ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಎಂಎಸ್ ಧೋನಿ ನಿವೃತ್ತಿ ಗಾಳಿ ಸುದ್ದಿಗೆ ಸಾಕ್ಷಿ ಧೋನಿ ಖಾರ ಪ್ರತಿಕ್ರಿಯೆ

Sakshi reacts sharply to Dhoni Retires and then deletes tweet

ನವದೆಹಲಿ, ಮೇ 28: ವಿಶ್ವಕಪ್ ವಿಜೇತ ಭಾರತದ ಮಾಜಿ ನಾಯಕ ಎಂಎಸ್ ಧೋನಿ ನಿವೃತ್ತಿ ನೀಡುತ್ತಿದ್ದಾರೆ ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ ಗಾಳಿಸುದ್ದಿ ಹರಡಿತ್ತು. #DhoniRetires ಹ್ಯಾಷ್ ಟ್ಯಾಗ್ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್‌ ಆಗಿತ್ತು. ಇದಕ್ಕೆ ಧೋನಿ ಪತ್ನಿ ಸಾಕ್ಷಿಧೋನಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಸುಲಭಕ್ಕೆ ನಂಬಲಾಗದ ಕ್ರಿಕೆಟ್‌ ಇತಿಹಾಸದ 6 ಅದ್ಭುತ ದಾಖಲೆಗಳು!ಸುಲಭಕ್ಕೆ ನಂಬಲಾಗದ ಕ್ರಿಕೆಟ್‌ ಇತಿಹಾಸದ 6 ಅದ್ಭುತ ದಾಖಲೆಗಳು!

ಧೋನಿ ನಿವೃತ್ತಿ ಬಗೆಗಿನ ಗಾಳಿಸುದ್ದಿಗೆ ಅಸಮಾಧಾನ ವ್ಯಕ್ತಪಡಿಸಿದ್ದ ಸಾಕ್ಷಿ, ಟ್ವೀಟ್ ಮೂಲಕ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಸಾಕ್ಷಿ ತಾನು ಸಿಟ್ಟಿನಲ್ಲಿ ಮಾಡಿದ್ದ ಟ್ವೀಟ್ ಅನ್ನು ಡಿಲೀಟ್ ಮಾಡಿದರಾದರೂ ಅದಾಗಲೇ ಆ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಟೆಸ್ಟ್ ಕ್ರಿಕೆಟ್‌ನ ಪದಾರ್ಪಣೆ ಮತ್ತು ವಿದಾಯ ಪಂದ್ಯ ಎರಡರಲ್ಲೂ ಶತಕ ಸಿಡಿಸಿದ ವಿಶೇಷ ಆಟಗಾರರುಟೆಸ್ಟ್ ಕ್ರಿಕೆಟ್‌ನ ಪದಾರ್ಪಣೆ ಮತ್ತು ವಿದಾಯ ಪಂದ್ಯ ಎರಡರಲ್ಲೂ ಶತಕ ಸಿಡಿಸಿದ ವಿಶೇಷ ಆಟಗಾರರು

ಧೋನಿ ರಿಟೈರ್ಸ್ ಹ್ಯಾಷ್ ಟ್ಯಾಗ್ ಟ್ರೆಂಡ್ ಆಗುತ್ತಿರುವುದು ಗಮನಕ್ಕೆ ಬರುತ್ತಲೇ ಟ್ವೀಟ್ ಮಾಡಿದ್ದ ಸಾಕ್ಷಿ, 'ಇದು ಬರೀ ಗಾಳಿ ಸುದ್ದಿ. ಕೊರೊನಾವೈರಸ್‌ ಪಿಡುಗಿನಿಂದಾಗಿ ಜನ ಮಾನಸಿಕವಾಗಿ ಅಸ್ಥಿರರಾಗಿದ್ದಾರೆ ಅನ್ನೋದು ನನಗೆ ಅರ್ಥವಾಗುತ್ತದೆ,' ಎಂದು ಬರೆದುಕೊಂಡಿದ್ದರು.

Sakshi reacts sharply to Dhoni Retires and then deletes tweet

2019ರ ವಿಶ್ವಕಪ್‌ ಬಳಿಕ ಎಂಎಸ್ ಧೋನಿ ಯಾವುದೇ ಪಂದ್ಯಗಳಲ್ಲಿ ಪಾಲ್ಗೊಂಡಿಲ್ಲ. ಐಪಿಎಲ್‌ನಲ್ಲಾದರೂ ಧೋನಿ ಮೈದಾನಕ್ಕಿಳಿಯುವುದನ್ನು ನಿರೀಕ್ಷಿಸಲಾಗಿತ್ತು, ಆದರೆ ಕೊರೊನಾದಿಂದಾಗಿ ಐಪಿಎಲ್ ಕೂಡ ಅಸ್ಥಿರವೆನಿಸಿದೆ. ಧೋನಿ ದೀರ್ಘ ಕಾಲ ಕ್ರಿಕೆಟ್‌ನಿಂದ ದೂರ ಉಳಿದಿದ್ದರಿಂದ ಅವರು ನಿವೃತ್ತಿ ನೀಡುತ್ತಾರೆ ಎಂಬ ಗಾಳಿಸುದ್ದಿ ಆಗೀಗ ಕೇಳಿಬರುತ್ತಲೇಯಿದೆ.

2007ರ ವಿಶ್ವಕಪ್ ಪಂದ್ಯ ಸ್ಮರಿಸಿ ಭಾರತಕ್ಕೆ ಕುಟುಕಿದ ಮುಷ್ಫಿಕರ್ ರಹೀಮ್2007ರ ವಿಶ್ವಕಪ್ ಪಂದ್ಯ ಸ್ಮರಿಸಿ ಭಾರತಕ್ಕೆ ಕುಟುಕಿದ ಮುಷ್ಫಿಕರ್ ರಹೀಮ್

ಕೂಲ್ ಕ್ಯಾಪ್ಟನ್ ಬಗ್ಗೆ ಕೇಳಿಬರುತ್ತಿರುವ ಇಲ್ಲಸಲ್ಲದ ಗಾಳಿ ಸುದ್ದಿಗಳು ಧೋನಿ, ಪತ್ನಿ ಸಾಕ್ಷಿ ಮತ್ತು ಧೋನಿ ಅಭಿಮಾನಿಗಳಿಗೆ ಕಿರಿಕಿರಿ ತರುತ್ತಿದೆ. ಇತ್ತೀಚೆಗಂತೂ ಸಾಕ್ಷಿ ತಾಳ್ಮೆ ಕಳೆದುಕೊಂಡು ಖಾರವಾಗಿ ಪ್ರತಿಕ್ರಿಯಿಸತೊಡಗಿದ್ದಾರೆ. ಈ ಬಾರಿಯೂ ಸಾಕ್ಷಿ, #DhoniRetires ಅನ್ನುವ ಮೆಂಟಲ್‌ಗಳು ಬೇಗ ಗುಣಮುಖರಾಗಲಿ ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದಾರೆ.

Story first published: Thursday, May 28, 2020, 14:58 [IST]
Other articles published on May 28, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X