ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರವಿಚಂದ್ರನ್ ಅಶ್ವಿನ್ ಮಹಾನ್ ಬೌಲರ್ ಏನಲ್ಲ, ಆತನಿಗೆ ಸಮಸ್ಯೆಯಿದೆ: ಮಾಜಿ ಭಾರತೀಯ ಕ್ರಿಕೆಟಿಗ

Sanjay Manjrekar Doesn’t Consider Ravichandran Ashwin as An All Time Great Bowler
ಅಶ್ವಿನ್ ಗೆ ಒಂದು ಸಮಸ್ಯೆ ಇದೆ | R Ashwin | Ondindia Kannada

34 ವರ್ಷದ ರವಿಚಂದ್ರನ್ ಅಶ್ವಿನ್ ಟೀಮ್ ಇಂಡಿಯಾದ ಪ್ರಮುಖ ಬೌಲರ್ ಎನಿಸಿಕೊಂಡಿದ್ದಾರೆ. ಸದ್ಯ ತಂಡದ ಹಿರಿಯ ಆಟಗಾರ ಎನಿಸಿಕೊಂಡಿರುವ ರವಿಚಂದ್ರನ್ ಅಶ್ವಿನ್ ಸಾಲು ಸಾಲು ಉತ್ತಮ ಪ್ರದರ್ಶನಗಳನ್ನು ನೀಡುತ್ತಾ ಬಂದಿದ್ದಾರೆ.

ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ ರೀತಿ ಕೊಹ್ಲಿ ಪಡೆ ಮಿಂಚುವುದು ಅನುಮಾನ ಎಂದ ಭಾರತದ ಮಾಜಿ ಕ್ರಿಕೆಟಿಗ!

ರವಿಚಂದ್ರನ್ ಅಶ್ವಿನ್ ಇದುವರೆಗೂ 409 ಟೆಸ್ಟ್ ವಿಕೆಟ್‍ಗಳು, 150 ಏಕದಿನ ವಿಕೆಟ್‍ಗಳು, 52 ಟಿಟ್ವೆಂಟಿ ವಿಕೆಟ್‍ಗಳು, 139 ಐಪಿಎಲ್ ವಿಕೆಟ್‍ಗಳು ಸೇರಿದಂತೆ ದೇಶೀಯ ಕ್ರಿಕೆಟ್‍ನಲ್ಲಿ 500ಕ್ಕೂ ಹೆಚ್ಚು ವಿಕೆಟ್‍ಗಳನ್ನು ಪಡೆದು ಸಾರ್ವಕಾಲಿಕ ಅತ್ಯುತ್ತಮ ಬೌಲರ್ ಎನಿಸಿಕೊಂಡಿದ್ದಾರೆ. ಕಳೆದ ಬಾರಿಯ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡಿದ ರವಿಚಂದ್ರನ್ ಅಶ್ವಿನ್ ಸದ್ಯ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯ ಹಾಗೂ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲು ಇಂಗ್ಲೆಂಡ್ ತಲುಪಿದ್ದಾರೆ.

ಕೊಹ್ಲಿ, ರೋಹಿತ್ ಅಲ್ಲ ಈತನನ್ನು ಅನುಸರಿಸಿ; ಆಂಗ್ಲ ಕ್ರಿಕೆಟಿಗರಿಗೆ ಪೀಟರ್ಸನ್ ಸಲಹೆ!

ಸದ್ಯ ಇಂಗ್ಲೆಂಡ್‌ನಲ್ಲಿರುವ ರವಿಚಂದ್ರನ್ ಅಶ್ವಿನ್ ಕುರಿತು ಮಾತನಾಡಿರುವ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಅಶ್ವಿನ್ ಮಹಾನ್ ಕ್ರಿಕೆಟಿಗನಲ್ಲ ಎಂದು ಹೇಳುವುದರ ಮೂಲಕ ವಿವಾದ ಸೃಷ್ಟಿಸಿದ್ದಾರೆ. 'ಅಶ್ವಿನ್ ಮಹಾನ್ ಬೌಲರ್ ಜನರು ಹೇಳಿದಾಗ ಒಪ್ಪಿಕೊಳ್ಳಲು ನಾನು ತಯಾರಿಲ್ಲ. ಏಕೆಂದರೆ ಆತ ಕೆಲವು ಸಮಸ್ಯೆಗಳನ್ನು ಹೊಂದಿದ್ದಾನೆ, ಸೆನಾ ( ಸೌತ್ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ದೇಶಗಳನ್ನೆಲ್ಲ ಸೇರಿ ಸೆನಾ ಎಂದು ಕರೆಯಲಾಗುತ್ತದೆ ) ದೇಶಗಳಲ್ಲಿ ಹೇಳಿಕೊಳ್ಳುವಂತಹ ಬೌಲಿಂಗ್ ಪ್ರದರ್ಶನ ನೀಡಿಲ್ಲ. ಸೆನಾ ನೆಲದಲ್ಲಿ ಒಂದೇ ಒಂದು 5 ವಿಕೆಟ್ ಗೊಂಚಲನ್ನು ಸಹ ಅಶ್ವಿನ್ ಪಡೆದಿಲ್ಲ. ಇಂತಹ ಬೌಲರ್ ಸಾರ್ವಕಾಲಿಕ ಅತ್ಯುತ್ತಮ ಬೌಲರ್ ಆಗಲು ಹೇಗೆ ಸಾಧ್ಯ?' ಎಂದು ಸಂಜಯ್ ಮಂಜ್ರೇಕರ್ ಅಶ್ವಿನ್ ವಿರುದ್ಧವಾಗಿ ಮಾತನಾಡಿದ್ದಾರೆ.

ರವೀಂದ್ರ ಜಡೇಜಾ ಕೂಡ ಅಶ್ವಿನ್ ರೀತಿ ವಿಕೆಟ್ ಪಡೆಯಬಲ್ಲ

ರವೀಂದ್ರ ಜಡೇಜಾ ಕೂಡ ಅಶ್ವಿನ್ ರೀತಿ ವಿಕೆಟ್ ಪಡೆಯಬಲ್ಲ

ಇನ್ನೂ ಮುಂದುವರೆದು ಮಾತನಾಡಿರುವ ಸಂಜಯ್ ಮಂಜ್ರೇಕರ್ ರವಿಚಂದ್ರನ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ನಡುವೆ ಹೋಲಿಕೆ ಮಾಡಿ ಮಾತನಾಡಿದ್ದಾರೆ. ಕಳೆದ 4 ವರ್ಷಗಳಲ್ಲಿ ಗಮನಿಸಿದರೆ ರವೀಂದ್ರ ಜಡೇಜಾ ಕೂಡ ರವಿಚಂದ್ರನ್ ಅಶ್ವಿನ್ ಪಡೆದಿರುವಷ್ಟೇ ವಿಕೆಟ್‍ಗಳನ್ನು ಪಡೆದಿದ್ದಾರೆ. ಅಷ್ಟೇ ಅಲ್ಲದೆ ಕೆಲ ಪಿಚ್‌ಗಳಲ್ಲಿ ಅಕ್ಷರ್ ಪಟೇಲ್ ಕೂಡ ಅಶ್ವಿನ್‌ಗಿಂತ ಹೆಚ್ಚು ವಿಕೆಟ್‍ಗಳನ್ನು ಪಡೆದು ಮಿಂಚುತ್ತಿದ್ದಾರೆ. ಹೀಗೆ ಇತರ ಭಾರತೀಯ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡುತ್ತಿರುವಾಗ ರವಿಚಂದ್ರನ್ ಅಶ್ವಿನ್ ಹೇಗೆ ಅತ್ಯುತ್ತಮ ಬೌಲರ್ ಆಗುತ್ತಾರೆ ಎಂದು ಸಂಜಯ್ ಮಂಜ್ರೇಕರ್ ಪ್ರಶ್ನಿಸಿದ್ದಾರೆ.

ಈ ರೀತಿ ರವೀಂದ್ರ ಜಡೇಜಾರನ್ನೂ ಕಾಲೆಳೆದಿದ್ದ ಸಂಜಯ್ ಮಂಜ್ರೇಕರ್

ಈ ರೀತಿ ರವೀಂದ್ರ ಜಡೇಜಾರನ್ನೂ ಕಾಲೆಳೆದಿದ್ದ ಸಂಜಯ್ ಮಂಜ್ರೇಕರ್

ಸಂಜಯ್ ಮಂಜ್ರೇಕರ್ ಭಾರತೀಯ ಆಟಗಾರರನ್ನು ಕಳಪೆ ಎನ್ನುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಕೆಲವೊಂದಷ್ಟು ಬಾರಿ ರವೀಂದ್ರ ಜಡೇಜಾರನ್ನು ಸಂಜಯ್ ಮಂಜ್ರೇಕರ್ ಕಳಪೆಯಾಗಿ ಬಿಂಬಿಸಿದ್ದರು. ಆ ಸಮಯದಲ್ಲಿಯೂ ಸಹ ವಿವಾದಕ್ಕೊಳಗಾಗಿದ್ದ ಸಂಜಯ್ ಮಂಜ್ರೇಕರ್ ಹಲವಾರು ಕ್ರಿಕೆಟಿಗರು ಮತ್ತು ಕ್ರೀಡಾಭಿಮಾನಿಗಳಿಂದ ದೊಡ್ಡ ಮಟ್ಟದ ಟೀಕೆಗಳನ್ನು ಎದುರಿಸಿದ್ದರು.

ಕುಂಬ್ಳೆ, ಕಪಿಲ್ ದೇವ್ ಹಾಗೂ ಹರ್ಭಜನ್ ಬಿಟ್ಟರೆ ಅಶ್ವಿನ್ ಅತ್ಯುತ್ತಮ

ಕುಂಬ್ಳೆ, ಕಪಿಲ್ ದೇವ್ ಹಾಗೂ ಹರ್ಭಜನ್ ಬಿಟ್ಟರೆ ಅಶ್ವಿನ್ ಅತ್ಯುತ್ತಮ

ರವಿಚಂದ್ರನ್ ಅಶ್ವಿನ್ ಟೀಮ್ ಇಂಡಿಯಾದ ಪರ 409 ಟೆಸ್ಟ್ ವಿಕೆಟ್‍ಗಳನ್ನು ಪಡೆದುಕೊಳ್ಳುವುದರ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಭಾರತೀಯ ಆಟಗಾರರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ. ಅನಿಲ್ ಕುಂಬ್ಳೆ, ಕಪಿಲ್ ದೇವ್ ಹಾಗೂ ಹರ್ಭಜನ್ ಸಿಂಗ್ ನಂತರ ರವಿಚಂದ್ರನ್ ಅಶ್ವಿನ್ ಈ ಪಟ್ಟಿಯಲ್ಲಿದ್ದಾರೆ.

Story first published: Sunday, June 6, 2021, 18:52 [IST]
Other articles published on Jun 6, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X