರನ್, ಅತಿ ಹೆಚ್ಚು ಶತಕ, ಅತಿ ಹೆಚ್ಚು ಪಂದ್ಯ ಎಲ್ಲ ದಾಖಲೆಯೂ ಸಚಿನ್ ತೆಂಡೂಲ್ಕರ್ ಹೆಸರಿನಲ್ಲೇ ಇದೆ. ಈ ವರ್ಷ ಕೊರೊನಾ ವೈರಸ್‌ನ ಕಾರಣದಿಂದಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ ಎಂದು ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.

ಕ್ರಿಕೆಟ್ ದೇವರ ಹುಟ್ಟುಹಬ್ಬದ ಈ ದಿನ ಸಚಿನ್ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿನ ಅಪೂರ್ವ ಕ್ಷಣಗಳನ್ನು ಮೆಲುಕು ಹಾಕೋಣ..

ಕ್ರಿಕೆಟ್‌ ಹೊಸ ಆಯಾಮ

ಕ್ರಿಕೆಟ್‌ ಹೊಸ ಆಯಾಮ

1983ರ ವಿಶ್ವಕಪ್ ಗೆಲುವು ಭಾರತದಲ್ಲಿ ಕ್ರಿಕೆಟ್ ಅಂಗಳದಲ್ಲಿ ಹೊಸ ಸಂಚಲನವನ್ನು ಸೃಷ್ಟಿ ಮಾಡಿದ ಸಂದರ್ಭ. ಆದರೆ ಅದನ್ನು ಇನ್ನೊಂದು ಮಟ್ಟಕ್ಕೆ ತೆಗೆದುಕೊಂಡು ಹೋಗುವಲ್ಲಿ ಪ್ರಮುಖಪಾತ್ರವಹಿಸಿದ್ದು ನಿಸ್ಸಂಶಯವಾಗಿ ಸಚಿನ್ ತೆಂಡೂಲ್ಕರ್. ತನ್ನ ಅಮೋಘ ಆಟದ ಮೂಲಕ ಕ್ರಿಕೆಟ್‌ಗೆ ಹೊಸ ಆಯಾಮವನ್ನು ನೀಡಿದ ಆಟಗಾರನೇ ಸಚಿನ್ ತೆಂಡೂಲ್ಕರ್.

ಶಾರ್ಜಾದಲ್ಲಿ ಸಚಿನ್ ಚಂಡಮಾರುತ

ಶಾರ್ಜಾದಲ್ಲಿ ಸಚಿನ್ ಚಂಡಮಾರುತ

ಸಚಿನ್ ತಾನೊಬ್ಬ ಎಂತಾ ಅದ್ಭುತ ಬ್ಯಾಟ್ಸ್‌ಮನ್ ಎಂಬುದನ್ನು ಜಗತ್ತಿಗೆ ತೋರಿಸಿದ್ದರು. ಅದರೆ ತನ್ನ ಅತ್ಯುಗ್ರ ಸ್ವರೂಪವನ್ನು ತೋರಿಸಿದ್ದು ಶಾರ್ಜಾದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಕೊಕೊಕೊಲಾ ಕಪ್ ಸರಣಿಯಲ್ಲಿ. ಸಚಿನ್ ತೆಂಡೂಲ್ಕರ್ ಈ ಪಂದ್ಯದಲ್ಲಿ 131 ಎಸೆತಗಳಲ್ಲಿ ಭರ್ಜರಿ 143 ರನ್ ಸಿಡಿಸಿದ್ದರು. 9 ಬೌಂಡರಿ ಮತ್ತು 5 ಭರ್ಜರಿಸ ಸಿಕ್ಸರ್ ಒಳಗೊಂಡಿತ್ತು ಆ ಅದ್ಭುತ ಇನ್ನಿಂಗ್ಸ್‌. ಶಾರ್ಜಾದ ಚಂಡಮಾರುತದ ನಡುವೆಯೇ ಸಚಿನ್ ತನ್ನ ಬ್ಯಾಟಿಂಗ್ ಚಂಡಮಾರುತದೊಂದಿಗೆ ಅಬ್ಬರಿಸಿದ್ದರು. ಈ ಆಕ್ರಮಣಕಾರಿ ಆಟ ಕ್ರಿಕೆಟ್‌ನಲ್ಲಿ ಹೊಸ ಸಂಚಲನಕ್ಕೆ ಕಾರಣವಾಯಿತು. ಈ ಪಂದ್ಯವನ್ನು ಭಾರತ ಗೆಲ್ಲಲು ಸಾಧ್ಯವಾಗಲಿಲ್ಲ ಆದರೆ ಇದು ಏಕದಿನ ಕ್ರಿಕೆಟ್ ಇತಿಹಾಸದ ಅದ್ಭುತ ಇನ್ನಿಂಗ್ಸ್‌ಗಳಲ್ಲಿ ಒಂದಾಗಿದೆ.

ಭಾರತೀಯ ಕ್ರಿಕೆಟ್‌ನ ಬದಲಾವಣೆ

ಭಾರತೀಯ ಕ್ರಿಕೆಟ್‌ನ ಬದಲಾವಣೆ

ಸಚಿನ್ ತೆಂಡೂಲ್ಕರ್ ಆಕ್ರಮಣಕಾರಿ ಆಟ ಭಾರತೀಯ ಕ್ರಿಕೆಟ್‌ನಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಯಿತು. ಅನೇಕ ಯುವ ಕ್ರಿಕೆಟಿಗರು ಸಚಿನ್ ಅವರ ಆಕ್ರಮಣಕಾರಿ ಶೈಲಿಯಿಂದ ಪ್ರಭಾವಿತರಾಗಿದ್ದರು. ಅದರ ಪರಿಣಾಮವಾಗಿ ಭಾರತೀಯ ಕ್ರಿಕೆಟ್‌ನ ಯುವ ಪೀಳಿಗೆಯಲ್ಲಿ ಸ್ಪೋಟಕ ಆಟಗಾರರ ದಂಡೇ ಕಾಣಿಸಿಕೊಂಡಿತು. ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಧೋನಿಯಿಂದ ಆರಂಭವಾಗಿ ನಂತರ ಶಿಖರ್ ಧವನ್, ರೋಹಿತ್ ಶರ್ಮಾ ಅವರಿಂದ ಟೀಮ್ ಇಂಡಿಯಾ ನಾಯಕ ಕೊಹ್ಲಿವರೆ ಇದು ವಿಸ್ತರಣೆಯಾಯಿತು.

ವಿಶ್ವಕಪ್‌ನಲ್ಲಿ ಪಾಕ್ ವಿರುದ್ಧದ ಇನ್ನಿಂಗ್ಸ್

ವಿಶ್ವಕಪ್‌ನಲ್ಲಿ ಪಾಕ್ ವಿರುದ್ಧದ ಇನ್ನಿಂಗ್ಸ್

2003 ರ ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧದ ಸಚಿನ್ ಆಟವೂ ಅದ್ಭುತ ಇನ್ನಿಂಗ್ಸ್‌ಗಳಲ್ಲಿ ಒಂದು. ಇಲ್ಲಿ ಸಚಿನ್ ಶತಕಗಳಿಸಲು ವಿಫಲರಾಗಿದ್ದರು. ಆದರೆ ಸಚಿನ್ ಆಡಿದ ಅಮೋಘ ಆಟ ಪಾಕಿಸ್ತಾನ ನೀಡಿದ್ದ 274ರನ್‌ಗಳ ಬೃಹತ್‌ ಗುರಿಯನ್ನು ಭಾರತ ಹಿಂದಿಕ್ಕಿ ಗೆಲ್ಲಲು ಕಾರಣವಾಗಿತ್ತು. ಇಲ್ಲಿ ಸಚಿನ್ 98 ರನ್‌ಗಳಿಸಿದ್ದರು. ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ಈ ಇನ್ನಿಂಗ್ಸ್‌ ಎಂದಿಗೂ ನೆನಪಿನಲ್ಲಿರುತ್ತದೆ.

ಭಾರತದ ಮೊದಲ 'ಹಿಟ್‌ಮ್ಯಾನ್'

ಭಾರತದ ಮೊದಲ 'ಹಿಟ್‌ಮ್ಯಾನ್'

ಕ್ರಿಕೆಟ್‌ನಲ್ಲಿ ಎಲ್ಲಾ ಬೌಲರ್‌ಗಳಿಗೆ ಸಚಿನ್ ಸಿಂಹಸ್ವಪ್ನರಾಗಿದ್ದರು. ಎಲ್ಲಾ ಬ್ಯಾಟ್ಸ್‌ಮನ್‌ಗಳಿಗೆ ಭೀತಿ ಹುಟ್ಟಿಸಿದ್ದ ಶೋಯೆಬ್ ಅಖ್ತರ್, ಶೇನ್ ವಾರ್ನ್‌ರಂತಾ ಬೌಲರ್‌ಗಳು ಸಚಿನ್ ಬ್ಯಾಟಿಂಗ್ ಮುಂದೆ ಸೊಲ್ಲೆತ್ತುತ್ತಿರಲಿಲ್ಲ. ತಾಂತ್ರಿಕವಾಗಿ ಅತ್ಯಂತ ಬಲಿಷ್ಠವಾಗಿದ್ದ ಸಚಿನ್ ಆಕ್ರಮಣಕಾರಿಯೂ ಆಗಿದ್ದರು. ಹೀಗಾಗಿ ಭಾರತದ ಮೊದಲ ಹಿಟ್‌ಮ್ಯಾನ್ ಎನಿಸಿಕೊಂಡರು. ಮಾತ್ರವಲ್ಲ ಕ್ರಿಕೆಟ್ ಎಂಬ ಧರ್ಮಕ್ಕೆ ಸಚಿನ್ ದೇವರೆ ಆಗಿಬಿಟ್ಟರು.

Story first published: Friday, April 24, 2020, 14:52 [IST]
Other articles published on Apr 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X