ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೆಟ್ಟದಾಗಿ ಬೌಲ್ ಮಾಡಲು ಆಮಿಷವೊಡ್ಡಿದ್ದ ಸಲೀಂ ಮಲಿಕ್: ವಾರ್ನ್ ಗೂಗ್ಲಿ

Salim Malik offered bribe $200,000 to bowl bad shane warne alleged

ಸಿಡ್ನಿ, ಅಕ್ಟೋಬರ್ 12: ವೇಗದ ಬೌಲಿಂಗ್‌ಗೆ ನೆರವು ನೀಡುವ ಹಸಿರು ಪಿಚ್‌ನಲ್ಲಿಯೂ ಅಡಿಗಳಷ್ಟು ತಿರುಗಿಸುತ್ತಿದ್ದ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಶೇನ್ ವಾರ್ನ್ ಈಗ ಭರ್ಜರಿ ಗೂಗ್ಲಿ ಎಸೆದಿದ್ದಾರೆ. ಈ ಮೂಲಕ ಸುಮಾರು 24 ವರ್ಷದ ಹಿಂದಿನ ವಿವಾದವನ್ನು ಅವರು ಕೆದಕಿದ್ದಾರೆ.

1994-95ರ ಸಾಲಿನಲ್ಲಿ ಪಾಕಿಸ್ತಾನದ ಕ್ರಿಕೆಟಿಗ ಸಲೀಂ ಮಲಿಕ್ ತಮಗೆ ಕೆಟ್ಟದಾಗಿ ಬೌಲಿಂಗ್ ಮಾಡಿದರೆ ಹಣ ನೀಡುವುದಾಗಿ ಆಮಿಷ ಒಡ್ಡಿದ್ದರು ಎಂಬ ಸ್ಫೋಟಕ ಮಾಹಿತಿಯನ್ನು ವಾರ್ನ್ ಹಂಚಿಕೊಂಡಿದ್ದಾರೆ.

 ಪಾಕ್- ಆಸ್ಟ್ರೇಲಿಯಾ ಟೆಸ್ಟ್: ಪಾದಾರ್ಪಣೆಯಲ್ಲೇ ವಿಶೇಷ ದಾಖಲೆಗಳು ಪಾಕ್- ಆಸ್ಟ್ರೇಲಿಯಾ ಟೆಸ್ಟ್: ಪಾದಾರ್ಪಣೆಯಲ್ಲೇ ವಿಶೇಷ ದಾಖಲೆಗಳು

'ನೋ ಸ್ಪಿನ್' ಎಂಬ ತಮ್ಮ ಜೀವನಚರಿತ್ರೆ ಪುಸ್ತಕದಲ್ಲಿ ಅನೇಕ ವಿವಾದಾತ್ಮಕ ಅಂಶಗಳನ್ನು ವಾರ್ನ್ ಪ್ರಸ್ತಾಪಿಸಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು.

ಪಂದ್ಯವು ಡ್ರಾ ಆಗುವ ಸಲುವಾಗಿ ಆಫ್‌ ಸ್ಟಂಪ್‌ನಿಂದ ಆಚೆಗೆ ಚೆಂಡನ್ನು ಎಸೆದರೆ 2 ಲಕ್ಷ ಡಾಲರ್ ಹಣ ಅರ್ಧ ಗಂಟೆಯಲ್ಲಿ ನಿಮ್ಮ ಕೊಠಡಿಯಲ್ಲಿ ಇರುತ್ತದೆ ಎಂದು ಬ್ಯಾಟ್ಸ್‌ಮನ್ ಸಲೀಂ ಮಲಿಕ್ ಆಮಿಷ ಒಡ್ಡಿದ್ದರು ಎಂದು ವಾರ್ನ್ ಆರೋಪಿಸಿದ್ದಾರೆ.

ಕ್ರಿಕೆಟ್: ಖವಾಜಾ ಅದ್ಭುತ ಆಟ: ಸೋಲುವ ಪಂದ್ಯ ಉಳಿಸಿಕೊಂಡ ಆಸ್ಟ್ರೇಲಿಯಾ ಕ್ರಿಕೆಟ್: ಖವಾಜಾ ಅದ್ಭುತ ಆಟ: ಸೋಲುವ ಪಂದ್ಯ ಉಳಿಸಿಕೊಂಡ ಆಸ್ಟ್ರೇಲಿಯಾ

1994ರಲ್ಲಿ ಕರಾಚಿಯಲ್ಲಿ ನಡೆದ ಟೆಸ್ಟ್ ಪಂದ್ಯವನ್ನು ಸೋಲಲು ಶೇನ್ ವಾರ್ನ್, ಮಾರ್ಕ್ ವಾ ಮತ್ತು ಟಿಮ್ ಮೇ ಅವರಿಗೆ ಮಲಿಕ್ ಲಂಚ ನೀಡಲು ಪ್ರಯತ್ನಿಸಿದ್ದರು ಎಂದು 1995ರಲ್ಲಿ ಈ ಮೂವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು.

ಈ ಟೆಸ್ಟ್‌ನ ಎರಡನೆಯ ಇನ್ನಿಂಗ್ಸ್‌ನಲ್ಲಿ ಮಾರ್ಕ್ ವಾ 61 ರನ್ ಗಳಿಸಿದ್ದರೆ, ಶೇನ್ ವಾರ್ನ್ ಎರಡನೆಯ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್ ಕಬಳಿಸಿದ್ದರು. ಆದರೆ, ಪಾಕಿಸ್ತಾನ ಕೇವಲ ಒಂದು ವಿಕೆಟ್‌ನಿಂದ ಪಂದ್ಯವನ್ನು ಜಯಿಸಿತ್ತು.

ವಿಂಡೀಸ್ ವಿರುದ್ಧದ 2 ಏಕದಿನ ಪಂದ್ಯಕ್ಕೆ ಕೊಹ್ಲಿ ನಾಯಕ, ಪಂತ್ ಇನ್ ವಿಂಡೀಸ್ ವಿರುದ್ಧದ 2 ಏಕದಿನ ಪಂದ್ಯಕ್ಕೆ ಕೊಹ್ಲಿ ನಾಯಕ, ಪಂತ್ ಇನ್

1995ರಲ್ಲಿ ಸಿಂಗರ್ ಕಪ್ ಸಂದರ್ಭದಲ್ಲಿ ಪಿಚ್ ಮತ್ತು ಹವಾಮಾನದ ಸ್ಥಿತಿಯ ವರದಿಯನ್ನು ಹಂಚಿಕೊಳ್ಳಲು ವಾರ್ನ್ ಮತ್ತು ಮಾರ್ಕ್ ವಾ ಅವರಿಗೆ ಭಾರತದ ಬುಕ್ಕಿ ಜಾನ್ ಎಂಬಾತ ಹಣ ನೀಡಿದ್ದ ಎಂಬ ಮತ್ತೊಂದು ವಿವಾದವೂ ಆಗ ಸೃಷ್ಟಿಯಾಗಿತ್ತು.

ಈ ಬಗ್ಗೆ ಎಸಿಬಿಯಿಂದ ಸ್ವತಂತ್ರ ತನಿಖೆ ನಡೆದಿತ್ತು. ವಾರ್ನ್ ಮತ್ತು ಮಾರ್ಕ್ ವಾ ಇಬ್ಬರಿಗೂ ಕ್ರಮವಾಗಿ 8,000 ಮತ್ತು 10,000 ಡಾಲರ್ ದಂಡ ವಿಧಿಸಲಾಗಿತ್ತು. ಇಡೀ ಘಟನೆ ಮಾಧ್ಯಮದ ಎದುರು ಬಹಿರಂಗವಾಗಿದ್ದು 1998ರಲ್ಲಿ.

ಮಯಾಂಕ್ ಗೆ ಕೈ ಕೊಟ್ಟ ಅದೃಷ್ಟ, ಟೀಂ ಮ್ಯಾನೇಜ್ಮೆಂಟ್ ಹಳಿದ ಫ್ಯಾನ್ಸ್ ಮಯಾಂಕ್ ಗೆ ಕೈ ಕೊಟ್ಟ ಅದೃಷ್ಟ, ಟೀಂ ಮ್ಯಾನೇಜ್ಮೆಂಟ್ ಹಳಿದ ಫ್ಯಾನ್ಸ್

ಆರೋಪದ ನಡುವೆಯೂ ಸಲೀಂ ಮಲಿಕ್ 1999ರ ವರೆಗೂ ಆಡಿದ್ದರು. ಬಳಿಕ 2000ರ ಮೇ ತಿಂಗಳಿನಲ್ಲಿ ಅವರ ಮೇಲೆ ಕ್ರಿಕೆಟ್‌ನಿಂದ ಜೀವಾವಧಿ ನಿರ್ಬಂಧ ವಿಧಿಸಲಾಗಿತ್ತು. 2008ರಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಆ ನಿಷೇಧವನ್ನು ತೆರವುಗೊಳಿಸಿತ್ತು.

Story first published: Friday, October 12, 2018, 17:22 [IST]
Other articles published on Oct 12, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X