ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಹೋಟೆಲ್‌ನಲ್ಲಿ ವೈಫೈ ಸಮಸ್ಯೆ, ಡಾಂಗಲ್‌ಗಾಗಿ ಸಲಹೆ ಹೇಳಿದ ಬಿಲ್ಲಿಂಗ್ಸ್

Sam Billings asks for dongle suggestions from fans while quarantining ahead of IPL 2021

ನವದೆಹಲಿ: ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಭಾರತದಲ್ಲಿ ಏಪ್ರಿಲ್ 9ರಿಂದ ಮೇ 30ರ ವರೆಗೆ ವಿವಿಧ ಆರು ತಾಣಗಳಾದ ಅಹ್ಮದಾಬಾದ್, ಬೆಂಗಳೂರು, ಚೆನ್ನೈ, ದೆಹಲಿ, ಮುಂಬೈ ಮತ್ತು ಕೋಲ್ಕತ್ತಾದಲ್ಲಿ ಈ ಬಾರಿಯ ಐಪಿಎಲ್ ಪಂದ್ಯಗಳು ನಡೆಯಲಿವೆ.

ಗೈಲ್ಸ್ ಬಿಚ್ಚಿಟ್ಟ ಕುತೂಹಲಕಾರಿ ಸತ್ಯ: ಆರ್ಚರ್ ಕೈಯೊಳಗಿದೆ ಗಾಜಿನ ಚೂರು!ಗೈಲ್ಸ್ ಬಿಚ್ಚಿಟ್ಟ ಕುತೂಹಲಕಾರಿ ಸತ್ಯ: ಆರ್ಚರ್ ಕೈಯೊಳಗಿದೆ ಗಾಜಿನ ಚೂರು!

14ನೇ ಆವೃತ್ತಿಯ ಐಪಿಎಲ್‌ಗಾಗಿ ಕ್ಷಣಗಣನೆ ಆರಂಭಗೊಂಡಿರುವುದರಿಂದ ಎಲ್ಲಾ ಫ್ರಾಂಚೈಸಿಗಳು ಅವರವರ ಅಭ್ಯಾಸದ ತಾಣಗಳಲ್ಲಿ ಒಟ್ಟು ಸೇರುತ್ತಿದ್ದಾರೆ. ಇಂಗ್ಲೆಂಡ್ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್‌ಮನ್‌ ಸ್ಯಾಮ್ ಬಿಲ್ಲಿಂಗ್ಸ್‌ ಕೂಡ ಕಳೆದ ಬಾರಿಯ ರನ್ನರ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್‌ ಪರವಾಗಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.

ಕ್ರಿಕೆಟ್‌ನಲ್ಲಿ 'ಸಾಫ್ಟ್‌ ಸಿಗ್ನಲ್' ಅಂದ್ರೇನು?, ಇಲ್ಲಿದೆ ಸಂಪೂರ್ಣ ಮಾಹಿತಿಕ್ರಿಕೆಟ್‌ನಲ್ಲಿ 'ಸಾಫ್ಟ್‌ ಸಿಗ್ನಲ್' ಅಂದ್ರೇನು?, ಇಲ್ಲಿದೆ ಸಂಪೂರ್ಣ ಮಾಹಿತಿ

ಏಪ್ರಿಲ್ 10ರಂದು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ ಮಧ್ಯೆ ಮುಂಬೈಯ ವಾಂಖೆಡೆ ಸ್ಟೇಡಿಯಂನಲ್ಲಿ ಇತ್ತಂಡಗಳಿಗೆ ಆರಂಭಿಕ ಪಂದ್ಯ ನಡೆಯಲಿದೆ. ಹೀಗಾಗಿ ಡೆಲ್ಲಿ ಆಟಗಾರರು ಮುಂಬೈನಲ್ಲಿ ಕ್ಯಾಂಪ್‌ಗಾಗಿ ಒಟ್ಟು ಸೇರಿದ್ದಾರೆ. ಅಲ್ಲಿನ ಹೋಟೆಲ್‌ನಲ್ಲಿ ವೈಫೈ ಸಮಸ್ಯೆಯಿದೆ. ಇಂಟರ್‌ನೆಟ್ ನಿಧಾನಗತಿಯಲ್ಲಿದೆ. ಹೀಗಾಗಿ ಡೆಲ್ಲಿ ಆಟಗಾರ ಸ್ಯಾಮ್ ಬಿಲ್ಲಿಂಗ್ಸ್‌ ಅಭಿಮಾನಿಗಳಲ್ಲಿ ಡಾಂಗಲ್‌ಗೆ ಸಲಹೆ ಕೇಳಿದ್ದಾರೆ.

'ಹೋಟೆಲ್‌ನ ವೈಫೈ ಅಸ್ತಿತ್ವದಲ್ಲಿಲ್ಲ.. ಯಾವ ಬೆಸ್ಟ್ ವೈಫೈ ಡಾಂಗಲ್‌ ಕೊಂಡು ಭಾರತದಲ್ಲಿ ಬಳಸಬಹುದು?' ಎಂದು ಬಿಲ್ಲಿಂಗ್ಸ್‌ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ. ಜಿಯೋ ಮತ್ತು ಏರ್‌ಟೆಲ್‌ನಲ್ಲಿ ಯಾವುದು ಒಳ್ಳೆಯದು ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಬಹುತೇಕ ಅಭಿಮಾನಿಗಳು (50.7%) ಜಿಯೋ ಸಲಹೆ ನೀಡಿದ್ದರೆ, 41.6% ಮಂದಿ ಏರ್‌ಟೆಲ್‌ ಸೂಚಿಸಿದ್ದಾರೆ. 7.7% ಮಂದಿ ಇತರೆ ಟೆಲಿಕಾಂ ಕಂಪನಿ ಸಲಹೆ ನೀಡಿದ್ದಾರೆ.

Story first published: Wednesday, March 31, 2021, 16:32 [IST]
Other articles published on Mar 31, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X