ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ನನ್ನನ್ನು ಗುಲಾಮನಂತೆ ನಡೆಸಿಕೊಂಡರು' ಎಂಬ ವಾಸಿಂ ಅಕ್ರಮ್ ಆರೋಪಕ್ಕೆ ಸಲೀಂ ಮಲಿಕ್ ತಿರುಗೇಟು

Salim Malik Hits Back To Wasim Akrams Allegation That He Treated Me Like A Slave

ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ವೇಗಿ ವಾಸಿಂ ಅಕ್ರಮ್ ಅವರು ತಮ್ಮ ಜೀವನಚರಿತ್ರೆ 'ಸುಲ್ತಾನ್: ಎ ಮೆಮೊಯಿರ್' ಪುಸ್ತಕದಲ್ಲಿ ತಮ್ಮ ಕ್ರಿಕೆಟ್ ಆಟದ ದಿನಗಳನ್ನು ಮೆಲುಕು ಹಾಕಿದ್ದಾರೆ. ಇದೇ ವೇಳೆ ಪಾಕಿಸ್ತಾನದ ಮಾಜಿ ನಾಯಕ ಸಲೀಂ ಮಲಿಕ್ ಅವರ ವರ್ತನೆಯನ್ನು ವಾಸಿಂ ಅಕ್ರಮ್ ಟೀಕಿಸಿದ್ದಾರೆ.

1984ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ವಾಸಿಂ ಅಕ್ರಮ್, ಹಿರಿಯ ಸಹ ಆಟಗಾರ ಸಲೀಂ ಮಲಿಕ್ ಅವರಿಗೆ ಮಸಾಜ್ ಮಾಡಲು ಮತ್ತು ಬಟ್ಟೆ ಮತ್ತು ಶೂಗಳನ್ನು ಸ್ವಚ್ಛಗೊಳಿಸುವಂತೆ ಹೇಳುತ್ತಿದ್ದರು ಎಂದು ಆರೋಪಿಸಿದ್ದಾರೆ.

"ಸಲೀಂ ಮಲಿಕ್ ನನ್ನ ಜೂನಿಯರ್ ಸ್ಥಾನಮಾನದ ಲಾಭವನ್ನು ಪಡೆದುಕೊಳ್ಳುತ್ತಿದ್ದರು. ಅವರು ಸ್ವಾರ್ಥಿ ಮತ್ತು ನನ್ನನ್ನು ಸೇವಕನಂತೆ ನಡೆಸಿಕೊಂಡರು. ಅವರು ನನಗೆ ಮಸಾಜ್ ಮಾಡಲು ಒತ್ತಾಯಿಸಿದರು, ಅವರ ಬಟ್ಟೆ ಮತ್ತು ಬೂಟುಗಳನ್ನು ಸ್ವಚ್ಛಗೊಳಿಸಲು ಅವರು ನನಗೆ ಆದೇಶಿಸುತ್ತಿದ್ದರು," ಎಂದು ಬರೆದಿದ್ದಾರೆ.

ಜೀವನಚರಿತ್ರೆಯ ಆಯ್ದ ಭಾಗವನ್ನು ಓದಿ, "ರಮೀಜ್, ತಾಹಿರ್, ಮೊಹ್ಸಿನ್, ಶೋಯೆಬ್ ಮೊಹಮ್ಮದ್ ಸೇರಿದಂತೆ ಕೆಲವು ಕಿರಿಯ ತಂಡದ ಸದಸ್ಯರು ನನ್ನನ್ನು ನೈಟ್‌ಕ್ಲಬ್‌ಗಳಿಗೆ ಆಹ್ವಾನಿಸಿದಾಗ ನಾನು ಕೋಪಗೊಂಡಿದ್ದೆ," ಎಂದು ತಿಳಿಸಿದ್ದಾರೆ.

ಇದೀಗ ವಾಸಿಂ ಅಕ್ರಮ್ ಅವರ ಆರೋಪಗಳಿಗೆ ಸಲೀಂ ಮಲಿಕ್ ಪ್ರತಿಕ್ರಿಯಿಸಿದ್ದು, "ನಾನು ಅವರಿಗೆ ಕರೆ ಮಾಡಲು ಪ್ರಯತ್ನಿಸುತ್ತಿದ್ದೇನೆ, ಆದರೆ ಅವರು ಉತ್ತರಿಸಲಿಲ್ಲ. ಅವರು ಏನು ಮಾಡಿದ್ದಾರೆ? ಹೀಗೆ ಬರೆಯಲು ಕಾರಣವೇನು? ಎಂದು ನಾನು ಅವರನ್ನು ಕೇಳುತ್ತೇನೆ," ಎಂದು ಮಾಜಿ ಬ್ಯಾಟರ್‌ನ ಹೇಳಿಕೆಯನ್ನು ಕ್ರಿಕೆಟ್ ಪಾಕಿಸ್ತಾನ ಉಲ್ಲೇಖಿಸಿದೆ.

Salim Malik Hits Back To Wasim Akrams Allegation That He Treated Me Like A Slave

ಸಲೀಂ ಮಲಿಕ್ ತನ್ನ ಬಟ್ಟೆಗಳನ್ನು ಸ್ವಚ್ಛಗೊಳಿಸಲು ಹೇಳಿದ್ದಾನೆ ಎಂಬ ವಾಸಿಂ ಅಕ್ರಮ್ ಆರೋಪಕ್ಕೆ, "ವಾಸಿಂ ಅಕ್ರಮ್ ವಾಷಿಂಗ್ ಮಷಿನ್ ಅನ್ನು ಬಳಸಬೇಕಾಗಿತ್ತು. ಅವನು ಅದನ್ನು ಕೈಯಿಂದ ತೊಳೆಯುತ್ತಿದ್ದನಂತೆಯೇ?" ಎಂದು ಸಲೀಂ ಮಲಿಕ್ ವಿವರಿಸಿದರು.

"ನಾನು ಸಂಕುಚಿತ ಮನಸ್ಸಿನವನಾಗಿದ್ದರೆ, ನಾನು ಅವರಿಗೆ ಬೌಲಿಂಗ್ ಮಾಡುವ ಅವಕಾಶವನ್ನು ನೀಡುತ್ತಿರಲಿಲ್ಲ. ನನ್ನ ಬಗ್ಗೆ ಏಕೆ ಅಂತಹ ಟೀಕೆಗಳನ್ನು ಬರೆದಿದ್ದಾರೆ ಎಂದು ನಾನು ಅವರನ್ನು ಕೇಳುತ್ತೇನೆ," ಎಂದು ಹೇಳಿದರು.

ಇನ್ನು ವಾಸಿಂ ಅಕ್ರಮ್ ತಮ್ಮ ಆತ್ಮಚರಿತ್ರೆಯಲ್ಲಿ ಕೊಕೇನ್ ಚಟದ ಬಗ್ಗೆ ತೆರೆದಿಟ್ಟಿದ್ದಾರೆ. ಗ್ರೇಡ್ ಕ್ರಿಕೆಟರ್ಸ್ ಪಾಡ್‌ಕ್ಯಾಸ್ಟ್‌ಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ, "ತನ್ನ ಇಚ್ಛೆಗೆ ವಿರುದ್ಧವಾಗಿ ಪಾಕಿಸ್ತಾನದಲ್ಲಿ ಎರಡೂವರೆ ತಿಂಗಳ ಕಾಲ ಪುನರ್ವಸತಿಯಲ್ಲಿ ಇರಿಸಲಾಗಿತ್ತು," ಎಂದು ವಾಸಿಂ ಅಕ್ರಮ್ ಬಹಿರಂಗಪಡಿಸಿದ್ದಾರೆ.

ತಮ್ಮ ಮೇಲೆ ಹೊರಿಸಿರುವ ಆರೋಪಗಳನ್ನು ನಿರಾಕರಿಸಿದ ಸಲೀಂ ಮಲಿಕ್, "ವಾಸಿಂ ಅಕ್ರಮ್ ತನ್ನ ಪುಸ್ತಕವನ್ನು ಪ್ರಚಾರ ಮಾಡಲು ಇವೆಲ್ಲವನ್ನೂ ಬರೆದಿದ್ದಾರೆ," ಎಂದು ಹೇಳಿದರು. ವಾಸಿಂ ಅಕ್ರಮ್ ಮತ್ತು ವಕಾರ್ ಯೂನಿಸ್ ನಾನು ನಾಯಕನಾಗಿದ್ದಾಗ ತನ್ನೊಂದಿಗೆ ಮಾತನಾಡಲಿಲ್ಲ ಎಂದು ಮಲಿಕ್ ಆರೋಪಿಸಿದರು.

Story first published: Tuesday, November 29, 2022, 11:11 [IST]
Other articles published on Nov 29, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X