ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕಾಮೆಂಟರಿ ಪ್ಯಾನೆಲ್‌ನಿಂದ ಸಂಜಯ್ ಮಂಜ್ರೇಕರ್ ಕೈ ಬಿಟ್ಟ ಬಿಸಿಸಿಐ

Sanjay Manjrekar Dropped from BCCI Commentary Panel: Report
Sanjay Manjrekar Dropped from BCCI Commentary Panel: Report |BCCI |ONEINDIA KANNADA|

ಮುಂಬೈ, ಮಾರ್ಚ್ 14: ಬಿಸಿಸಿಐ ಕಾಮೆಂಟರಿ ಪ್ಯಾನೆಲ್‌ನಿಂದ ಭಾರತದ ಮಾಜಿ ಬ್ಯಾಟ್ಸ್‌ಮನ್ ಸಂಜಯ್ ಮಂಜ್ರೇಕರ್ ಅವರನ್ನು ಕೈ ಬಿಡಲಾಗಿದೆ. ಮುಂಬೈ ಮಿರರ್ ವರದಿಯ ಪ್ರಕಾರ, ಬಿಸಿಸಿಐ ಕಾಮೆಂಟರಿ ಪ್ಯಾನೆಲ್‌ನಿಂದ ಮಂಜ್ರೇಕರ್ ಹೊರ ಬಿದ್ದಿದ್ದಾರೆ ಎಂದು ಹೇಳಲಾಗುತ್ತಿದೆ.

ಐಪಿಎಲ್ ಮುಂದಿನ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿದ ಸೌರವ್ ಗಂಗೂಲಿಐಪಿಎಲ್ ಮುಂದಿನ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿದ ಸೌರವ್ ಗಂಗೂಲಿ

ತವರಿನಲ್ಲಿ ನಡೆಯುವ ಹೆಚ್ಚಿನ ಪಂದ್ಯಗಳ ವೇಳೆ ಕಾಮೆಂಟರಿ ಬಾಕ್ಸ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಮಂಜ್ರೇಕರ್ ಅವರನ್ನು ಐಪಿಎಲ್‌ ಟೂರ್ನಿಯಿಂದ ಕಾಮೆಂಟರಿ ಪ್ಯಾನೆಲ್‌ನಿಂದ ಹೊರಗಿಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಈಗ 54ರ ಹರೆಯದವರಾಗಿರುವ ಮಂಜ್ರೇಕರ್ ಮೂಲತಃ ಕರ್ನಾಟಕದವರು. ಜನಿಸಿದ್ದು ಮಂಗಳೂರಿನಲ್ಲಿ.

ಕೊರೊನಾವೈರಸ್ ಪರೀಕ್ಷೆಗಾಗಿ ಕಿವೀಸ್ ವೇಗಿ ಲಾಕಿ ಫರ್ಗುಸನ್‌ಗೆ ನಿರ್ಬಂಧ!ಕೊರೊನಾವೈರಸ್ ಪರೀಕ್ಷೆಗಾಗಿ ಕಿವೀಸ್ ವೇಗಿ ಲಾಕಿ ಫರ್ಗುಸನ್‌ಗೆ ನಿರ್ಬಂಧ!

ಧರ್ಮಶಾಲಾದಲ್ಲಿನ ಭಾರತ-ದಕ್ಷಿಣ ಆಫ್ರಿಕಾ ಮೊದಲ ಏಕದಿನ ಪಂದ್ಯದ ವೇಳೆಯೂ ಸಂಜಯ್ ಮಂಜ್ರೇಕರ್ ಉಪಸ್ಥಿತರಿರಲಿಲ್ಲ. ಆದರೆ ಅಂದಿನ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಅದೇ ಪಂದ್ಯದ ವೇಳೆ ಬಿಸಿಸಿಐ ಕಾಮಂಟೇಟರ್ ಪ್ಯಾನೆಲ್‌ನ ಸುನಿಲ್ ಗವಾಸ್ಕರ್, ಎಲ್‌ ಶಿವರಾಮಕೃಷ್ಣನ್ ಮತ್ತು ಮುರಳಿ ಕಾರ್ತಿಕ್ ಇದ್ದರು ಎಂದು ಮುಂಬೈ ಮಿರರ್ ವರದಿ ಹೇಳಿದೆ.

ಬೆಂಗಾಲ್ ಸೋಲಿಸಿ ಚೊಚ್ಚಲ ರಣಜಿ ಟ್ರೋಫಿ ಜಯಿಸಿದ ಸೌರಾಷ್ಟ್ರಬೆಂಗಾಲ್ ಸೋಲಿಸಿ ಚೊಚ್ಚಲ ರಣಜಿ ಟ್ರೋಫಿ ಜಯಿಸಿದ ಸೌರಾಷ್ಟ್ರ

ಬಿಸಿಸಿಐ ಕಾಮೆಂಟೇಟರ್ ಪ್ಯಾನೆಲ್‌ನಿಂದ ಮಂಜ್ರೇಕರ್ ಅವರನ್ನು ಕೈಬಿಟ್ಟಿದ್ದೇಕೆ ಎಂಬುದು ಇನ್ನೂ ಸ್ಪಷ್ಟಗೊಂಡಿಲ್ಲ. ಒಂದು ಮಾಹಿತಿಯ ಪ್ರಕಾರ, ಮಂಜ್ರೇಕರ್ ಕರ್ತವ್ಯದ ಬಗ್ಗೆ ಇತರ ಅಧಿಕಾರಿಗಳಿಗೆ ಖುಷಿಯಿರಲಿಲ್ಲ ಎನ್ನಲಾಗುತ್ತಿದೆ.

ಕೊರೊನಾ ಎಫೆಕ್ಟ್: ತೊಂದರೆಗೀಡಾದ ಪ್ರಮುಖ ಕ್ರೀಡಾ ಸ್ಪರ್ಧೆಗಳ ಪಟ್ಟಿಕೊರೊನಾ ಎಫೆಕ್ಟ್: ತೊಂದರೆಗೀಡಾದ ಪ್ರಮುಖ ಕ್ರೀಡಾ ಸ್ಪರ್ಧೆಗಳ ಪಟ್ಟಿ

'ಬಹುಶಃ ಸಂಜಯ್ ಮಂಜ್ರೇಕರ್ ಐಪಿಎಲ್ ಪ್ಯಾನೆಲ್‌ನಿಂದಲೂ ಹೊರ ನಡೆಯಬಹುದು. ಈ ವಿಚಾರ ನಮ್ಮ ತಲೆಯಲ್ಲೇನೂ ಇರಲಿಲ್ಲ. ಆದರೆ ವಾಸ್ತವ ಏನೆಂದರೆ, ಬಿಸಿಸಿಐ ಅಧಿಕಾರಿಗಳಿಗೆ ಸಂಜಯ್ ಕೆಲಸದ ಬಗ್ಗೆ ಅಂಥ ಖುಷಿಯೇನೂ ಇರಲಿಲ್ಲ,' ಎಂದು ಮಿರರ್‌ ವರದಿಯಲ್ಲೊಂದು ಹೇಳಿಕೆ ತಿಳಿಸಿದೆ.

Story first published: Saturday, March 14, 2020, 14:09 [IST]
Other articles published on Mar 14, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X