ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮೈಖೇಲ್ ಜತೆ ಸಂತಸ ಹಂಚಿಕೊಂಡ ಡೆಲ್ಲಿ ಪಾಲಾದ ನೇಪಾಳಿ ಗೂಗ್ಲಿ ಬೌಲರ್ ಸಂದೀಪ್

By Mahesh
Sandeep Lamichhane creates history, first Nepal player in IPL

ಬೆಂಗಳೂರು, ಜನವರಿ 28: ಸಂದೀಪ್ ಲಮಿಚ್ಚಾನೆ ಯುವ ನೇಪಾಳಿ ಆಟಗಾರ ಭಾನುವಾರದಂದು ಇಂಡಿಯನ್ ಪ್ರೀಮಿಯರ್ ಲೀಗ್ 11 ರ ಹರಾಜಿನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾನೆ.

LIVE: ಐಪಿಎಲ್ ಹರಾಜು: ಕೊನೆಗೂ ಸೇಲ್ ಆದ ಯೂನಿವರ್ಸಲ್ ಬಾಸ್ LIVE: ಐಪಿಎಲ್ ಹರಾಜು: ಕೊನೆಗೂ ಸೇಲ್ ಆದ ಯೂನಿವರ್ಸಲ್ ಬಾಸ್

ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಎಂಎಸ್ ಧೋನಿ, ಮೈಕಲ್ ಕ್ಲಾರ್ಕ್ ಅವರನ್ನು ಗುರುವಾಗಿ ಪರಿಗಣಿಸುವ ನೇಪಾಳಿ ಗೂಗ್ಲಿ ಬೌಲರ್ ಅವರು ಐಪಿಎಲ್ ಆಡಲು ಆಯ್ಕೆಯಾಗಿರುವ ಸಕತ್ ಥ್ರಿಲ್ಲಿಂಗ್ ವಿಷಯ ಎಂದು ನಮ್ಮ ಮೈಖೇಲ್ ಪ್ರತಿನಿಧಿಗೆ ಹೇಳಿದ್ದಾರೆ.

ಸಂದೀಪ್ ಗೆ ಕೊನೆ ಗಳಿಗೆ ತನಕ ಐಪಿಎಲ್ ಹರಾಜಿನಲ್ಲಿ ಪಾಲ್ಗೊಳ್ಳುವ ಬಗ್ಗೆ ತಿಳಿದಿರಲಿಲ್ಲ. ನೋಂದಣಿ ಮಾಡಿಸಲು ಕೊನೆ ಕ್ಷಣದಲ್ಲಿ ಮುಂದಾದ ಲಮಿಚ್ಚಾನೆ ಇಂದು ನೇಪಾಳ ಕ್ರಿಕೆಟ್ ನ ಆಶಾಕಿರಣ ಎನಿಸಿಕೊಂಡಿದ್ದಾನೆ.

ನೇಪಾಳದ ಲೆಗ್ ಸ್ಪಿನ್ನರ್ ಗೆ ನೆರವಾದ ಮೈಕಲ್ ಕ್ಲಾರ್ಕ್ನೇಪಾಳದ ಲೆಗ್ ಸ್ಪಿನ್ನರ್ ಗೆ ನೆರವಾದ ಮೈಕಲ್ ಕ್ಲಾರ್ಕ್

ಬೆಂಗಳೂರಿನಲ್ಲಿ ಭಾನುವಾರದಂದು ನಡೆದ ಐಪಿಎಲ್ 2018ರ ಹರಾಜಿನಲ್ಲಿ ಸಂದೀಪ್ ಲಮಿಚ್ಚಾನೆ ಅವರನ್ನು ಡೆಲ್ಲಿ ಡೇರ್ ಡೆವಿಲ್ಸ್ ತಂಡವು 20 ಲಕ್ಷ ರುಗಳ ಮೂಲಬೆಲೆಗೆ ಖರೀದಿಸಿದೆ. ಈ ಬಗ್ಗೆ ಸಂದೀಪ್ ಅವರು ಏನು ಹೇಳಿದರು ಮುಂದೆ ಓದಿ...

ಸಂತಸ ಹಂಚಿಕೊಂಡ ಸಂದೀಪ್ ಲಮಿಚ್ಚಾನೆ

ಸಂತಸ ಹಂಚಿಕೊಂಡ ಸಂದೀಪ್ ಲಮಿಚ್ಚಾನೆ

ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ನನ್ನ ಹೆಸರು ಕಾಣಿಸಿಕೊಂಡಿದ್ದೆ ದೊಡ್ಡ ಸಾಧನೆ. ವಿಶ್ವ ಕ್ರಿಕೆಟ್ ನ ದೊಡ್ಡ ದೊಡ್ಡ ಆಟಗಾರರ ಜತೆ ನನ್ನ ಹೆಸರು ಹರಾಜಿಗೆ ಬಂದಿದ್ದು ಸಂತಸದ ವಿಷಯ. ನನ್ನನ್ನು ಯಾವುದೇ ತಂಡ ಆಯ್ಕೆ ಮಾಡುತ್ತದೆ ಎಂಬ ನಿರೀಕ್ಷೆ ಖಂಡಿತ ಇರಲಿಲ್ಲ. ನನ್ನ ಆಯ್ಕೆಯಿಂದ ನೇಪಾಳ ಕ್ರಿಕೆಟ್ ಗೆ ಭಾಗ್ಯದ ಬಾಗಿಲು ತೆರೆದಂತೆ ಆಗುತ್ತದೆ ಎಂದು ಹೇಳಿದರು.

ಐಪಿಎಲ್ ಆಟಗಾರರ ಹರಾಜು - ವಿಶೇಷ ಪುಟ

ವಿಶ್ವಕಪ್ 2019 ಅರ್ಹತೆ ಗಳಿಸುವುದು ನಮ್ಮ ಉದ್ದೇಶ

ವಿಶ್ವಕಪ್ 2019 ಅರ್ಹತೆ ಗಳಿಸುವುದು ನಮ್ಮ ಉದ್ದೇಶ

ಫೆಬ್ರವರಿ 06ರಿಂದ ನಮೀಬಿಯಾದಲ್ಲಿ ಆರಂಭವಾಗಲಿರುವ ಐಸಿಸಿ ವಿಶ್ವ ಕ್ರಿಕೆಟ್ ಲೀಗ್ ಗಾಗಿ ಸಂದೀಪ್ ಅವರು ಸದ್ಯ ತಯಾರಿ ನಡೆಸಿದ್ದಾರೆ. ಈ ಟೂರ್ನಮೆಂಟ್ ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ವಿಶ್ವಕಪ್ 2019ಕ್ಕೆ ಅರ್ಹತೆ ಗಳಿಸುವುದು ನಮ್ಮ ಉದ್ದೇಶ. ನಮ್ಮಂತ ಪುಟ್ಟ ರಾಷ್ಟ್ರಗಳಲ್ಲಿ ಕ್ರಿಕೆಟ್ ಬೆಳವಣಿಗೆಗೆ ಅರ್ಹತೆ ಗಳಿಸುವುದು ದೊಡ್ಡ ವಿಷಯ ಎಂದು 20 ವರ್ಷ ವಯಸ್ಸಿನ ಸಂದೀಪ್ ಹೇಳಿದರು.

ಸಂದೀಪ್ ಗೆ ಭಾರತದ ವಾತಾವರಣ ಹೊಸದೇನಲ್ಲ

ಸಂದೀಪ್ ಗೆ ಭಾರತದ ವಾತಾವರಣ ಹೊಸದೇನಲ್ಲ

ಸಂದೀಪ್ ಅವರ ತಂದೆ ಭಾರತೀಯ ರೈಲ್ವೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರಿಂದ ಸಂದೀಪ್ ಗೆ ಇಲ್ಲಿನ ವಾತಾವರಣ ಚಿರಪರಿಚಿತವಾಗಿದೆ. ನಾಲ್ಕನೇ ತರಗತಿ ತನಕ ಭಾರತದಲ್ಲೇ ವಿದ್ಯಾಭ್ಯಾಸ ಮಾಡಿದ್ದಾರೆ. ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಹಾಗೂ ಎಂಎಸ್ ಧೋನಿ ಅವರನ್ನು ಗುರುವಾಗಿ ಪರಿಗಣಿಸಿದ್ದಾರೆ. ಆಸ್ಟ್ರೇಲಿಯಾದ ದಿಗ್ಗಜ ಶೇನ್ ವಾರ್ನ್ ಅವರ ಬೌಲಿಂಗ್ ಶೈಲಿಗೆ ಮಾರು ಹೋಗಿ ಗೂಗ್ಲಿ ಬೌಲರ್ ಆಗಿ ರೂಪುಗೊಳ್ಳುತ್ತಿದ್ದಾರೆ.

ದ್ರಾವಿಡ್ ಹಾಗೂ ಕ್ಲಾರ್ಕ್ ಮಾರ್ಗದರ್ಶನ

ದ್ರಾವಿಡ್ ಹಾಗೂ ಕ್ಲಾರ್ಕ್ ಮಾರ್ಗದರ್ಶನ

ಅಂಡರ್ 19 ಏಷ್ಯಾ ಕಪ್ ಆಡುವಾಗ ಭಾರತ ತಂಡಕ್ಕೆ ನೇಪಾಳ ಸೋಲುಣಿಸಿತ್ತು. ಈ ಸಂದರ್ಭದಲ್ಲಿ ಭಾರತದ ಅಂಡರ್ 19 ತಂಡದ ಕೋಚ್ ರಾಹುಲ್ ದ್ರಾವಿಡ್ ಅವರು ನೇಪಾಳದ ಡ್ರೆಸಿಂಗ್ ರೂಮಿಗೆ ಬಂದು ಶುಭ ಹಾರೈಸಿ, ಕೆಲವು ಟಿಪ್ಸ್ ನೀಡಿದರು. ಕ್ರಿಕೆಟ್ ದಿಗ್ಗಜರೊಬ್ಬರು ಇಷ್ಟು ಸರಳವಾಗಿ ನಮ್ಮ ಜತೆ ಮಾತನಾಡಿದ್ದು ನಮಗೆ ಹೊಸ ಉತ್ಸಾಹ ನೀಡಿತು ಎಂದು ಸಂದೀಪ್ ಸ್ಮರಿಸಿದರು.

ನ್ಯೂ ಸೌಥ್ ವೇಲ್ಸ್ ನ ಪಶ್ಚಿಮ ಸಬ್ ರುಬ್ಸ್ ಪರ ಆಡುವ ಅವಕಾಶ ನೀಡಿದ ಮೈಕಲ್ ಕ್ಲಾರ್ಕ್ ಅವರು ನನ್ನ ಏಳಿಗೆಗೆ ಕಾರಣ ಎಂದು ಸಂದೀಪ್ ಹೊಗಳಿದರು.

Story first published: Sunday, January 28, 2018, 17:59 [IST]
Other articles published on Jan 28, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X