ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಎಂಜಲಿನ ಬಳಕೆ ನಿಷೇಧಕ್ಕೆ ವಿರೋಧ ವ್ಯಕ್ತಪಡಿಸಿದ ಟೀಮ್ ಇಂಡಿಯಾ ಮಾಜಿ ಆಟಗಾರ

Saliva Important Part Of Bowlers Armoury: Deep Dasgupta

ಕೊರೊನಾ ವೈರಸ್ ಕ್ರಿಕೆಟ್‌ನಲ್ಲಿ ಕೆಲ ಮಹತ್ವದ ಬದಲಾವಣೆಯನ್ನು ತರುವ ಮುನ್ಸೂಚನೆ ನೀಡಿದೆ. ಅದರಲ್ಲಿ ಪ್ರಮುಖವಾದದ್ದು ಬೌಲರ್‌ಗಳು ಚೆಂಡು ತಿರುವು ಪಡೆಯಲು ಬಳಸುತ್ತಿದ್ದ ಸಾಂಪ್ರದಾಯಿಕ ವಿಧಾನದಲ್ಲಿನ ಬದಲಾವಣೆ. ಚೆಂಡನ್ನು ಹೊಳಪು ಮಾಡಲು ಬೌಲರ್‌ಗಳು ಎಂಜಲನ್ನು ಬಳಸುತ್ತಿದ್ದರು. ಆದರೆ ಇದನ್ನು ನಿಷೇಧಿಸುವ ಕುರಿತು ಐಸಿಸಿ ಗಂಭೀರ ಚರ್ಚೆಯನ್ನು ನಡೆಸಿದೆ.

ಆದರೆ ಈ ಬಗ್ಗೆ ಕೆಲ ವಿರೋಧಗಳೂ ವ್ಯಕ್ತವಾಗುತ್ತಿದೆ. ಟೀಮ್ ಇಂಡಿಯಾದ ಮಾಜಿ ವಿಕೆಟ್ ಕೀಪರ್ ದೀಪ್‌ದಾಸ್ ಗುಪ್ತಾ ಕೂಡಇದರ ವಿರುದ್ಧ ಧ್ವನಿಯೆತ್ತಿದ್ದಾರೆ. ಸ್ವಿಂಗ್ ಮಾಡಲು ಬೌಲರ್‌ಗಳ ಬಳಿಯಿದ್ದ ಪ್ರಮುಖ ಅಸ್ತ್ರವೆಂದರೆ ಎಂಜಲನ್ನು ಬಳಸಿ ಹೊಳಪು ತರುವುದು. ಆದರೆ ಇದನ್ನು ನಿಷೇಧಿಸಿದರೆ ಬೌಲರ್‌ನ ಪ್ರಮುಖ ಅಸ್ತ್ರವನ್ನೇ ಕಸಿದುಕೊಂಡಂತೆ ಎಂದು ಹೇಳಿದ್ದಾರೆ.

ಐಪಿಎಲ್ ಈ ವರ್ಷವೇ ನಡೆಯುವ ಬಗ್ಗೆ ಆಸಿಸ್ ಕ್ರಿಕೆಟಿಗ ಭರವಸೆಐಪಿಎಲ್ ಈ ವರ್ಷವೇ ನಡೆಯುವ ಬಗ್ಗೆ ಆಸಿಸ್ ಕ್ರಿಕೆಟಿಗ ಭರವಸೆ

ಎಂಜಲನ್ನು ಬಳಸಿ ಬಳಸುವುದು ಕ್ರಿಕಟ್‌ನ ಪ್ರಮುಖ ಭಾಗವಾಗಿದೆ. ಇದನ್ನು ಬದಲಾಯಿಸುವುದನ್ನು ಯೋಚಿಸುವುದೂ ಕಷ್ಟ. ಅದನ್ನು ಕ್ರಿಕೆಟ್‌ನ ವ್ಯವಸ್ಥೆಯಿಂದ ಹೊರಹಾಕುವುದು ಕಠಿಣವಾಗಿದೆ ಎಂದು ದೀಪ್ ದಾಸ್‌ಗುಪ್ತಾ ಹೇಳಿದ್ದಾರೆ. ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ದೀಪ್‌ದಾಸ್ ಗುಪ್ತಾ ಹೇಳಿಕೆಯನ್ನು ನೀಡಿದ್ದಾರೆ.

ಎಂಜಲಿಗೆ ಬದಲಿ ಆಯ್ಕೆ ಬಹಳ ಕಷ್ಟ ಸಾಧ್ಯ, ಅದು ಅದು ಸ್ವಾಭಾವಿಕ ಸ್ವಿಂಗ್‌ಗೆ ಅವಕಾಶ ನೀಡುತ್ತದೆ. ರಿವರ್ಸ್‌ ಸ್ವಿಂಗ್‌ ಕೂಡ ಇದರಿಂದ ಸ್ವಾಭಾವಿಕವಾಗಿ ಸಾಧ್ಯವಾಗುತ್ತದೆ. ಸ್ಪಿನ್ನರ್‌ಗಳ ಪಾಲಿಗೂ ಇದು ಪ್ರಮುಖವಾಗುತ್ತದೆ. ಹೀಗಾಗಿ ಬೌಲರ್‌ಗಳ ಪಾಲಿಗೆ ಈ ನಿರ್ಧಾರ ಬಹಳ ಕಠಿಣವಾಗಿರಲಿದೆ ಎಂದು ಅವರು ಹೇಳಿದ್ದಾರೆ.

ಕೆಎಲ್ ರಾಹುಲ್ ಅಲ್ಪಾವಧಿಯ ಪರಿಹಾರ ಎಂದ ಪಾರ್ಥಿವ್ ಪಟೇಲ್ಕೆಎಲ್ ರಾಹುಲ್ ಅಲ್ಪಾವಧಿಯ ಪರಿಹಾರ ಎಂದ ಪಾರ್ಥಿವ್ ಪಟೇಲ್

ಕೊರೊನಾ ವೈರಸ್‌ ಎಂಜಲಿನ ಮೂಲಕ ಹರಡುವ ಕಾರಣದಿಂದಾಗಿ ಅದರ ಬಳಕೆಯನ್ನು ನಿಲ್ಲಿಸಲು ಐಸಿಸಿ ನಿರ್ಧಾರವನ್ನು ಮಾಡಿದೆ. ಭಾರತದ ಮಾಜಿ ಸ್ಪಿನ್ನರ್ ಅನಿಲ್ ಕುಂಬ್ಳೆ ನೇತೃತ್ವದ ಸಮಿತಿ ಎಂಜಲಿನ ಬಳಕೆಯ ನಿಷೇಧಿಸಲು ಐಸಿಸಿಗೆ ಶಿಫಾರಸ್ಸು ಮಾಡಿದೆ.

Story first published: Thursday, May 21, 2020, 15:01 [IST]
Other articles published on May 21, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X