ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

"ಅವರಿಗೆ ಅದೊಂದು ಗೀಳು": ಭಾರತ ಮತ್ತು ಪಾಕ್ ವೇಗಿಗಳ ನಡುವಿನ ವ್ಯತ್ಯಾಸ ಹೇಳಿದ ಸಲ್ಮಾನ್ ಬಟ್

Salman Butt highlights key difference between Indias and Pakistans fast bowlers

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯ ಡ್ರಾದಲ್ಲಿ ಅಂತ್ಯವಾಗಿದೆ. ಆದರೆ ಇಂಗ್ಲೆಂಡ್ ವಿರುದ್ಧ ಅದರ ತವರಿನಲ್ಲಿ ಭಾರತ ಪಂದ್ಯದುದ್ದಕ್ಕೂ ಹಿಡಿತವನ್ನು ಸಾಧಿಸಿ ಗೆಲುವಿನ ಸನಿಹದವರೆಗೆ ತಲುಪಿತ್ತು. ಆದರೆ ಅಂತಿಮ ದಿನದಲ್ಲಿ ಸುರಿದ ಮಳೆಯಿಂದಾಗಿ ಭಾರತದ ಗೆಲುವಿನ ಕನಸು ಸಾಕಾರಗೊಳ್ಳಲಿಲ್ಲ. ಈ ಪಂದ್ಯದಲ್ಲಿ ಭಾರತದ ಬೌಲಿಂಗ್ ಪಡೆಯ ಪ್ರದರ್ಶನ ಅದ್ಭುತವಾಗಿತ್ತು. ಟೀಮ್ ಇಂಡಿಯಾದ ಬೌಲರ್‌ಗಳು ಇಂಗ್ಲೆಂಡ್ ತಂಡವನ್ನು ಎರಡು ಬಾರಿಯೂ ಆಲೌಟ್ ಮಾಡುವಲ್ಲಿ ಯಶಸ್ವಿಯಾಗಿತ್ತು. ಅದರಲ್ಲೂ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 183 ರನ್‌ಗಳಿಗೆ ಇಂಗ್ಲೆಂಡ್ ಆಲೌಟ್ ಆಗಿತ್ತು. ಈ ಮೂಲಕ ಪಂದ್ಯದಲ್ಲಿ ಭಾರತತೀಯ ಬಳಗ ಮೆಲುಗೈ ಸಾಧಿಸಲು ಸಾಧ್ಯವಾಗಿತ್ತು.

ಭಾರತೀಯ ಬೌಲಿಂಗ್ ಪಡೆಯ ಈ ಪ್ರದರ್ಶನದ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಸಲ್ಮಾನ್ ಬಟ್ ಕೂಡ ಭಾರತ ತಂಡದ ಬೌಲಿಂಗ್ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಸಲ್ಮಾನ್ ಬಟ್ ಭಾರತ ಹಾಗೂ ಪಾಕಿಸ್ತಾನ ತಂಡಗಳ ವೇಗದ ಬೌಲಿಂಗ್ ಪಡೆಯ ಬಗ್ಗೆ ತುಲನೆಯನ್ನು ಮಾಡಿದ್ದಾರೆ. ಈ ಸಂದರ್ಭದಲ್ಲಿ ಭಾರತದ ಬೌಲಿಂಗ್ ವಿಭಾಗ ಪಾಕ್ ಬೌಲಿಂಗ್ ವಿಭಾಗಕ್ಕಿಂತ ಹೇಗೆ ಭಿನ್ನ ಎಂಬ ಮಾತನ್ನು ಕೂಡ ಸಲ್ಮಾನ್ ಬಟ್ ವಿವರಿಸಿದ್ದಾರೆ.

ತಿಂಗಳ ಕಾಲದ ಸಿದ್ಧತೆಗೆ ಮೊದಲ ಟೆಸ್ಟ್‌ನಲ್ಲಿ ಬೆಲೆ ದೊರೆತಿದೆ: ಕೆಎಲ್ ರಾಹುಲ್ ಹೇಳಿಕೆತಿಂಗಳ ಕಾಲದ ಸಿದ್ಧತೆಗೆ ಮೊದಲ ಟೆಸ್ಟ್‌ನಲ್ಲಿ ಬೆಲೆ ದೊರೆತಿದೆ: ಕೆಎಲ್ ರಾಹುಲ್ ಹೇಳಿಕೆ

ಕೌಶಲ್ಯದಲ್ಲಿ ಭಿನ್ನತೆಯಿದೆ

ಕೌಶಲ್ಯದಲ್ಲಿ ಭಿನ್ನತೆಯಿದೆ

"ಭಾರತ ಹಾಗೂ ಪಾಕಿಸ್ತಾನ ತಂಡಗಳ ವೇಗದ ಬೌಲಿಂಗ್ ವಿಭಾಗದಲ್ಲಿನ ಪ್ರಮುಖ ವ್ಯತ್ಯಾಸವೆಂದರೆ ಕೌಶಲ್ಯದ ಮಟ್ಟ. ಕೌಶಲ್ಯ ಅನುಭವದ ಮೂಲಕ ಗಳಿಸಲು ಸಾಧ್ಯವಾಗುತ್ತದೆ ಮತ್ತು ಪ್ರಥಮದರ್ಜೆ ಕ್ರಿಕೆಟ್‌ನಲ್ಲಿ ಸಾಕಷ್ಟು ಓವರ್‌ಗಳನ್ನು ಎಸೆಯುವ ಮೂಲಕ ಗಳಿಸಬಹುದು. ನೀವು ಆ ಬಗ್ಗೆ ಕಾರ್ಯನಿರತವಾಗಬೇಕು. ಯಾಕೆಂದರೆ ಬ್ಯಾಟ್ಸ್‌ಮನ್‌ಗಳಿಗೆ ರನ್‌ಗಳಿಸುವ ಆತುಗಳು ಇರುವುದಿಲ್ಲ. ಇದೊಂದು ಮಾನಸಿಕ ಆಟವಾಗಿದ್ದು ಇದರಲ್ಲಿ ನಿಮ್ಮ ಸಾಮರ್ಥ್ಯ ತಿಳಿಯುತ್ತದೆ. ಪಾಕಿಸ್ತಾನದ ಬೌಲರ್‌ಗಳು ನಿಜಕ್ಕೂ ಯುವಕರು. ಪಾಕಿಸ್ತಾನದ ಬೌಲರ್‌ಗಳಲ್ಲಿ ಮೊಹಮ್ಮದ್ ಹಸ್ನೈನ್, ಶಾಹೀನ್ ಅಫ್ರಿದಿ, ನಸೀಮ್ ಶಾ ಇದ್ದಾರೆ.ಶಹ್ನವಾಜ್ ದಹಾನಿ ಇನ್ನೂ ಆಡುವ ಅವಕಾಶ ಪಡೆದಿಲ್ಲ. ಈ ಎಲ್ಲಾ ವೇಗಿಗಳ ಪ್ರಥಮದರ್ಜೆ ಪಂದ್ಯಗಳ ಒಟ್ಟು ಅನುಭವ 25-30 ಪ್ರಥಮದರ್ಜೆ ಪಂದ್ಯಗಳಷ್ಟೇ" ಎಂದು ಸಲ್ಮಾನ್ ಬಟ್ ಹೇಳಿದ್ದಾರೆ.

ಭಾರತದ ಬೌಲರ್‌ಗಳ ಪ್ರಥಮದರ್ಜೆ ಅನುಭವ

ಭಾರತದ ಬೌಲರ್‌ಗಳ ಪ್ರಥಮದರ್ಜೆ ಅನುಭವ

ಭಾರತದ ಬೌಲರ್‌ಗಳ ಪೈಕಿ ಸಿರಾಜ್ ಒಬ್ಬರೇ 40 ಪ್ರಥಮ ದರ್ಜೆ ಆಟಗಳನ್ನು ಆಡಿದ್ದಾರೆ. ಇಶಾಂತ್ ಶರ್ಮಾ 100 ಕ್ಕೂ ಅಧಿಕ ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಜಸ್‌ಪ್ರೀತ್ ಬೂಮ್ರಾ ಕೂಡ ರಣಜಿ ಕ್ರಿಕೆಟ್‌ಗೆ ತಮ್ಮ ಬೌಲಿಂಗ್‌ನಲ್ಲಿನ ಸುಧಾರಣೆಗೆ ಶ್ರೇಯಸ್ಸನ್ನು ಸಲ್ಲಿಸಿದ್ದಾರೆ. ಆದರೆ ಅವರೆಲ್ಲಾ 145 ಕಿಮೀ ವೇಗದಲ್ಲಿ ಎರಡು ಎಸೆತಗಳನ್ನು ಎಸೆಯುವ ಮೂಲಕ ಭಾರತ ತಂಡದಲ್ಲಿ ಅವಕಾಶವನ್ನು ಪಡೆದುಕೊಳ್ಳಲಿಲ್ಲ" ಎಂದು ಸಲ್ಮಾನ್ ಬಟ್ ವಿವರಿಸಿದ್ದಾರೆ.

140 ಕಿ.ಮೀ ವೇಗವಾಗಿ ಎಸೆಯುವ ಗೀಳು

140 ಕಿ.ಮೀ ವೇಗವಾಗಿ ಎಸೆಯುವ ಗೀಳು

"ಭಾರತದ ಯಾವ ಬೌಲರ್ ಕೂಡ ಅವರು 145 ಕಿ.ಮೀಗಿಂತ ವೇಗವಾಗಿ ಚೆಂಡನ್ನು ಎಸೆಯುತ್ತಾರೆ ಎಂಬ ಕಾರಣದಿಂದ ಆಯ್ಕೆಯಾಗಿಲ್ಲ. ಆದರೆ ಪಾಕಿಸ್ತಾನದ ಬೌಲರ್‌ಗಳ ಸಮಸ್ಯೆಯೆಂದರೆ ಅವರು ನಿಯಮಿತವಾಗಿ 140 ಕಿಮೀ ವೇಗದಲ್ಲಿ ಬೌಲಿಂಗ್ ಮಾಡುವ ಗೀಳನ್ನು ಹೊಂದಿದ್ದಾರೆ. ಅವರು ಕೌಶಲ್ಯವನ್ನು ಗಳಿಸುವುದಕ್ಕಿಂತ ವೇಗದ ಕಡೆಗೆ ಗಮನಹರಿಸುತ್ತಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೇವಲ ವೇಗವಾಗಿ ಬೌಲಿಂಗ್ ಮಾಡುವುದರಿಂದ ಉಪಯೋಗವಾಗುವುದಿಲ್ಲ. ಬ್ಯಾಟ್ಸ್‌ಮನ್‌ಗಳು ವೇಗಕ್ಕೆ ಭಯಪಡುವುದಿಲ್ಲ. ಜೇಮ್ಸ್ ಆಂಡರ್ಸನ್ ಆ ವೇಗವನ್ನು 40ನೇ ವಯಸ್ಸಿನಲ್ಲಿಯೂ ಕಾಯ್ದುಕೊಂಡಿದ್ದಾರೆ. ಆಸ್ಟ್ರೇಲಿಯಾದ ತ್ರಿವಳಿ ವೇಗಿಗಳಾದ ಪ್ಯಾಟ್ ಕಮಿನ್ಸ್, ಜೋಶ್ ಹೇಜಲ್‌ವುಡ್ ಮತ್ತು ಮಿಚೆಲ್ ಸ್ಟಾರ್ಕ್ ಕೂಡ ವೇಗವಾಗಿ ಬೌಲಿಂಗ್ ಮಾಡಬಲ್ಲರು. ಆದರೆ ಅವರು ಬಾಂಗ್ಲಾದೇಶದಲ್ಲಿ ಸೋಲು ಕಂಡರು" ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕನೂ ಆಗಿರುವ ಸಲ್ಮಾನ್ ಬಟ್ ಹೇಳಿದ್ದಾರೆ.

ಪಾಕ್ ವೇಗಿಗಳು ಪ್ರತಿಭಾನ್ವಿತರು

ಪಾಕ್ ವೇಗಿಗಳು ಪ್ರತಿಭಾನ್ವಿತರು

ಮುಮದುವರಿದು ಮಾತನಾಡಿದ ಸಲ್ಮಾನ್ ಬಟ್, ಪಾಕ್ ಯುವ ವೇಗಿಗಳ ಪ್ರತಿಭೆಯನ್ನು ಕೊಂಡಾಡಿದ್ದಾರೆ. "ಪಾಕಿಸ್ತಾನ ಕ್ರಿಕೆಟ್ ತಂಡದ ಬೌಲರ್‌ಗಳು ತುಂಬಾ ಪ್ರತಿಭಾವಂತರಾಗಿದ್ದಾರೆ. ಆದರೆ ಅವರು ಕೌಶಲ್ಯವನ್ನು ಪಡೆದುಕೊಳ್ಳಬೇಕಾಗಿದೆ. ಅವರು ಕನಿಷ್ಠ 35 ಪ್ರಥಮದರ್ಜೆ ಪಂದ್ಯಗಳನ್ನು ಆಡಿದರೆ ಆಗ ಅವರಲ್ಲಿನ ಬದಲಾವಣೆಯನ್ನು ನೀವು ಗಮನಿಸುತ್ತೀರಿ. ಈ ಅಗ್ನಿಪರೀಕ್ಷೆಯಲ್ಲಿ ತೇರ್ಗಡೆಯಾದವರು ಸುದೀರ್ಘ ಕಾಲ ಆಡಬಲ್ಲ ಸಾಮರ್ಥ್ಯವನ್ನು ಗಳಿಸಿಕೊಂಡಿರುತ್ತಾರೆ. ಆದರೆ ಈಗ ಪಾಕಿಸ್ತಾನದ ವೇಗಿಗಳನ್ನು ಭಾರತದ ವೇಗಿಗಳೊಂದಿಗೆ ಹೋಲಿಕೆ ಮಾಡಲು ಸೂಕ್ತ ಸಮಯವಲ್ಲ. ಈಗ ಅವರ ವೇಗವನ್ನು ಹೋಲಿಕೆ ಮಾಡಬಹುದು ಹೊರತು ಕೌಶಲ್ಯವನ್ನಲ್ಲ" ಎಂದು ಪಾಕಿಸ್ತಾನ ಹಾಗೂ ಭಾರತೀಯ ವೇಗದ ಬೌಲಿಂಗ್ ಪಡೆಯ ಕೌಶಲ್ಯದ ಬಗ್ಗೆ ಸಲ್ಮಾನ್ ಬಟ್ ಮಾತನಾಡುತ್ತಾ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಡ್ರಾದಲ್ಲಿ ಅಂತ್ಯವಾದ ಭಾರತ ಇಂಗ್ಲೆಂಡ್ ಟೆಸ್ಟ್

ಡ್ರಾದಲ್ಲಿ ಅಂತ್ಯವಾದ ಭಾರತ ಇಂಗ್ಲೆಂಡ್ ಟೆಸ್ಟ್

ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಸೋತ ಭಾರತ ಆರಂಭದಲ್ಲಿ ಇಂಗ್ಲೆಂಡ್ ತಂಡವನ್ನು 183 ರನ್‌ಗಳಿಗೆ ಆಲೌಟ್ ಮಾಡಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬೂಮ್ರಾ ನಾಲ್ಕು ವಿಕೆಟ್ ಪಡೆದು ಮಿಂಚಿದ್ದರು. ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್ ನಡೆಸಿದ ಭಾರತದ ಪರವಾಗಿ ಕೆಎಲ್ ರಾಹುಲ್ ಅದ್ಭುತ ಆಟ ಪ್ರದರ್ಶಿಸಿದರು. ಇದರ ಪರಿಣಾಮವಾಗಿ ಭಾರತ 278 ರನ್‌ಗಳನ್ನು ಗಳಿಸುವ ಮೂಲಕ 95 ರನ್‌ಗಳ ಲೀಡ್ ಪಡೆದುಕೊಂಡಿತ್ತು. ನಂತರ ಎರಡನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡಕ್ಕೆ ನಾಯಕ ಜೋ ರೂಟ್ ಶತಕದ ಕೊಡುಗೆಯನ್ನು ನೀಡುವ ಮೂಲಕ ನೆರವಾದರು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ 303 ರನ್‌ಗಳನ್ನು ಕಲೆಹಾಕಲು ಯಶಸ್ವಿಯಾಗಿತ್ತು. ಈ ಮೂಲಕ ಭಾರತ ತಂಡದ ಗೆಲುವಿಗೆ ಅಂತಿಮ ಇನ್ನಿಂಗ್ಸ್‌ನಲ್ಲಿ 209 ರನ್‌ಗಳ ಗುರಿಯನ್ನು ಪಡೆದುಕೊಂಡಿತ್ತು. ಇದನ್ನು ಬೆನ್ನಟ್ಟಿದ ಭಾರತ ನಾಲ್ಕನೇ ದಿನದಾಟದ ಅಂತ್ಯಕ್ಕೆ ಕೆಎಲ್ ರಾಹುಲ್ ವಿಕೆಟ್ ಕಳೆದುಕೊಂಡು 52 ರನ್‌ಗಳಿಸಿ]ತ್ತು. ಆದರೆ ಕೊನೆಯ ದಿನದಾಟದಲ್ಲಿ ಒಂದೂ ಎಸೆತ ಸಾಧ್ಯವಾಗದ ಕಾರಣ ಅಂತಿಮವಾಗಿ ಪಂದ್ಯವನ್ನು ಡ್ರಾ ಎಂದು ನಿರ್ಣಯಿಸಲಾಯಿತು.

Story first published: Tuesday, August 10, 2021, 20:34 [IST]
Other articles published on Aug 10, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X