ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಮುಂದುವರೆದಾಗ ಚೆನ್ನೈ ತಂಡವನ್ನು ಕಾಡಲಿದೆ ಈ ಗಂಭೀರ ಸಮಸ್ಯೆ

Sam Curran and Moeen Alis potential absence will impact CSK in IPL 2021 second leg

ಏಪ್ರಿಲ್ 9ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವಿನ ಪಂದ್ಯದ ಮೂಲಕ ಆರಂಭವಾಗಿದ್ದ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಯಾವುದೇ ಅಡಚಣೆಗಳಿಲ್ಲದೇ 29 ಪಂದ್ಯಗಳನ್ನು ಯಶಸ್ವಿಯಾಗಿ ಪೂರೈಸಿತ್ತು. ಆದರೆ ನಂತರದ ದಿನಗಳಲ್ಲಿ ಕೊರೊನಾ ಐಪಿಎಲ್ ಬಯೋಬಬಲ್ ಪ್ರವೇಶಿಸಿ ವಿವಿಧ ತಂಡಗಳ ಕೆಲ ಆಟಗಾರರಲ್ಲಿ ಸೋಂಕು ಕಾಣಿಸಿಕೊಂಡ ಕಾರಣ ಮಧ್ಯದಲ್ಲಿಯೇ ಐಪಿಎಲ್ ಟೂರ್ನಿಯನ್ನು ಮೊಟಕುಗೊಳಿಸಿ ಮುಂದೂಡಲಾಯಿತು.

ಐಪಿಎಲ್ ಟೂರ್ನಿ ವಿಸ್ತರಿಸುವ ಬಿಸಿಸಿಐ ಕನಸಿಗೆ ಐಸಿಸಿ ತಣ್ಣೀರು

ಇದೀಗ ಸೆಪ್ಟೆಂಬರ್ 19ರಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಯುಎಇಯಲ್ಲಿ ಮುಂದುವರೆಸಲು ಬಿಸಿಸಿಐ ತೀರ್ಮಾನಿಸಿದ್ದು ಸೌರವ್ ಗಂಗೂಲಿ ಎಮಿರೇಟ್ಸ್ ಕ್ರಿಕೆಟ್ ಬೋರ್ಡ್‌ ಜೊತೆ ಈ ಕುರಿತು ಸಭೆ ನಡೆಸುತ್ತಿದ್ದಾರೆ. ಯುಎಇಯಲ್ಲಿ ಐಪಿಎಲ್ ಮುಂದುವರೆದರೆ ಚೆನ್ನೈ ಸೂಪರ್ ಕಿಂಗ್ಸ್ ಸೇರಿದಂತೆ ಇನ್ನೂ ಕೆಲ ತಂಡಗಳನ್ನು ಗಂಭೀರವಾದ ಸಮಸ್ಯೆಯೊಂದು ಕಾಡಲಿದೆ. ಹೌದು ಇಂಗ್ಲೆಂಡ್ ತಂಡದ ಆಟಗಾರರು ಐಪಿಎಲ್ ಮುಂದುವರೆದಾಗ ಅಲಭ್ಯರಾಗುವ ಕಾರಣ ಇಂಗ್ಲೆಂಡ್ ಆಟಗಾರರನ್ನು ಹೊಂದಿದ್ದ ಐಪಿಎಲ್ ತಂಡಗಳಿಗೆ ಐಪಿಎಲ್ ಮುಂದುವರಿಕೆ ತಲೆನೋವಾಗಿ ಪರಿಣಮಿಸಲಿದೆ.

 ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಟೂರ್ನಿ ಬಳಿಕ ನಿವೃತ್ತಿ ಹೊಂದಬಹುದಾದ 5 ಭಾರತೀಯ ಆಟಗಾರರು! ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಟೂರ್ನಿ ಬಳಿಕ ನಿವೃತ್ತಿ ಹೊಂದಬಹುದಾದ 5 ಭಾರತೀಯ ಆಟಗಾರರು!

ಅದರಲ್ಲಿಯೂ ಯುಎಇಯಲ್ಲಿ ಪುನರಾರಂಭವಾಗಲಿರುವ ಐಪಿಎಲ್ ಟೂರ್ನಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ತುಸು ಹೆಚ್ಚೇ ಸಮಸ್ಯೆಯನ್ನುಂಟುಮಾಡಬಹುದು. ಏಕೆಂದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಇಬ್ಬರು ಪ್ರಮುಖ ಆಲ್‌ರೌಂಡರ್‌ಗಳಾದ ಸ್ಯಾಮ್ ಕರನ್ ಮತ್ತು ಮೊಯಿನ್ ಅಲಿ ಇಂಗ್ಲೆಂಡ್ ಆಟಗಾರರಾದ ಕಾರಣ ಐಪಿಎಲ್ ಮುಂದುವರೆದಾಗ ಅವರು ಅಲಭ್ಯರಾಗಲಿದ್ದಾರೆ. ಈ ಇಬ್ಬರು ಆಟಗಾರರ ಅಲಭ್ಯತೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಐಪಿಎಲ್ ಮುಂದುವರೆದಾಗ ದೊಡ್ಡ ಸಮಸ್ಯೆಯಾಗಿ ಕಾಡುವುದಂತೂ ನಿಜ.

ಟೂರ್ನಿಯ ಮೊದಲಾರ್ಧದಲ್ಲಿ ಮಿಂಚಿದ್ದ ಮೊಯಿನ್ ಅಲಿ ಮತ್ತು ಸ್ಯಾಮ್ ಕರನ್

ಟೂರ್ನಿಯ ಮೊದಲಾರ್ಧದಲ್ಲಿ ಮಿಂಚಿದ್ದ ಮೊಯಿನ್ ಅಲಿ ಮತ್ತು ಸ್ಯಾಮ್ ಕರನ್

ಪ್ರಸ್ತುತ ಐಪಿಎಲ್ ಟೂರ್ನಿಯ ಮೊದಲಾರ್ಧದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮೊಯಿನ್ ಅಲಿ ಮತ್ತು ಸ್ಯಾಮ್ ಕರನ್ ಉತ್ತಮ ಪ್ರದರ್ಶನ ನೀಡುವುದರ ಮೂಲಕ ಮಿಂಚಿದ್ದರು. ಟೂರ್ನಿಯ ಮೊದಲಾರ್ಧದಲ್ಲಿ ಚೆನ್ನೈ ಪರ ಮೊಯಿನ್ ಅಲಿ 206 ರನ್ ಬಾರಿಸಿ 5 ವಿಕೆಟ್‍ಗಳನ್ನು ಪಡೆದಿದ್ದರು. ಇನ್ನು ಸ್ಯಾಮ್ ಕರನ್ 9 ವಿಕೆಟ್‍ಗಳನ್ನು ಪಡೆದು 58 ರನ್ ಬಾರಿಸಿದ್ದರು.

ಬೇರೆ ಆಟಗಾರರನ್ನು ಆಡಿಸಿದರೂ ಉತ್ತಮ ಪ್ರದರ್ಶನ ಅನುಮಾನ!

ಬೇರೆ ಆಟಗಾರರನ್ನು ಆಡಿಸಿದರೂ ಉತ್ತಮ ಪ್ರದರ್ಶನ ಅನುಮಾನ!

ಮೊಯಿನ್ ಅಲಿ ಮತ್ತು ಸ್ಯಾಮ್ ಕರನ್ ಜಾಗಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಇತರ ಆಲ್‌ರೌಂಡರ್‌ ಆಟಗಾರರಾದ ಮಿಚೆಲ್ ಸ್ಯಾಂಟ್ನರ್, ಜೇಸನ್ ಬೆಹೆರೆನ್ಡಾಫ್, ಲುಂಗಿ ಎನ್‌ಗಿಡಿ ಹಾಗೂ ಡ್ವೇನ್ ಬ್ರಾವೊರನ್ನು ಆಡಿಸಿದರೂ ಸಹ ಆಡಿದ ಮೊದಲ ಪಂದ್ಯದಿಂದಲೇ ಉತ್ತಮ ಪ್ರದರ್ಶನ ನೀಡುವುದು ಕಷ್ಟ, ಹೀಗಾಗಿ ಆ ಆಟಗಾರರು ಹೇಳಿಕೊಳ್ಳುವಂತಹ ಪ್ರದರ್ಶನ ನೀಡುವಲ್ಲಿ ವಿಫಲರಾಗಬಹುದು. ಅದರಲ್ಲಿಯೂ ಐಪಿಎಲ್ ಟೂರ್ನಿಯು ಹೀಗೆ ಸ್ಥಳಾಂತರವಾಗಿರುವುದರಿಂದ ಆಟಗಾರರಿಗೆ ಇನ್ನಷ್ಟು ತಲೆನೋವು ತಪ್ಪಿದ್ದಲ್ಲ.

ಯುಎಇಯಲ್ಲಿ ಚೆನ್ನೈ ಆಟ ಅಷ್ಟಕ್ಕಷ್ಟೆ

ಯುಎಇಯಲ್ಲಿ ಚೆನ್ನೈ ಆಟ ಅಷ್ಟಕ್ಕಷ್ಟೆ

ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಇಂಗ್ಲೆಂಡ್ ಆಟಗಾರರ ಅಲಭ್ಯತೆಯ ಸಮಸ್ಯೆ ಒಂದೆಡೆಯಾದರೆ, ಐಪಿಎಲ್ ಟೂರ್ನಿ ಯುಎಇಗೆ ಸ್ಥಳಾಂತರವಾಗುತ್ತಿರುವುದು ಮತ್ತೊಂದು ಸಮಸ್ಯೆಯಾಗಲಿದೆ. ಏಕೆಂದರೆ ಕಳೆದ ಬಾರಿಯ ಐಪಿಎಲ್ ಟೂರ್ನಿ ಯುಎಇಯಲ್ಲಿ ನಡೆದಾಗ ಕಳಪೆ ಪ್ರದರ್ಶನ ನೀಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅಂಕಪಟ್ಟಿಯಲ್ಲಿ ಏಳನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡು ಲೀಗ್ ಹಂತದಲ್ಲಿಯೇ ಟೂರ್ನಿಯಿಂದ ಹೊರಬಿದ್ದಿತ್ತು. ಹೀಗಾಗಿ ಈ ಬಾರಿಯ ಐಪಿಎಲ್ ಟೂರ್ನಿ ಯುಎಇಯಲ್ಲಿ ಮುಂದುವರಿಯುವುದು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮತ್ತೊಂದು ಸಮಸ್ಯೆಯಾಗಬಹುದು.

Story first published: Thursday, June 10, 2021, 7:49 [IST]
Other articles published on Jun 10, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X