ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಉದ್ದ ಕೂದಲ ಧೋನಿಯನ್ನು ತಿರುಗಿಯೂ ನೋಡುತ್ತಿರಲಿಲ್ಲ ಎಂದ ಸಾಕ್ಷಿ

Sakshi Reacts To Ms Dhonis Old Long Hairstyle

ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತಮ್ಮ ವೃತ್ತಿ ಜೀವನದ ಆರಂಭದಲ್ಲಿ ತಮ್ಮ ಸ್ಪೋಟಕ ಆಟದ ಜೊತೆಗೆ ಉದ್ದ ಕೂದಲಿನ ಕಾರಣದಿಂದಲೂ ಖ್ಯಾತರಾಗಿದ್ದರು. ಧೋನಿಯ ಸ್ಟೈಲ್‌ಗೆ ಕ್ರಿಕೆಟ್ ಅಭಿಮಾನಿಗಳು ಮಾತ್ರವಲ್ಲ ಪಾಕಿಸ್ತಾನದ ಅಂದಿನ ಅಧ್ಯಕ್ಷ ಪರ್ವೇಜ್ ಮುಷರಫ್ ಕೂಡ ಹೊಗಳಿದ್ದರು.

ಆದರೆ ಕೆಲವರು ಧೋನಿ ಆ ಸ್ಟೈಲ್‌ಅನ್ನು ಇಷ್ಟಪಡುತ್ತಿರಲಿಲ್ಲ. ಅಚ್ಚರಿಯೇನೆಂದರೆ ಧೋನಿಯ ಹಳೆಯ ಸ್ಟೈಲ್ ಇಷ್ಟ ಪಡದವರ ಪಟ್ಟಿಯಲ್ಲಿ ಧೋನಿಯ ಪತ್ನಿಯೇ ಇದ್ದಾರೆ. ಮಾಹಿಯ ಹಳೆಯ ಲುಕ್ ಬಗ್ಗೆ ಧೋನಿಯ ಪತ್ನಿ ಸಾಕ್ಷಿ ಸಿಂಗ್ ಪ್ರತಿಕ್ರಿಯಿಸಿದ್ದು ಅದು ಕೆಟ್ಟ ಹೇರ್ ಸ್ಟೈಲ್ ಎಂದಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸ್ಟಂಪ್ ಔಟ್ ಮಾಡಿದ ಟಾಪ್ 5 ವಿಕೆಟ್ ಕೀಪರ್‌ಗಳು ಇವರು !ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸ್ಟಂಪ್ ಔಟ್ ಮಾಡಿದ ಟಾಪ್ 5 ವಿಕೆಟ್ ಕೀಪರ್‌ಗಳು ಇವರು !

ಧೋನಿಯನ್ನು ಆ ಕೆಂಚು ಮತ್ತು ಉದ್ದ ಕೂದಲಲ್ಲಿ ನಾನು ಕಂಡಿದ್ದರೆ ಬಹುಶಃ ಆತನನ್ನು ತಿರುಗಿಯೂ ನೋಡುತ್ತಿರಲಿಲ್ಲ ಎಂದು ಸಾಕ್ಷಿ ಹೇಳಿಕೊಂಡಿದ್ದಾರೆ. ಸಧ್ಯ, ತಾನು ಭೇಟಿ ಮಾಡುವಾಗ ಧೋನಿ ಹೇರ್ ಸ್ಟೈಲ್ ಬದಲಾಯಿಸಿಕೊಂಡಿದ್ದರು ಎಂದು ತಮಾಷೆಯಾಗಿ ಹೇಳಿದ್ದಾರೆ ಸಾಕ್ಷಿ.

ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಅಧಿಕರತ ಟ್ವಿಟ್ಟರ್ ಖಾತೆಯಲ್ಲಿ ಸಾಕ್ಷಿ ಸಂವಾದದಲ್ಲಿ ಪಾಲ್ಗೊಂಡಿದ್ದರು. ಆ ರೀತಿ ಉದ್ದ ಕೂದಲು ಜಾನ್ ಅಬ್ರಾಹಂಗೆ ಒಪ್ಪುತ್ತದೆ, ಆದರೆ ಮಾಹಿಗೆ ಅಲ್ಲ ಎಂದಿದ್ದಾರೆ ಸಾಕ್ಷಿ. ಬಾಲಿವುಡ್ ನಟ ಜಾನ್ ಅಬ್ರಾಹಂ ಅವರ ಸ್ಟೈಲ್‌ನಿಂದ ಪ್ರೇರಿತರಾಗಿದ್ದ ಧೋನಿ ವೃತ್ತಿ ಜೀವನದ ಆರಂಭದ ಸಂದರ್ಭದಲ್ಲಿ ಅದೇ ಶೈಲಿಯ ಹೇರ್ ಸ್ಟೈಲ್ ಮಾಡಿಕೊಂಡಿದ್ದರು.

ಎಂಎಸ್ ಧೋನಿ ಇನ್ನು ಟೀಮ್ ಇಂಡಿಯಾವನ್ನು ಪ್ರತಿನಿಧಿಸಲ್ಲ: ಹರ್ಭಜನ್ ಸಿಂಗ್ಎಂಎಸ್ ಧೋನಿ ಇನ್ನು ಟೀಮ್ ಇಂಡಿಯಾವನ್ನು ಪ್ರತಿನಿಧಿಸಲ್ಲ: ಹರ್ಭಜನ್ ಸಿಂಗ್

ಇನ್ನು ಧೋನಿಯನ್ನು ಮೊದಲ ಬಾರಿಗೆ ಭೇಟಿಯಾಗಿದ್ದ ಸಂದರ್ಭವನ್ನು ಸಾಕ್ಷಿ ಈ ಸಂದರ್ಭದಲ್ಲಿ ನೆನಪಿಸಿಕೊಂಡಿದ್ದಾರೆ. ಕ್ರಿಕೆಟನ್ನು ಹೆಚ್ಚಾಗಿ ನೋಡುತ್ತಿರಲಿಲ್ಲ ವಾದ ಕಾರಣ ಮಹೇಂದ್ರ ಸಿಂಗ್ ಧೋನಿ ಬಗ್ಗೆ ನನಗೆ ಸ್ವಲ್ಪವೂ ಗೊತ್ತಿರಲಿಲ್ಲ. ತಾಜ್ ಹೋಟೆಲ್‌ನಲ್ಲಿ ನನ್ನ ಅಂತಿಮ ದಿನದ ಇಂಟರ್ನ್‌ಶಿಪ್ ದಿನದಂದು ಧೋನಿಯನ್ನು ಭೇಟಿಯಾಗಿದ್ದೆ. ಆದರೆ ಆತನ ಬಗ್ಗೆ ಸ್ವಲ್ಪವೂ ಗೊತ್ತಿರಲಿಲ್ಲ. ಸಾಮಾನ್ಯರಂತೆಯೇ ಆ ಭೇಟಿಯಾಗಿತ್ತು, ಆದರೆ ನನ್ನ ಅಮ್ಮ ಧೋನಿಯ ಅಭಿಮಾನಿಯಾಗಿದ್ದರು ಎಂದು ಸಂವಾದದಲ್ಲಿ ಹೇಳಿದ್ದಾರೆ.

Story first published: Monday, June 1, 2020, 19:37 [IST]
Other articles published on Jun 1, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X