ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅನುಷ್ಕಾ ಶರ್ಮಾ ಕೆಂಗಣ್ಣಿಗೆ ಬೆದರಿ ಯೂ ಟರ್ನ್ ಹೊಡೆದ ಇಂಜಿನಿಯರ್!

Said it in jest: Farokh Engineer does U-turn over Anushka Sharma comment

ನವದೆಹಲಿ, ನವೆಂಬರ್ 1: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರನ್ನು ಉಲ್ಲೇಖಿಸಿ ಹೇಳಿಕೆ ನೀಡಿದ್ದ ಭಾರತದ ಮಾಜಿ ಕ್ರಿಕೆಟರ್ ಫಾರೂಖ್ ಇಂಜಿನಿಯರ್ ಯೂ ಟರ್ನ್ ಹೊಡೆದಿದ್ದಾರೆ. ಅನುಷ್ಕಾ ಅವರನ್ನು ನೋಯಿಸುವ ಉದ್ದೇಶ ನನ್ನದಾಗಿರಲಿಲ್ಲ ಎಂದು ಫಾರೂಖ್ ಹೇಳಿದ್ದಾರೆ.

ಹೆಚ್ಚಿನ ಓದಿಗೆ ಈ ಸುದ್ದಿ ನೋಡಿ: 'ಭಾರತದ ಆಯ್ಕೆ ಸಮಿತಿಯವರು ವಿಶ್ವಕಪ್‌ ವೇಳೆ ಅನುಷ್ಕಾಗೆ ಟೀ ತರುತ್ತಿದ್ದರು'

ಟೈಮ್ಸ್ ಆಫ್ ಇಂಡಿಯಾದ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಫಾರೂಖ್ ಇಂಜಿನಿಯರ್, ಭಾರತ ಕ್ರಿಕೆಟ್‌ ಬೋರ್ಡ್‌ನ ಆಯ್ಕೆ ಸಮಿತಿಯಲ್ಲಿ ಈಗಿರುವ ಆಯ್ಕೆದಾರರ ವಿರುದ್ಧ ಗುಡುಗಿದ್ದರು. 2019ರ ಐಸಿಸಿ ವಿಶ್ವಕಪ್ ಟೂರ್ನಿ ವೇಳೆ ಆಯ್ಕೆ ಸಮಿತಿ ಅಧಿಕಾರಿಗಳು ಅನುಷ್ಕಾಗೆ ಟೀ ಕೊಂಡೊಯ್ಯುತ್ತಿದ್ದುದ್ದನ್ನು ನೋಡಿದ್ದೆ ಎಂದು ಫಾರೂಖ್ ಹೇಳಿಕೆ ನೀಡಿದ್ದರು.

ಟೆಸ್ಟ್ ಮ್ಯಾಚ್ ಸೆಂಟರ್‌ಗಳಾಗಲು ಬೆಸ್ಟ್ 5 ಸ್ಟೇಡಿಯಂಗಳು ಇವು!ಟೆಸ್ಟ್ ಮ್ಯಾಚ್ ಸೆಂಟರ್‌ಗಳಾಗಲು ಬೆಸ್ಟ್ 5 ಸ್ಟೇಡಿಯಂಗಳು ಇವು!

ವಿಶ್ವಕಪ್‌ ವೇಳೆ ಆ ಘಟನೆ ನಡೆದಿದ್ದು ನಿಜ. ಆದರೆ ನನ್ನ ಉದ್ದೇಶ ಅನುಷ್ಕಾ ಅವರನ್ನು ಕೆಳಮಟ್ಟಕ್ಕೆ ಇಳಿಸುವುದಾಗಿರಲಿಲ್ಲ ಎಂದು ಫಾರೂಖ್ ಇಂಜಿನಿಯರ್ ಹೇಳಿದ್ದಾರೆ. ಆಯ್ಕೆ ಸಮಿತಿಯಲ್ಲಿರುವವರು ಅಲ್ಲಿರಲು ಯೋಗ್ಯರಲ್ಲ ಎಂಬರ್ಥದಲ್ಲಿ ಹೇಳಿಕೆ ನೀಡುವಾಗಿ ಫಾರೂಖ್ ಬಾಯಲ್ಲಿ ಅನುಷ್ಕಾ ಹೆಸರು ಬಂದು ಯಡವಟ್ಟಾಗಿತ್ತು.

ಸುಳ್ಳು ಸುದ್ದಿಗಳಿಗೆ ತಲೆ ಕೊಡುತ್ತಿರಲಿಲ್ಲ

ಸುಳ್ಳು ಸುದ್ದಿಗಳಿಗೆ ತಲೆ ಕೊಡುತ್ತಿರಲಿಲ್ಲ

ಇಂಜಿನಿಯರ್ ಹೇಳಿಕೆಗೆ ತಿರುಗೇಟು ನೀಡಿದ್ದ ಅನುಷ್ಕಾ ಶರ್ಮಾ, 'ತಾವೇ ಸೃಷ್ಟಿಸಿದ ಮತ್ತು ಸುಳ್ಳು ಸುದ್ದಿಗಳಿಗೆ ತಲೆ ಕೊಡದೆ ಯಾವಾಗಲೂ ಮೌನವಾಗಿರುವುದನ್ನು ನಾನು ನನ್ನ ವೃತ್ತಿ ಜೀವನದಲ್ಲಿ ಕಳೆದ 11 ವರ್ಷಗಳಿಂದಲೂ ಪಾಲಿಸಿಕೊಂಡು ಬಂದಿದ್ದೇನೆ,' ಎಂದು ಉದ್ದಕ್ಕೆ ಟ್ವೀಟ್‌ ಮಾಡಿದ್ದರು.

ಮೌನವೇ ಮಾರಕವಾಗುತ್ತಿದೆ

ಟ್ವೀಟ್‌ನ ಮುಂದುವರೆದ ಭಾಗದಲ್ಲಿ, 'ನನ್ನನ್ನು ಉಲ್ಲೇಖಿಸಿ ಪದೇ ಪದೇ ಸುಳ್ಳು ಹೇಳಿಕೆಗಳನ್ನು ಕೊಟ್ಟಾಗಲೂ ನಾನು ಮೌನಿಯಾಗಿರುತ್ತಿದ್ದುದು ಈಗ ನನಗೇನೇ ಮಾರಕವಾಗಿದೆ. ನನ್ನ ಮೌನ ಸುಳ್ಳುಗಳನ್ನು ನನ್ನತ್ತ ಉಗಿಯುವ ಮಟ್ಟಕ್ಕೆ ತಂದು ನಿಲ್ಲಿಸಿದೆ ಅನ್ನೋದು ನಿಜ. ಆದರೆ ಅದು ಇವತ್ತಿಗೆ ಕೊನೆಯಾಗಬೇಕು,' ಎಂದು ಸಿಡುಕಿ ಇನ್ನೊಂದಿಷ್ಟು ವಿಚಾರಗಳನ್ನು ಮುಂದಿಟ್ಟು ಉದ್ದಕ್ಕೆ ಬರೆದುಕೊಂಡಿದ್ದರು.

ಎಚ್ಚೆತ್ತುಕೊಂಡ ಫಾರೂಖ್

ಎಚ್ಚೆತ್ತುಕೊಂಡ ಫಾರೂಖ್

ಅನುಷ್ಕಾ ಶರ್ಮಾ ಮುನಿದು ಮಾಡಿದ್ದ ಮಾರುದ್ದದ ಟ್ವೀಟ್, ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್‌ಕೆ ಪ್ರಸಾದ್‌ ಕೂಡ ಫಾರೂಖ್ ಹೇಳಿಕೆ ಸುಳ್ಳೆಂದು ಪ್ರತಿಕ್ರಿಯಿಸಿದ ಬಳಿಕ ಎಚ್ಚೆತ್ತುಕೊಂಡ ಫಾರೂಖ್, ಆ ಕ್ಷಣ ನಾನು ನೀಡಿದ್ದ ಹೇಳಿಕೆ ಬರೀ ಆಕ್ಷಣಕ್ಕಷ್ಟೇ ಬಂದಿದ್ದು. ಆ ಸಂದರ್ಭದಲ್ಲಿ ಹಾಗೆ ಮಾತಾಡಿ ಹೋಯಿತಷ್ಟೇ. ಅದರ ಹಿಂದೆ ಅನುಷ್ಕಾ ಅವರನ್ನು ಕೀಳಾಗಿ ಬಿಂಬಿಸುವ ಉದ್ದೇಶವಿರಲಿಲ್ಲ ಎಂದು ಮಾತು ತಿರುಗಿಸಿದ್ದಾರೆ.

ಅನುಷ್ಕಾ ಒಬ್ಬಳು ಮೆಚ್ಚಿನ ಹುಡುಗಿ

ಅನುಷ್ಕಾ ಒಬ್ಬಳು ಮೆಚ್ಚಿನ ಹುಡುಗಿ

'ಆ ಕ್ಷಣಕ್ಕೆ ಬಂದುಹೋದ ಹೇಳಿಕೆಯನ್ನು ಮುಂದಿಟ್ಟು ಇಲಿಗಾಗಿ ಬೆಟ್ಟ ಅಗೆಯುವ ಕೆಲಸಕ್ಕೆ ಇಳಿಯೋದು ಬೇಡ. ಬಡಪಾಯಿ ಅನುಷ್ಕಾ ಅವರನ್ನು ಹೇಳಿಕೆಯಲ್ಲಿ ಎಳೆದು ತಂದೆ. ಆಕೆ ಒಬ್ಬಳು ಪ್ರೀತಿಯ ಹುಡುಗಿ, ವಿರಾಟ್ ಕೊಹ್ಲಿ ಚತುರ ನಾಯಕ, ಕೋಚ್ ರವಿ ಶಾಸ್ತ್ರಿ ಕೂಡ ಅತ್ಯುತ್ತಮವಾಗಿದ್ದಾರೆ. ಹೀಗಾಗಿ ಪ್ರಕರಣವನ್ನು ಮುಂದಕ್ಕೆಳೆಯೋದು ಬೇಡ,' ಎಂದು ಇಂಜಿನಿಯರ್ ರಿಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ್ದಾರೆ.

Story first published: Friday, November 1, 2019, 12:20 [IST]
Other articles published on Nov 1, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X