ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕಾಮೆಂಟರಿ ಪ್ಯಾನೆಲ್‌ನಿಂದ ಹೊರದಬ್ಬಿದ್ದಕ್ಕೆ ಅಸಲಿ ಕಾರಣ ಹೇಳಿದ ಮಂಜ್ರೇಕರ್!

Sanjay Manjrekar on being axed from IPL 2020 commentary panel

ನವದೆಹಲಿ: ಸೆಪ್ಟೆಂಬರ್ 19ರಿಂದ ನವೆಂಬರ್ 10ರ ವರೆಗೆ ಭಾರತ ಆಕರ್ಷಣೀಯ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭವಾಗಲಿದೆ. ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಮತ್ತು ಸ್ಟಾರ್‌ ಸ್ಪೋರ್ಟ್ಸ್ ಟೂರ್ನಿಗೆ ಸಂಬಂಧಿಸಿ ಕಾಮೆಂಟೇಟರ್‌ಗಳನ್ನು, ಕಾರ್ಯಕ್ರಮ ನಿರೂಪಕರನ್ನು ಹೆಸರಿಸಿದೆ. ಈ ಪಟ್ಟಿಯಲ್ಲಿ ಭಾರತದ ಮಾಜಿ ಬ್ಯಾಟ್ಸ್‌ಮನ್, ಕಾಮೆಂಟೇಟರ್ ಸಂಜಯ್ ಮಂಜ್ರೇಕರ್ ಹೆಸರು ಇರಲಿಲ್ಲ.

ಈ ಐಪಿಎಲ್‌ ಸೀಸನ್‌ನ ನಿರೂಪಕರ ಸಂಪೂರ್ಣ ಪಟ್ಟಿ, ಮಯಾಂತಿ ಇಲ್ಲ!ಈ ಐಪಿಎಲ್‌ ಸೀಸನ್‌ನ ನಿರೂಪಕರ ಸಂಪೂರ್ಣ ಪಟ್ಟಿ, ಮಯಾಂತಿ ಇಲ್ಲ!

ಜೆಂಟಲ್‌ಮ್ಯಾನ್‌ ಗೇಮ್ ಎಂದು ಕರೆಯಲಾಗುವ ಕ್ರಿಕೆಟ್‌ನಲ್ಲಿ ಸಂಜಯ್ ಮಂಜ್ರೇಕರ್ ಹೆಚ್ಚಾಗಿ ಧ್ವನಿ ನೀಡಿ ಗುರುತಿಸಿಕೊಂಡಿದ್ದರು. ಬಿಸಿಸಿಐ ಎಂದಿನ ಕಾಮೆಂಟೇಟರ್ ಪ್ಯಾನೆಲ್‌ನಲ್ಲಿ ಇರುತ್ತಿದ್ದ ಮಂಜ್ರೇಕರ್ ಅವರನ್ನು ಬಿಸಿಸಿಐ ಈ ಬಾರಿ ಐಪಿಎಲ್ ಕಾಮೆಂಟರಿ ಪ್ಯಾನೆಲ್‌ನಿಂದ ಹೊರಗಿಟ್ಟಿದೆ.

ಐಪಿಎಲ್ 2020: ಆರ್‌ಸಿಬಿ ನಾಯಕ ಕೊಹ್ಲಿಯನ್ನು ಟಗರಿಗೆ ಹೋಲಿಸಿದ ಶಿವರಾಜ್ ಕುಮಾರ್ಐಪಿಎಲ್ 2020: ಆರ್‌ಸಿಬಿ ನಾಯಕ ಕೊಹ್ಲಿಯನ್ನು ಟಗರಿಗೆ ಹೋಲಿಸಿದ ಶಿವರಾಜ್ ಕುಮಾರ್

ತನ್ನನ್ನು ಐಪಿಎಲ್ ಕಾಮೆಂಟರಿ ಪ್ಯಾನೆಲ್‌ನಿಂದ ಹೊರಗಿಡುವುದಕ್ಕೆ ಪ್ರಮುಖ ಕಾರಣವೇನೆಂದು ಸ್ವತಃ ಸಂಜಯ್ ಮಂಜ್ರೇಕರ್ ಹೇಳಿಕೊಂಡಿದ್ದಾರೆ.

ಮಾರ್ಚ್‌ನಲ್ಲಿ ಹೊರ ಬಿದ್ದ ಮಂಜ್ರೇಕರ್

ಮಾರ್ಚ್‌ನಲ್ಲಿ ಹೊರ ಬಿದ್ದ ಮಂಜ್ರೇಕರ್

ಸಾಮಾನ್ಯವಾಗಿ ಬಿಸಿಸಿಐ ಕಾಮೆಂಟರಿ ಪ್ಯಾನೆಲ್‌ನಲ್ಲಿ ಇರುತ್ತಿದ್ದ ಸಂಜಯ್ ಮಂಜ್ರೇಕರ್ ಅವರನ್ನು ಕಳೆದ ಮಾರ್ಚ್‌ನಲ್ಲಿ ಭಾರತಕ್ಕೆ ದಕ್ಷಿಣ ಆಫ್ರಿಕಾದ ಪ್ರವಾಸ ಸರಣಿಯ ವೇಳೆ ಹೊರಗಿಡಲಾಗಿತ್ತು. ಆ ಪ್ರವಾಸ ಸರಣಿ ಕೊರೊನಾದಿಂದ ರದ್ದಾಯಿತು. ಆ ಬಳಿಕ ಮಾರ್ಚ್ 29ರಂದು ನಡೆಯಲಿದ್ದ ಐಪಿಎಲ್‌ನಿಂದಲೂ ಮಂಜ್ರೇಕರ್ ಅವರನ್ನು ಕಾಮೆಂಟರಿಯಿಂದ ಹೊರಗಿಡಲಾಯ್ತು. ಐಪಿಎಲ್ ಕೂಡ ಕೊರೊನಾ ಕಾರಣ ಮುಂದೂಡಲ್ಪಟ್ಟಿತು. ದುಬೈ ಐಪಿಎಲ್‌ನಿಂದಲೂ ಮಂಜ್ರೇಕರ್ ಕಾಮೆಂಟರಿಯಿಂದ ದೂರ ಉಳಿದಿದ್ದಾರೆ.

ಮಂಜ್ರೇಕರ್ ಹೊರಬಿದ್ದಿದ್ದೇಕೆ?

ಮಂಜ್ರೇಕರ್ ಹೊರಬಿದ್ದಿದ್ದೇಕೆ?

2019ರಲ್ಲಿ ವಿಶ್ವಕಪ್‌ ವೇಳೆ ಕಾಮೆಂಟರಿ ಮಾಡುವಾಗ ಮಂಜ್ರೇಕರ್ ಅವರು ಭಾರತದ ಆಲ್ ರೌಂಡರ್ ರವೀಂದ್ರ ಜಡೇಜಾ ಬಗ್ಗೆ ಮಾಡಿದ್ದ ಕಾಮೆಂಟ್ ವಿವಾದಕ್ಕೀಡಾಗಿತ್ತು. ಅದಾಗಿ ಭಾರತದಲ್ಲಿ ನಡೆದಿದ್ದ ಡೇ-ನೈಟ್ ಟೆಸ್ಟ್ ವೇಳೆಯೂ ಮಂಜ್ರೇಕರ್, ಕಾಮೆಂಟರಿ ವೇಳೆ ಹರ್ಷ ಭೋಗ್ಲೆ ವಿರುದ್ಧ ವಾಗ್ವಾದ ನಡೆಸಿದ್ದರು. ಇದು ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿತ್ತು.

ಭಾರತೀಯರು ಭಾವನಾತ್ಮರು

ಭಾರತೀಯರು ಭಾವನಾತ್ಮರು

ಇತ್ತೀಚೆಗೆ 'ಮನಿಕಂಟ್ರೋಲ್' ಜೊತೆ ಮಾತನಾಡಿದ ಸಂಜಯ್ ಮಂಜ್ರೇಕರ್, ತಾನು ಕಾಮೆಂಟರಿ ಪ್ಯಾನೆಲ್‌ನಿಂದ ಹೊರ ಬಿದ್ದಿದ್ದೇಕೆ ಎಂದು ವಿವರಿಸಿದ್ದಾರೆ. ನಾವು ಭಾರತೀಯರು. ಟೀಕೆಯ ವಿಚಾರದಲ್ಲಿ ತುಂಬಾ ಭಾವನಾತ್ಮರು. ಇನ್ನೊಂದು ವಿಚಾರವೆಂದರೆ ಇಂಗ್ಲೀಷ್ ಭಾಷೆ ಕೂಡ ನಮ್ಮನ್ನು ಅಪಾರ್ಥಕ್ಕೀಡು ಮಾಡುತ್ತದೆ. ಬಹಳಷ್ಟು ಜನರಿಗೆ ಈಗಲೂ ಇಂಗ್ಲೀಷ್ ಎರಡನೆ ಭಾಷೆಯಾಗಿಲ್ಲ. ಹೀಗಾಗಿ ಕೆಲ ಪದಗಳನ್ನು ಬಳಸುವಾಗ ಅಪಾರ್ಥವಾಗುತ್ತದೆ. ಉದಾಹರಣೆಗೆ ನಾನು ತೆಂಡೂಲ್ಕರ್ ಬಗ್ಗೆ ಹೇಳಿದ್ದು. ಅದನ್ನೂ ಅಪಾರ್ಥ ಮಾಡಿಕೊಳ್ಳಲಾಯಿತು,' ಎಂದು ಮಂಜ್ರೇಕರ್ ಹೇಳಿದ್ದಾರೆ.

ಅಪಾರ್ಥ ಮಾಡಿಕೊಳ್ಳಲಾಯ್ತು

ಅಪಾರ್ಥ ಮಾಡಿಕೊಳ್ಳಲಾಯ್ತು

'ತೆಂಡೂಲ್ಕರ್‌ಗೆ ಸಂಬಂಧಿಸಿದ ವಿಚಾರಗಳು' ಆನೆಯೊಂದು ರೂಮೊಳಗಿದ್ದಂತೆ ಎಂದಿದ್ದೆ. ಇದನ್ನು ಬಹಳಷ್ಟು ಜನ ನಾನು ತೆಂಡೂಲ್ಕರ್ ಅವರನ್ನು 'ಬಿಳಿ ಆನೆ' ಎನ್ನುತ್ತಿದ್ದೇನೆ ಅಂದುಕೊಂಡರು. 'ಬೈಟ್ಸ್‌ ಆ್ಯಂಡ್ ಪೀಸಸ್' ವಿಚಾರದಲ್ಲೂ ಹೀಗೇ ಆಯಿತು. ನಾನು ರವೀಂದ್ರ ಅಜೇಯಾ ಅವರನ್ನು ಮುಗಿಸಲು ನೋಡುತ್ತಿದ್ದೇನೆ ಎಂದು ಭಾವಿಸಿದರು. ನಾನು ಒಂದು ವೇಳೆ ಅಗ 'ಕೌಶಲವಿಲ್ಲದವ' ಎಂದಿದ್ದರೆ ಅದು ಈ ಮಟ್ಟಕ್ಕೆ ಅಪಾರ್ಥಕ್ಕೀಡಾಗುತ್ತಿರಲಿಲ್ಲ. ವಿವಾದ ಹುಟ್ಟುತ್ತಿರಲಿಲ್ಲ,' ಎಂದರು.

ಭಾರತೀಯರನ್ನು ಕತ್ತೆಗಳು ಎಂದಿದ್ದ ಹುಸೇನ್

ಭಾರತೀಯರನ್ನು ಕತ್ತೆಗಳು ಎಂದಿದ್ದ ಹುಸೇನ್

ಮಾತು ಮುಂದುವರೆಸಿದ ಮಂಜ್ರೇಕರ್, 'ಒಂದು ಬಾರಿ ಇಂಗ್ಲೆಂಡ್ ನಾಯಕ ನಾಸೆರ್ ಹುಸೇನ್ ಅವರು ಕೆಲ ಭಾರತೀಯ ಆಟಗಾರರನ್ನು 'ಮೈದಾನದಲ್ಲಿರುವ ಕತ್ತೆಗಳು' ಎಂದು ಕರೆದಿದ್ದರು. ಇದರ ಇಂಗ್ಲೀಷ್ ಸಾಮಾನ್ಯ ಅರ್ಥದಲ್ಲಿ ನಿಧಾನವಾಗಿ ಚಲಿಸುವವರಿಗೆ ಈ ಪದ ಬಳಕೆಯಾಗುತ್ತದೆ. ಆದರೆ ಇದು ಆಗ ದೊಡ್ಡ ವಿವಾದ ಸೃಷ್ಟಿಸಿತು. ಇಲ್ಲಿ ಸಮಸ್ಯೆಯೆಂದರೆ ಇಂಗ್ಲೀಷ್ ಅನ್ನು ಗಮನಿಸುವಲ್ಲಿ ಮತ್ತು ಊಹಿಸುಕೊಳ್ಳುವಲ್ಲ ನಾವು ಎಡವುತ್ತಿದ್ದೇವೆ,' ಎಂದು 55ರ ಹರೆಯದ ಮಂಜ್ರೇಕರ್ ವಿವರಿಸಿದ್ದಾರೆ.

Story first published: Friday, September 18, 2020, 20:57 [IST]
Other articles published on Sep 18, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X