ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಿಲ್ಲಿಂಗ್ಸ್ ಶತಕ ವ್ಯರ್ಥ, ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾಕ್ಕೆ ರೋಚಕ ಜಯ

Sam Billings maiden ODI ton in vain as Australia beat England

ಮ್ಯಾನ್ಚೆಸ್ಟರ್: ಮ್ಯಾನ್ಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ನಡೆದ ಇಂಗ್ಲೆಂಡ್ vs ಆಸ್ಟ್ರೇಲಿಯಾ ಮೊದಲನೇ ಏಕದಿನ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ರೋಚಕ 19 ರನ್ ಗೆಲುವು ದಾಖಲಿಸಿದೆ. ಇಂಗ್ಲೆಂಡ್‌ನ ಸ್ಯಾಮ್ ಬಿಲ್ಲಿಂಗ್ಸ್ ಅವರ ಚೊಚ್ಚಲ ಏಕದಿನ ಶತಕ ವ್ಯರ್ಥವಾಗಿದೆ. ಇದರೊಂದಿಗೆ ಮೂರು ಪಂದ್ಯಗಳ ಈ ಏಕದಿನ ಸರಣಿಯಲ್ಲಿ ಕಾಂಗರೂ ಪಡೆ 1-0ಯ ಮುನ್ನಡೆ ಸಾಧಿಸಿದೆ.

ಸಿಪಿಎಲ್ 2020: ಕುತೂಹಲಕಾರಿ ಅಂಕಿ-ಅಂಶಗಳು, ವಿಶೇಷ ದಾಖಲೆಗಳುಸಿಪಿಎಲ್ 2020: ಕುತೂಹಲಕಾರಿ ಅಂಕಿ-ಅಂಶಗಳು, ವಿಶೇಷ ದಾಖಲೆಗಳು

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಆಸ್ಟ್ರೇಲಿಯಾದಿಂದ ನಾಯಕ ಆ್ಯರನ್ ಫಿಂಚ್ 16, ಮಾರ್ಕಸ್ ಸ್ಟೋಯ್ನಿಸ್ 43, ಮಾರ್ನಸ್ ಲ್ಯಬುಶೇನ್ 21, ಮಿಚೆಲ್ ಮಾರ್ಷ್ 73, ಅಲೆಕ್ಸ್ ಕ್ಯಾರಿ 10, ಗ್ಲೆನ್ ಮ್ಯಾಕ್ಸ್‌ವೆಲ್ 77, ಮಿಚೆಲ್ ಸ್ಟಾರ್ಕ್ 19 ರನ್‌ ಸೇರಿಸಿದರು. ಆಸೀಸ್ 50 ಓವರ್‌ಗೆ 9 ವಿಕೆಟ್ ನಷ್ಟದಲ್ಲಿ 294 ರನ್ ಗಳಿಸಿತು.

ಇಂಗ್ಲೆಂಡ್ vs ಆಸ್ಟ್ರೇಲಿಯಾ, 1ನೇ ಏಕದಿನ, ಸ್ಕೋರ್‌ಕಾರ್ಡ್

1
49134

ಗುರಿ ಬೆನ್ನಟ್ಟಿದ ಇಂಗ್ಲೆಂಡ್‌, ಆರಂಭಿಕ ಬ್ಯಾಟ್ಸ್‌ಮನ್ ಜಾನಿ ಬೇರ್ಸ್ಟೋವ್ 84, ನಾಯಕ ಇಯಾನ್ ಮಾರ್ಗನ್ 23, ಸ್ಯಾಮ್ ಬಿಲ್ಲಿಂಗ್ಸ್ 118 (110 ಎಸೆತ), ಕ್ರಿಸ್ ವೋಕ್ಸ್ 10 ರನ್ ಸೇರ್ಪಡೆಯೊಂದಿಗೆ 50 ಓವರ್‌ಗೆ 9 ವಿಕೆಟ್ ಕಳೆದು 275 ರನ್ ಪೇರಿಸಿ ಶರಣಾಯಿತು.

ಯುವರಾಜ್ ವಿಚಾರದಲ್ಲೂ ಬಿಸಿಸಿಐ ತಾಂಬೆ ನಿಯಮ ಅನುಸರಿಸುತ್ತಾ?!ಯುವರಾಜ್ ವಿಚಾರದಲ್ಲೂ ಬಿಸಿಸಿಐ ತಾಂಬೆ ನಿಯಮ ಅನುಸರಿಸುತ್ತಾ?!

ಆಸ್ಟ್ರೇಲಿಯಾ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ನ ಜೋಫ್ರಾ ಆರ್ಚರ್ 3, ಮಾರ್ಕ್ ವುಡ್ 3, ಆದಿಲ್ ರಶೀದ್ 2 ವಿಕೆಟ್ ಪಡೆದರೆ, ಇಂಗ್ಲೆಂಡ್ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾದ ಜೋಶ್ ಹ್ಯಾಝಲ್ವುಡ್‌ 26 ರನ್‌ಗೆ 3, ಆ್ಯಡಮ್ ಜಂಪಾ 55ಕ್ಕೆ 4 ವಿಕೆಟ್‌ ಮುರಿದು ಗಮನ ಸೆಳೆದರು. ಹ್ಯಾಝಲ್ವುಡ್ ಪಂದ್ಯಶ್ರೇಷ್ಠರೆನಿಸಿದರು.

Story first published: Saturday, September 12, 2020, 18:05 [IST]
Other articles published on Sep 12, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X